ಈ ರಾಶಿಯವರ ಮೂಗಿನ ತುದಿಯಲ್ಲಿರುತ್ತದೆ ಕೋಪ, ಇವರ ಜೊತೆ ವ್ಯವಹರಿಸುವಾಗ ಹುಷಾರಾಗಿರಿ

ಜ್ಯೋತಿಷ್ಯದ ಸಹಾಯದಿಂದ, ಯಾವುದೇ ವ್ಯಕ್ತಿಯ ರಾಶಿಚಕ್ರದ ಚಿಹ್ನೆಯ  ಮೂಲಕ ಅವರ ಗುಣ ನಡತೆಗಳನ್ನು ತಿಳಿದುಕೊಳ್ಳಬಹುದು. 

ನವದೆಹಲಿ : ಜ್ಯೋತಿಷ್ಯದ ಸಹಾಯದಿಂದ, ಯಾವುದೇ ವ್ಯಕ್ತಿಯ ರಾಶಿಚಕ್ರದ ಚಿಹ್ನೆಯ  ಮೂಲಕ ಅವರ ಗುಣ ನಡತೆಗಳನ್ನು ತಿಳಿದುಕೊಳ್ಳಬಹುದು. ರಾಶಿಗನುಗುಣವಾಗಿ ಕೆಲವರು ಕೋಪ ಸ್ವಭಾವದವರಾಗಿದ್ದರೆ,  ಇನ್ನು ಕೆಲವರು ಶಾಂತ ಸ್ವಭಾವದವರಾಗಿರುತ್ತಾರೆ. ಕೆಲವರು ತಮ್ಮ ಮಾತಿನಿಂದಲೇ ಎದುರಿಗಿರುವವರನ್ನು ಚುಚ್ಚಿ ಕೊಂದು ಬಿಡುತ್ತಾರೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, 5 ರಾಶಿಚಕ್ರದ ಜನರಲ್ಲಿ ಈ ಸಮಸ್ಯೆ ಸಾಮಾನ್ಯವಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

1 /5

ಮೇಷ ರಾಶಿಯ ಜನರು ಹೃದಯವಂತರಾಗಿರುತ್ತಾರೆ. ಆದರೆ ಅವರಿಗೆ ಬಹಳ ಬೇಗ ಕೋಪ ಬರುತ್ತದೆ. ಇವರೊಂದಿಗೆ ಯಾರಾದರೂ ಕೆಟ್ಟದಾಗಿ ನಡೆದುಕೊಂಡರೆ, ಬಹಳ ಬೇಗ ತಮ್ಮ ತಾಳ್ಮೆ ಕಳೆದುಕೊಂಡು ಬಿಡುತ್ತಾರೆ. ಯಾರೊಂದಿಗೆ ವಾದ ಮಾಡುವುದಕ್ಕೂ ಇವರು ಹಿಂಜರಿಯುವುದಿಲ್ಲ.

2 /5

ವೃಷಭ ರಾಶಿಯ ಜನರು ತುಂಬಾ ಕರುಣಾಮಯಿ, ಬುದ್ಧಿವಂತರು ಮತ್ತು ಅನಗತ್ಯ ವಾದಗಳಿಗೆ ಸಿಲುಕುವುದಿಲ್ಲ. ಆದರೆ ಅವರಿಗೆ ಕೋಪ ಬಂತೆಂದರೆ ಅವರನ್ನು ನಿಭಾಯಿಸಲು ತುಂಬಾ ಕಷ್ಟವಾಗುತ್ತದೆ. ಈ ರಾಶಿಯವರ ಸಿಟ್ಟು ತಣ್ಣಗಾಗಲು  ಬಹಳ ಸಮಯ ಹಿಡಿಯುತ್ತದೆ. ಕೋಪದ ಭರದಲ್ಲಿ ಎದುರಿಗಿರುವವರ ಮನಸ್ಸಿಗೆ ನೋವುಂಟು ಮಾಡುವ ಮಾತುಗಳನ್ನಾಡಿ ಬಿಡುತ್ತಾರೆ.

3 /5

ಮಿಥುನ ರಾಶಿಯವರಿಗೂ ಕೋಪ ಬಹು ಬೇಗ ಬರುತ್ತದೆ. ಅವರು ಎಲ್ಲವನ್ನೂ ತಮ್ಮದೇ ಆದ ಮ್ಮ ಮಾತಿನಂತೆಯೇ ಎಲ್ಲವೂ ನಡೆಯಬೇಕು ಎಂದು ಈ ರಾಶಿಯವರು ಬಯಸುತ್ತಾರೆ. ಹೀಗಾಗದೆ ಹೋದಾಗ ಕೋಪಗೊಳ್ಳುತ್ತಾರೆ, ಜಗಳಕ್ಕೆ ನಿಲ್ಲುತ್ತಾರೆ.  

4 /5

ತುಲಾ ರಾಶಿಯ ಜನರು ಸಮತೋಲಿತ ರೀತಿಯಲ್ಲಿ ವರ್ತಿಸುತ್ತಾರೆ ಆದರೆ ಕೆಲವೊಮ್ಮೆ ತುಂಬಾ ಕೋಪಗೊಳ್ಳುತ್ತಾರೆ. ಈ ರಾಶಿಯವರು ಕೋಪಗೊಂಡಾಗ ಅವರಿಂದ ದೂರ ಉಳಿಯುವುದು ಉತ್ತಮ. ಆದರೂ  ಈ ರಾಶಿಯವರ ಕೋಪ ಬಹು ಬೇಗ ಕರಗುತ್ತದೆ.

5 /5

ವೃಶ್ಚಿಕ ರಾಶಿಯ ಜನರು ಹೆಚ್ಚು ಕೋಪಗೊಳ್ಳುತ್ತಾರೆ. ಇವರಿಗೆ ಕೋಪ ಬಂದರೆ ಯಾರ ಮಾತನ್ನೂ ಕೇಳುವುದಿಲ್ಲ. ಕೋಪದಲ್ಲಿ, ಅವರು ಯಾರ ಮಾತನ್ನೂ ಕೇಳುವುದಿಲ್ಲ. ಕೋಪದ ಕೈಗೆ ಬುದ್ದಿ ಕೊಟ್ಟು ಎದುರಿಗಿರುವವರನ್ನು ಅವಮಾನಿಸಿ ಬಿಡುತ್ತಾರೆ.