ಫೋರ್ಡ್ ಇಂಡಿಯಾ, ತನ್ನ ಫೋರ್ಡ್ ಫ್ರೀಸ್ಟೈಲ್ ಸಿಯುವಿ ಕಾರನ್ನು ಬಿಡುಗಡೆ ಮಾಡಿದ್ದು, ಇದರ ಆರಂಭಿಕ ಬೆಲೆ 5.09ಲಕ್ಷ ರೂ. ಇದೆ. ಕೆನಾಯಿನ್ ರಿಡ್ಜ್, ಮೂನ್ಡಸ್ಟ್ ಸಿಲ್ವರ್, ಸ್ಮೋಕಿ ಗ್ರೇ, ವೈಟ್ ಗೊಲ್ಡ್, ಆಕ್ಸ್ಫರ್ಡ್ ವೈಟ್ ಮತ್ತು ಬ್ಲ್ಯಾಕ್ ಬಣ್ಣ ಸೇರಿ ಒಟ್ಟು 6 ಬಣ್ಣಗಳಲ್ಲಿ ಫ್ರೀ ಸ್ಟೈಲ್ ಕಾರು ಖರೀದಿಗೆ ಲಭ್ಯವಿದೆ.
ಕಾರಿನ ಫ್ರಂಟ್ ಬಂಪರ್ ಇಂಟಿಗ್ರೇಟೆಡ್ ಸ್ಕಿಡ್ ಪ್ಲೇಟ್ ಹೊಂದಿದ್ದು, ಹೆಕ್ಸಾಗೊನಲ್ ಹನಿಕೊಂಬೊ ಮಾದರಿಯ ಗ್ರಿಲ್ ಜೋಡಣೆಯು ಹೊಸ ಕಾರಿನ ಹೊರ ನೋಟವನ್ನು ಹೆಚ್ಚಿಸಿದೆ.
ಈ ಸ್ಪೋರ್ಟಿ ಲುಕ್ ಕಾರು ಹೊಸ ನಮೂನೆಯ ಬ್ಯಾನೆಟ್, ಬಂಪರ್, ಬ್ಲ್ಯಾಕ್ ಕ್ಲ್ಯಾಂಡಿಂಗ್, ಫಾಗ್ ಲ್ಯಾಂಪ್ಸ್ ಹೊಂದಿದೆ. ಪೆಟ್ರೋಲ್ ಹಾಗೂ ಡಿಸೆಲ್ ಎಂಜಿನ್ 19 ಕಿ.ಮೀ ಹಾಗೂ 24.4 ಕಿ. ಮೀ ಮೈಲೇಜ್ ನೀಡಲಿದೆ.
ಮುಂಭಾಗದಲ್ಲಿ ಪವರ್ಟ್ರೇನ್ ಇದ್ದು, 1.2 ಲೀಟರ್ ಪೆಟ್ರೋಲ್ ಎಂಜಿನ್, 1.5-ಲೀಟರ್ ಡೀಸೆಲ್ ಯುನಿಟ್ ಒಳಗೊಂಡಿದೆ. ಪೆಟ್ರೋಲ್ ಮೋಟಾರು 95 ಬಿಎಚ್ಪಿ ಪೀಕ್ ಪವರ್ ಹಾಗೂ 120 ಎನ್ಎಂ ಪೀಕ್ ಟಾರ್ಕ್ ಶಕ್ತಿ ಉತ್ಪಾದಿಸಲಿದೆ. ಡೀಸೆಲ್ ಮೋಟಾರು 99 ಬಿಎಚ್ಪಿ ಪೀಕ್ ಪವರ್ ಹಾಗೂ 215 ಎನ್ಎಂ ಪೀಕ್ ಟಾರ್ಕ್ ಶಕ್ತಿ ಉತ್ಪಾದಿಸಲಿದೆ. ಇದು ಆ್ಯಂಬಿಯಂಟ್, ಟ್ರೆಂಡ್, ಟೈಟಾನಿಯಂ, ಟೈಟಾನಿಯಂ ಪ್ಲಸ್ ಈ ನಾಲ್ಕು ಆವೃತ್ತಿಗಳಲ್ಲಿ ಲಭ್ಯ.
ಕಾರಿನ ಒಳಗೆ ವಿಸ್ತಾರ ಜಾಗ ಹೊಂದಿದ್ದು, ಎರಡು ಏರ್ಬ್ಯಾಗ್ಗಳು, ಕರ್ಟೇನ್ ಏರ್ ಬ್ಯಾಗ್, ಎಬಿಎಸ್, ರಿವರ್ಸ್ ಪಾರ್ಕಿಂಗ್ ಸೆನ್ಸರ್ಗಳು, ಸೀಟ್ ಬೆಲ್ಟ್ ರಿಮೈಂಡರ್ಗಳನ್ನು ಸುರಕ್ಷತಾ ಆಯ್ಕೆಗಳಾಗಿ ನೀಡಲಾಗಿದೆ.
ಮೂರು ಸ್ಪೋಕ್ಗಳ ಮಲ್ಟಿ ಫಂಕ್ಷನ್ ಸ್ಟೀರಿಂಗ್ ವೀಲ್, ಅನಲಾಗ್, ಡಿಜಿಟಲ್ ಡಿಸ್ಪ್ಲೇ –ಇನ್ಸ್ಟ್ರುಮೆಂಟ್ ಕ್ಲಸ್ಟರ್, ಟ್ಯಾಬ್ನಂತಿರುವ ಟಚ್ಸ್ಕ್ರೀನ್ SYNC3 ಇನ್ಫೊಟೇನ್ಮೆಂಟ್ ಸಿಸ್ಟಂ, ಆ್ಯಂಡ್ರಾಯ್ಡ್ ಆಟೊ ಮತ್ತು ಆ್ಯಪಲ್ ಕಾರ್ ಪ್ಲೇ, ಎಸಿ ವೆಂಟ್ಗಳು ಇವೆ.
ಈ ಕಾರಿಗೆ ಆ್ಯಕ್ಟಿವ್ ರೋಲ್ಓವರ್ ಪ್ರಿವೆಂಶನ್ ತಂತ್ರಜ್ಞಾನ ಅಳವಡಿಸಿರುವುದು ವಿಶೇಷ.