ಸ್ಥಳೀಯವಾಗಿ ಕುರಿಂಜಿ ಎಂದು ಕರೆಯಲ್ಪಡುವ ನೀಲಕುರಿಂಜಿ ಹೂವುಗಳು ಅಥವಾ ಸ್ಟ್ರೋಬಿಲಾಂಥೆಸ್ ಕುಂಥಿಯಾನ 1,300 ರಿಂದ 2,400 ಮೀಟರ್ ಎತ್ತರದಲ್ಲಿ ಬೆಳೆಯುತ್ತವೆ. ಪೊದೆ ಸಾಮಾನ್ಯವಾಗಿ 30 ರಿಂದ 60 ಸೆಂ.ಮೀ ಎತ್ತರವಿರುತ್ತದೆ.
ಇತ್ತೀಚಿನ ದಿನಗಳಲ್ಲಿ ನಮ್ಮ ರಾಜ್ಯದ ಕೊಡಗು ಜಿಲ್ಲೆಯು ಅಪರೂಪದ ವಿದ್ಯಮಾನಕ್ಕೆ ಸಾಕ್ಷಿಯಾಗಿದೆ, ಇದು ಅರಣ್ಯ ಪ್ರದೇಶವಾದ ಮಾಂಡಲಪಟ್ಟಿ ಮತ್ತು ಕೋಟೆ ಬೆಟ್ಟಕ್ಕೆ ಅಪಾರ ಸಂಖ್ಯೆಯ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಪ್ರತಿ 12 ವರ್ಷಗಳಿಗೊಮ್ಮೆ ಅರಳುವ 'ನೀಲಕುರಿಂಜಿ ಹೂವು' ಸಧ್ಯ ಅಪರೂಪದ ಒಂದು ವಿದ್ಯಮಾನಕ್ಕೆ ಕಾರಣವಾಗಿದೆ, ರಾಜ್ಯ್ದ ಮಂಡಲಪಟ್ಟಿ ಬೆಟ್ಟಗಳಲ್ಲಿ ಈ ಅಪರೂಪದ ಹೂ ನೀಲಿ ಮತ್ತು ನೇರಳೆ ಬಣ್ಣದಲ್ಲಿ ಅರಳುತ್ತಿವೆ, ಇದನ್ನು ಸ್ಟ್ರೋಬಿಲಾಂಥೆಸ್ ಕುಂತಿಯಾನ ಎಂದೂ ಕರೆಯುತ್ತಾರೆ.
ಕಳೆದ ಒಂದು ವಾರದಿಂದ ಹೂವುಗಳನ್ನು ನೋಡಲು ಪ್ರವಾಸಿಗರು ಕೊಡಗಿಗೆ ಬರುತ್ತಿದ್ದಾರೆ ಎಂದು ಕೊಡಗಿನ ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ. ಈ ಸುಂದರವಾದ ಹೂವುಗಳಿಂದಲೇ ಭಾರತದ ನೀಲಗಿರಿ ಬೆಟ್ಟಗಳಿಗೆ 'ನೀಲಿ-ಬೆಟ್ಟಗಳು' ಎಂಬ ಹೆಸರು ಬಂದಿದೆ.
"ಪಶ್ಚಿಮ ಘಟ್ಟದ ಮಾಂದಲಪಟ್ಟಿ ಬೆಟ್ಟಗಳು, ಪ್ರಾಕೃತಿಕ ಸೌಂದರ್ಯಕ್ಕೆ ಹೆಸರುವಾಸಿಯಾಗಿದ್ದು, ನೀಲಕುರಿಂಜಿ ಅಥವಾ ಸ್ಟ್ರೋಬಿಲಾಂಥೆಸ್ ಕುಂತಿಯಾನವನ್ನು ನೋಡಲು ಕರ್ನಾಟಕದಾದ್ಯಂತ ಪ್ರವಾಸಿಗರು ಈಗ ತುಂಬಿದ್ದಾರೆ. ನಮಗೆ ಬಂದ ಮಾಹಿತಿ ಪ್ರಕಾರ, ಈ ವರ್ಷ ನಾವು ಈ ಹೂವುಗಳನ್ನು ನೋಡಿದ್ದು ಇದೇ ಮೊದಲು ಎರಡೂ ಬೆಟ್ಟಗಳ ಮೇಲೆ ಪೂರ್ತಿಯಾಗಿ ಹರಡಿದೆ. ಸಾಮಾನ್ಯವಾಗಿ ಈ ಬೆಟ್ಟಗಳ ಕೆಲವು ಭಾಗಗಳಲ್ಲಿ ಮಾತ್ರ ಇದು ಕಾಣಿಸುತ್ತದೆ "ಎಂದು ಮಡಿಕೇರಿ ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿಸಿಎಫ್) ಎಟಿ ಪೂವಯ್ಯ ಹೇಳಿದರು.
ಹೆಲಿ-ಟ್ಯಾಕ್ಸಿ ಸಂಸ್ಥೆಯು ದೃಶ್ಯ ಸತ್ಕಾರದ ವೈಮಾನಿಕ ದೃಶ್ಯವನ್ನ ಸೆರೆ ಹಿಡಿಯಲಾಗಿದೆ. ಬೆಂಗಳೂರು ಮೂಲದ ಹೆಲಿ-ಟ್ಯಾಕ್ಸಿ ಸಂಸ್ಥೆ ತುಂಬಿ ಏವಿಯೇಷನ್ ಪ್ರೈವೇಟ್ ಲಿಮಿಟೆಡ್ ಹೂವಿನ ತಾಣಕ್ಕೆ ರೂ 2,30,000 ವೆಚ್ಚದಲ್ಲಿ ಟ್ರಿಪ್ ನೀಡುತ್ತಿದೆ. (ಚಿತ್ರ ಮೂಲ: ಟ್ವಿಟರ್@ಅಂಕಿತ್ ಕುಮಾರ್_ಐಎಫ್ಎಸ್)
ಸಂತಾನಪರ ಪಂಚಾಯತ್ ವ್ಯಾಪ್ತಿಯ ಇಡುಕ್ಕಿಯ ಶಲೋಮಕುನ್ನು (ಶಲೋಮ್ ಬೆಟ್ಟಗಳು) ಕೂಡ ನೀಲಿ ನೀಲಕುರಿಂಜಿ ಹೂವುಗಳಿಂದ ಕಂಗೊಳಿಸುತ್ತಿವೆ. ಈ ಬಾರಿ 10 ಎಕರೆಗೂ ಹೆಚ್ಚು ನೀಲಕುರಿಂಜಿ ಹೂವುಗಳು ಶಲೋಮಕುನ್ನು ಆವರಿಸಿದೆ. (ಚಿತ್ರ ಮೂಲ: ANI)
ಕರ್ನಾಟಕ ಅರಣ್ಯ ಇಲಾಖೆ ಅಧಿಕಾರಿಗಳು ಹೇಳುವಂತೆ ರಾಜ್ಯದಲ್ಲಿ ಸುಮಾರು 45 ಜಾತಿಯ ನೀಲಕುರಿಂಜಿ ಹೂವುಗಳ ಜಾತಿಗಳಿವೆ, ವಿವಿಧ ಜಾತಯಾ ಹೂವುಗಳನ್ನ ವಿವಿಧ ರೀತಿಯಲ್ಲಿ ಪಟ್ಟಿ ಮಾಡಲಾಗಿದೆ. ಪ್ರತಿಯೊಂದು ಜಾತಿಯ ಹವು ಆರು, ಒಂಬತ್ತು, 11, ಅಥವಾ 12 ವರ್ಷಗಳ ಮಧ್ಯಂತರದಲ್ಲಿ ಅರಳುತ್ತದೆ. (ಚಿತ್ರ ಮೂಲ: ಟ್ವಿಟರ್)
ಸ್ಥಳೀಯವಾಗಿ ಕುರಿಂಜಿ ಎಂದು ಕರೆಯಲ್ಪಡುವ ನೀಲಕುರಿಂಜಿ ಹೂವುಗಳು ಅಥವಾ ಸ್ಟ್ರೋಬಿಲಾಂಥೆಸ್ ಕುಂಥಿಯಾನ 1,300 ರಿಂದ 2,400 ಮೀಟರ್ ಎತ್ತರದಲ್ಲಿ ಬೆಳೆಯುತ್ತವೆ. ಪೊದೆ ಸಾಮಾನ್ಯವಾಗಿ 30 ರಿಂದ 60 ಸೆಂ.ಮೀ ಎತ್ತರವಿರುತ್ತದೆ. (ಚಿತ್ರ ಮೂಲ: ಟ್ವಿಟರ್@ಅಂಕಿತ್ ಕುಮಾರ್_ಐಎಫ್ಎಸ್)
ಪಶ್ಚಿಮ ಘಟ್ಟದ ಮಾಂಡಲಪಟ್ಟಿ ಬೆಟ್ಟಗಳು, ಪ್ರಾಕೃತಿಕ ಸೌಂದರ್ಯಕ್ಕೆ ಹೆಸರುವಾಸಿಯಾಗಿದ್ದು, ನೀಲಕುರಿಂಜಿ ಹೂವುಗಳನ್ನು ನೋಡಲು ಈಗ ರಾಜ್ಯದಾದ್ಯಂತ ಪ್ರವಾಸಿಗರು ಬರುತ್ತಿದ್ದಾರೆ. (ಚಿತ್ರ ಮೂಲ: ANI)