ಇಂದೋರ್: ಇಲ್ಲಿನ ಹೋಳ್ಕರ್ ಕ್ರೀಡಾಂಗಣದಲ್ಲಿ ಟಾಸ್ ಗೆದ್ದು ಫಿಲ್ಡಿಂಗ್ ಆಯ್ದುಕೊಂಡ ಮುಂಬೈ ತಂಡವು ಪಂಜಾಬ್ ತಂಡವನ್ನು 20 ಓವರ್ ಗಳಲ್ಲಿ 174 ರನ್ ಗಳಿಗೆ ಕಟ್ಟಿಹಾಕಿತು.
ಪಂಜಾಬ್ ತಂಡದ ಪರ ಭರ್ಜರಿ ಬ್ಯಾಟ್ ಬೀಸಿದ ಕ್ರಿಸ್ ಗೇಲ್(50) ಮಾರ್ಕಸ್ ಸ್ತೋನಿಸ್(29) ಕೆ ಎಲ್ ರಾಹುಲ್ (24) ಅವರ ನೆರವಿನಿಂದ ಉತ್ತಮ ಮೊತ್ತ ಗಳಿಸಲು ಸಾಧ್ಯವಾಯಿತು.
That's it from Indore as the @mipaltan beat #KXIP by 6 wickets with 6 balls to spare.#KXIPvMI #VIVOIPL pic.twitter.com/OadzLg4ruu
— IndianPremierLeague (@IPL) May 4, 2018
👏👏 @surya_14kumar.#KXIPvMI pic.twitter.com/kJ34dtwR6z
— IndianPremierLeague (@IPL) May 4, 2018
175 ರನ್ ಗಳ ಗೆಲುವಿನ ಗುರಿಯನ್ನು ಬೆನ್ನತ್ತಿದ ಮುಂಬೈ ತಂಡವು ಸುರ್ಯಕುಮಾರ್ ಯಾದವ್(57) ರೋಹಿತ್ ಶರ್ಮಾ (24) ಕ್ರುನಾಲ್ ಪಾಂಡ್ಯ (31) ಇಶಾನ್ ಕಿಶನ್ ಅವರ ಬ್ಯಾಟಿಂಗ್ ನೆರವಿನಿಂದ ಇನ್ನು ಆರು ಎಸೆತಗಳಿರುವಂತೆಯೇ ಪಂದ್ಯವನ್ನು ತನ್ನದಾಗಿಸಿಕೊಂಡಿತು. ಇದೇ ಸಂದರ್ಭದಲ್ಲಿ ರೋಹಿತ್ ಶರ್ಮಾ ಟ್ವೆಂಟಿ ಪಂದ್ಯಗಳಲ್ಲಿ 300 ಸಿಕ್ಸರ್ ಗಳಿಸಿದ ಮೊದಲ ಭಾರತೀಯ ಕ್ರಿಕೆಟ್ ಎನ್ನುವ ಖ್ಯಾತಿ ಪಡೆದರು.