Budget Smartphone: ಇಲ್ಲಿವೆ ನೋಡಿ 10-15 ಸಾವಿರದೊಳಗಿನ ಅತ್ಯುತ್ತಮ ಬಜೆಟ್ ಸ್ಮಾರ್ಟ್‌ಫೋನ್‌ಗಳು…

ಮಾರುಕಟ್ಟೆಯಲ್ಲಿ ಸಾಕಷ್ಟು ಬಜೆಟ್ ಸ್ಮಾರ್ಟ್‌ಫೋನ್‌ಗಳು ಲಭ್ಯವಿದ್ದು, ಅವುಗಳು ಉತ್ತಮ ವೈಶಿಷ್ಟ್ಯಗಳನ್ನು ಹೊಂದಿವೆ.

ನೀವು ಬಜೆಟ್ ಸ್ಮಾರ್ಟ್‌ಫೋನ್‌ ಖರೀದಿಸಲು ಯೋಚಿಸುತ್ತಿದ್ದೀರಾ? ಮಾರುಕಟ್ಟೆಯಲ್ಲಿ ಸಾಕಷ್ಟು ಬಜೆಟ್ ಸ್ಮಾರ್ಟ್‌ಫೋನ್‌ಗಳು ಲಭ್ಯವಿದ್ದು, ಅವುಗಳು ಉತ್ತಮ ವೈಶಿಷ್ಟ್ಯಗಳನ್ನು ಹೊಂದಿವೆ. ನೀವು ಸೀಮಿತ ಬಜೆಟ್ ಹೊಂದಿದ್ದರೆ ಈಗಲೇ ಖರೀದಿಸಬಹುದು.

10 ಸಾವಿರ ರೂ. ದಿಂದ 15 ಸಾವಿರ ರೂ. ಬೆಲೆಯೊಳಗೆ ಅತ್ಯುತ್ತಮ ಫೀಚರ್ಸ್ ಹೊಂದಿರುವ ಸ್ಮಾರ್ಟ್ ಫೋನ್ ಖರೀದಿಸಲು ಪ್ಲಾನ್ ಮಾಡಿದ್ದೀರಾ..? ಹೌದು ಎಂದಾದರೆ ಇದೇ ಬೆಲೆಯಲ್ಲಿ ಲಭ್ಯವಿರುವ ಅನೇಕ ಸ್ಮಾರ್ಟ್‌ಫೋನ್‌ ಗಳು ಲಭ್ಯವಿವೆ. ಯಾವುದನ್ನೂ ಆಯ್ಕೆ ಮಾಡಿಕೊಳ್ಳಬೇಕೆಂದು ಗೊಂದಲಕ್ಕೊಳಗಾಗದೆ ನಿಮ್ಮ ಬಜೆಟ್ ಗೆ ಹೊಂದುವಂತಹ ಫೋನ್ ಖರೀದಿಸಿರಿ. 6GB RAM ನಿಂದ 6000 mAh ಬ್ಯಾಟರಿ ಸಾಮರ್ಥ್ಯ ಹೊಂದಿರುವ Realme, Xiaomi, Motorola, Samsung ಮತ್ತು Poco ನಂತಹ ಬ್ರಾಂಡ್‌ಗಳ ಸ್ಮಾರ್ಟ್‌ಫೋನ್‌ ಖರೀದಿಸಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

1 /5

ಇತ್ತೀಚೆಗೆ ಬಿಡುಗಡೆಯಾದ ಸ್ಯಾಮ್‌ಸಂಗ್ ಗ್ಯಾಲಕ್ಸಿ M 21 (2021) ಬಜೆಟ್ ವಿಭಾಗದಲ್ಲಿ ಖರೀದಿದಾರರ ಉತ್ತಮ ಆಯ್ಕೆಗಳಲ್ಲಿ ಒಂದಾಗಿದೆ. ಈ ಸಾಧನವು 6.4 ಇಂಚಿನ ಸ್ಯಾಮೊಲೆಡ್ ಇನ್ಫಿನಿಟಿ-ಯು(sAMOLED Infinity-U) ಡಿಸ್ ಪ್ಲೇ ಹೊಂದಿದೆ. ಆಂಡ್ರಾಯ್ಡ್ 11 ಆಧಾರಿತ One UI Core 3.1ನಲ್ಲಿ ಕಾರ್ಯನಿರ್ವಹಿಸುತ್ತದೆ. ಸ್ಯಾಮ್‌ಸಂಗ್ ಗ್ಯಾಲಕ್ಸಿ M21 ಪ್ರಸ್ತುತ ಆಕ್ಟಾ-ಕೋರ್ ಎಕ್ಸಿನೋಸ್ 9611 SoC ಪ್ರೊಸೆಸರ್ ನಿಂದ ನಿಯಂತ್ರಿಸಲ್ಪಡುತ್ತದೆ ಮತ್ತು Mali-G72 MP3 GPU ಮತ್ತು 6GB LPDDR4x RAM ಅನ್ನು ಹೊಂದಿದೆ. 4GB RAM ಆವೃತ್ತಿಯ ಈ ಸ್ಮಾರ್ಟ್‌ಫೋನ್‌ ಪ್ರಸ್ತುತ 12,499 ರೂ.ಗೆ ಮಾರಾಟವಾಗುತ್ತಿದೆ.

2 /5

ರಿಯಲ್‌ಮಿ ನಾರ್ಜೊ 20 ಬಜೆಟ್ ವಿಭಾಗದಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್‌ಫೋನ್‌ಗಳಲ್ಲಿ ಒಂದಾಗಿದೆ. ಕಳೆದ ವರ್ಷ ಬಿಡುಗಡೆಯಾದ ಈ ಸ್ಮಾರ್ಟ್‌ಫೋನ್ MediaTek Helio G85 processor ನಿಂದ ನಿಯಂತ್ರಿಸಲ್ಪಡುತ್ತದೆ ಮತ್ತು 6000mAh ಮೆಗಾ ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದೆ.    ಈ ಸ್ಮಾರ್ಟ್‌ಫೋನ್‌ 48MP AI ಟ್ರಿಪಲ್ ಕ್ಯಾಮೆರಾವನ್ನು ಹೊಂದಿದೆ ಮತ್ತು 18W ತ್ವರಿತ ಚಾರ್ಜ್ ಗೆ ಬೆಂಬಲ ನೀಡುತ್ತದೆ. Realme Narzo 20’s 4GB+64 GB and 4GB+128GB ರೂಪಾಂತರಗಳು ಕ್ರಮವಾಗಿ 10,499 ರೂ. ಮತ್ತು 11,499 ರೂ.ಗೆ ಮಾರಾಟವಾಗುತ್ತಿವೆ.

3 /5

Xiaomi Redmi 9 ಪವರ್ 6GB RAM ಮತ್ತು 128GB ಸಾಮರ್ಥ್ಯದೊಂದಿಗೆ ಬರುತ್ತದೆ. 12,999 ರೂ. ಬೆಲೆಯ ಈ ಸ್ಮಾರ್ಟ್‌ಫೋನ್‌ Adreno 610 GPU ಜೊತೆಗೆ ಕ್ವಾಲ್ಕಾಮ್‌ನ ಸ್ನಾಪ್‌ಡ್ರಾಗನ್ 662 ಪ್ರೊಸೆಸರ್ ಅನ್ನು ಹೊಂದಿದೆ. ಮೈಟಿ ಬ್ಲಾಕ್, ಬ್ಲೇಜಿಂಗ್ ಬ್ಲೂ, ಫಿಯರಿ ರೆಡ್ ಮತ್ತು ಎಲೆಕ್ಟ್ರಿಕ್ ಗ್ರೀನ್ ಎಂಬ 4 ಬಣ್ಣದ ಆಯ್ಕೆಗಳಲ್ಲಿ ಈ ಸ್ಮಾರ್ಟ್ ಫೋನ್ ಲಭ್ಯವಿದೆ.

4 /5

ಮೋಟೋ G10 ಪವರ್ ಸ್ಮಾರ್ಟ್‌ಫೋನ್‌ 6.5 ಇಂಚಿನ ಎಚ್‌ಡಿ+ (720x1,600 ಪಿಕ್ಸೆಲ್‌ಗಳು) ಮ್ಯಾಕ್ಸ್ ವಿಷನ್ ಡಿಸ್‌ಪ್ಲೇಯನ್ನು 20:9 ಆಕಾರ ಅನುಪಾತದೊಂದಿಗೆ ಹೊಂದಿದೆ. ಈ ಸ್ಮಾರ್ಟ್‌ಫೋನ್‌ ಆಕ್ಟಾ-ಕೋರ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 460 SoC ನಿಂದ ನಿಯಂತ್ರಿಸಲ್ಪಡುತ್ತದೆ. ಇದು 4GB RAM ನೊಂದಿಗೆ ಬರುತ್ತದೆ. ಈ ಸಾಧನವು ಕ್ವಾಡ್ ರಿಯರ್ ಕ್ಯಾಮೆರಾವನ್ನು ಹೊಂದಿದೆ. 48MP ಪ್ರಾಥಮಿಕ ಸೆನ್ಸರ್, 8MP ಸೆನ್ಸರ್ ಅಲ್ಟ್ರಾ-ವೈಡ್ ಆಂಗಲ್, 2MP ಸೆನ್ಸರ್ ಮ್ಯಾಕ್ರೋ ಲೆನ್ಸ್ ಮತ್ತು 2MP ಡೆಪ್ತ್ ಸೆನ್ಸರ್. ಈ ಸ್ಮಾರ್ಟ್‌ಫೋನ್‌ ಪ್ರಸ್ತುತ 10,499 ರೂ.ಗೆ ಮಾರಾಟವಾಗುತ್ತಿದೆ.

5 /5

ಕಳೆದ ವರ್ಷ ಬಿಡುಗಡೆಯಾದ ಸ್ಯಾಮ್‌ಸಂಗ್ ಗ್ಯಾಲಕ್ಸಿ F41, 6.4 ಇಂಚಿನ ಪೂರ್ಣ ಎಚ್‌ಡಿ+ sAMOLED Infinity U ಡಿಸ್‌ಪ್ಲೇ ಹೊಂದಿದೆ. 64MP ಹಿಂಬದಿಯ ಕ್ಯಾಮೆರಾ ಮತ್ತು 6000mAh ಬ್ಯಾಟರಿಯೊಂದಿಗೆ ಬರುತ್ತದೆ. ಈ ಸ್ಮಾರ್ಟ್‌ಫೋನ್‌ ಫ್ಯೂಷನ್ ಬ್ಲಾಕ್, ಫ್ಯೂಷನ್ ಬ್ಲೂ ಮತ್ತು ಫ್ಯೂಷನ್ ಗ್ರೀನ್ ಬಣ್ಣಗಳಲ್ಲಿ ಲಭ್ಯವಿದೆ.