ನವದೆಹಲಿ: ಕಾಶಿ ವಿಶ್ವನಾಥ ಕಾರಿಡಾರ್ (Kashi-Vishwanath Corridor)ಅನ್ನು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಉದ್ಘಾಟಿಸಿದರು. ಪ್ರಧಾನಮಂತ್ರಿಯವರ ಕನಸಿನ ಯೋಜನೆ ಎಂದು ಹೇಳಲಾದ ಈ ಕಾರಿಡಾರ್ ಅನ್ನು 5,000 ಹೆಕ್ಟೇರ್ ಪ್ರದೇಶದಲ್ಲಿ ನಿರ್ಮಿಸಲಾಗಿದೆ. ₹800 ಕೋಟಿ ವೆಚ್ಚದ ಯೋಜನೆಯು ಪುರಾತನ ದೇವಾಲಯವನ್ನು ಗಂಗಾನದಿಯ ದಡಕ್ಕೆ ಸಂಪರ್ಕಿಸುತ್ತದೆ.
ಆಧ್ಯಾತ್ಮಿಕ ಕೇಂದ್ರದ ಕಳೆದುಹೋದ ವೈಭವವನ್ನು ಮರುಸ್ಥಾಪಿಸುವ ಉದ್ದೇಶದಿಂದ 2019 ರ ಮಾರ್ಚ್ನಲ್ಲಿ ತಮ್ಮ ಸಂಸದೀಯ ಕ್ಷೇತ್ರದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು (PM Narendra Modi) ಈ ಯೋಜನೆಯನ್ನು ಪ್ರಾರಂಭಿಸಿದರು.
ವಾರಣಾಸಿಯಲ್ಲಿರುವ ಕಾಶಿ ವಿಶ್ವನಾಥ ದೇವಾಲಯ ಕಾರಿಡಾರ್ ಯೋಜನೆಯು (Kashi-Vishwanath Corridor Project) ಕಾಶಿ ವಿಶ್ವನಾಥ ದೇವಾಲಯ ಮತ್ತು ಗಂಗಾ ನದಿಯ ಉದ್ದಕ್ಕೂ ಇರುವ ಘಾಟ್ಗಳನ್ನು ಸಂಪರ್ಕಿಸುತ್ತದೆ.
ಈ ಯೋಜನೆಯು ಘಾಟ್ಗಳು ಮತ್ತು ದೇವಾಲಯದ ನಡುವೆ ಯಾತ್ರಾರ್ಥಿಗಳು ಮತ್ತು ಭಕ್ತರ ಸುಗಮ ಸಂಚಾರವನ್ನು ಖಾತ್ರಿಪಡಿಸುವ ಗುರಿಯನ್ನು ಹೊಂದಿದೆ. ಮೊದಲು, ಅವರು ದೇವಾಲಯವನ್ನು ತಲುಪಲು ದಟ್ಟಣೆಯ ಬೀದಿಗಳಲ್ಲಿ ಹಾದು ಹೋಗಬೇಕಾಗಿತ್ತು.
ಇಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟನೆ ಮಾಡಿದ್ದು, ಈ ಯೋಜನೆಯ ಮೊದಲ ಹಂತವನ್ನು ₹339 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಮೊದಲ ಹಂತವು ಸುಮಾರು 5 ಲಕ್ಷ ಚದರ ಅಡಿ ವಿಸ್ತೀರ್ಣದಲ್ಲಿ ಹರಡಿದೆ ಮತ್ತು 23 ಕಟ್ಟಡಗಳನ್ನು ಒಳಗೊಂಡಿದೆ.
2019 ರಲ್ಲಿ ಶಂಕುಸ್ಥಾಪನೆಯಾದ ಈ ಯೋಜನೆಗೆ ಒಟ್ಟಾರೆ ₹800 ಕೋಟಿ ವೆಚ್ಚವಾಗಲಿದೆ. ಮಹಾ ಯೋಜನೆಯನ್ನು ಕಾರ್ಯಗತಗೊಳಿಸಲು 300 ಕ್ಕೂ ಹೆಚ್ಚು ಆಸ್ತಿಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಸುಮಾರು 1,400 ಅಂಗಡಿಯವರು, ಬಾಡಿಗೆದಾರರು ಮತ್ತು ಮನೆಮಾಲೀಕರಿಗೆ ಪುನರ್ವಸತಿ ಕಲ್ಪಿಸಲಾಗಿದೆ ಎಂದು ಪ್ರಧಾನಮಂತ್ರಿ ಕಚೇರಿಯ (PMO) ಹೇಳಿಕೆ ತಿಳಿಸಿದೆ.
ಗಂಗಾನದಿಯ ಲಲಿತಾ ಘಾಟ್ ಅನ್ನು ಕಾಶಿ ವಿಶ್ವನಾಥ ದೇವಸ್ಥಾನದ ಆವರಣದಲ್ಲಿರುವ ಮಂದಿರ ಚೌಕಕ್ಕೆ ಸಂಪರ್ಕಿಸಲು 20 ಅಡಿ ಅಗಲದ ಕಾರಿಡಾರ್ ಅನ್ನು ಕಲ್ಪಿಸಲಾಗಿದೆ.
ವಾರಣಾಸಿಯಲ್ಲಿನ ಮೂಲಸೌಕರ್ಯಗಳ ಸುಧಾರಣೆಯು ಬೌದ್ಧ ಯಾತ್ರಾಸ್ಥಳವಾದ ಸಾರನಾಥ ಸೇರಿದಂತೆ ಪವಿತ್ರ ನಗರ ಮತ್ತು ಪ್ರದೇಶದಲ್ಲಿ ಪ್ರವಾಸೋದ್ಯಮಕ್ಕೆ ಉತ್ತೇಜನವನ್ನು ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ.
ಯೋಜನೆಯ ಕೆಲಸದ ಸಮಯದಲ್ಲಿ 40 ಕ್ಕೂ ಹೆಚ್ಚು ಪ್ರಾಚೀನ ದೇವಾಲಯಗಳನ್ನು ಮರುಶೋಧಿಸಲಾಗಿದೆ. ಅವುಗಳನ್ನು ಪುನಃಸ್ಥಾಪಿಸಲಾಗಿದೆ ಎಂದು PMO ಹೇಳಿಕೆ ತಿಳಿಸಿದೆ.
ಗಂಗೇಶ್ವರ ಮಹಾದೇವ ದೇವಾಲಯ, ಮನೋಕಾಮೇಶ್ವರ ಮಹಾದೇವ ದೇವಾಲಯ, ಜೌವಿನಾಯಕ ದೇವಾಲಯ ಮತ್ತು ಶ್ರೀ ಕುಂಭ ಮಹಾದೇವ ದೇವಾಲಯದಂತಹ 40 ಕ್ಕೂ ಹೆಚ್ಚು 'ಕಳೆದುಹೋದ' ದೇವಾಲಯಗಳನ್ನು ಮರುಶೋಧಿಸಲಾಗಿದೆ. ಈ ಪ್ರತಿಯೊಂದು ದೇವಾಲಯಕ್ಕೂ ಶತಮಾನಗಳ ಹಿಂದಿನ ಇತಿಹಾಸವಿದೆ.
ನವದೆಹಲಿಯ ರಾಷ್ಟ್ರೀಯ ವಸ್ತುಸಂಗ್ರಹಾಲಯದಲ್ಲಿ ಕೆಲವು ಉತ್ಖನನದ ಅವಶೇಷಗಳನ್ನು ಪ್ರದರ್ಶಿಸಲು ಮತ್ತು ಅವುಗಳ ಇತಿಹಾಸಗಳ ಮೇಲೆ ನಿರೂಪಣೆಯನ್ನು ಪರದೆಯ ಮೇಲೆ ಪ್ರದರ್ಶಿಸಲು ಗ್ಯಾಲರಿಯನ್ನು ಮೀಸಲಿಡಲಾಗಿದೆ.
ಇದನ್ನೂ ಓದಿ: ನಾವು ದೇವಸ್ಥಾನಗಳ ಜೊತೆಗೆ ಬಡವರ ಮನೆಗಳನ್ನು ಸಹ ನಿರ್ಮಿಸುತ್ತಿದ್ದೇವೆ: ಪ್ರಧಾನಿ ಮೋದಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.