ಕಾನ್ಪುರ: ಭಾರತ ಮತ್ತು ನ್ಯೂಜಿಲೆಂಡ್(India Vs New Zealand) ನಡುವಿನ 2 ಪಂದ್ಯಗಳ ಟೆಸ್ಟ್ ಸರಣಿಯು ನವೆಂಬರ್ 25 ರಿಂದ ಪ್ರಾರಂಭವಾಗಲಿದೆ. ಇಂಗ್ಲೆಂಡ್ ಪ್ರವಾಸದಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿದ ಅಜಿಂಕ್ಯ ರಹಾನೆ ಅವರನ್ನು ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕೆ ಭಾರತ ಟೆಸ್ಟ್ ತಂಡದ ನಾಯಕರನ್ನಾಗಿ ಮಾಡಿರುವ ಆಯ್ಕೆಗಾರರ ನಿರ್ಧಾರವು ಅನೇಕರಿಗೆ ಅಚ್ಚರಿ ಮೂಡಿಸಿದೆ.
ರಹಾನೆ ತಂಡದ ಭಾಗವಾಗಿರುವುದು ಅದೃಷ್ಟ
ಅಜಿಂಕ್ಯ ರಹಾನೆ(Ajinkya Rahane) ಅವರನ್ನು ಭಾರತ ಟೆಸ್ಟ್ ತಂಡದಿಂದ ಕೈಬಿಡುವ ಹಂತದಲ್ಲಿದ್ದರು. ಆದರೆ ಆಯ್ಕೆದಾರರು ಅವರನ್ನು ನಾಯಕನನ್ನಾಗಿ ಮಾಡುವ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿದರು. ಅಜಿಂಕ್ಯ ರಹಾನೆ ಅವರು ಇನ್ನೂ ಟೆಸ್ಟ್ ತಂಡದ ಭಾಗವಾಗಿರುವುದು ತುಂಬಾ ಅದೃಷ್ಟ ಎಂದು ಭಾರತದ ಮಾಜಿ ಆರಂಭಿಕ ಆಟಗಾರ ಗೌತಮ್ ಗಂಭೀರ್(Gautam Gambhir) ಹೇಳಿದ್ದಾರೆ. ಗುರುವಾರದಿಂದ ಆರಂಭವಾಗಲಿರುವ ನ್ಯೂಜಿಲೆಂಡ್(New Zealand) ವಿರುದ್ಧದ ಟೆಸ್ಟ್ ಸರಣಿಯಲ್ಲಿ ರಹಾನೆ ತಂಡದ ಭಾಗವಾಗಿದ್ದಾರೆ. ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ಕಾನ್ಪುರದಲ್ಲಿ ನಡೆಯಲಿರುವ ಮೊದಲ ಟೆಸ್ಟ್ ನಲ್ಲಿ ತಂಡದ ನಾಯಕತ್ವವನ್ನೂ ವಹಿಸಲಿದ್ದಾರೆ.
ಇದನ್ನೂ ಓದಿ: ಆರ್‌ಸಿಬಿಯಲ್ಲಿ ಡಿವಿಲಿಯರ್ಸ್ ಬದಲಿಗೆ ಯಾರು?: ಈ 3 ಬಲಿಷ್ಠ ಆಟಗಾರರು ರೇಸ್ ನಲ್ಲಿದ್ದಾರೆ..!
ಗಂಭೀರ್ ಈ ಹೇಳಿಕೆಯಿಂದ ಸಂಚಲನ ಮೂಡಿಸಿದ್ದಾರೆ
ಗೌತಮ್ ಗಂಭೀರ್(Gautam Gambhir) ಪ್ರಕಾರ, ಕಳಪೆ ಫಾರ್ಮ್ ನಂತರವೂ ಅಜಿಂಕ್ಯ ರಹಾನೆ ಅವರನ್ನು ಭಾರತ ತಂಡದಲ್ಲಿ ಉಳಿಸಿಕೊಳ್ಳಲಾಗಿದೆ. ಏಕೆಂದರೆ ಅವರು ಕೊಹ್ಲಿ ಅನುಪಸ್ಥಿತಿಯಲ್ಲಿ ತಂಡದ ನಾಯಕತ್ವವನ್ನು ವಹಿಸಬೇಕಾಗಿತ್ತು. ‘ರಹಾನೆ ಅವರು ಇನ್ನೂ ಟೆಸ್ಟ್ ತಂಡದ ಭಾಗವಾಗಿರುವುದು ತುಂಬಾ ಅದೃಷ್ಟ, ಏಕೆಂದರೆ ಅವರು ತಂಡವನ್ನು ಉತ್ತಮವಾಗಿ ಮುನ್ನಡೆಸುತ್ತಾರೆ. ಅವರಿಗೆ ಈಗ ಮತ್ತೊಂದು ಅವಕಾಶ ಸಿಗುತ್ತಿದೆ. ಇದನ್ನು ಅವರು ಸದುಪಯೋಗಪಡೆಸಿಕೊಳ್ಳುತ್ತಾರೆ ಎಂದು ನಾನು ಆಶಿಸುತ್ತೇವೆ’ ಎಂದು ಗಂಭೀರ್ ಹೇಳಿದ್ದಾರೆ.
ಆರಂಭಿಕರಾಗಿ ಈ ಬ್ಯಾಟ್ಸ್ ಮನ್‌ಗಳ ಆಯ್ಕೆ
‘ನಾನು ಮಯಾಂಕ್ ಅಗರ್ವಾಲ್ ಜೊತೆಗೆ ಕೆ.ಎಲ್.ರಾಹುಲ್(KL Rahul) ಅವರನ್ನು ಆರಂಭಿಕ ಬ್ಯಾಟ್ಸ್ ಮನ್ ಆಗಿ ಆಯ್ಕೆ ಮಾಡುತ್ತೇನೆ. ಏಕೆಂದರೆ ಇವರು ಇಂಗ್ಲೆಂಡ್‌ನಲ್ಲಿ ಇನ್ನಿಂಗ್ಸ್ ತೆರೆದಿದ್ದಾರೆ. ಇದರೊಂದಿಗೆ ಶುಭಮನ್ ಗಿಲ್ ಅವರನ್ನು 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವುದು ಸೂಕ್ತ. ರಹಾನೆ ಅವರು ತಂಡದ ಭಾಗವಾಗಿವುದರಿಂದ ಅವರು ಉತ್ತಮ ಪ್ರದರ್ಶನ ನೀಡುವ ಭರವಸೆ ಇದೆ. ಹಿಂದಿನ ತಪ್ಪುಗಳನ್ನು ತಿದ್ದುಕೊಂಡು ತಂಡವನ್ನು ಚೆನ್ನಾಗಿ ಮುನ್ನೆಡಿಸಿದರೆ ರಹಾನೆಗೆ ಉತ್ತಮ ಅವಕಾಶಗಳು ಲಭಿಸಲಿವೆ’ ಎಂದು ಗಂಭೀರ್ ಹೇಳಿದ್ದಾರೆ.
ಇದನ್ನೂ ಓದಿ: Rahul Dravid: ರಾಹುಲ್ ದ್ರಾವಿಡ್ ನನ್ನ ಫಸ್ಟ್ ಲವ್ ಎಂದು ಹೇಳಿದ ಬಾಲಿವುಡ್ ನಟಿ ಯಾರು ಗೊತ್ತೇ?
33ರ ಹರೆಯದ ರಹಾನೆ ತವರಿನ ಸರಣಿಯ ಮೂಲಕ ತಮ್ಮ ಕಳೆದುಕೊಂಡ ಫಾರ್ಮ್ ಅನ್ನು ಮರಳಿ ಪಡೆಯಬೇಕಾಗಿದೆ. ನಾಯಕನ ಕ್ಯಾಪ್ ತೊಡಲಿರುವ ಅವರು ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಜಯಿಸಲಿ ಎಂದು ನಾನು ಶುಭ ಹಾರೈಸುತ್ತೇನೆ’ ಎಂದು ಗಂಭೀರ್ ಟೀಂ ಇಂಡಿಯಾ(Team India)ಗೆ ಶುಭ ಹಾರೈಸಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.