ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮತ್ತು ಸ್ವಯಂ ಘೋಷಿತ ಗುರು ಅಸಾರಾಮ್ ಬಾಪು ಅವರು ಜೊತೆಯಾಗಿರುವ ರ್ಯಾಲಿಯೊಂದರ ವಿಡಿಯೋವನ್ನು ಐಐಸಿ ಕ್ರಿಕೆಟ್ ಸಂಸ್ಥೆ ತನ್ನ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದು ಆದರೆ ಇದನ್ನು ಅದು ತಕ್ಷಣ ಡಿಲಿಟ್ ಮಾಡಿದೆ.
Since the tweet is unavailable, here is screen-shot! :) pic.twitter.com/l4m4ZzSl7E
— Goonerunny (@tushizap) April 25, 2018
ಜೋಧಪುರ್ ನ್ಯಾಯಾಲಯ ಇಂದು 16 ವರ್ಷ ಪ್ರಾಯದ ಹುಡುಗಿಯನ್ನು ಅತ್ಯಾಚಾರ ಮಾಡಿದ ಕಾರಣ ಅವರಿಗೆ ಜೀವಾವಧಿ ಶಿಕ್ಷೆಯನ್ನು ಅಸಾರಾಮ್ ಬಾಪು ಅವರಿಗೆ ವಿಧಿಸಲಾಗಿದೆ.
ಪ್ರತೀಕ ಸಿನ್ಹಾ ಎನ್ನುವ ವ್ಯಕ್ತಿಯೊಬ್ಬರು ಶೇರ್ ಮಾಡಿರುವ ವಿಡಿಯೋ ವೊಂದನ್ನು ಅದು ತನ್ನ ಖಾತೆಯಲ್ಲಿ ಶೇರ್ ಮಾಡಿದೆ ಇದರಲ್ಲಿ "ನಾರಾಯಣ್, ನಾರಾಯಣ್ ... ಎಂದು ಬರೆದು "ನರೇಂದ್ರಮೋದಿ ಮತ್ತು ಅಸಾರಾಮ್ ನಡುವೆ ಕೆಲವು ಹಳೆಯ ಸಿಹಿ ನೆನಪುಗಳನ್ನು ಹಂಚಿಕೊಳ್ಳಲಾಗುತ್ತಿದೆ ಎಂದು ಅವರು ಬರೆದು ಕೊಂಡಿದ್ದಾರೆ "
Sharing some old sweet memories between @narendramodi and Asaram. pic.twitter.com/c8cveZzn0f
— Pratik Sinha (@free_thinker) April 25, 2018
ಅಸಾರಾಂ ಬಾಪು ಆಗಸ್ಟ್ 2013 ರಲ್ಲಿ, 16 ವರ್ಷ ವಯಸ್ಸಿನ ಹುಡುಗಿಯ ತಂದೆ ದೆಹಲಿಯಲ್ಲಿ ಅಸಾರಾಂ ವಿರುದ್ಧ ಎಫ್ಐಆರ್ ಸಲ್ಲಿಸಿದ್ದರು. ಜೋಧಪುರ್ ಆಶ್ರಮದಲ್ಲಿ ಆಕೆಯನ್ನು ಅತ್ಯಾಚಾರ ಮಾಡಲಾಗಿದೆ ಎಂದು ದೂರಿದ್ದರು. ಆದ್ದರಿಂದ ಅವರನ್ನು ಸೆಪ್ಟಂಬರ್, 2013 ರಲ್ಲಿ, ಪೊಲೀಸ್ ಕಸ್ಟಡಿಯಲ್ಲಿಡಲಾಗಿತ್ತು