Ranjit Singh Murder Case: ಗುರಮೀತ್ ರಾಮ್ ರಹೀಮ್ ಸಿಂಗ್ ಗೆ ಜೀವಾವಧಿ ಶಿಕ್ಷೆ ಪ್ರಕಟಿಸಿದ ನ್ಯಾಯಾಲಯ

Gurmeet Ram Rahim Singh Sentencing: ರಂಜೀತ್ ಸಿಂಗ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವರ್ಷ 2003ರಲ್ಲಿ CBI ವಿರುದ್ಧ FIR ದಾಖಲಿಸಿತ್ತು. ಪ್ರಸ್ತುತ ಈ ಪ್ರಕರಣದಲ್ಲಿ ನ್ಯಾಯಾಲಯ ಗುರುಮೀತ್ ರಾಮ್ ರಹೀಮ್ ಸಿಂಗ್ ಸೇರಿದಂತೆ ಒಟ್ಟು ಐವರನ್ನು ತಪ್ಪಿತಸ್ಥರು ಎಂದು ತೀರ್ಪು ನೀಡಿದೆ.

Written by - Nitin Tabib | Last Updated : Oct 18, 2021, 05:51 PM IST
  • 2002ರಲ್ಲಿ ರಂಜಿತ್ ಸಿಂಗ್ ಹತ್ಯೆ ಸಂಭವಿಸಿತ್ತು.
  • ರಾಜ್ ರಹೀಮ್ ಸೇರಿದಂತೆ ಒಟ್ಟು ಐವರನ್ನು ದೋಷಿಗಳು ಎಂದು ಪರಿಗಣಿಸಿದ ನ್ಯಾಯಾಲಯ.
  • ರಾಮ್ ರಹೀಮ್ ಗೆ 31 ಲಕ್ಷ ರೂ.ಗಳ ದಂಡ ಕೂಡ ವಿಧಿಸಲಾಗಿದೆ.
Ranjit Singh Murder Case: ಗುರಮೀತ್ ರಾಮ್ ರಹೀಮ್ ಸಿಂಗ್ ಗೆ ಜೀವಾವಧಿ ಶಿಕ್ಷೆ ಪ್ರಕಟಿಸಿದ ನ್ಯಾಯಾಲಯ title=
Gurmeet Ram Rahim Singh Sentencing (File Photo)

Ranjit Singh Murder Case - ರಂಜಿತ್ ಸಿಂಗ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಡೇರಾ ಸಚ್ಚಾ ಸೌದಾ दा (Dera Sacha Sauda) ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್ (Gurmeet Ram Rahim Singh) ಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. 4 ಆರೋಪಿಗಳನ್ನು ವಿಶೇಷ ಸಿಬಿಐ ನ್ಯಾಯಾಲಯಕ್ಕೆ (CBI Special Court)  ಪಡಿಸಲಾಗಿತ್ತು. ರಂಜಿತ್ ಸಿಂಗ್ ಹತ್ಯೆಯಲ್ಲಿ ರಾಮ್ ರಹೀಮ್ ಸೇರಿದಂತೆ 5 ಅಪರಾಧಿಗಳಿಗೆ ವಿಶೇಷ ಸಿಬಿಐ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ರಾಮ್ ರಹೀಮ್ ಗೆ 31 ಲಕ್ಷ ದಂಡ ಮತ್ತು 4 ಇತರ ಅಪರಾಧಿಗಳಿಗೆ ತಲಾ 50  ಸಾವಿರ ದಂಡ ವಿಧಿಸಲಾಗಿದೆ.

ಸೇವಾದಾರ ಹತ್ಯೆ ಪ್ರಕರಣದಲ್ಲಿ ರಾಮ್ ರಹೀಮ್ ಸೇರಿದಂತೆ ಸಬದಿಲ್, ಅವತಾರ್, ಜಸ್ವೀರ್ ಮತ್ತು ಕೃಷ್ಣ ಶಿಕ್ಷೆಗೊಳಗಾಗಿದ್ದಾರೆ. ರಂಜಿತ್ ಸಿಂಗ್ ಅವರ ಕುಟುಂಬ ನ್ಯಾಯಕ್ಕಾಗಿ ಸುದೀರ್ಘ ಹೋರಾಟ ನಡೆಸಿದೆ ಮತ್ತು ನ್ಯಾಯಾಲಯವು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆಯನ್ನು ನೀಡಿದೆ. ನ್ಯಾಯಾಲಯದಿಂದ ಅವರು ಮರಣ ದಂಡನೆ ಶಿಕ್ಷೆಯನ್ನು ನಿರೀಕ್ಷಿಸಿದ್ದಾಗಿ ಅವರ ಕುಟುಂಬ ಹೇಳಿದೆ. ಆದರೆ ನ್ಯಾಯಾಲಯ ಅವರಿಗೆ ಕೇವಲ ಜೀವಾವಧಿ ಶಿಕ್ಷೆಯನ್ನು ಮಾತ್ರ ವಿಧಿಸಿದೆ.

ರಂಜೀತ್ ಸಿಂಗ್ ಹತ್ಯೆ ಪ್ರಕರಣದಲ್ಲಿ ರಾಮ್ ರಹೀಮ್ ಸಿಂಗ್ ದೋಷಿ 
ಈ ಪ್ರಕರಣದ ದೋಷಿ ರಾಮ್ ರಹೀಮ್ ಸಿಂಗ್ ಈ ಮೊದಲೇ ಜೈಲಿನಲ್ಲಿ ಕಾಲ ಕಳೆಯುತ್ತಿದ್ದಾನೆ. ಜುಲೈ 10, 2002 ರಲ್ಲಿ ರಂಜಿತ್ ಸಿಂಗ್ ಹತ್ಯೆ ನಡೆದಿತ್ತು. ಈ ಪ್ರಕರಣದಲ್ಲಿ ಗುರ್ಮಿತ್ ರಾಮ್ ರಹೀಮ್ ಸಿಂಗ್ ದೋಷಿ ಎಂದು ಸಾಬೀತಾಗಿದೆ. ಈ ಪ್ರಕರಣದಲ್ಲಿ ಡಿಸೆಂಬರ್ 3, 2003ರಲ್ಲಿ CBI ಆತನ ವಿರುದ್ಧ FIR ದಾಖಲಿಸಿತ್ತು.

ಇದನ್ನೂ ಓದಿ-ಪತ್ರಕರ್ತನ ಹತ್ಯೆ ಪ್ರಕರಣ: ಬಾಬಾ ರಾಮ್ ರಹಿಮ್ ಗೆ ಜೀವಾವಧಿ ಶಿಕ್ಷೆ

ಐದೂ ಜನ ಅಪರಾಧಿಗಳನ್ನು CBI ನ್ಯಾಯಾಲಯ ದೋಷಿ ಎಂದು ಪರಿಗಣಿಸಿದೆ
2017 ರಲ್ಲಿ ಸಿಬಿಐ ನ್ಯಾಯಾಲಯವು ಗುರ್ಮೀತ್ ರಾಮ್ ರಹೀಮ್ ಸಿಂಗ್ ಸೇರಿದಂತೆ 5 ಜನರನ್ನು ದೋಷಿಗಳೆಂದು ಘೋಷಿಸಿತ್ತು. ರಂಜಿತ್ ಸಿಂಗ್ ಹತ್ಯೆಯಲ್ಲಿ, ಗುರ್ಮೀತ್ ರಾಮ್ ರಹೀಮ್ ಸಿಂಗ್ ಜೊತೆಗೆ, ಕೃಷ್ಣ ಲಾಲ್, ಅವತಾರ್, ಸಬ್ದಿಲ್ ಮತ್ತು ಜಸ್ಬೀರ್ ಅವರನ್ನು ನ್ಯಾಯಾಲಯವು ತಪ್ಪಿತಸ್ಥರೆಂದು ತೀರ್ಪು ನೀಡಿದೆ.

ಇದನ್ನೂ ಓದಿ-ಪತ್ರಕರ್ತನ ಹತ್ಯೆ ಪ್ರಕರಣದಲ್ಲಿ ಬಾಬಾ ರಾಮ್ ರಹಿಮ್ ಅಪರಾಧಿ

ಪಂಚಕುಲ್ ನಲ್ಲಿ ಸೆಕ್ಷನ್ 144 ಜಾರಿ
ಗುರ್ಮೀತ್ ರಾಮ್ ರಹೀಮ್ ಸಿಂಗ್ ಸೇರಿದಂತೆ 5 ಆರೋಪಿಗಳ ಶಿಕ್ಷೆಯ ಘೋಷಣೆಯ ಹಿನ್ನೆಲೆ ಪಂಚಕುಲದಲ್ಲಿ ಜೀವ ಮತ್ತು ಆಸ್ತಿಪಾಸ್ತಿ ನಷ್ಟ, ಯಾವುದೇ ರೀತಿಯ ಉದ್ವಿಗ್ನತೆ, ಶಾಂತಿ ಭಂಗ ಮತ್ತು ಗಲಭೆ ಉಂಟಾಗುವ ಸಾಧ್ಯತೆಯ ದೃಷ್ಟಿಯಿಂದ ಸೆಕ್ಷನ್ 144 ಜಾರಿಗೊಳಿಸಲಾಗಿತ್ತು. ಇದರ ಅಡಿ ಪಂಚಕುಲ ಜಿಲ್ಲಾ ನ್ಯಾಯಾಲಯಕ್ಕೆ ಹೊಂದಿಕೊಂಡಂತೆ ಇರುವ ಸೆಕ್ಟರ್ 1, 2, 5, 6 ಹಾಗೂ ಅಕ್ಕಪಕ್ಕದ ಪ್ರದೇಶಗಳಲ್ಲಿ ಬರುವ ರಾಷ್ಟೀಯ ಹೆದ್ದಾರಿಯ ಮೇಲೆ ಯಾವುದೇ ವ್ಯಕ್ತಿ ಖಡ್ಗ  (ಕಿರ್ಪಾನ್ ಹೊರತುಪಡಿಸಿ), ಕೋಲುಗಳು, ಬೆತ್ತಗಳು, ಕಬ್ಬಿಣದ ರಾಡ್ ಗಳು, ಚೂರಿ ಅಥವಾ ಇನಿತರ ಯಾವುದೇ ಶಸ್ತ್ರಾಸ್ತ್ರಗಳನ್ನು ಹಿಡಿದು ತಿರುಗಾಡುವುದರ ಮೇಲೆ ನಿರ್ಬಂಧ ವಿಧಿಸಲಾಗಿದೆ. DGP ಮೋಹಿತ್ ಹಾಂಡಾ ಈ ಆದೇಶ ಜಾರಿಗೊಳಿಸಿದ್ದಾರೆ. 

ಇದನ್ನೂ ಓದಿ-ಬಾಬಾ ರಾಮ್ ರಹಿಮ್ ಗೆ ಪುರುಷತ್ವ ಹರಣ ಪ್ರಕರಣದಲ್ಲಿ ಜಾಮೀನು ನೀಡಿದ ಸಿಬಿಐ ಕೋರ್ಟ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News