ಎಸ್‌ಬಿಐ, ಎಲ್‌ಐಸಿ ಹೌಸಿಂಗ್ ಫೈನಾನ್ಸ್, ಕೋಟಕ್ ಮಹೀಂದ್ರಾ, ಪಿಎನ್‌ಬಿ, ಯೆಸ್ ಬ್ಯಾಂಕ್ ಮತ್ತು ಐಸಿಐಸಿಐ ಬ್ಯಾಂಕ್ ಗೃಹಸಾಲದ ಬಡ್ಡಿದರವನ್ನು ಘೋಷಿಸಿವೆ.
ಸಾಲು ಸಾಲಾಗಿ ಹಬ್ಬದ ಸೀಸನ್ ಬರುತ್ತಿದೆ. ಗ್ರಾಹಕರನ್ನು ಓಲೈಸಲು ಬ್ಯಾಂಕುಗಳು ವಿವಿಧ ಕೊಡುಗೆಗಳನ್ನು ನೀಡಲು ಆರಂಭಿಸಿವೆ. ಕಳೆದ ಕೆಲವು ವಾರಗಳಲ್ಲಿ ಎಸ್‌ಬಿಐ, ಎಲ್‌ಐಸಿ ಹೌಸಿಂಗ್ ಫೈನಾನ್ಸ್, ಕೋಟಕ್ ಮಹೀಂದ್ರಾ, ಪಿಎನ್‌ಬಿ, ಯೆಸ್ ಬ್ಯಾಂಕ್ ಮತ್ತು ಐಸಿಐಸಿಐ ಬ್ಯಾಂಕ್ ಗೃಹಸಾಲದ ಬಡ್ಡಿದರವನ್ನು ಘೋಷಿಸಿವೆ. ಹೊಸದಾಗಿ ಮನೆಗಳನ್ನು ಖರೀದಿಸಲು ಯೋಜಿಸುವ ಗ್ರಾಹಕರಿಗೆ ಅದ್ಭುತ ಅವಕಾಶವನ್ನು ನೀಡುವ ಮೂಲಕ ಗೃಹ ಸಾಲದ ಮೇಲೆ ಅನ್ವಯವಾಗುವ ಬಡ್ಡಿದರಗಳನ್ನು ಕಡಿತಗೊಳಿಸಿವೆ. ಆದರೆ ಗೃಹ ಸಾಲ ತೆಗೆದುಕೊಳ್ಳುವ ವಿಚಾರದಲ್ಲಿ ಅನೇಕ ಗ್ರಾಹಕರು ಇನ್ನೂ ಗೊಂದಲದಲ್ಲಿದ್ದಾರೆ. ಅಂತಹವರಿಗೆ ಸಹಕಾರಿಯಾಗಲಿ ಎಂದು ಕಡಿಮೆ ಬಡ್ಡಿದರವನ್ನು ನೀಡುವ ಬ್ಯಾಂಕುಗಳ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
ಐಸಿಐಸಿಐ ಬ್ಯಾಂಕ್ ಗೃಹ ಸಾಲ: ಐಸಿಐಸಿಐ ಬ್ಯಾಂಕ್ ತನ್ನ ಗ್ರಾಹಕರಿಗೆ ಗೃಹ ಸಾಲದ ಮೇಲೆ ಹಬ್ಬದ ಬೊನಾನ್ಜಾ ಆಫರ್(Festive Bonanza offer) ಘೋಷಿಸಿದೆ. ಗ್ರಾಹಕರು ಗೃಹ ಸಾಲದ ಮೇಲೆ ಆಕರ್ಷಕ ಬಡ್ಡಿದರಗಳನ್ನು ಶೇ.6.70 ರಿಂದ ಪಡೆಯಬಹುದು. ಇದಲ್ಲದೆ ಸಂಸ್ಕರಣಾ ಶುಲ್ಕ(Processing Fee)ದ ದರ 1,100 ರೂ.ಗಳಿಂದ ಆರಂಭವಾಗಲಿದೆ. ವಾಹನ ಖರೀದಿ ಮೇಲೆಯೂ ಬ್ಯಾಂಕ್ ಆಕರ್ಷಕ ಕೊಡುಗೆ ನೀಡುತ್ತಿದೆ.
ಎಸ್‌ಬಿಐ ಗೃಹ ಸಾಲ: ಭಾರತದ ಅತಿದೊಡ್ಡ ಸರ್ಕಾರಿ ಸ್ವಾಮ್ಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಆಕರ್ಷಕ ಬಡ್ಡಿ ದರದಲ್ಲಿ ಗೃಹ ಸಾಲವನ್ನು ನೀಡುತ್ತಿದೆ. ಪ್ರಸ್ತುತ ಬ್ಯಾಂಕ್ ಗೃಹ ಸಾಲವನ್ನು ಶೇ.6.7 ರಿಂದ ಶೇ.7.5 ನಷ್ಟು ಫ್ಲೋಟಿಂಗ್ ಬಡ್ಡಿದರದೊಂದಿಗೆ ಒದಗಿಸುತ್ತಿದೆ. ಸಾಲಗಾರರು 30 ವರ್ಷಗಳಲ್ಲಿ ಸಾಲವನ್ನು ಮರುಪಾವತಿಸಬಹುದು. ಇದಲ್ಲದೆ ಸಾಲಗಳು ಶೇ.0 ಅಂದರೆ ಶೂನ್ಯ ಸಂಸ್ಕರಣಾ ಶುಲ್ಕದೊಂದಿಗೆ ಬರುತ್ತವೆ.
LIC HFL ಗೃಹ ಸಾಲ: ಗೃಹ ಸಾಲದ ಮೇಲಿನ ಬಡ್ಡಿದರವನ್ನು ಕಡಿತಗೊಳಿಸಿದ ಮೊದಲ ಬ್ಯಾಂಕ್‌ಗಳಲ್ಲಿ ಎಲ್‌ಐಸಿ ಎಚ್‌ಎಫ್‌ಎಲ್ ಕೂಡ ಒಂದು. ಪ್ರಸ್ತುತ ಎಲ್ಐಸಿಯ ಸಾಲ ನೀಡುವ ವಿಭಾಗವು ಕೇವಲ ಶೇ.6.66 ರಷ್ಟು ಬಡ್ಡಿದರದಲ್ಲಿ ಗೃಹ ಸಾಲವನ್ನು ನೀಡುತ್ತಿದೆ. ಇದು ಅತ್ಯಂತ ಕಡಿಮೆ ಬಡ್ಡಿದರಗಳಲ್ಲಿ ಒಂದಾಗಿದೆ.
ಕೋಟಕ್ ಮಹೀಂದ್ರಾ ಗೃಹ ಸಾಲ: ಕೋಟಕ್ ಮಹೀಂದ್ರಾ ಬ್ಯಾಂಕ್ ಕಡಿಮೆ ಬಡ್ಡಿದರದಲ್ಲಿ ಬ್ಯಾಂಕ್ ಸಾಲಗಳನ್ನು ನೀಡುತ್ತಿದೆ. ಗ್ರಾಹಕರು ಕೇವಲ ಶೇ.6.5ರಷ್ಟು ಬಡ್ಡಿ ದರದಲ್ಲಿ ಬ್ಯಾಂಕ್ ಸಾಲಗಳನ್ನು ಪಡೆಯಬಹುದು.
ಬ್ಯಾಂಕ್ ಆಫ್ ಬರೋಡಾ ಗೃಹ ಸಾಲ: ಬ್ಯಾಂಕ್ ಆಫ್ ಬರೋಡಾ ಗೃಹ ಸಾಲದ ಮೇಲಿನ ಬಡ್ಡಿದರವನ್ನು 25 ಬೇಸಿಸ್ ಪಾಯಿಂಟ್‌ಗಳಷ್ಟು ಕಡಿಮೆ ಮಾಡಿದೆ. ಸಾಲಗಾರರು ಈಗ ರಾಜ್ಯ-ಬೆಂಬಲಿತ ಬ್ಯಾಂಕಿನಿಂದ ವರ್ಷಕ್ಕೆ ಕೇವಲ ಶೇ.6.7 ರಷ್ಟು ಬಡ್ಡಿದರದಲ್ಲಿ ಗೃಹ ಸಾಲವನ್ನು ಪಡೆಯಬಹುದು.