ಹೈದರಾಬಾದ್: ಹೈದರಾಬಾದ್ ನಲ್ಲಿ 6 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ(Hyderabad Rape Case)ಎಸಗಿ ಕೊಲೆ ಮಾಡಿದ ಅಪರಾಧಿಯನ್ನು ಹಿಡಿದು ಎನ್ಕೌಂಟರ್ ಮಾಡುತ್ತೇವೆಂದು ತೆಲಂಗಾಣ ಸಚಿವ ಮಲ್ಲಾರೆಡ್ಡಿ ಹೇಳಿದ್ದಾರೆ. ‘ಬಾಲಕಿ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿರುವ ಆರೋಪಿಯನ್ನು ನಾವು ಖಂಡಿತವಾಗಿಯೂ ಬಂಧಿಸುತ್ತೇವೆ. ಆತನನ್ನು ಎನ್ಕೌಂಟರ್(Encounter) ಮಾಡಿ ಹತ್ಯೆ ಮಾಡುತ್ತೇವೆ’ ಎಂದು ಮಲ್ಲಾರೆಡ್ಡಿ ಆಕ್ರೋಶ ಹೊರಹಾಕಿದ್ದಾರೆ.
ಹೈದರಾಬಾದ್ನ ಸಯೀದಾಬಾದ್ನಲ್ಲಿ ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿರುವ ಆರೋಪಿಯನ್ನು ಬಂಧಿಸಿ ಗಲ್ಲುಶಿಕ್ಷೆ ವಿಧಿಸಬೇಕೆಂಬ ಆಗ್ರಹಗಳು ಕೇಳಿಬಂದಿದೆ. ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ರೇವಂತ್ ರೆಡ್ಡಿ ಅತ್ಯಾಚಾರವೆಸಗಿರುವ ಆರೋಪಿಯನ್ನು ಬಂಧಿಸಿ ಎನ್ಕೌಂಟರ್ ಮಾಡಬೇಕೆಂದು ಆಗ್ರಹಿಸಿದ್ದರು. ಇದರ ಬೆನ್ನಲ್ಲೆ ಹೈದರಾಬಾದ್ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ತೆಲಂಗಾಣ ಕಾರ್ಮಿಕ ಸಚಿವ ಮಲ್ಲಾ ರೆಡ್ಡಿ(Telangana Minister Malla Reddy) ಈ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: PM Kisan ಯೋಜನೆ ಅಡಿ ಈಗ ರೈತರಿಗೆ ಸಿಗಲಿದೆ 6000 ಬದಲಿಗೆ,12000 ರೂ.!
ಬಾಲಕಿಯ ಕುಟುಂಬಸ್ಥರನ್ನು ಭೇಟಿ ಮಾಡದ ಬಗ್ಗೆ ವಿಪಕ್ಷ ನಾಯಕರು ಮಾಡಿರುವ ಟೀಕೆಗಳಿಗೆ ಪ್ರತಿಕ್ರಿಯಿಸಿದ ಅವರು, ‘ಸಂತ್ರಸ್ಥೆಯ ಕುಟುಂಬ ಸದಸ್ಯರನ್ನು ಭೇಟಿ ಮಾಡಿ ಅವರಿಗೆ ಸೂಕ್ತ ಪರಿಹಾರ ನೀಡುವುದಾಗಿ ಹೇಳಿದ್ದಾರೆ. ‘ಸದ್ಯ ಆರೋಪಿ ಎಲ್ಲಿದ್ದಾನೆಂಬುದರ ಬಗ್ಗೆ ಮಾಹಿತಿ ಇಲ್ಲ. ಆದರೆ ಆತನನ್ನು ಶೀಘ್ರವೇ ಬಂಧಿಸಿ ಎನ್ಕೌಂಟರ್ ಮಾಡಲಾಗುವುದು’ ಅಂತಾ ಮಲ್ಲಾರೆಡ್ಡಿ ಹೇಳಿದ್ದಾರೆ.
ಆರಂಭದಲ್ಲಿ ಯಾದಾದ್ರಿ ಭುವನಗಿರಿ ಜಿಲ್ಲೆಯ ಗ್ರಾಮದಲ್ಲಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸ್(Telangana police) ಮೂಲಗಳು ಹೇಳಿಕೊಂಡಿದ್ದವು. ಆದರೆ ಆರೋಪಿ ಇನ್ನೂ ತಲೆಮರೆಸಿಕೊಂಡಿದ್ದಾನೆ ಎಂದು ಹಿರಿಯ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ. ಆತನನ್ನು ಬಂಧಿಸಲು ಆಯುಕ್ತರ ಕಾರ್ಯಪಡೆಯ 15 ವಿಶೇಷ ಪೊಲೀಸ್ ತಂಡಗಳು ಶೋಧ ನಡೆಸುತ್ತಿವೆ. ಫಲಕ್ನುಮಾದಿಂದ ಸಿಸಿಟಿವಿ ಫೂಟೇಜ್(CCTV Footage)ಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಇದರಲ್ಲಿ ಆರೋಪಿಯು ಕ್ಯಾಪ್ ಮತ್ತು ಫೇಸ್ ಮಾಸ್ಕ್ ಧರಿಸಿರುವ ದೃಶ್ಯ ಸೆರೆಯಾಗಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: SBI Loan Rate- ಎಸ್ಬಿಐ ಸಾಲ ಅಗ್ಗ! ಬಡ್ಡಿ ದರ ಕಡಿತ, ಗೃಹ ಸಾಲ, ಆಟೋ ಇಎಂಐ ಇಳಿಕೆ
ಸಯೀದಾಬಾದ್ನಲ್ಲಿ 27 ವರ್ಷದ ಆರೋಪಿ ಸೆಪ್ಟೆಂಬರ್ 9ರಂದು ನೆರೆಮನೆಯ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ(Telangana Minor Girl Rape)ನಡೆಸಿ ಕೊಲೆ ಮಾಡಿದ್ದನು. ಗುರುವಾರ ಸಂಜೆ 5 ಗಂಟೆಯಿಂದ ಕಾಣೆಯಾಗಿದ್ದ ಬಾಲಕಿಯ ಮೃತದೇಹವು ಮಧ್ಯರಾತ್ರಿಯ ನಂತರ ಆಕೆಯ ನೆರೆಹೊರೆಯವರ ಮನೆಯಲ್ಲಿ ಪತ್ತೆಯಾಗಿತ್ತು. ಸರ್ಕಾರಿ ಒಸ್ಮಾನಿಯಾ ಆಸ್ಪತ್ರೆಯಲ್ಲಿ ನಡೆದ ಶವಪರೀಕ್ಷೆಯಲ್ಲಿ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದು ಮತ್ತು ಕತ್ತು ಹಿಸುಕಿ ಕೊಲೆ ಮಾಡಿರುವುದು ತಿಳಿದುಬಂದಿತ್ತು.
ಈ ಘಟನೆ ಬೆಳಕಿಗೆ ಬಂದ ಕೂಡಲೇ ಸಾರ್ವಜನಿಕರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಕೂಡಲೇ ಆರೋಪಿಯನ್ನು ಬಂಧಿಸಿ ಆತನಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿ ಚಂಪಾಪೇಟ್-ಸಾಗರ ರಸ್ತೆಯಲ್ಲಿ 7 ಗಂಟೆಗಳ ಕಾಲ ಧರಣಿ ನಡೆಸಲಾಗಿತ್ತು. ಕೆಲವು ಪ್ರತಿಭಟನಾಕಾರರು ಎನ್ಕೌಂಟರ್ ಮಾಡಿ ಆರೋಪಿಯನ್ನು ಕೊಲ್ಲಬೇಕೆಂದು ಒತ್ತಾಯಿಸಿದ್ದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.