Azadi Ka Amrit Mahotsav: 75 ಸಾವಿರ ಫಲಾನುಭವಿಗಳಿಗೆ ಮನೆ ಉಡುಗೊರೆ ನೀಡಿದ PM Narendra Modi

Azadi Ka Amrit Mahotsav - ದೇಶದ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವ (Azadi Ka Amrit Mahotsav) ಆಚರಣೆಯ ಸಂದರ್ಭದಲ್ಲಿ ಲಖನೌನಲ್ಲಿ 'ನ್ಯೂ ಅರ್ಬನ್ ಇಂಡಿಯಾ' ಥೀಮ್ (New Urban India Theme) ಅಡಿ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಮತ್ತು ನಗರಾಭಿವೃದ್ಧಿ ಇಲಾಖೆ ಜಂಟಿಯಾಗಿ ಆಯೋಜಿಸಿರುವ ಮೂರು ದಿನಗಳ ಕಾರ್ಯಕ್ರಮ ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಮಾತನಾಡಿದ್ದಾರೆ.

Written by - Nitin Tabib | Last Updated : Oct 5, 2021, 01:18 PM IST

    ಆಜಾದಿ ಕಾ ಅಮೃತ್ ಮಹೋತ್ಸ ಕಾರ್ಯಕ್ರಮ ಉದ್ದೇಶಿಸಿ ಪ್ರಧಾನಿ ಮೋದಿ ಮಾತು

    ದೇಶದ 75 ಸಾವಿರ PM ಆವಾಸ್ ಫಲಾನುಭವಿಗಳಿಗೆ ಮನೆ ಹಸ್ತಾಂತರ.

    ಫಲಾನುಭಾವಿಗಳ ಜೊತೆಗೆ ಮೋದಿ ಸಂವಾದ

Azadi Ka Amrit Mahotsav: 75 ಸಾವಿರ ಫಲಾನುಭವಿಗಳಿಗೆ ಮನೆ ಉಡುಗೊರೆ ನೀಡಿದ PM Narendra Modi title=
PM Narendra Modi(Photo Courtesy - ANI)

Azadi Ka Amrit Mahotsav - ದೇಶದ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವ (Azadi Ka Amrit Mahotsav) ಆಚರಣೆಯ ಸಂದರ್ಭದಲ್ಲಿ ಲಖನೌನಲ್ಲಿ 'ನ್ಯೂ ಅರ್ಬನ್ ಇಂಡಿಯಾ' ಥೀಮ್ (New Urban India Theme) ಅಡಿ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಮತ್ತು ನಗರಾಭಿವೃದ್ಧಿ ಇಲಾಖೆ ಜಂಟಿಯಾಗಿ ಆಯೋಜಿಸಿರುವ ಮೂರು ದಿನಗಳ ಕಾರ್ಯಕ್ರಮ ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಮಾತನಾಡಿದ್ದಾರೆ. ಉತ್ತರ ಪ್ರದೇಶದ ರಾಜ್ಯಪಾಲರಾದ ಆನಂದಿಬೆನ್ ಪಟೇಲ್, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (UP CM Yogi Adityanath)ಹಾಗೂ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಈ 'ನ್ಯೂ ಅರ್ಬನ್ ಇಂಡಿಯಾ' ಥೀಮ್ ಅಡಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಭಾಗ ವಹಿಸಿದ್ದಾರೆ. 

ಈ ಸಂದರ್ಭದಲ್ಲಿ ಪ್ರಧಾನಿ ಅವರು ಪ್ರಧಾನ ಮಂತ್ರಿ ಆವಾಸ್ ಯೋಜನೆಯ (Pradhan Mantri Awas Yojana) ಅಡಿ ಆಯ್ಕೆಯಾದ 75 ಸಾವಿರ ವಿವಿಧ ಜಿಲ್ಲೆಗಳ ಫಲಾನುಭವಿಗಳಿಗೆ (PM Awas Yojana Beneficiaries) ಮನೆಗಳನ್ನು ಹಸ್ತಾಂತರಿಸುವ ಮೂಲಕ ಸಂವಾದ ಕಾರ್ಯಕ್ರಮ ನಡೆಸಿದ್ದಾರೆ. ಈ ವೇಳೆ ಅವರು ಆಗ್ರಾ, ಕಾನ್ಪುರ್ ಮತ್ತು ಲಲಿತಪುರ್ ಫಲಾನುಭಾವಿಗಳ ಜೊತೆಗೆ ಸಂವಾದ ನಡೆಸಿದ್ದಾರೆ. ಲಖನೌನ ಬಾಬಾಸಾಹೇಬ್ ಭೀಮರಾವ್ ಅಂಬೇಡ್ಕರ್ ವಿವಿಯಲ್ಲಿ ಮಾಜಿ ಪ್ರಧಾನ ಪ್ರಧಾನಿ ಅಟಲ್ ಬಿಹಾರಿ (Former PM Atal Bihari Vajapayee) ವಾಜಪೇಯಿ ಪೀಠವನ್ನು ಕೂಡ ಡಿಜಿಟಲ್ ಮಾಧ್ಯಮದ ಮೂಲಕ ಉದ್ಘಾಟಿಸಿದ್ದಾರೆ.

ಇದನ್ನೂ ಓದಿ-T20 World Cup: ಪಾಕಿಸ್ತಾನ ವಿರುದ್ಧ ಟೀಂ ಇಂಡಿಯಾ ಮೊದಲ ಪಂದ್ಯ, ಹೀಗಿರಲಿದೆ ಭಾರತದ Playing 11

 ಈ ಕಾರ್ಯಕ್ರಮದ ವೇಳೆ ಪ್ರಧಾನಿ ನರೇಂದ್ರ ಮೋದಿ ಸ್ಮಾರ್ಟ್ ಸಿಟಿ ಮಿಶನ್ ಅಡಿ ಆಗ್ರಾ, ಅಲಿಗಡ್, ಬರೇಲಿ, ಝಾನ್ಸಿ, ಕಾನ್ಪುರ್, ಲಖನೌ, ಪ್ರಯಾಗ್ ರಾಜ್, ಸಹಾರನ್ ಪುರ, ಮುರಾದಾಬಾದ್ ಹಾಗೂ ಅಯೋಧ್ಯೆಯಲ್ಲಿ ಇಂಟಿಗ್ರೇಟೆಡ್ ಕಮಾಂಡ್ ಸೆಂಟರ್, ಇಂಟೆಲಿಜೆಂಟ್ ಟ್ರಾಫಿಕ್ ಮ್ಯಾನೇಜ್ಮೆಂಟ್ ಸಿಸ್ಟಮ್ ಹಾಗೂ ನಗರ ಮೂಲಭೂತ ಸೌಕರ್ಯ ಹಾಗೂ ಅಮೃತ್ ಮಿಶನ್ ಅಡಿ ಪ್ರದೇಶದ ವಿಭಿನ್ನ ನಗರಗಳಲ್ಲಿ ಉತ್ತರ ಪ್ರದೇಶ ಜಲ ನಿಗಮ ಮಂಡಳಿ ಮೂಲಕ ನಿರ್ಮಿಸಲಾಗಿರುವ ಕುಡಿಯುವ ನೀರಿನ ಹಾಗೂ ಚರಂಡಿಗಳ ಒಟ್ಟು 4,737 ಕೋಟಿ ರೂಗಳ 75 ವಿವಿಧ ಯೋಜನೆಗಳ ಲೋಕಾರ್ಪಣೆ ಹಾಗೂ ಶಿಲಾನ್ಯಾಸ ನೆರವೇರಿಸಿದ್ದಾರೆ. ಇದಲ್ಲದೆ ಪ್ರಧಾನಿ ಮೋದಿ, ಲಖನೌ, ಕಾನ್ಪುರ್, ಗೋರಖ್ಪುರ, ಝಾನ್ಸಿ, ಪ್ರಯಾಗ್ ರಾಜ್, ಗಾಜಿಯಾಬಾದ್ ಹಾಗೂ ವಾರಾಣಾಸಿಗಾಗಿ 75 ಸ್ಮಾರ್ಟ್ ಎಲೆಕ್ಟ್ರಿಕ್ ಬಸ್ ಗಳಿಗೆ ಹಸಿರು ನಿಶಾನೆ ತೋರಿದ್ದಾರೆ.

ಇದನ್ನೂ ಓದಿ-ಹೈಕಮಾಂಡ್‌ನಿಂದ ತುರ್ತು ಬುಲಾವ್: ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ದಿಢೀರ್ ದೆಹಲಿಗೆ

ಈ ಸಂದರ್ಭದಲ್ಲಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, "ದೇಶದಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ನೀಡಲಾಗುತ್ತಿರುವ ಮನೆಗಳಲ್ಲಿ, ಶೇಕಡಾ 80 ಕ್ಕಿಂತಲೂ ಹೆಚ್ಚು ಮನೆಗಳು ಮಹಿಳೆಯರ ಒಡೆತನದಲ್ಲಿರುವುದು ಅಥವಾ ಅವರು ಜಂಟಿ ಮಾಲೀಕರಾಗಿರುವುದು ನನಗೆ ಸಂತೋಷವಾಗಿದೆ" ಎಂದು ಹೇಳಿದ್ದಾರೆ. ತಾಯಿ ಭಾರತಿಗೆ ಸಮರ್ಪಿತವಾದ ರಾಷ್ಟ್ರಕ್ಕೆ ಲಖನೌ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ರೂಪದಲ್ಲಿ ದೂರದೃಷ್ಟಿಯನ್ನು ನೀಡಿದೆ ಎಂದು ಪ್ರಧಾನಿ ಹೇಳಿದ್ದಾರೆ. ಇಂದು, ಅವರ ಸ್ಮರಣಾರ್ಥವಾಗಿ, ಬಾಬಾಸಾಹೇಬ್ ಭೀಮರಾವ್ ಅಂಬೇಡ್ಕರ್ ವಿಶ್ವವಿದ್ಯಾಲಯದಲ್ಲಿ (Babasaheb Bheemarav Ambedkar University, Lucknow) ಅಟಲ್ ಬಿಹಾರಿ ವಾಜಪೇಯಿ ಪೀಠವನ್ನು ಸ್ಥಾಪಿಸಲಾಗುತ್ತಿದೆ ಮತ್ತು ಇದು ಅತೀವ ಸಂತಸದ ವಿಷಯವಾಗಿದೆ ಎಂದು ಪ್ರಧಾನಿ ಹೇಳಿದ್ದಾರೆ. 

ಇದನ್ನೂ ಓದಿ-ರೈಲಿನಲ್ಲಿ ಬರ್ತ್ ಖಾಲಿಯಾದರೆ ತಕ್ಷಣ ಬರುತ್ತೆ ಅಲರ್ಟ್, ಜೊತೆಗೆ ಸಿಗುತ್ತೆ ಕನ್ಫರ್ಮ್ ಟಿಕೆಟ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News