UBI ಬ್ಯಾಂಕ್ ಆರಂಭಿಸುತ್ತಿದೆ ವೆಲ್ನೆಸ್ ಕ್ರೆಡಿಟ್ ಕಾರ್ಡ್, ಉಚಿತ ಆರೋಗ್ಯ ತಪಾಸಣೆ, ಜಿಮ್, ಸ್ಪಾ ಸೇರಿದಂತೆ ಸಿಗಲಿದೆ ಹಲವು ಸೌಲಭ್ಯ

ಯೂನಿಯನ್ ಬ್ಯಾಂಕ್ ಈ ಕಾರ್ಡ್ ಅನ್ನು ಜೆಸಿಬಿ ಇಂಟರ್ನ್ಯಾಷನಲ್ ನೆಟ್ವರ್ಕ್ ಸಹಯೋಗದೊಂದಿಗೆ ಬಿಡುಗಡೆ ಮಾಡಿದೆ.

ನವದೆಹಲಿ : Union Bank of India Rupay Wellness Credit Card: ಯುಬಿಐ ಗ್ರಾಹಕರಿಗೆ ವಿಶೇಷ ಕ್ರೆಡಿಟ್ ಕಾರ್ಡ್ ಅನ್ನು ಬಿಡುಗಡೆ ಮಾಡಿದೆ. ಯೂನಿಯನ್ ಬ್ಯಾಂಕ್ ಈ ಕಾರ್ಡ್ ಅನ್ನು ಜೆಸಿಬಿ ಇಂಟರ್ನ್ಯಾಷನಲ್ ನೆಟ್ವರ್ಕ್ ಸಹಯೋಗದೊಂದಿಗೆ ಬಿಡುಗಡೆ ಮಾಡಿದೆ. ಇದರಲ್ಲಿ ಗ್ರಾಹಕರು ಉಚಿತ ಆರೋಗ್ಯ ತಪಾಸಣೆ, ಜಿಮ್ ಸ್ಪಾ ಇತ್ಯಾದಿ ಸೌಲಭ್ಯಗಳನ್ನು ಪಡೆಯುತ್ತಾರೆ. ಯೂನಿಯನ್ ಬ್ಯಾಂಕ್‌ನ ಈ ಕಾರ್ಡ್‌ನ ಹೆಸರು ವೆಲ್ ನೆಸ್ ಕ್ರೆಡಿಟ್ ಕಾರ್ಡ್. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಯೂನಿಯನ್ ಬ್ಯಾಂಕ್ ಗ್ರಾಹಕರು ವೆಲ್ನೆಸ್ ಕ್ರೆಡಿಟ್ ಕಾರ್ಡ್ ಮೂಲಕ, ಪ್ರತಿವರ್ಷ ಉಚಿತ ಆರೋಗ್ಯ ತಪಾಸಣೆಯ ಸೌಲಭ್ಯವನ್ನು ಪಡೆಯುತ್ತಾರೆ. ಇದಲ್ಲದೇ, ಇದರ ನಂತರವೂ, ಗ್ರಾಹಕರಿಗೆ  ಆರೋಗ್ಯ ತಪಾಸಣೆಯಲ್ಲಿ ರಿಯಾಯಿತಿ ಸಿಗಲಿದೆ. 

2 /5

ಯುಬಿಐ ಬ್ಯಾಂಕ್ ಗ್ರಾಹಕರು, ಈ ವೆಲ್ನೆಲ್ ಕ್ರೆಡಿಟ್ ಕಾರ್ಡ್ ಮೂಲಕ 15 ದಿನಗಳಿಂದ 1 ತಿಂಗಳವರೆಗೆ ಉಚಿತ ಜಿಮ್ ಸದಸ್ಯತ್ವವನ್ನು ಪಡೆಯುತ್ತಾರೆ. ಈ ಸದಸ್ಯತ್ವವನ್ನು ವಿಸ್ತರಿಸಲು ಬಯಸಿದರೆ, 40-50 ಪ್ರತಿಶತದವರೆಗೆ ರಿಯಾಯಿತಿ ಪಡೆಯಬಹುದು. 

3 /5

ಯುಬಿಐ ಗ್ರಾಹಕರು, ಈ ವಿಶೇಷ ಕ್ರೆಡಿಟ್ ಕಾರ್ಡ್‌ನಲ್ಲಿ ಪ್ರತಿ ವರ್ಷ ಒಂದು ಉಚಿತ ಸ್ಪಾ ಸೆಶನ್ ಪಡೆಯುತ್ತಾರೆ. ಇದರ ಹೊರತಾಗಿ, ನೀವು ವರ್ಷಪೂರ್ತಿ ಸ್ಪಾಗಳ ಮೇಲೆ ಆಕರ್ಷಕ ರಿಯಾಯಿತಿಗಳನ್ನು ಸಿಗುತ್ತವೆ.

4 /5

ಯುಬಿಐ ಈ ವೆಲ್ನೆಸ್ ಕ್ರೆಡಿಟ್ ಕಾರ್ಡ್ ನಲ್ಲಿ ಒಂದು ವರ್ಷದಲ್ಲಿ ತನ್ನ ಗ್ರಾಹಕರಿಗೆ ಒಂದು ಗಾಲ್ಫ್ ಸೆಷನ್ ಅಥವಾ ಕ್ಲಾಸ್ ಅನ್ನು ಉಚಿತವಾಗಿ ನೀಡುತ್ತದೆ. ಇದರ ಹೊರತಾಗಿ, ಗ್ರಾಹಕರು ಮತ್ತಷ್ಟು ರಿಯಾಯಿತಿಗಳನ್ನು ಪಡೆಯುತ್ತಲೇ ಇರುತ್ತಾರೆ. 

5 /5

ಯುಬಿಐ ಗ್ರಾಹಕರು ದೇಶೀಯ ಮತ್ತು ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ವೆಲ್‌ನೆಸ್ ಕ್ರೆಡಿಟ್ ಕಾರ್ಡ್‌ಗಳಿಗೆ ಕಾಂಪ್ಲಿಮೆಂಟರಿ ಆಕ್ಸೆಸ್ ಸಿಗಲಿದೆ.