ನನ್ನ ಮತ್ತು ರೋಹಿತ್ ಶರ್ಮಾ ನಡುವೆ ಭಿನ್ನಾಭಿಪ್ರಾಯವಿಲ್ಲ: ವಿರಾಟ್ ಕೊಹ್ಲಿ

ಏಕದಿನ ಸರಣಿ ಆಡಲು ತಾನು ಸಿದ್ಧನಿದ್ದೇನೆ, ನಾನು ಬಿಸಿಸಿಐನಿಂದ ವಿಶ್ರಾಂತಿ ನೀಡಲು ಮನವಿ ಮಾಡಿಲ್ಲ. ನನಗೆ ಯಾವುದೇ ವಿಶ್ರಾಂತಿಯ ಅಗತ್ಯವಿಲ್ಲವೆಂದು ಕೊಹ್ಲಿ ಹೇಳಿದ್ದಾರೆ.

Written by - Puttaraj K Alur | Last Updated : Dec 15, 2021, 04:13 PM IST
  • ನನ್ನ ಮತ್ತು ರೋಹಿತ್ ಶರ್ಮಾ ಮಧ್ಯೆ ಯಾವುದೇ ರೀತಿಯ ಭಿನ್ನಾಭಿಪ್ರಾಯವಿಲ್ಲ
  • ಏಕದಿನ ಸರಣಿ ಆಡಲು ಸಿದ್ಧನಿದ್ದೇನೆ, ಬಿಸಿಸಿಐನಿಂದ ವಿಶ್ರಾಂತಿ ನೀಡಲು ನಾನು ಮನವಿ ಮಾಡಿಲ್ಲ
  • ಏಕದಿನ ಸರಣಿಗೆ ಹೊಸ ನಾಯಕನನ್ನು ಘೋಷಿಸುವ ಮುನ್ನ ಮುಖ್ಯ ಆಯ್ಕೆಗಾರರು ನನಗೆ ಮಾಹಿತಿ ನೀಡಿದ್ದರು
ನನ್ನ ಮತ್ತು ರೋಹಿತ್ ಶರ್ಮಾ ನಡುವೆ ಭಿನ್ನಾಭಿಪ್ರಾಯವಿಲ್ಲ: ವಿರಾಟ್ ಕೊಹ್ಲಿ title=
ಏಕದಿನ ಸರಣಿ ಆಡಲು ಸಿದ್ಧನಿದ್ದೇನೆಂದ ವಿರಾಟ್ ಕೊಹ್ಲಿ

ನವದೆಹಲಿ: ನನ್ನ ಮತ್ತು ರೋಹಿತ್ ಶರ್ಮಾ ಮಧ್ಯೆ ಯಾವುದೇ ರೀತಿಯ ಭಿನ್ನಾಭಿಪ್ರಾಯವಿಲ್ಲವೆಂದು ‘ರನ್ ಮಷಿನ್’ ಖ್ಯಾತಿಯ ವಿರಾಟ್ ಕೊಹ್ಲಿ(Virat Kohli) ಸ್ಪಷ್ಟಪಡಿಸಿದ್ದಾರೆ.

ಇದೇ ಡಿಸೆಂಬರ್ 26ರಿಂದ ಪ್ರಾರಂಭವಾಗಲಿರುವ ಟೀಂ ಇಂಡಿಯಾದ ಮುಂಬರುವ ದಕ್ಷಿಣ ಆಫ್ರಿಕಾ ಪ್ರವಾಸ(South Africa Test Series)ಕ್ಕೂ ಮೊದಲು ಭಾರತೀಯ ಟೆಸ್ಟ್ ತಂಡ ನಾಯಕ ಕೊಹ್ಲಿ ಬುಧವಾರ(ಡಿ.15) ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದು, ಸದ್ಯ ಎದ್ದಿರುವ ಊಹಾಪೋಹಗಳಿಗೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಗೆ ತಾನು ಲಭ್ಯವಿರುತ್ತೇನೆ ಅಂತಾ ಕೊಹ್ಲಿ ಇದೇವೇಳೆ ಸ್ಪಷ್ಟಪಡಿಸಿದ್ದಾರೆ.

‘ರೋಹಿತ್(Rohit Sharma) ಮತ್ತು ನನ್ನ ನಡುವೆ ಯಾವುದೇ ಸಮಸ್ಯೆ ಇಲ್ಲ. ಕಳೆದ ಎರಡೂವರೆ ವರ್ಷಗಳಿಂದ ನಾನು ಈ ಬಗ್ಗೆ ಸ್ಪಷ್ಟನೆ ನೀಡುತ್ತಿದ್ದೇನೆ. ಇದರ ಬಗ್ಗೆ ಮತ್ತೆ ಮತ್ತೆ ನನ್ನನ್ನು ಪ್ರಶ್ನಿಸುತ್ತಿರುವುದು ಬೇಸರವಾಗಿದೆ. ನಾನು ಕ್ರಿಕೆಟ್ ಆಡುವವರೆಗೂ ನನ್ನ ಕೆಲಸ ಮತ್ತು ಮಾತುಗಳಿಂದ ತಂಡವನ್ನು ತಲೆಬಾಗಿಸಲು ಬಿಡುವುದಿಲ್ಲ. ನಾವಿಬ್ಬರೂ ಚೆನ್ನಾಗಿಯೇ ಇದ್ದೇವೆ. ನಮ್ಮಿಬ್ಬರ ನಡುವೇ ಯಾವುದೇ ರೀತಿಯ ಬಿನ್ನಾಭಿಪ್ರಾಯಗಳಿಲ್ಲವೆಂಬುದನ್ನು ಮತ್ತೊಮ್ಮೆ ಸ್ಪಷ್ಟಪಡಿಸುತ್ತಿದ್ದೇನೆ’ ಅಂತಾ ಕೊಹ್ಲಿ ಹೇಳಿದ್ದಾರೆ. 

ಇದನ್ನೂ ಓದಿ: Ind vs SA: ರೋಹಿತ್ ಶರ್ಮಾ ನಂತರ ಈ ಆಟಗಾರ ಟೀಮ್ ಇಂಡಿಯಾದ ಉಪನಾಯಕನಾಗುವ ಸಾಧ್ಯತೆ!

ರೋಹಿತ್ ಈ ತಿಂಗಳ ಆರಂಭದಲ್ಲಿ ಪೂರ್ಣ ಸಮಯದ ಸೀಮಿತ ಓವರ್‌ಗಳ ನಾಯಕ(ODI Skipper)ನಾಗಿ ಘೋಷಿಸಲ್ಪಟ್ಟ ನಂತರ ಬಿಸಿಸಿಐ ಕೊಹ್ಲಿ ತಂಡಕ್ಕೆ ನೀಡಿರುವ ಕೊಡುಗೆ ಮತ್ತು ಅವರ ಪಾತ್ರದ ಬಗ್ಗೆ ಮಾತನಾಡಿ ಮೆಚ್ಚುಗೆ ವ್ಯಕ್ತಪಡಿಸಿತ್ತು. ಆದರೆ ಜ.19ರಿಂದ ದಕ್ಷಿಣ ಆಫ್ರಿಕಾದಲ್ಲಿ ಪ್ರಾರಂಭವಾಗಲಿರುವ ODI ಸರಣಿಗೆ ಕೊಹ್ಲಿ ಲಭ್ಯವಿರುವುದಿಲ್ಲವೆಂದು ವರದಿಗಳು ಹೇಳಿದಾಗ ಭಿನ್ನಾಭಿಪ್ರಾಯದ ವದಂತಿಗಳು ಮತ್ತೆ ಕಾಣಿಸಿಕೊಂಡಿದ್ದವು.  

‘ಏಕದಿನ ಸರಣಿ ಆಡಲು ತಾನು ಸಿದ್ಧನಿದ್ದೇನೆ, ನಾನು ಬಿಸಿಸಿಐ(BCCI)ನಿಂದ ವಿಶ್ರಾಂತಿ ನೀಡಲು ಮನವಿ ಮಾಡಿಲ್ಲ. ನನಗೆ ಯಾವುದೇ ವಿಶ್ರಾಂತಿಯ ಅಗತ್ಯವಿಲ್ಲವೆಂದು ಕೊಹ್ಲಿ’ ಹೇಳಿದ್ದಾರೆ. ಏಕದಿನ ಸರಣಿಗೆ ಹೊಸ ನಾಯಕನನ್ನು ಘೋಷಿಸುವ ಮುನ್ನ ಮುಖ್ಯ ಆಯ್ಕೆಗಾರರು ನನಗೆ ಮಾಹಿತಿ ನೀಡಿದ್ದರು. ಏಕದಿನ ತಂಡದ ನಾಯಕ ಸ್ಥಾನ ನೀಡುತ್ತಿಲ್ಲ ಎಂದಿದ್ದರು. ನಾನು ಏಕದಿನ ಸರಣಿ ಆಯ್ಕೆಗೆ ಲಭ್ಯವಿದ್ದೇನೆ. ನಾನು ಯಾವಾಗಲೂ ಭಾರತದ ಪರ(Indian cricket) ಆಡಲು ಉತ್ಸುಕನಾಗಿದ್ದೇನೆ ಎಂದು ಸ್ಪಷ್ಪಪಡಿಸಿದ್ದಾರೆ.

ಇದನ್ನೂ ಓದಿ: ಏಕದಿನ ಸರಣಿಯಿಂದ ಹೊರಗುಳಿಯಲಿದ್ದಾರೆ Virat Kohli, ಮೂರನೇ ಕ್ರಮಾಂಕದಲ್ಲಿ ಆಡಲಿರುವ ಆಟಗಾರ ಇವರು

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News