Almond Tea Benefits: ನೀವು ಎಂದಾದರೂ ಬಾದಾಮಿ ಚಹಾವನ್ನು ಪ್ರಯತ್ನಿಸಿದ್ದೀರಾ? ಇದರ 5 ಪ್ರಯೋಜನವನ್ನು ತಪ್ಪದೇ ತಿಳಿಯಿರಿ

Almond Tea Benefits: ಬಾದಾಮಿಯಲ್ಲಿ ಫೈಬರ್, ಪ್ರೋಟೀನ್, ಆರೋಗ್ಯಕರ ಮೊನೊಸಾಚುರೇಟೆಡ್ ಕೊಬ್ಬಿನಂತಹ ಹಲವು ಪ್ರಮುಖ ಪೋಷಕಾಂಶಗಳಿವೆ. ಅವುಗಳು ಹೆಚ್ಚಿನ ಪೋಷಣೆ, ಉತ್ಕರ್ಷಣ ನಿರೋಧಕಗಳು, ಆರೋಗ್ಯಕರ ಕೊಬ್ಬುಗಳು, ಜೀವಸತ್ವಗಳು ಮತ್ತು ಖನಿಜಗಳನ್ನು ಒಳಗೊಂಡಿರುತ್ತವೆ, ಇದು ನಿಮ್ಮನ್ನು ಅನೇಕ ರೋಗಗಳಿಂದ ರಕ್ಷಿಸುತ್ತದೆ.

Written by - Yashaswini V | Last Updated : Sep 14, 2021, 11:57 AM IST
  • ಹೆಚ್ಚಿನ ಪ್ರಮಾಣದ ಉತ್ಕರ್ಷಣ ನಿರೋಧಕಗಳು ಜೀವಕೋಶಗಳನ್ನು ಆಕ್ಸಿಡೇಟಿವ್ ಹಾನಿಯಿಂದ ರಕ್ಷಿಸಲು ಸಹಾಯ ಮಾಡುತ್ತದೆ
  • ವಯಸ್ಸಿಗೆ ಸಂಬಂಧಿಸಿದ ರೋಗಗಳ ಹಿಂದೆ ಆಕ್ಸಿಡೇಟಿವ್ ಹಾನಿ ಮುಖ್ಯ ಕಾರಣವಾಗಿದೆ
  • ಬಾದಾಮಿ ಚಹಾ ಕುಡಿಯುವುದು ಹೃದಯಕ್ಕೆ ಆರೋಗ್ಯಕರ
Almond Tea Benefits: ನೀವು ಎಂದಾದರೂ ಬಾದಾಮಿ ಚಹಾವನ್ನು ಪ್ರಯತ್ನಿಸಿದ್ದೀರಾ? ಇದರ 5 ಪ್ರಯೋಜನವನ್ನು ತಪ್ಪದೇ ತಿಳಿಯಿರಿ title=
Almond Tea Benefits: ಉತ್ತಮ ಆರೋಗ್ಯಕ್ಕಾಗಿ ಸೇವಿಸಿ ಬಾದಾಮಿ ಚಹಾ

ಬೆಂಗಳೂರು:  Almond Tea Benefits-  ಪ್ರತಿ ನಿತ್ಯ ಹಿತ-ಮಿತವಾಗಿ ನಿಗದಿತ ಪ್ರಮಾಣದಲ್ಲಿ ಬಾದಾಮಿ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ನೀವು ಕೇಳಿರಬಹುದು. ಆದರೆ ನೀವು ಎಂದಾದರೂ ಬಾದಾಮಿ ಚಹಾವನ್ನು ಪ್ರಯತ್ನಿಸಿದ್ದೀರಾ? ಬಾದಾಮಿ ಚಹಾವನ್ನು ಕುಡಿಯುವುದರಿಂದ ಅನೇಕ ಆರೋಗ್ಯಕರ ಪ್ರಯೋಜನಗಳು ಲಭ್ಯವಿದೆ. ಬಾದಾಮಿಯಲ್ಲಿ ಫೈಬರ್, ಪ್ರೋಟೀನ್, ಆರೋಗ್ಯಕರ ಮೊನೊಸಾಚುರೇಟೆಡ್ ಕೊಬ್ಬಿನಂತಹ ಹಲವು ಪ್ರಮುಖ ಪೋಷಕಾಂಶಗಳಿವೆ. ಅವುಗಳು ಹೆಚ್ಚಿನ ಪೋಷಣೆ, ಉತ್ಕರ್ಷಣ ನಿರೋಧಕಗಳು, ಆರೋಗ್ಯಕರ ಕೊಬ್ಬುಗಳು, ಜೀವಸತ್ವಗಳು ಮತ್ತು ಖನಿಜಗಳನ್ನು ಒಳಗೊಂಡಿರುತ್ತವೆ, ಇದು ನಿಮ್ಮನ್ನು ಅನೇಕ ರೋಗಗಳಿಂದ ರಕ್ಷಿಸುತ್ತದೆ.

ಬಾದಾಮಿಯಲ್ಲಿರುವ ಹೆಚ್ಚಿನ ಪ್ರಮಾಣದ ಉತ್ಕರ್ಷಣ ನಿರೋಧಕಗಳು ಜೀವಕೋಶಗಳನ್ನು ಆಕ್ಸಿಡೇಟಿವ್ ಹಾನಿಯಿಂದ ರಕ್ಷಿಸಲು ಸಹಾಯ ಮಾಡುತ್ತದೆ. ವಯಸ್ಸಿಗೆ ಸಂಬಂಧಿಸಿದ ರೋಗಗಳ ಹಿಂದೆ ಆಕ್ಸಿಡೇಟಿವ್ ಹಾನಿ ಮುಖ್ಯ ಕಾರಣವಾಗಿದೆ. 

ವಿಟಮಿನ್ ಇ (Vitamin E) :
ವಿಟಮಿನ್ ಇ ಕೊಬ್ಬು ಕರಗುವ ಉತ್ಕರ್ಷಣ ನಿರೋಧಕ ಕುಟುಂಬಕ್ಕೆ ಸೇರಿದ್ದು ಮತ್ತು ಬಾದಾಮಿಯನ್ನು ವಿಟಮಿನ್ ಇ ಯ ಅತ್ಯುತ್ತಮ ಮೂಲವೆಂದು ಪರಿಗಣಿಸಲಾಗಿದೆ. ಬಾದಾಮಿ ಮೂಲಕ ದೇಹಕ್ಕೆ ಅಗತ್ಯವಾದ ವಿಟಮಿನ್ ಇ (Vitamin E) ತೆಗೆದುಕೊಳ್ಳುವುದರಿಂದ, ನೀವು ಅನೇಕ ಪ್ರಯೋಜನಗಳನ್ನು ಪಡೆಯುತ್ತೀರಿ. 

ಇದನ್ನೂ ಓದಿ- Men's health: ನಿತ್ಯ ರಾತ್ರಿ ಹಾಲಿನ ಜೊತೆ ಇದನ್ನು ಬೆರೆಸಿ ಕುಡಿದರೆ, ಪುರುಷರಿಗೆ ಸಿಗುತ್ತೆ ಅದ್ಭುತ ಪ್ರಯೋಜನ

ರಕ್ತದಲ್ಲಿನ ಸಕ್ಕರೆ ಮಟ್ಟ:
ಬಾದಾಮಿ ಚಹಾದಲ್ಲಿ ಮೆಗ್ನೀಸಿಯಮ್ ಸಮೃದ್ಧವಾಗಿದೆ. ಹೆಚ್ಚಿನ ಮೆಗ್ನೀಸಿಯಮ್ ಸೇವನೆಯು ಟೈಪ್ 2 ಡಯಾಬಿಟಿಸ್ (Type 2 diabetes) ಮತ್ತು ಮೆಟಾಬಾಲಿಕ್ ಸಿಂಡ್ರೋಮ್ ನಂತಹ ರೋಗಗಳನ್ನು ಗುಣಪಡಿಸಲು ಸಹಾಯ ಮಾಡುತ್ತದೆ. 

ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುವಲ್ಲಿ ಪ್ರಯೋಜನಕಾರಿ (Reducing cholesterol level) :
ಬಾದಾಮಿ ಕೆಟ್ಟ ಕೊಲೆಸ್ಟ್ರಾಲ್ LDL ಅನ್ನು ಕಡಿಮೆ ಮಾಡುವಲ್ಲಿ ಪರಿಣಾಮಕಾರಿ ಎಂದು ಹಲವು ಅಧ್ಯಯನಗಳಲ್ಲಿ ತಿಳಿದುಬಂದಿದೆ. ಬಾದಾಮಿ ಚಹಾ ಕುಡಿಯುವುದರಿಂದ ಕೆಟ್ಟ ಕೊಲೆಸ್ಟ್ರಾಲ್ (Bad Cholesterol) ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಇದು ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುತ್ತದೆ.

ಕ್ಯಾಲೋರಿ ಸೇವನೆ (Caloric Intake) :
ಬಾದಾಮಿಯಲ್ಲಿ ಪ್ರೊಟೀನ್ ಮತ್ತು ಫೈಬರ್ ಅಧಿಕವಾಗಿದ್ದು ಕಾರ್ಬೋಹೈಡ್ರೇಟ್ (Carbohydrates) ಕಡಿಮೆ ಇರುತ್ತದೆ. ಅಧ್ಯಯನದ ಪ್ರಕಾರ, ಬಾದಾಮಿ ಚಹಾವನ್ನು ಕುಡಿಯುವುದರಿಂದ, ನಿಮಗೆ ಮತ್ತೆ ಮತ್ತೆ ಹಸಿವಾಗುವುದಿಲ್ಲ ಮತ್ತು ಹೊಟ್ಟೆ ತುಂಬಿದ ಅನುಭವವಾಗುತ್ತದೆ. ಬಾದಾಮಿ ಚಹಾವನ್ನು ಕುಡಿಯುವುದರಿಂದ, ನೀವು ಪದೇ ಪದೇ ತಿನ್ನುವುದಿಲ್ಲ, ಇದು ಕ್ಯಾಲೋರಿ ಸೇವನೆಯನ್ನು ಕಡಿಮೆ ಮಾಡುತ್ತದೆ.

ಇದನ್ನೂ ಓದಿ- Post Pregnancy Weight loss tips: ಹೆರಿಗೆಯ ನಂತರ ತೂಕ ಇಳಿಸಿಕೊಳ್ಳಲು ಸರಿಯಾದ ಮಾರ್ಗ ಅನುಸರಿಸಿ

ಹೃದಯದ ಆರೋಗ್ಯಕ್ಕೆ ಪ್ರಯೋಜನಕಾರಿ (For Heart Health) :
ಬಾದಾಮಿ ಚಹಾ ಕುಡಿಯುವುದು ಹೃದಯದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದು ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

ಬಾದಾಮಿ ಚಹಾ ಮಾಡುವುದು ಹೇಗೆ? (How to prepare Almond Tea) 
ಬಾದಾಮಿಯನ್ನು ಒಂದು ಬಟ್ಟಲಿನಲ್ಲಿ ರಾತ್ರಿ ಯಿಡಿ ನೀರಿನಲ್ಲಿ ನೆನೆಸಿಡಿ. ಮರುದಿನ, ಅದರ ಸಿಪ್ಪೆಯನ್ನು ತೆಗೆದು ಬಾದಾಮಿ ಪುಡಿಯನ್ನು ಮಾಡಿ. ನೀರನ್ನು ಸೇರಿಸಿ ಪೇಸ್ಟ್ ತಯಾರಿಸಿ ನಂತರ ಈ ಪೇಸ್ಟ್ ಗೆ ನೀರು ಸೇರಿಸಿ ಅದನ್ನು ಕುದಿಸಿ. ಬಾದಾಮಿ ಪೇಸ್ಟ್ ಸ್ವಲ್ಪ ಹೊತ್ತು ಕುದಿಯಲು ಬಿಡಿ ಮತ್ತು ನಂತರ ನೀವು ಅದನ್ನು ಬಿಸಿ  ಅಥವಾ ತಣ್ಣಗೆ ಕುಡಿಯಬಹುದು. 

(ಸೂಚನೆ: ಇಲ್ಲಿ ನೀಡಿರುವ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ನಂಬಿಕೆಗಳನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ಜೀ ಹಿಂದೂಸ್ಥಾನ್ ಕನ್ನಡ ನ್ಯೂಸ್ ಇದನ್ನು ಅನುಮೋದಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News