NEET 2021 ಪ್ರವೇಶ ಪರೀಕ್ಷೆ ಮುಂದೂಡಿಕೆ ವಿಚಾರ: ಸುಪ್ರೀಂನಿಂದ ಮಹತ್ವದ ಆದೇಶ ಇಲ್ಲಿದೆ..!

 ಸುಪ್ರೀಂಕೋರ್ಟ್ ತನ್ನ ಮಹತ್ವದ ನಿರ್ಧಾರವೊಂದರಲ್ಲಿ, NEET 2021 ಪ್ರವೇಶ ಪರೀಕ್ಷೆಯನ್ನು ಮುಂದೂಡುವುದಿಲ್ಲ ಎಂದು ಹೇಳಿದ್ದು, ಸೆಪ್ಟೆಂಬರ್ 12 ರಂದು ನಿಗದಿಯಾಗಿರುವ NEET ಪರೀಕ್ಷೆಯನ್ನು ಮುಂದೂಡುವಂತೆ ಕೋರಿ ಸಲ್ಲಿಸಿದ ಮನವಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.

Written by - Zee Kannada News Desk | Last Updated : Sep 6, 2021, 03:46 PM IST
  • ಸುಪ್ರೀಂಕೋರ್ಟ್ ತನ್ನ ಮಹತ್ವದ ನಿರ್ಧಾರವೊಂದರಲ್ಲಿ, NEET 2021 ಪ್ರವೇಶ ಪರೀಕ್ಷೆಯನ್ನು ಮುಂದೂಡುವುದಿಲ್ಲ ಎಂದು ಹೇಳಿದೆ.
  • ಸೆಪ್ಟೆಂಬರ್ 12 ರಂದು ನಿಗದಿಯಾಗಿರುವ NEET ಪರೀಕ್ಷೆಯನ್ನು ಮುಂದೂಡುವಂತೆ ಕೋರಿ ಸಲ್ಲಿಸಿದ ಮನವಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.
NEET 2021 ಪ್ರವೇಶ ಪರೀಕ್ಷೆ ಮುಂದೂಡಿಕೆ ವಿಚಾರ: ಸುಪ್ರೀಂನಿಂದ ಮಹತ್ವದ ಆದೇಶ ಇಲ್ಲಿದೆ..! title=

ನವದೆಹಲಿ:  ಸುಪ್ರೀಂಕೋರ್ಟ್ ತನ್ನ ಮಹತ್ವದ ನಿರ್ಧಾರವೊಂದರಲ್ಲಿ, NEET 2021 ಪ್ರವೇಶ ಪರೀಕ್ಷೆಯನ್ನು ಮುಂದೂಡುವುದಿಲ್ಲ ಎಂದು ಹೇಳಿದ್ದು, ಸೆಪ್ಟೆಂಬರ್ 12 ರಂದು ನಿಗದಿಯಾಗಿರುವ NEET ಪರೀಕ್ಷೆಯನ್ನು ಮುಂದೂಡುವಂತೆ ಕೋರಿ ಸಲ್ಲಿಸಿದ ಮನವಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.

NEET 2021 ಪ್ರವೇಶ ಪರೀಕ್ಷೆಯು ಇತರ ಪರೀಕ್ಷೆಗಳೊಂದಿಗೆ ಘರ್ಷಣೆಯಾಗಲಿದೆ ಎಂದು ವಾದಿಸಿದ ಒಂದು ಬ್ಯಾಚ್ ವಿದ್ಯಾರ್ಥಿಗಳ ಅರ್ಜಿಯನ್ನು  ಸುಪ್ರೀಂ ತಿರಸ್ಕರಿಸಿತು, “16 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು NEET ತೆಗೆದುಕೊಳ್ಳುತ್ತಾರೆ. ಕೆಲವು ವಿದ್ಯಾರ್ಥಿಗಳ ಮನವಿಯ ಮೇರೆಗೆ ಅದನ್ನು ಮುಂದೂಡಲು ಸಾಧ್ಯವಿಲ್ಲ" ಎಂದು ಸುಪ್ರೀಂ ಹೇಳಿತು.

ಇದನ್ನೂ ಓದಿ-PM Kisan Yojana: ಪಿಎಂ ಕಿಸಾನ್ ಫಲಾನುಭವಿಗಳಿಗೆ ಕಡಿಮೆ ದರದಲ್ಲಿ ಸಿಗಲಿದೆ Loan, ಅರ್ಜಿ ಸಲ್ಲಿಸುವುದು ಹೇಗೆ ತಿಳಿಯಿರಿ

'ನಾವು ಈ ಮನವಿಯನ್ನು ಪರಿಗಣಿಸುವುದಿಲ್ಲ. ನಮಗೆ ಅನಿಶ್ಚಿತತೆ ಬೇಡ.ಪರೀಕ್ಷೆಯು ಮುಂದುವರಿಯಲಿ, ”ನ್ಯಾಯಮೂರ್ತಿ ಎಎಂ ಖಾನ್ವಿಲ್ಕರ್, ನ್ಯಾಯಮೂರ್ತಿ ಹೃಷಿಕೇಶ್ ರಾಯ್ ಮತ್ತು ನ್ಯಾಯಮೂರ್ತಿ ಸಿಟಿ ರವಿಕುಮಾರ್ ಅವರನ್ನು ಒಳಗೊಂಡ ಒಂದು ಪೀಠ ಹೇಳಿದೆ.

ಸೆಪ್ಟೆಂಬರ್ 3 ರಂದು, ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA)ಸುಪ್ರೀಂ ಕೋರ್ಟ್ ಗೆ ತಿಳಿಸಿದೆ, ಸಿಬಿಎಸ್‌ಇ ಫಲಿತಾಂಶಗಳನ್ನು ಘೋಷಿಸದಿದ್ದರೂ ಸಹ, ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲು ಅವಕಾಶ ನೀಡಲಾಗುವುದು."ಫಲಿತಾಂಶವನ್ನು ಘೋಷಿಸದಿರುವುದು ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗುವುದನ್ನು ತಡೆಯುವುದಿಲ್ಲ, ಮತ್ತು ಫಲಿತಾಂಶವು ಕೌನ್ಸೆಲಿಂಗ್ ಸಮಯದಲ್ಲಿ ಮಾತ್ರ ಅಗತ್ಯವಿರುತ್ತದೆ" ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಹೇಳಿದೆ.

ಇದನ್ನೂ ಓದಿ: Defamation Case: ಹೈಕೋರ್ಟ್ ಗೆ ಮೊರೆಹೋದ ನಟಿ ಕಂಗನಾ ರನೌತ್

ಮನವಿಯು ಸೆಪ್ಟೆಂಬರ್ 12 ರಂದು NEET UG 2021 ರ ಸಾರ್ವಜನಿಕ ಸೂಚನೆ ವೇಳಾಪಟ್ಟಿಯನ್ನು "ಸ್ಪಷ್ಟವಾಗಿ ಅನಿಯಂತ್ರಿತ ಮತ್ತು ಭಾರತದ ಸಂವಿಧಾನದ 14 ನೇ ವಿಧಿಯ ಉಲ್ಲಂಘನೆಯಾಗಿದೆ" ಎಂದು ರದ್ದುಗೊಳಿಸಲು ಕೋರಿತು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News