Coronavirus In India - ಕೊರೊನಾ ವೈರಸ್ ಎರಡನೆಯ ಅಲೆ (Corona Second Wave)ಬಳಿಕ ದೀರ್ಘಕಾಲದವರೆಗೆ ಇನ್ನೇನು ಕೊರೊನಾದಿಂದ ಮುಕ್ತಿ ಸಿಕ್ಕಿತು ಎನ್ನುವಷ್ಟರಲ್ಲಿ ಇದೀಗ ಮತ್ತೊಮ್ಮೆ ಪ್ರಕರಣಗಳ ಸಂಖ್ಯೆಯಲ್ಲಿ ಭಾರಿ ಏರಿಕೆ ಕಂಡು ಬಂದಿದೆ. ಕೇವಲ ಒಂದು ದಿನದಲ್ಲಿ 40 ಸಾವಿರಕ್ಕೂ ಹೆಚ್ಚು ಹೊಸ ಪ್ರಕರಣಗಳು ಪತ್ತೆಯಾಗಿವೆ. ಕಳೆದ 24 ಗಂಟೆಗಳಲ್ಲಿ, 44,658 ಹೊಸ ಕೊರೊನಾ (Coronavirus)ಪ್ರಕರಣಗಳು ವರದಿಯಾಗಿವೆ. ಇದರೊಂದಿಗೆ, ಸಕ್ರಿಯ ಪ್ರಕರಣಗಳ ಸಂಖ್ಯೆ ವೇಗವಾಗಿ 3,44,899 ಕ್ಕೆ ಏರಿದೆ. ಇದು ಮಾತ್ರವಲ್ಲ, ಹೊಸ ಪ್ರಕರಣಗಳ ಹೆಚ್ಚಳದಿಂದಾಗಿ, ಸಕ್ರಿಯ ಪ್ರಕರಣಗಳ ಶೇಕಡಾವಾರು ಕೂಡ ಶೇ.1.06 ರಷ್ಟು ಹೆಚ್ಚಾಗಿದೆ, ಈ ಸಂಖ್ಯೆ ವಾರದ ಆರಂಭದಲ್ಲಿ ಶೇ.1ಕ್ಕಿಂತ ಕಡಿಮೆಯಾಗಿತ್ತು. ಇದರ ಜೊತೆಗೆ ಚೇತರಿಕೆಯ ಪ್ರಮಾಣವೂ ಕಡಿಮೆಯಾಗಿದೆ ಮತ್ತು ಅದು ಇದೀಗ ಶೇ.97.60ಗೆ ಇಳಿಕೆಯಾಗಿದೆ.
ಚೇತರಿಸಿಕೊಳ್ಳುತ್ತಿರುವವರ ಸಂಖ್ಯೆಯೂ ಕೂಡ ಇಳಿಕೆಯಾಗುತ್ತಿದೆ
ಕರೋನಾದ ಸಕ್ರಿಯ ಪ್ರಕರಣಗಳ ಸಂಖ್ಯೆ ಹೆಚ್ಚಳಕ್ಕೆ ಇನ್ನೊಂದು ಕಾರಣ ಎಂದರೆ, ಹೊಸ ಪ್ರಕರಣಗಳಿಗೆ ಹೋಲಿಸಿದರೆ ಚೇತರಿಸಿಕೊಳ್ಳುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಒಂದೆಡೆ, ಸತತವಾಗಿ ಎರಡು ದಿನಗಳಿಂದ ದಿನಕ್ಕೆ 40 ಕ್ಕೂ ಹೆಚ್ಚು ಬೆಳಕಿಗೆ ಬರುತ್ತಿದ್ದರೆ, ಇನ್ನೊಂದೆಡೆ ಚೇತರಿಸಿಕೊಳ್ಳುತ್ತಿರುವವರ ಸಂಖ್ಯೆಯೂ ಕೂಡ ಕಡಿಮೆಯಾಗುತ್ತಿದೆ. ಕಳೆದ ಒಂದು ದಿನದಲ್ಲಿ 32,988 ಜನರು ಕರೋನಾ (Covid-19) ವಿರುದ್ಧದ ಹೋರಾಟವನ್ನು ಗೆದ್ದಿದ್ದಾರೆ. ಹಿಂದಿನ ಗುರುವಾರ, ಒಂದು ದಿನದಲ್ಲಿ 46 ಸಾವಿರಕ್ಕೂ ಹೆಚ್ಚು ಹೊಸ ಪ್ರಕರಣಗಳು ವರದಿಯಾಗಿದ್ದವು ಮತ್ತು ಇದೀಗ ಮತ್ತೊಮ್ಮೆ 44 ಸಾವಿರ ಪ್ರಕರಣಗಳು ಪತ್ತೆಯಾದ ಕಾರಣ ಆತಂಕ ಹೆಚ್ಚಾಗಿದೆ. ದೇಶದ ಎಲ್ಲಾ ರಾಜ್ಯಗಳಲ್ಲಿ ಶಾಲೆಗಳು, ಜಿಮ್‌ಗಳು ಮತ್ತು ಮಾಲ್‌ಗಳಂತಹ ಸಂಸ್ಥೆಗಳನ್ನು ತೆರೆಯುವುದರಿಂದ, ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ಇಂತಹ ಪರಿಸ್ಥಿತಿಯಲ್ಲಿ, ಕಟ್ಟುನಿಟ್ಟಿನ ನಿಬಂಧನೆಗಳು ಮತ್ತೆ ಜಾರಿಯಾಗಲಿವೆಯೇ ಎಂಬ ಭಯ ಕಾಡತೊಡಗಿದೆ.
ಇದನ್ನೂ ಓದಿ-Petrol-Diesel Price : ದೇಶದ 19 ರಾಜ್ಯಗಳಲ್ಲಿ ಪೆಟ್ರೋಲ್ ಬೆಲೆ 100 ರ ಗಡಿ ದಾಟಿದೆ : ನಿಮ್ಮ ನಗರದ ಬೆಲೆ ಇಲ್ಲಿದೆ
ಉತ್ತರ ಭಾರತದ ರಾಜ್ಯಗಳಲ್ಲಿ ನೆಮ್ಮದಿ, ಆದರೆ, ಕೇರಳದಲ್ಲಿ ಹೆಚ್ಚಾದ ಅಪಾಯ
ದೇಶದಾದ್ಯಂತ ಕೊರೊನಾ ಹೊಸ ಪ್ರಕರಣಗಳ ವೇಗ ಕಡಿಮೆಯಾಗಿದೆ. ಪ್ರಸ್ತುತ ಇರುವ ಪ್ರಕರಣಗಳಲ್ಲಿ ಕೇರಳ ಬಹುಪಾಲು ಹೊಂದಿದೆ. ಒಟ್ಟು ಕೊರೊನಾ ಪ್ರಕರಣಗಳಲ್ಲಿ ಶೇ 70 ರಷ್ಟು ಪ್ರಕರಣಗಳು ಕೇರಳದಿಂದ ಮಾತ್ರ ವರದಿಯಾಗಿವೆ. ಕೇರಳದಲ್ಲಿ ಸತತ ಎರಡು ದಿನಗಳವರೆಗೆ 30 ಸಾವಿರಕ್ಕೂ ಹೆಚ್ಚು ಹೊಸ ಪ್ರಕರಣಗಳನ್ನು ವರದಿಯಾಗುತ್ತಿವೆ ಮತ್ತು ಈ ಕಾರಣದಿಂದಾಗಿ, ದೇಶಾದ್ಯಂತ ಪ್ರಕರಣಗಳಲ್ಲಿ ಹೆಚ್ಚಳವಾಗಿದೆ. ಆದರೆ, ಯುಪಿ, ಮಧ್ಯಪ್ರದೇಶ, ಬಿಹಾರ, ರಾಜಸ್ಥಾನ, ಹರಿಯಾಣ, ಪಂಜಾಬ್, ಗುಜರಾತ್, ಆಂಧ್ರಪ್ರದೇಶಗಳಂತಹ ರಾಜ್ಯಗಳಲ್ಲಿ ಹಿಂದಿನ ಅಂಕಿ-ಅಂಶಗಳಿಗೆ ಹೋಲಿಸಿದರೆ ಸಾಕಷ್ಟು ನೆಮ್ಮದಿ ಇದೆ ಎಂದೇ ಹೇಳಬಹುದು. ಈ ರಾಜ್ಯಗಳಲ್ಲಿ ಹೊಸ ಪ್ರಕರಣಗಳು ಮೂರಂಕಿ ಇನ್ನೂ ದಾಟಿಲ್ಲ ಆದರೆ, ಕೇರಳ ಮತ್ತು ಮಹಾರಾಷ್ಟ್ರದಲ್ಲಿ ಈ ಪ್ರಕರಣಗಳು 4 ಅಂಕಿಗಳ ಸಂಖ್ಯೆಯನ್ನು ದಾಟಿದೆ.
ಇದನ್ನೂ ಓದಿ-ಕಾಬೂಲ್ ವಿಮಾನ ನಿಲ್ದಾಣದಲ್ಲಿ ಮೂರನೇ ಸ್ಫೋಟ, 10 ಯುಎಸ್ ಕಮಾಂಡೋಗಳು ಸೇರಿದಂತೆ 64 ಸಾವು
ಲಸಿಕಾಕರಣದಿಂದ ಹೊಸ ಆಸೆ ಚಿಗುರಿದ್ದು, ಮೊದಲಿನಂತೆ ಹೊಸ ಅಲೆ ಪ್ರಭಾವ ಇರಲ್ಲ
ಕೊರೊನಾ ಹೊಸ ಪ್ರಕರಣಗಳ ಸಂಖ್ಯೆಯಲ್ಲಿ ಕಂಡುಬಂದಿರುವ ಈ ತ್ವರಿತ ಏರಿಕೆಯ ನಡುವೆ, ದೇಶದಲ್ಲಿ ಲಸಿಕಾಕರಣ ಅಭಿಯಾನ ಕೂಡ ವೇಗವಾಗಿ ನಡೆಯುತ್ತಿರುವುದು ಒಂದು ಸಮಾಧಾನಕರ ಸಂಗತಿಯಾಗಿದೆ. ಇದುವರೆಗೆ 62.22 ಕೋಟಿ ಲಸಿಕೆಗಳನ್ನು ದೇಶಾದ್ಯಂತ ವಿತರಿಸಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಮೂರನೇ ಅಲೆ (Corona Third Wave) ಬಂದರೂ ಕೂಡ ಅದು ಮೊದಲಿನ ಎರಡು ಅಲೆಗಳಷ್ಟು ಮಾರಕವಾಗಿರುವುದಿಲ್ಲ ಎನ್ನಲಾಗುತ್ತಿದೆ.
ಇದನ್ನೂ ಓದಿ-Kabul Airport ಬಳಿ ಭೀಕರ ಅವಳಿ ಬಾಂಬ್ ಸ್ಪೋಟ , 11 ಮಂದಿ ಸಾವು, 15 ಕ್ಕೂ ಹೆಚ್ಚು ಮಂದಿಗೆ ಗಾಯ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.