Monsoon Skincare Tips: ಕಾಂತಿಯುತ ಮತ್ತು ದೋಷರಹಿತ ತ್ವಚೆಗಾಗಿ ಈ ಸಲಹೆ ಪಾಲಿಸಿ…

ಮಳೆಗಾಲದಲ್ಲಿ ಆರೋಗ್ಯಕರ ತ್ವಚೆಯನ್ನು ಹೊಂದುವುದು ತುಂಬಾ ಮುಖ್ಯವಾಗಿರುತ್ತದೆ.

ದೇಶದ ಹಲವು ಭಾಗಗಳಲ್ಲಿ ಈಗಾಗಲೇ ಮುಂಗಾರಿನ ಆಗಮನವಾಗಿದೆ. ಇದರಿಂದ ನಿಮಗೆ ಹೆಚ್ಚಿನ ಆರ್ದ್ರತೆಯ ಮಟ್ಟ(Humidity Levels), ಬೆವರು ಚರ್ಮದ ಸಮಸ್ಯೆಗಳು ಉಂಟಾಗಬಹುದು. ಮೃದು ಚರ್ಮ ಹೊಂದಿದವರಿಗೆ ತುಸು ಹೆಚ್ಚೇ ಸಮಸ್ಯೆಯುಂಟಾಗುತ್ತದೆ. ಮಳೆಗಾಲದಲ್ಲಿ ತೇವಾಂಶ ಸಾಮಾನ್ಯ. ಹೀಗಾಗಿ ನೀವು ನಿಮ್ಮ ಚರ್ಮದ ಆರೈಕೆಗೆ ಹೆಚ್ಚು ಗಮನಹರಿಸಬೇಕು. ಆರೋಗ್ಯಕರ ತ್ವಚೆಯನ್ನು ಹೊಂದುವುದು ತುಂಬಾ ಮುಖ್ಯವಾಗಿರುತ್ತದೆ. ಮುಖದ ಸೌಂದರ್ಯ  ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ನೀವು ವಿಶೇಷ ಕಾಳಜಿ ವಹಿಸಬೇಕಾಗುತ್ತದೆ. ಎಣ್ಣೆ ಮತ್ತು ಜಿಗುಟುತನದಿಂದ ಚರ್ಮ ಒಡೆಯುವಿಕೆ, ಮೊಡವೆ ಮುಂತಾದ ಸಮಸ್ಯೆಗಳು ಕಂಡುಬರುತ್ತವೆ. ಉತ್ತಮ ತ್ವಚೆ ಹೊಂದಲು ನೀವು ಏನು ಮಾಡಬೇಕೆಂಬುದರ ಉಪಯುಕ್ತ ಮಾಹಿತಿ ಇಲ್ಲಿದೆ ನೋಡಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ನೀವು ಉತ್ತಮ ತ್ವಚೆ ಹೊಂದಬೇಕಾದರೆ ನಿಮ್ಮ ಚರ್ಮಕ್ಕೆ ಎಕ್ಸ್ ಫೋಲಿಯೇಟ್ ಮಾಡಬೇಕು. ಜೆಲ್ ಆಧಾರಿತ ಫೇಸ್ ಮಾಸ್ಕ್ ಗಳಿಂದ ವಾರದಲ್ಲಿ ಕನಿಷ್ಠ 2 ಬಾರಿಯಾದರೂ ಎಕ್ಸ್‌ ಫೋಲಿಯೇಟ್ ಮಾಡಿ. ರಾತ್ರಿಯಲ್ಲಿ ಸ್ಕ್ರಬ್ ಮತ್ತು ಮಾಸ್ಕ್‌ ಗಳನ್ನು ಬಳಸುವುದು ಆದ್ಯತೆಯಾಗಿರಬೇಕು. ಏಕೆಂದರೆ ಈ ಸಮಯದಲ್ಲಿ ಚರ್ಮಕ್ಕೆ ವಿಶ್ರಾಂತಿ ಸಿಗುತ್ತದೆ, ಬೆಳಿಗ್ಗೆ ಇದರ ಪರಿಣಾಮವು ಅದ್ಭುತವಾಗಿರುತ್ತದೆ. ಸೌಂದರ್ಯವರ್ಧಕ ಉತ್ಪನ್ನಗಳನ್ನು ಖರೀದಿಸಬೇಡಿ. ನಿಮ್ಮ ಚರ್ಮವನ್ನು ಎಕ್ಸ್ ಫೋಲಿಯೇಟ್ ಮಾಡುವುದರಿಂದ ಚರ್ಮದ ಡೆಡ್ ಕೋಶಗಳನ್ನು ನಿವಾರಿಸಲು ನೆರವಾಗುತ್ತದೆ.

2 /5

ಉರಿ ಬಿಸಿಲಿನಿಂದ ಬಚಾವಾಗುವ ಸುಲಭ ವಿಧಾನವೆಂದರೆ ಸನ್‌ಸ್ಕ್ರೀನ್‌ ಬಳಕೆ. ಆದರೆ ಇದನ್ನು ಸರಿಯಾದ ರೀತಿಯಲ್ಲಿ ಬಳಸುವುದು ಹೇಗೆ ಎಂಬುದನ್ನು ತಿಳಿದುಕೊಂಡಿರಬೇಕು. ನಿಮ್ಮ ಚರ್ಮದ ಪ್ರಕಾರಕ್ಕೆ ಹೊಂದುವ ಸನ್‌ಸ್ಕ್ರೀನ್‌ ಬಳಕೆ ಮಾಡುವುದನ್ನು ರೂಢಿಸಿಕೊಳ್ಳಿ. ಸೂರ್ಯನ ಯುವಿ ಕಿರಣಗಳಿಂದ ನಿಮ್ಮ ಚರ್ಮವನ್ನು ರಕ್ಷಿಸಲು ಇದು ನೆರವಾಗುತ್ತದೆ. 

3 /5

ನಿಮ್ಮ ಚರ್ಮವು ಹೊಳೆಯಲು ಮತ್ತು ಆರೋಗ್ಯವಾಗಿರಲು ಹೆಚ್ಚು ನೀರಿನ ಅಗತ್ಯವಿದೆ. ಆದ್ದರಿಂದ ನೀವು ಹೊರಗಿದ್ದರೆ ನೀರಿನ ಬಾಟಲಿಯನ್ನು ಜೊತೆಗೆ ಕೊಂಡೊಯ್ಯರಿ. ಪ್ರತಿದಿನ ಕನಿಷ್ಠ 3 ಲೀಟರ್ ನೀರು ಕುಡಿಯುವುದು ಆರೋಗ್ಯದ ದೃಷ್ಟಿಯಿಂದ ಉತ್ತಮ.

4 /5

ಪ್ರತಿದಿನ ನಾವು ಎಲ್ಲೆಲ್ಲೋ ಓಡಾಡುತ್ತವೆ. ಹೀಗೆ ಹೊರಗಡೆ ಹೋದಾದ ಧೂಳು ಸಮಸ್ಯೆ ನಮ್ಮನ್ನು ಕಾಡುತ್ತದೆ. ಇದರ ಪರಿಣಾಮ ನಾವು ಮೊಡವೆ ಸಮಸ್ಯೆಗೆ ತುತ್ತಾಗುತ್ತೇವೆ. ಇದರಿಂದ ಪಾರಾಗಲು ಟೋನಿಂಗ್ ಅತ್ಯಗತ್ಯ. ಇದಕ್ಕಾಗಿ ಉತ್ತಮ ಗುಣಮಟ್ಟದ ಟೋನರ್‌ ಬಳಸಬೇಕು. ನಿಂಬೆ ರಸ, ಸೌತೆಕಾಯಿ ನೀರು ಮತ್ತು ಹಸಿರು ಚಹಾದಂತಹ ನೈಸರ್ಗಿಕ ಟೋನರುಗಳನ್ನು ಕೊಳೆಯನ್ನು ತೆಗೆದುಹಾಕಲು ಮತ್ತು ಚರ್ಮದ ರಂಧ್ರಗಳನ್ನು ಮುಚ್ಚಲು ಸಹಕಾರಿಯಾಗಿವೆ.

5 /5

ನೀವು ಪ್ರತಿನಿತ್ಯ ಮೇಕ್ಅಪ್ ಮಾಡಿಕೊಳ್ಳುವುದನ್ನು ರೂಢಿಸಿಕೊಂಡಿದ್ದರೆ ಯಾವುದೇ ಎಣ್ಣೆ ಅಥವಾ ಮಾಯಿಶ್ಚರೈಸರ್ ಬಳಸುವುದನ್ನು ತಪ್ಪಿಸಿ. ಜೆಲ್ ಆಧಾರಿತ ಮಾಯಿಶ್ಚರೈಸರ್ ಅಥವಾ ಬಿಬಿ ಕ್ರೀಮ್ ಬಳಸಬೇಕು. ಗುಣಮಟ್ಟದ ಜೆಲ್ ಆಧಾರಿತ ಮಾಯಿಶ್ಚರೈಸರ್, ಬಿಬಿ ಕ್ರೀಮ್ ಬಳಕೆಯಿಂದ ಉತ್ತಮ ತ್ವಚೆ ನಿಮ್ಮದಾಗುತ್ತದೆ.