ಮದುರೈ: Matchbox Price - ಒಂದೆಡೆ ಪೆಟ್ರೋಲ್-ಡಿಸೇಲ್, ಗ್ಯಾಸ್ ನಿಂದ ಹಿಡಿದು ಖ್ಯಾದತೈಲ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಆದರೆ, ನಮ್ಮ ದೈನಂಧಿನ ಬಳಕೆಯಲ್ಲೂ ಉಪಯುಕ್ತವಾದ ಒಂದು ವಸ್ತುವಿನ ಬೆಲೆ ಮಾತ್ರ ಕಳೆದ 14 ವರ್ಷಗಳಿಂದ ಒಟ್ಟಿಗೆ ಹೆಚ್ಚಾಗಿಲ್ಲ. ಆದರೆ, ಇದೀಗ ಅದು ಹೆಚ್ಚಾಗಲಿದೆ. ಹೌದು 14 ವರ್ಷಗಳ ದೀರ್ಘಾವಧಿಯ ಬಳಿಕ ಪ್ಬೆಂಕಿ ಪೊಟ್ಟಣದ (Matchbox) ಬೆಲೆ ಏರಿಕೆಯಾಗಲಿದೆ . ಈ ಬೆಲೆ ರೂ.1 ರಿಂದ ರೂ. 2ಕ್ಕೆ ಏರಿಕೆಯಾಗುತ್ತಿದೆ. ಈ ಹೊಸ ಬೆಲೆ ಡಿಸೆಂಬರ್ 1 ರಿಂದ ಜಾರಿಯಾಗಲಿದೆ.
2007ರಲ್ಲಿ ಕೊನೆಯ ಬಾರಿಗೆ ಏರಿಕೆಯಾಗಿದ್ದವು ಬೆಂಕಿ ಪೊಟ್ಟಣದ ಬೆಲೆ
ಐದು ಪ್ರಮುಖ ಉದ್ಯೋಗ ಒಕ್ಕೂಟಗಳ ಪ್ರತಿನಿಧಿಗಳು ಸರ್ವಾನುಮತದಿಂದ ಬೆಂಕಿ ಪೊಟ್ಟಣದ ಬೆಲೆಯನ್ನು ರೂ.1 ರಿಂದ ರೂ.2ಕ್ಕೆ ಹೆಚ್ಚಿಸಲು ನಿರ್ಣಯವನ್ನು ಕೈಗೊಂಡಿವೆ. ಇದಕ್ಕೂ ಮೊದಲು 2007ರಲ್ಲಿ ಬೆಂಕಿ ಪೊಟ್ಟಣದ ಬೆಲೆಯನ್ನು ಪರಿಷ್ಕರಿಸಲಾಗಿತ್ತು. ಆಗ ಬೆಂಕಿ ಪೊಟ್ಟಣದ ಬೆಲೆಯನ್ನು 50 ಪೈಸೆಯಿಂದ 1 ರೂ.ಗೆ ಹೆಚ್ಚಿಸಲಾಗುತ್ತಿ. ಗುರುವಾರ ಶಿವಕಾಶಿಯಲ್ಲಿ ಮುಕ್ತಾಯಗೊಂಡ ಆಲ್ ಇಂಡಿಯಾ ಚೇಂಬರ್ ಆಫ್ ಮಾಚಿಸ್ (All India Chamber Of Matches) ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ಈ ಸಂದರ್ಭದಲ್ಲಿ ಕಚ್ಚಾ ಸಾಮಗ್ರಿಗಳಲ್ಲಿ (Business News) ಆಗುತ್ತಿರುವ ಬೆಲೆ ವೃದ್ಧಿಯೇ ಈ ಬೆಲೆ ಏರಿಕೆಗೆ ಕಾರಣ ಎಂದು ಉದ್ಯಮ ಪ್ರತಿನಿಧಿಗಳು ಹೇಳಿದ್ದಾರೆ.
ಬೆಲೆ ಏರಿಕೆಗೆ ಕಾರಣ
ಸಾಮಾನ್ಯವಾಗಿ ಬೆಂಕಿಕಡ್ಡಿಗಳನ್ನು ತಯಾರಿಸಲು 14 ಬಗೆಯ ಕಚ್ಚಾ ಸಾಮಗ್ರಿಗಳು ಬೇಕಾಗುತ್ತವೆ ಎಂದು ತಯಾರಕರು ತಿಳಿಸಿದ್ದಾರೆ. ಒಂದು ಕೆಜಿ ಕೆಂಪು ರಂಜಕ ರೂ 425 ರಿಂದ ರೂ 810 ಕ್ಕೆ, ಮೇಣ ರೂ 58 ರಿಂದ ರೂ 80 ಕ್ಕೆ, ಹೊರ ಬಾಕ್ಸ್ ಬೋರ್ಡ್ ರೂ 36 ರಿಂದ ರೂ 55 ಕ್ಕೆ ಮತ್ತು ಒಳ ಪೆಟ್ಟಿಗೆ ಬೋರ್ಡ್ ರೂ 32 ರಿಂದ ರೂ 58 ಕ್ಕೆ ಏರಿಕೆಯಾಗಿದೆ. ಅಕ್ಟೋಬರ್ 10 ರಿಂದ ಪೇಪರ್, ಸ್ಪ್ಲಿಂಟ್ಸ್, ಪೊಟ್ಯಾಸಿಯಮ್ ಕ್ಲೋರೇಟ್ ಮತ್ತು ಸಲ್ಫರ್ ಬೆಲೆಯೂ ಹೆಚ್ಚಾಗಿದೆ. ಡೀಸೆಲ್ ಬೆಲೆ ಏರಿಕೆಯಿಂದ ಉದ್ಯಮದ ಮೇಲೆ ಹೆಚ್ಚುವರಿ ಹೊರೆ ಬೀಳುತ್ತಿದೆ.
ಇದನ್ನೂ ಓದಿ-Petrol price Today : ಗಗನದತ್ತ ಮುಖ ಮಾಡಿದ ಇಂಧನ ದರ : ರಾಜ್ಯದಲ್ಲಿ 100 ರ ಗಡಿ ದಾಟಿದ ಪೆಟ್ರೋಲ್-ಡೀಸೆಲ್ ಬೆಲೆ
ಈ ಕುರಿತು ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿರುವ ರಾಷ್ಟ್ರೀಯ ಸಣ್ಣ ಬೆಂಕಿಪೆಟ್ಟಿಗೆ ತಯಾರಕರ ಸಂಘದ ಕಾರ್ಯದರ್ಶಿ ವಿ.ಎಸ್.ಸೇತುರಥಿನಂ, ತಯಾರಕರು 600 ಬೆಂಕಿಪೆಟ್ಟಿಗೆಗಳ ಒಂದು ಬಂಡಲ್ ಅನ್ನು (ಪ್ರತಿ ಪೆಟ್ಟಿಗೆಯಲ್ಲಿ 50 ಬೆಂಕಿಕಡ್ಡಿಗಳೊಂದಿಗೆ) 270 ರಿಂದ 300 ರೂ.ಗೆ ಮಾರಾಟ ಮಾಡುತ್ತಿದ್ದಾರೆ. "ನಮ್ಮ ಘಟಕಗಳಿಂದ ಮಾರಾಟ ಬೆಲೆಯನ್ನು 60% ರಷ್ಟು ಹೆಚ್ಚಿಸಲು ನಾವು ನಿರ್ಧರಿಸಿದ್ದೇವೆ, ಪ್ರತಿ ಬಂಡಲ್ಗೆ 430-480 ರೂ.ಗಳಿಗೆ" ಎಂದು ಅವರು ಹೇಳಿದ್ದಾರೆ. ಇದು 12% GST ಮತ್ತು ಸಾರಿಗೆ ವೆಚ್ಚವನ್ನು ಒಳಗೊಂಡಿಲ್ಲ ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ-Electric Scooter: ಈ ಎಲೆಕ್ಟ್ರಿಕ್ ಸ್ಕೂಟರ್ಗಳು 50 ಸಾವಿರ ರೂ.ಗಿಂತ ಕಡಿಮೆ ಬೆಲೆಗೆ ಲಭ್ಯವಿವೆ
ಉದ್ಯಮಕ್ಕೆ ಬಲ ಸಿಗಲಿದೆ
ತಮಿಳುನಾಡಿನಾದ್ಯಂತ ಬೆಂಕಿಕಡ್ಡಿ ಉದ್ಯಮದಲ್ಲಿ ಸುಮಾರು ನಾಲ್ಕು ಲಕ್ಷ ಜನರು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಉದ್ಯೋಗದಲ್ಲಿದ್ದಾರೆ ಮತ್ತು ನೇರ ಉದ್ಯೋಗಿಗಳಲ್ಲಿ 90% ಕ್ಕಿಂತ ಹೆಚ್ಚು ಮಹಿಳೆಯರಿದ್ದಾರೆ. ಎಂಜಿಎನ್ಆರ್ಇಜಿಎ ಅಡಿಯಲ್ಲಿ ಕೆಲಸ ಮಾಡಲು ಹೆಚ್ಚಿನ ಜನರು ಆಸಕ್ತಿ ತೋರಿಸುತ್ತಿರುವುದರಿಂದ ಅವರಿಗೆ ಉತ್ತಮ ವೇತನ ನೀಡುವ ಮೂಲಕ ಉದ್ಯಮವು ಹೆಚ್ಚು ಸ್ಥಿರ ಉದ್ಯೋಗಿಗಳನ್ನು ಆಕರ್ಷಿಸುವ ನಿರೀಕ್ಷೆಯಿದೆ ಎಂದು ಸೇತುರಥಿನಂ ಹೇಳಿದ್ದಾರೆ.
ಇದನ್ನೂ ಓದಿ-ದೇಶದಲ್ಲಿ ಇಳಿಕೆಯಾಗಲಿದೆ ಅಡುಗೆ ಎಣ್ಣೆ, ಬೇಳೆ ಕಾಳುಗಳ ಬೆಲೆ, ಸರ್ಕಾರ ನೀಡಿದೆ ಉತ್ತರ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ