Best Wife by Zodiac Sign: ಈ ಹುಡುಗಿಯರು ತಮ್ಮ ಗಂಡನನ್ನು ತುಂಬಾ ಪ್ರೀತಿಸುತ್ತಾರೆ, ಅದೃಷ್ಟಶಾಲಿಯಾಗಿರುತ್ತಾರೆ…

ಈ ರಾಶಿಚಕ್ರದ ಹುಡುಗಿಯರನ್ನು ಜೀವನ ಸಂಗಾತಿಯಾಗಿ ಪಡೆಯುವ ಹುಡುಗರ ಇಡೀ ಜೀವನವು ಸಂತೋಷದಿಂದ ಉಳಿಯುತ್ತದೆ.

Written by - Puttaraj K Alur | Last Updated : Nov 16, 2021, 10:10 AM IST
  • ಕೆಲ ರಾಶಿಯ ಹುಡುಗಿಯರು ತಮ್ಮ ಗಂಡನನ್ನು ಜೀವಪೂರ್ತಿ ಚೆನ್ನಾಗಿ ನೋಡಿಕೊಳ್ಳುತ್ತಾರೆ
  • ಕರ್ಕ ರಾಶಿಯ ಹುಡುಗಿಯರು ಯಾವುದೇ ಪರಿಸ್ಥಿತಿಯಲ್ಲಿ ಕುಟುಂಬಕ್ಕೆ ಒಳಿತು ಮಾಡುತ್ತಾರೆ
  • ತುಲಾ ರಾಶಿಯ ಹುಡುಗಿಯರು ಬುದ್ಧಿವಂತಿಕೆಯಿಂದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ
Best Wife by Zodiac Sign: ಈ ಹುಡುಗಿಯರು ತಮ್ಮ ಗಂಡನನ್ನು ತುಂಬಾ ಪ್ರೀತಿಸುತ್ತಾರೆ, ಅದೃಷ್ಟಶಾಲಿಯಾಗಿರುತ್ತಾರೆ… title=
ಗಂಡನಿಗೆ ಅದೃಷ್ಟಶಾಲಿಯಾಗಿರುತ್ತಾರೆ ಈ ರಾಶಿಯ ಹುಡುಗಿಯರು

ನವದೆಹಲಿ: ಜ್ಯೋತಿಷ್ಯ (Astrology)ದಲ್ಲಿ ಪ್ರತಿಯೊಂದು ರಾಶಿಯ ಜನರ ಒಳಿತು ಮತ್ತು ಕೆಡುಕುಗಳನ್ನು ಹೇಳಲಾಗುತ್ತದೆ. ಇದರ ಪ್ರಕಾರ ಕೆಲವು ರಾಶಿಚಕ್ರ ಚಿಹ್ನೆ (Zodiac Sign) ಗಳ ಹುಡುಗಿಯರು ತಮ್ಮ ಗಂಡನನ್ನು ತಮ್ಮ ಜೀವನಪೂರ್ತಿ ಪ್ರೀತಿಸುತ್ತಾರೆ. ಇಂತವರು ಯಾವಾಗಲೂ ತಮ್ಮ ಪತಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ.. ಗಂಡನಿಗೆ ಇವರು ತುಂಬಾ ಅದೃಷ್ಟಶಾಲಿಗಳಾಗಿರುತ್ತಾರೆ. ಈ ರಾಶಿಚಕ್ರದ ಹುಡುಗಿಯರನ್ನು ಜೀವನ ಸಂಗಾತಿಯಾಗಿ ಪಡೆಯುವ ಹುಡುಗರ ಇಡೀ ಜೀವನವು ಸಂತೋಷದಿಂದ ಉಳಿಯುತ್ತದೆ.

ಈ ರಾಶಿಯ ಹುಡುಗಿಯರು ತಮ್ಮ ಗಂಡನಿಗೆ ಅದೃಷ್ಟಶಾಲಿಯಾಗಿರುತ್ತಾರೆ

ಕರ್ಕ ರಾಶಿ ​(Cancer) : ಕರ್ಕ ರಾಶಿಯ ಹುಡುಗಿ(Girls)ಯರು ತುಂಬಾ ಒಳ್ಳೆಯ ಮತ್ತು ಹೃದಯದಲ್ಲಿ ಪರಿಶುದ್ಧರು. ಇತರರನ್ನು ಸಂತೋಷಪಡಿಸುವ ಕಲೆ ಅವರಲ್ಲಿದೆ. ಇವರು ತಮ್ಮ ಗಂಡ ಮತ್ತು ಕುಟುಂಬವನ್ನು ತುಂಬಾ ಪ್ರೀತಿಸುತ್ತಾರೆ. ಯಾವುದೇ ಪರಿಸ್ಥಿತಿಯಲ್ಲಿ ಯಾವಾಗಲೂ ಕುಟುಂಬಕ್ಕೆ ಒಳಿತು ಮಾಡುತ್ತಾರೆ. ಒಟ್ಟಾರೆಯಾಗಿ ಈ ಹುಡುಗಿಯರು ಸಂತೋಷದ ವೈವಾಹಿಕ ಜೀವನವನ್ನು ಹೊಂದಿರುತ್ತಾರೆ. ಇವರು ತಮ್ಮ ಕುಟುಂಬಕ್ಕೆ ತುಂಬಾ ಅದೃಷ್ಟವಂತರೂ ಆಗಿರುತ್ತಾರೆ.

ಇದನ್ನೂ ಓದಿ: Surya Rashi Parivartan: ಇಂದು ವೃಶ್ಚಿಕ ರಾಶಿಗೆ ಸೂರ್ಯನ ಪ್ರವೇಶ, ನಿಮ್ಮ ಮೇಲೆ ಏನು ಪರಿಣಾಮ

ತುಲಾ ರಾಶಿ (Libra): ತುಲಾ ರಾಶಿಯ ಹುಡುಗಿಯರು ರಾಶಿಚಕ್ರದ ಹೆಸರಿಗೆ ಅನುಗುಣವಾಗಿ ಬುದ್ಧಿವಂತಿಕೆಯಿಂದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಇವರು ತಮ್ಮ ಬುದ್ಧಿವಂತಿಕೆಯಿಂದ ಪ್ರತಿ ಸಮಸ್ಯೆಯನ್ನು ಪರಿಹರಿಸುತ್ತಾರೆ. ಇವರು ಕಷ್ಟದ ಸಮಯದಲ್ಲಿ ತಮ್ಮ ಗಂಡನಿಗೆ ದೊಡ್ಡ ಬೆಂಬಲವಾಗಿ ನಿಲ್ಲುತ್ತಾರೆ. ಪತಿ ಸೇರಿದಂತೆ ಇಡೀ ಕುಟುಂಬನ್ನೇ ಚೆನ್ನಾಗಿ ನೋಡಿಕೊಳ್ಳುತ್ತಾರೆ. ಈ ಹುಡುಗಿಯರು ಉತ್ತಮ ಪತ್ನಿಯರು ಎಂದು ಸಾಬೀತುಪಡಿಸುತ್ತಾರೆ. ಮನೆಯಲ್ಲಿ ಮತ್ತು ಹೊರಗಿನ ಜವಾಬ್ದಾರಿಗಳನ್ನು ಹೇಗೆ ನಿರ್ವಹಿಸಬೇಕೆಂದು ಅವರಿಗೆ ತಿಳಿದಿರುತ್ತದೆ. 

ಕುಂಭ ರಾಶಿ (Aquarius) : ಕುಂಭ ರಾಶಿಯ ಹುಡುಗಿಯರು ಅತ್ಯುತ್ತಮ ಜೀವನ ಸಂಗಾತಿ(Life Partner)ಗಳು. ಪತಿಯನ್ನು ಸಂತೋಷವಾಗಿಡಲು ಅವರು ಯಾವಾಗಲೂ ಹೊಸದನ್ನು ಮಾಡುತ್ತಲೇ ಇರುತ್ತಾರೆ. ಪತಿ ಮತ್ತು ಅವನ ಕುಟುಂಬವನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ. ಯಾವುದೇ ಸಂದರ್ಭದಲ್ಲಿ ತಮ್ಮ ಗಂಡನಿಗೆ ಬೆಂಬಲವಾಗಿ ನಿಲ್ಲುವ ಇವರು ಅವರನ್ನು ತುಂಬಾ ಪ್ರೀತಿಸುತ್ತಾರೆ. ಸಾಮಾನ್ಯವಾಗಿ ಈ ರಾಶಿಯ ಹುಡುಗಿಯರು ತುಂಬಾ ಪ್ರೀತಿಯ ಗಂಡಂದಿರನ್ನು ಸಹ ಪಡೆಯುತ್ತಾರೆ.

ಇದನ್ನೂ ಓದಿ: Chandra Grahan 2021: ಶುಭ ಫಲಿತಾಂಶಗಳನ್ನೂ ನೀಡುವ ಚಂದ್ರಗ್ರಹಣ: ಈ ಬಾರಿ ಯಾವ ರಾಶಿಯವರಿಗೆ ಲಾಭ?

ಮೀನ ರಾಶಿ (Pisces) : ಮೀನ ರಾಶಿಯ ಹುಡುಗಿಯರು ತಮ್ಮ ಪತಿಯನ್ನು ತುಂಬಾ ಪ್ರೀತಿಸುತ್ತಾರೆ. ತಮ್ಮ ಗಂಡನನ್ನು ಪ್ರೀತಿಸುವ ಮೂಲಕ ಅವರನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ. ತನ್ನ ಇಡೀ ಜೀವನವನ್ನೇ ಪತಿಯ ಸೇವೆಗೆ ಮುಡಿಪಾಗಿಡುತ್ತಾರೆ. ಇದು ಅವರ ಯಶಸ್ವಿ ಮತ್ತು ಸಂತೋಷದ ವೈವಾಹಿಕ ಜೀವನದ ರಹಸ್ಯವಾಗಿದೆ. ಪತಿಯೊಂದಿಗೆ ಉತ್ತಮ ಸ್ನೇಹ ಸಂಬಂಧವನ್ನೂ ಹೊಂದಿರುತ್ತಾರೆ.

(ಗಮನಿಸಿ: ಇಲ್ಲಿ ನೀಡಲಾಗಿರುವ ಮಾಹಿತಿಯು ಸಾಮಾನ್ಯ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ದೃಢಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News