Vastu Tips: ಸಾಮಾನ್ಯವಾಗಿ ಮನೆಯ ಹಿರಿಯರು ಸಂಜೆಯ ವೇಳೆ ಕೆಲವು ಕೆಲಸಗಳನ್ನು ಮಾಡದಂತೆ ಸಲಹೆ ನೀಡುತ್ತಾರೆ. ಸೂರ್ಯಾಸ್ತದ ನಂತರ ಈ ಕೆಲಸಗಳನ್ನು ಮಾಡುವುದರಿಂದ ಲಕ್ಷ್ಮೀ ದೇವಿ ಕೋಪಗೊಳ್ಳುತ್ತಾಳೆ ಎಂದು ಹೇಳಲಾಗುತ್ತದೆ. ಹಿಂದೂ ಧರ್ಮ ಮತ್ತು ವಾಸ್ತು ಶಾಸ್ತ್ರದಲ್ಲಿ ಸೂರ್ಯಾಸ್ತದ ನಂತರ ಕೆಲವು ಕೆಲಸಗಳನ್ನು ಮಾದುವುದನ್ನು ನಿಷೇಧಿಸಲಾಗಿದೆ. ನೀವೂ ಕೂಡ ಅಂತಹ ಕೆಲವು ತಪ್ಪುಗಳನ್ನು ಮಾಡುತ್ತಿದ್ದರೆ ಸೂರ್ಯಾಸ್ತದ ನಂತರ ಯಾವ ಕೆಲಸಗಳನ್ನು ಮಾಡಬಾರದು ಎಂಬುದರ ಬಗ್ಗೆ ತಿಳಿಯಿರಿ.
ಸೂರ್ಯಾಸ್ತದ ನಂತರ ಈ ಕೆಲಸಗಳನ್ನು ಮಾಡುವುದರಿಂದ ನಷ್ಟವಾಗುತ್ತದೆ ಎಂದು ಹೇಳಲಾಗುತ್ತದೆ.
ಉಗುರು ಮತ್ತು ಕೂದಲನ್ನು ಕತ್ತರಿಸಬೇಡಿ
ವಾಸ್ತು ಶಾಸ್ತ್ರದ (Vastu Shastra) ಪ್ರಕಾರ, ಸೂರ್ಯಾಸ್ತದ ನಂತರ ಉಗುರುಗಳು ಅಥವಾ ಕೂದಲನ್ನು ಕತ್ತರಿಸಬಾರದು. ಹೀಗೆ ಮಾಡುವುದರಿಂದ ಮನೆಯಲ್ಲಿ ನೆಗೆಟಿವ್ ಎನರ್ಜಿ ಬಂದು ಸಾಲದ ಬಾಧೆ ಎದುರಿಸಬೇಕಾಗುತ್ತದೆ ಎಂದು ಹೇಳಲಾಗುತ್ತದೆ.
ಇದನ್ನೂ ಓದಿ- Good Luck Tips: ನೀವು ಧರಿಸುವ ಶೂಗಳ ಬಗ್ಗೆ ಎಂದಿಗೂ ಈ ತಪ್ಪುಗಳನ್ನು ಮಾಡಲೇಬೇಡಿ
ಸಸ್ಯಗಳನ್ನು ಮುಟ್ಟಬೇಡಿ :
ಸೂರ್ಯಾಸ್ತದ (Sunset) ನಂತರ ಮರಗಳನ್ನು ಮುಟ್ಟಬಾರದು ಅಥವಾ ಮುರಿಯಬಾರದು ಎಂದು ಹೇಳಲಾಗುತ್ತದೆ. ಹಾಗೆಯೇ ಸೂರ್ಯಾಸ್ತದ ನಂತರ ಗಿಡಕ್ಕೆ ನೀರು ಹಾಕಬಾರದು. ಸೂರ್ಯಾಸ್ತದ ನಂತರ ಮರಗಳು ಮತ್ತು ಸಸ್ಯಗಳು ನಿದ್ರೆಗೆ ಹೋಗುತ್ತವೆ ಎಂದು ಹೇಳಲಾಗುತ್ತದೆ. ಹಾಗಾಗಿ ಅವುಗಳಿಗೆ ತೊಂದರೆ ಕೊಡುವುದು ಒಳ್ಳೆಯದಲ್ಲ.
ಅಂತ್ಯಕ್ರಿಯೆ ಮಾಡಬಾರದು:
ಪುರಾಣದ ಪ್ರಕಾರ ಸೂರ್ಯಾಸ್ತದ ನಂತರ ಅಂತ್ಯಕ್ರಿಯೆ ಮಾಡಬಾರದು. ಸೂರ್ಯಾಸ್ತದ ನಂತರ ಅಂತ್ಯಕ್ರಿಯೆ ಮಾಡುವುದರಿಂದ ಮೃತ ವ್ಯಕ್ತಿಯು ಮರಣಾನಂತರದ ಜೀವನದಲ್ಲಿ ನರಳಬೇಕಾಗುತ್ತದೆ ಎಂದು ಹೇಳಲಾಗುತ್ತದೆ.
ಆಹಾರವನ್ನು ತೆರೆದಿಡಬೇಡಿ:
ಸೂರ್ಯಾಸ್ತದ ನಂತರ ಆಹಾರ ಮತ್ತು ನೀರನ್ನು ತೆರೆದಿಡಬಾರದು ಎಂದು ಹೇಳಲಾಗುತ್ತದೆ. ಇದನ್ನು ಮಾಡುವುದರಿಂದ, ನಕಾರಾತ್ಮಕ ಶಕ್ತಿಯು ಆಹಾರದಲ್ಲಿ ಹೀರಲ್ಪಡುತ್ತದೆ ಮತ್ತು ಈ ಆಹಾರವು ನಿಮ್ಮನ್ನು ಅನಾರೋಗ್ಯಕ್ಕೆ ಕಾರಣವಾಗಬಹುದು.
ಇದನ್ನೂ ಓದಿ- Weekly Numerology Horoscope: ಹುಟ್ಟಿದ ದಿನಾಂಕದಿಂದ ನಿಮ್ಮ ವಾರ ಹೇಗಿರುತ್ತದೆ ಎಂದು ತಿಳಿಯಿರಿ
ಮೊಸರು ಅನ್ನವನ್ನು ಸೇವಿಸುವುದನ್ನು ತಪ್ಪಿಸಿ:
ಸೂರ್ಯಾಸ್ತದ ನಂತರ, ಮೊಸರು ಅನ್ನವನ್ನು ಅಪ್ಪಿತಪ್ಪಿಯೂ ಸೇವಿಸಬಾರದು. ಮುಸ್ಸಂಜೆ ನಂತರ ಮೊಸರನ್ನ ಸೇವಿಸುವುದರಿಂದ ಹಲವು ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.
ಪೊರಕೆ ಬಳಸಬೇಡಿ:
ಸೂರ್ಯ ಮುಳುಗಿದ ನಂತರ ಪೊರಕೆ ಬಳಸಬಾರದು. ಹೀಗೆ ಮಾಡುವುದರಿಂದ ಧನಹಾನಿಯಾಗಬಹುದು ಮತ್ತು ಸಾಲವೂ ಹೆಚ್ಚಾಗಬಹುದು ಎಂದು ಹೇಳಲಾಗುತ್ತದೆ.
ಬಟ್ಟೆ ಒಗೆದು ಒಣಗಿಸುವುದುಯಬಾರದು:
ಸೂರ್ಯಾಸ್ತದ ನಂತರ ಬಟ್ಟೆ ಒಗೆಯಬಾರದು ಎಂಬುದು ನಂಬಿಕೆ. ಹಾಗೆಯೇ ಸೂರ್ಯಾಸ್ತದ ನಂತರ ಬಟ್ಟೆಗಳನ್ನು ಒಣಗಿಸಬಾರದು. ಈ ರೀತಿ ಮಾಡುವುದರಿಂದ ಬಟ್ಟೆಗಳ ಮೂಲಕ ನೆಗೆಟಿವ್ ಎನರ್ಜಿ ಬಂದು ರೋಗ ಭೀತಿಯೂ ಕಾಡುತ್ತದೆ ಎಂದು ಹೇಳಲಾಗುತ್ತದೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.