IND vs NZ: ಈ ಆಟಗಾರನೇ ಗೆಲುವಿನ ರೂವಾರಿ ಎಂದ ನಾಯಕ ರೋಹಿತ್ ಶರ್ಮಾ

ಅಂತಿಮ ಪಂದ್ಯದ ವೇಳೆಯ ತಂಡದಲ್ಲಿನ ಬದಲಾವಣೆ ಬಗ್ಗೆ ಇನ್ನೂ ಏನನ್ನೂ ಯೋಚಿಸಿಲ್ಲ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ. ತಂಡಕ್ಕೆ ಏನು ಸರಿ ಎನಿಸುತ್ತದೆಯೋ ಆ ಬದಲಾವಣೆ ಮಾಡಲಾಗುವುದು ಎಂದಿದ್ದಾರೆ. 

Written by - Ranjitha R K | Last Updated : Nov 20, 2021, 11:15 AM IST
  • ಗೆಲುವಿನ ನಂತರ ಹೇಳಿಕೆ ನೀಡಿದ ರೋಹಿತ್ ಶರ್ಮಾ
  • ಇಡೀ ತಂಡದ ಪ್ರದರ್ಶನದ ಬಗ್ಗೆ ಮೆಚ್ಚುಗೆ
  • ನಾಯಕನಾಗಿ ಉತ್ತಮ ಪ್ರದರ್ಶನ
IND vs NZ: ಈ ಆಟಗಾರನೇ ಗೆಲುವಿನ ರೂವಾರಿ ಎಂದ ನಾಯಕ ರೋಹಿತ್ ಶರ್ಮಾ title=
Rohit Sharma(file photo)

ನವದೆಹಲಿ :  ನ್ಯೂಜಿಲೆಂಡ್ ವಿರುದ್ಧದ ಮೂರು ಪಂದ್ಯಗಳ ಟಿ 20 ಸರಣಿಯಲ್ಲಿ 2-0 ಯಿಂದ ಮುನ್ನಡೆ ಸಾಧಿಸಿದ ನಂತರ  ನಾಯಕ ರೋಹಿತ್ ಶರ್ಮಾ (Rohit Sharnma) ತಂಡದ ಪ್ರದರ್ಶನದ ಬಗ್ಗೆ ಸಂತೋಷ ವ್ಯಕ್ತಪಡಿಸಿದ್ದಾರೆ. ಇಡೀ ತಂಡವು ಅದ್ಭುತ ಪ್ರದರ್ಶನ ನೀಡಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇಬ್ಬನಿಯ ಕಾರಣದಿಂದಾಗಿ ಪರಿಸ್ಥಿತಿ ಅಷ್ಟೊಂದು ಸುಲಭವಾಗಿರಲಿಲ್ಲ. ಆದರೂ ತಂಡ ಅದ್ಬುತ ಪ್ರದರ್ಶನ ನೀಡಿದೆ ಎಂದು ಅವರು ಹೇಳಿದ್ದಾರೆ. 

ಇಡೀ ತಂಡಕ್ಕೆ ಸಲ್ಲುತ್ತದೆ ಗೆಲುವಿನ ಶ್ರೇಯಸ್ಸು :
ಇಡೀ ತಂಡ ಅದ್ಭುತ ಪ್ರದರ್ಶನ ನೀಡಿದೆ. ಬ್ಯಾಟಿಂಗ್ ಬಗ್ಗೆ ಹೇಳುವುದಾದರೆ ನ್ಯೂಜಿಲೆಂಡ್‌ನ (New Zealand) ಸಾಮರ್ಥ್ಯ ನಮಗೆ ತಿಳಿದಿದೆ. ಇದರೊಂದಿಗೆ ನಮ್ಮ ಸ್ಪಿನ್ನರ್‌ಗಳ ಸಾಮರ್ಥ್ಯವೂ ಗೊತ್ತಿದೆ. ಒಂದು ವಿಕೆಟ್ ಪಡೆಯುವ ಮೂಲಕ ಎದುರಾಳಿ ತಂಡಕ್ಕೆ ಲಗಾಮು ಹಾಕಬಹುದು ಎಂದು ನಾನು ಬೌಲರ್ ಗಳಿಗೆ ಪದೇ ಪದೇ ಹೇಳುತ್ತಿದ್ದೆ ಎಂದು ಅವರು ತಿಳಿಸಿದ್ದಾರೆ. ಬೆಂಚ್ ಸ್ಟ್ರೆಂತ್ ಆಟಗಾರರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ರೋಹಿತ್ ಶರ್ಮಾ (Rohit Sharma), 'ಬೆಂಚ್ ಸ್ಟ್ರೆಂತ್ ಆಟಗಾರರು ಸತತವಾಗಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಅವರಿಗೆ ಮುಕ್ತವಾಗಿ ಆಡುವ ಸ್ವಾತಂತ್ರ್ಯವನ್ನು ನೀಡುವುದು ಬಹಳ ಮುಖ್ಯವಾಗಿತ್ತು. ಇದು ಯುವ ತಂಡವಾಗಿದ್ದು, ಅವರು ಹೆಚ್ಚಿನ ಪಂದ್ಯಗಳನ್ನು ಆಡಿಲ್ಲ ಹೇಳಿದ್ದಾರೆ. ಇನ್ನು ಭಾನುವಾರ ಕೋಲ್ಕತ್ತಾದಲ್ಲಿ ನಡೆಯಲಿರುವ ಅಂತಿಮ ಪಂದ್ಯದ ವೇಳೆಯ ತಂಡದಲ್ಲಿನ ಬದಲಾವಣೆ ಬಗ್ಗೆ ಇನ್ನೂ ಏನನ್ನೂ ಯೋಚಿಸಿಲ್ಲ ಎಂದು ಹೇಳಿದ್ದಾರೆ. ಅಲ್ಲದೆ, ತಂಡಕ್ಕೆ ಏನು ಸರಿ ಎನಿಸುತ್ತದೆಯೋ ಆ ಬದಲಾವಣೆ ಮಾಡಲಾಗುವುದು ಎಂದಿದ್ದಾರೆ. 

ಇದನ್ನೂ ಓದಿ : India vs New Zealand, 2nd T20I: ಮಿಂಚಿದ ಕೆ.ಎಲ್.ರಾಹುಲ್, ರೋಹಿತ್ ಶರ್ಮಾ, ಭಾರತಕ್ಕೆ ಸರಣಿ ಜಯ

ಹರ್ಷಲ್ ಬಗ್ಗೆ ಪ್ರಶಂಸೆ :
ಹರ್ಷಲ್ ಪಟೇಲ್ (Harshal patel) ಚೊಚ್ಚಲ ಪಂದ್ಯದ ವೇಳೆ ಉತ್ತಮ ಪ್ರದರ್ಶನ ನೀಡಿ 25 ರನ್ ನೀಡಿ ಎರಡು ವಿಕೆಟ್ ಕಬಳಿಸಿದ್ದಾರೆ. ಈ ಬಗ್ಗೆ 'ಹರ್ಷಲ್ ಪಟೇಲ್ ಅವರನ್ನು ಪ್ರಶಂಶಿಸಿದ್ದಾರೆ. ‘ಪ್ಲೇಯರ್ ಆಫ್ ದಿ ಮ್ಯಾಚ್’ ಆಗಿದ್ದ ಹರ್ಷಲ್ ಪಟೇಲ್, ಡೆಬ್ಯೂ ಪಂದ್ಯದಲ್ಲಿ ಇದಕ್ಕಿಂತ ತ್ತಮ ಪ್ರದರ್ಶನ ನಿರೀಕ್ಷಿಸಲು ಸಾಧ್ಯವಿಲ್ಲ ಎಂದಿದ್ದಾರೆ.  

ಇದನ್ನೂ ಓದಿ : AB De Villiers Retirement: AB ಡಿವಿಲಿಯರ್ಸ್ ನಿವೃತ್ತಿ ಘೋಷಣೆಯಿಂದ ನಿರಾಶರಾದ Virat Kohli, ತಮ್ಮ ಜಿಗರಿ ದೋಸ್ತಿ ಕುರಿತು ಹೇಳಿದ್ದೇನು?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News