ತಂದೆಯ ಮಿತಿ ಮೀರಿದ ಕ್ರೌರ್ಯ: 39 ದಿನಗಳ ಮಗುವಿನ 71 ಮೂಳೆಗಳ ಮುರಿದ ಪಾಪಿ..!

ಇಂಗ್ಲೆಂಡಿನಲ್ಲಿ ತಂದೆಯೊಬ್ಬ ಕೇವಲ 39 ದಿನಗಳ ಮುಗ್ಧ ಮಗುವಿನ ಮೇಲೆ ಮನಬಂದಂತೆ ಥಳಿಸುವ ಮೂಲಕ 71 ಮೂಳೆಗಳನ್ನು ಮುರಿದುಹಾಕಿದ್ದಾನೆ.

ಹೃದಯ ವಿದ್ರಾವಕ ಪ್ರಕರಣವೊಂದು ಇಂಗ್ಲೆಂಡಿನಲ್ಲಿ ಬೆಳಕಿಗೆ ಬಂದಿದೆ. ಅಲ್ಲಿ ತಂದೆಯೊಬ್ಬ ಕ್ರೌರ್ಯದ ಎಲ್ಲ ಮಿತಿಗಳನ್ನೂ ಮೀರಿದ್ದಾನೆ. ಕೇವಲ 39 ದಿನಗಳ ಮುಗ್ಧ ಮಗುವಿನ ಮೇಲೆ ಮನಬಂದಂತೆ ಥಳಿಸುವ ಮೂಲಕ 71 ಮೂಳೆಗಳನ್ನು ಮುರಿದುಹಾಕಿದ್ದಾನೆ. ತಂದೆಯ ನೀಚ ಕ್ರೌರ್ಯಕ್ಕೆ ಪುಟ್ಟ ಮಗು ಪ್ರಾಣವನ್ನೇ ಬಿಟ್ಟಿದೆ. ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದ ನ್ಯಾಯಾಲಯವು 31 ವರ್ಷದ ಜೇಮ್ಸ್ ಕ್ಲಾರ್ಕ್ ಕೊಲೆ ಅವರಾಧಿ ಎಂದು ತೀರ್ಪು ನೀಡಿದೆ. ಏನೂ ಅರಿಯದ ಕಂದನನ್ನು ಕೊಂದ ಆತನಿಗೆ ಕಠಿಣ ಶಿಕ್ಷೆ ವಿಧಿಸಲಾಗಿದೆ.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

31 ವರ್ಷದ ಜೇಮ್ಸ್ ಕ್ಲಾರ್ಕ್ ತನ್ನ 39 ದಿನಗಳ ಗಂಡು ಮಗುವಿನ 71 ಮೂಳೆಗಳನ್ನು ಮುರಿದಿದ್ದಾನೆ. ಈ ಹೃದಯ ವಿದ್ರಾವಕ ಘಟನೆ ಇಂಗ್ಲೆಂಡಿನ ವಾರ್ಮ್ಲಿಯಲ್ಲಿ ನಡೆದಿದೆ. ಅಮಾಯಕ ಮಗುವಿನ ಕೊಲೆ ಮಾಡಿದ ಕ್ಲಾರ್ಕ್ ಗೆ ಅಲ್ಲಿನ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ. ಆತನಿಗೆ ಕನಿಷ್ಠ 15 ವರ್ಷಗಳ ಜೈಲು ಶಿಕ್ಷೆ ವಿಧಿಸಿ ಆದೇಶಿಸಿದೆ.

2 /5

ಡೈಲಿಮೇಲ್ ವರದಿಯ ಪ್ರಕಾರ, ಈ ಪ್ರಕರಣವು 3 ವರ್ಷಗಳಷ್ಟು ಹಳೆಯದು. 2018ರ ಜನವರಿಯಲ್ಲಿ ಜೇಮ್ಸ್ ಕ್ಲಾರ್ಕ್ ತನ್ನ ಪುತ್ರ ಸೀನ್ ಕ್ಲಾರ್ಕ್ ನಿದ್ರಿಸುತ್ತಿದ್ದ ವೇಳೆ ಮನಬಂದಂತೆ ಥಳಿಸಿ ಬರೋಬ್ಬರಿ 71 ಮೂಳೆಗಳನ್ನು ಮುರಿದುಹಾಕಿದ್ದಾನೆ. ತಂದೆಯ ಕ್ರೌರ್ಯಕ್ಕೆ ಏನೂ ಅರಿಯದ ಮುಗ್ಧ ಕಂಡ ಪ್ರಾಣಬಿಟ್ಟಿದೆ.

3 /5

ಜೇಮ್ಸ್ ಕ್ಲಾರ್ಕ್ ತನ್ನ 39 ದಿನಗಳ ಪುತ್ರನನ್ನು ರಾತ್ರಿ ಹಾಸಿಗೆಯ ಮೇಲೆ ಮಲಗಿಸಿದ್ದನು. ಮರುದಿನ ಬೆಳಗ್ಗೆ ನೋಡಿದಾಗ ಮಗುವಿನ ತಲೆಯಲ್ಲಿ ರಕ್ತಸ್ರಾವವಾಗುತ್ತಿರುವುದು ಕಂಡುಬಂದಿತ್ತು. ಹತ್ತಿರ ಹೋಗಿ ಪರಿಶೀಲಿಸಿದಾಗ ಮಗು ಮೃತಪಟ್ಟಿರುವುದು ಗೊತ್ತಾಗಿದೆ. ತನ್ನ ಮಗು ಶವವಾಗಿ ಪತ್ತೆಯಾಗಿದೆ ಎಂದು ತಾಯಿ ಹೆಲೆನ್ ಜೆರೆಮಿ ಪೊಲೀಸರಿಗೆ ದೂರು ನೀಡಿದ್ದಳು.   

4 /5

ಮಗುವಿನ ಮರಣದ ನಂತರ  ಶವದ ಮರಣೋತ್ತರ ಪರೀಕ್ಷೆಯನ್ನು ನಡೆಸಲಾಯಿತು. ಮಗುವಿನ ಮೇಲೆ ತಂದೆ ಹಲ್ಲೆ ನಡೆಸಿರುವುದು ಹಾಗೂ ಮಗುವಿನ ದೇಹದ 71 ಮೂಳೆಗಳು ಮುರಿದಿರುವುದ ನಂತರ ಗೊತ್ತಾಯಿತು. ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಮಗುವಿನ ತಲೆಗೆ ಗಂಭೀರ ಗಾಯವಾಗಿ, ನಂತರ ರಕ್ತಸ್ರಾವವಾಗಿರುವುದು ತಿಳಿದುಬಂದಿತ್ತು.

5 /5

ನ್ಯಾಯಾಲಯದಲ್ಲಿ ಪ್ರಾಸಿಕ್ಯೂಟರ್ ಜೇನ್ ಓಸ್ಬೋರ್ನ್ ಕ್ಯೂಸಿ ಅವರು ಆರೋಪಿ ತಂದೆಯ ಕೃತ್ಯವನ್ನು ಬಲವಾಗಿ ಖಂಡಿಸಿದರು. ಇದು ಅನಾಗರಿಕತೆಯ ನಡವಳಿಕೆಯನ್ನು ತೋರಿಸುತ್ತದೆ. ಕ್ರೌರ್ಯದ ಎಲ್ಲೆ ಮೀರಿ ತಂದೆ ತನ್ನ ಮಗುವಿನ ಮೇಲೆ ಹಲ್ಲೆ ನಡೆಸಿ ನೀಚ ಕೃತ್ಯ ಎಸಗಿದ್ದಾನೆ. ಕ್ಷಮಿಸಲಾಗದ ತಪ್ಪು ಮಾಡಿರುವ ಆರೋಪಿಗೆ ಕಠಿಣ ಶಿಕ್ಷೆ ವಿಧಿಸಲಾಗುವುದು ಎಂದು ತೀರ್ಪು ನೀಡಿದರು.