ನವದೆಹಲಿ : ಕತೆಗಳಲ್ಲಿ ಪುರಾಣಗಳಲ್ಲಿ ಏಳು ತಲೆಯ ಹಾವು, ಏಳು ಹೆಡೆಗಳನ್ನು (Seven headed Snake)
ಎತ್ತಿ ನಿಂತಿರುವ ಹಾವು ಹೀಗೆ ಕೇಳಿದ್ದಿದೆ. ಆದರೆ, ಸಾಮಾಜಿಕ ಮಧ್ಯಮದಲ್ಲಿ (Social media) ಫೋಟೋ ವೊಂದು ವೈರಲ್ ಆಗುತ್ತಿದೆ. ಈ ಪೋಟೋದಲ್ಲಿ ಮೂರು ತಲೆಯ ಹಾವನ್ನು ಕಾಣಬಹುದು. ಈ ಹಾವು ನೋಡುವಾಗ ಬಹಳ ಕೋಪದಿಂದ ಹೆಡೆ ಎತ್ತಿ ನಿಂತಿದೆ. ಈ ಫೋಟೋ ನೋಡಿದ ಎಲ್ಲರಿಗೂ ಆಶ್ಚರ್ಯವೋ ಆಶ್ಚರ್ಯ.
ಈ ಚಿತ್ರವನ್ನು ಟ್ವಿಟರ್ (Twitter) ಬಳಕೆದಾರರು ಹಂಚಿಕೊಂಡಿದ್ದಾರೆ . ಅಸಲಿಗೆ ಇದು ಹಾವಲ್ಲ. ಇದೊಂದು ಕೀಟ. ಈ ಕೀಟದ ಹೆಸರು ಎಟ್ಕಾಸ್ ಅಟ್ಲಾಸ್. ಇದನ್ನು ಅಟ್ಲಾಸ್ ಪತಂಗ ಎಂದೂ ಕರೆಯುತ್ತಾರೆ. ಇದು ಅತಿದೊಡ್ಡ ಲೆಪಿಡೋಪ್ಟೆರಾಗಳಲ್ಲಿ ಒಂದಾಗಿದೆ. ಈ ಕೀಟ ಚಿಟ್ಟೆಗಳು ಮತ್ತು ಪತಂಗಗಳ ಪ್ರಭೇದಕ್ಕೆ ಸೇರಿದ್ದಾಗಿದೆ.
Attacus Atlas is one of the largest butterflies in the world and lives only for two weeks with one goal in their adult stage: lay eggs and defend them until they hatch while disguised as a snake pic.twitter.com/oc7u2H288X
— Rob N Roll ™️ (@thegallowboob) October 15, 2021
ಇದನ್ನೂ ಓದಿ : ಕೋಳಿಯನ್ನು ದುರ್ಬಲ ಎಂದುಕೊಂಡು ಜಗಳಕ್ಕೆ ನಿಂತ ಬೆಕ್ಕು, ಆದರೆ ಆಗಿದ್ದೇನು ? ಫೈಟಿಂಗ್ ನ full video ಇಲ್ಲಿದೆ
ಮಾಹಿತಿಯ ಪ್ರಕಾರ, ಎಟ್ಕಾಸ್ಅಟ್ಲಾಸ್ ವಿಶ್ವದ ಅತಿದೊಡ್ಡ ಚಿಟ್ಟೆಗಳಲ್ಲಿ ಒಂದಾಗಿದೆ. ಅದರ ವಯಸ್ಕ ಹಂತದಲ್ಲಿ ಒಂದು ಗುರಿಯೊಂದಿಗೆ ಕೇವಲ ಎರಡು ವಾರಗಳವರೆಗೆ ಜೀವಿಸುತ್ತದೆ. ಮೊಟ್ಟೆ ಇಟ್ಟು , ಹಾವಿನ ರೂಪ ತಾಳಿ ತನ್ನ ಮೊಟ್ಟೆಗಳನ್ನು (egg) ರಕ್ಷಿಸುವುದು ಇದರ ಕೆಲಸ. ಅಂದರೆ ವೈರಿಗಳಿಂದ ತನ್ನ ಮೊಟ್ಟೆಗೆ ರಕ್ಷಣೆ ಸಿಗಲಿ ಎಂಬ ಕಾರಣಕ್ಕೆ ಇದು ಹಾವಿನ ರೂಪವನ್ನು ಪಡೆಯುತ್ತದೆ ಇತರ ಜೀವಿಗಳಿಂದ ಅಪಾಯ ಎದುರಾದಾಗ ಈ ಕೀಟವು, ಪರಭಕ್ಷಕಗಳನ್ನು ಹೆದರಿಸಲು ಹಾವಿನ ತಲೆಯಂತೆ ಕಾಣುವ ತನ್ನ ರೆಕ್ಕೆಗಳನ್ನು ಬಿಚ್ಚುತ್ತದೆ.
ವರದಿಗಳ ಪ್ರಕಾರ, ಈ ಕೀಟವು ಏಷ್ಯಾದಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಈ ಸಮಯದಲ್ಲಿ, ಈ ಫೋಟೋ ವೈರಲ್ (Viral photo) ಆದ ತಕ್ಷಣ, ಜನರು ಅದರ ಬಗ್ಗೆ ಕಾಮೆಂಟ್ ಮಾಡಲು ಪ್ರಾರಂಭಿಸಿದ್ದಾರೆ. ಇದು ಯಾವ ರೀತಿಯ ಹಾವು ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳಲು ಆರಂಭಿಸಿದ್ದಾರೆ. ಆದರೆ ಇದು ಹಾವಲ್ಲ (Snake photo) ಕೀಟ ಎಂಬ ಸತ್ಯ ಇದೀಗ ಬಯಲಾಗಿದೆ.
ಇದನ್ನೂ ಓದಿ : Viral Video: ಜಿಮ್‌ನಲ್ಲಿ ಗೆಳತಿಯೊಂದಿಗೆ ರೆಡ್ ಹ್ಯಾಂಡ್ ಆಗಿ ಹೆಂಡತಿಗೆ ಸಿಕ್ಕಿಬಿದ್ದ ಪತಿರಾಯ..!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ