ಏಕದಿನ ಸರಣಿಯಿಂದ ಹೊರಗುಳಿಯಲಿದ್ದಾರೆ Virat Kohli, ಮೂರನೇ ಕ್ರಮಾಂಕದಲ್ಲಿ ಆಡಲಿರುವ ಆಟಗಾರ ಇವರು

ವಿರಾಟ್ ಕೊಹ್ಲಿ ತಮ್ಮ ಮಗಳ ಹುಟ್ಟುಹಬ್ಬವನ್ನು ಆಚರಿಸುವ ಸಲುವಾಗಿ ಏಕದಿನ ಸರಣಿಯಿಂದ ವಿರಾಮ ತೆಗೆದುಕೊಳ್ಳುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

Written by - Ranjitha R K | Last Updated : Dec 15, 2021, 08:47 AM IST
  • ರಿತುರಾಜ್‌ಗೆ ಸಿಗಬಹುದು ಅವಕಾಶ
  • ರೋಹಿತ್ ಹೊಸ ODI ತಂಡದ ನಾಯಕ
  • ಏಕದಿನ ಸರಣಿಯಿಂದ ಹೊರಗುಳಿಯಬಹುದು ಕೊಹ್ಲಿ
ಏಕದಿನ ಸರಣಿಯಿಂದ ಹೊರಗುಳಿಯಲಿದ್ದಾರೆ Virat Kohli, ಮೂರನೇ ಕ್ರಮಾಂಕದಲ್ಲಿ ಆಡಲಿರುವ ಆಟಗಾರ ಇವರು title=
ಏಕದಿನ ಸರಣಿಯಿಂದ ಹೊರಗುಳಿಯಬಹುದು ಕೊಹ್ಲಿ (file photo)

ನವದೆಹಲಿ : ಭಾರತ ಕ್ರಿಕೆಟ್ ತಂಡ ಸದ್ಯಕ್ಕೆ ಬಿಕ್ಕಟ್ಟಿಗೆ ಸಿಲುಕಿರುವಂತಿದೆ. ಸ್ಫೋಟಕ ಆರಂಭಿಕ ಆಟಗಾರ ರೋಹಿತ್ ಶರ್ಮಾ (Rohit Sharma) ಗಾಯಗೊಂಡಿರುವ ಕಾರಣ ಟೆಸ್ಟ್ ಸರಣಿಯನ್ನು ಆಡುವುದು ಸಾಧ್ಯವಾಗುತ್ತಿಲ್ಲ. ವಿರಾಟ್ ಕೊಹ್ಲಿ (Virat Kohli) ತಮ್ಮ ಮಗಳ ಹುಟ್ಟುಹಬ್ಬವನ್ನು ಆಚರಿಸುವ ಸಲುವಾಗಿ ಏಕದಿನ ಸರಣಿಯಿಂದ ವಿರಾಮ ತೆಗೆದುಕೊಳ್ಳುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಒಂದು ವೇಳೆ ಕೊಹ್ಲಿ ಆಡದೇ ಇದ್ದಲ್ಲಿ, ಅವರ ಸ್ಥಾನಕ್ಕೆ ಯಾವ ಬ್ಯಾಟ್ಸ್‌ಮನ್ ಬರುತ್ತಾರೆ ಎಂಬುದು ಸದ್ಯದ ಮಟ್ಟಿನ ಪ್ರಶ್ನೆಯಾಗಿದೆ. 

 ಕೊಹ್ಲಿಯ ಸ್ಥಾನ ತುಂಬಬಲ್ಲರು ಈ ಆಟಗಾರ :  
ಒಂದು ವೇಳೆ ಭಾರತ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ (Virat Kohli) , ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಏಕದಿನ ಸರಣಿಯನ್ನು ಆಡಲು ಸಾಧ್ಯವಾಗದಿದ್ದರೆ, ಆ ಜಾಗದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (CSK) ಪರ ಆಡುತ್ತಿರುವ ಸ್ಪೋಟಕ ಬ್ಯಾಟ್ಸ್‌ಮನ್ ರಿತುರಾಜ್ ಗಾಯಕ್ವಾಡ್ ಆಡಬಹುದು. ರಿತುರಾಜ್ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. ಅವರು ನಿರಂತರವಾಗಿ ಹೊಸ ದಾಖಲೆಗಳನ್ನು ಮಾಡುತ್ತಿದ್ದಾರೆ.  ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ರಿತುರಾಜ್ (Ruturaj Gaikwad), ನಾಯಕ ರೋಹಿತ್ ಶರ್ಮಾ ಮತ್ತು ಭಾರತ ತಂಡಕ್ಕೆ ಹೆಚ್ಚು ಆಸರೆಯಾಗಬಹುದು. 

ಇದನ್ನೂ ಓದಿ : Rohit Sharma: ಏಕದಿನ ಸರಣಿಯಿಂದಲೂ ಹೊರಗುಳಿಯಲಿದ್ದಾರೆಯೇ ಹಿಟ್ ಮ್ಯಾನ್? ಈ ಆಟಗಾರನಿಗೆ ಟೀಂ ಇಂಡಿಯಾದ ನಾಯಕತ್ವ!

ಅತ್ಯುತ್ತಮ ಫಾರ್ಮ್‌ನಲ್ಲಿರುವ  ರಿತುರಾಜ್ :


ರಿತುರಾಜ್ ಗಾಯಕ್ವಾಡ್ ತಮ್ಮ ವೃತ್ತಿಜೀವನದ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. ದೇಶೀಯ ಕ್ರಿಕೆಟ್‌ನಲ್ಲಿ ಬೌಲರ್‌ಗಳ ಬೆವರಿಳಿಸಿದ್ದಾರೆ. ಸತತ ನಾಲ್ಕು ಶತಕಗಳನ್ನು ಗಳಿಸುವ ಮೂಲಕ ಈ ಬ್ಯಾಟ್ಸ್‌ಮನ್ ತನ್ನ ಮಾರಕ ಫಾರ್ಮ್‌ನಿಂದ ಎಲ್ಲರಿಗೂ ಪರಿಚಿತ. ಚಂಡೀಗಢ ವಿರುದ್ಧ ಗಾಯಕ್ವಾಡ್ 168 ರನ್ ಗಳಿಸಿದ್ದರು. ಇದಕ್ಕೂ ಮುನ್ನ 136 ರನ್, 154 ರನ್ ಮತ್ತು 124 ರನ್ ಗಳಿಸುವ ಮೂಲಕ ಹ್ಯಾಟ್ರಿಕ್ ಶತಕಗಳನ್ನು ಬಾರಿಸಿದ್ದರು.  ವಿಜಯ್ ಹಜಾರೆ ಟ್ರೋಫಿ (Vijay Hazare Trophy) ಪಂದ್ಯಾವಳಿಯ ಒಂದು ಸೀಸನ್ ನಲ್ಲಿ  ನಾಲ್ಕು ಶತಕಗಳನ್ನು ಗಳಿಸಿದ ವಿರಾಟ್ ಕೊಹ್ಲಿ, ಪೃಥ್ವಿ ಶಾ ಮತ್ತು ದೇವದತ್ ಪಡಿಕ್ಕಲ್ ಅವರುಗಳಿಗೆ ಸಮಾನಾಗಿ ಪ್ರದರ್ಶನ ನೀಡಿದ್ದಾರೆ. ಅವರ ಈ ಅಮೋಘ ಪ್ರದರ್ಶನ ನೋಡಿದರೆ ಅವರಿಗೆ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಅವಕಾಶ ಸಿಗಬಹುದು. 

ಐಪಿಎಲ್‌ನಲ್ಲೂ ಅದ್ಭುತ ಪ್ರದರ್ಶನ :  
ರಿತುರಾಜ್ ಗಾಯಕ್ವಾಡ್ ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ ಪರ ಆಡುತ್ತಾರೆ.  ಐಪಿಎಲ್ 2021 ರ 16 ಪಂದ್ಯಗಳಲ್ಲಿ ರಿತುರಾಜ್ 636 ರನ್ ಗಳಿಸಿ ಆರೆಂಜ್ ಕ್ಯಾಪ್ ಗೆದ್ದಿದ್ದಾರೆ. ಪಂದ್ಯದ ದಿಕ್ಕು ಬ್ದಲಾಯಿಸುವ ಸಾಮರ್ಥ್ಯ ಹೊಂದಿದ್ದಾರೆ.  ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಮೂರನೇ ಕ್ರಮಾಂಕದಲ್ಲಿ ಆಡಬಲ್ಲ ಆಟಗಾರರಲ್ಲಿ ರಿತುರಾಜ್ ಕೂಡಾ ಒಬ್ಬರು.  
 
ಇದನ್ನೂ ಓದಿ : 
Ravindra Jadeja: ಶೀಘ್ರವೇ ಈ ಮಾದರಿಯ ಕ್ರಿಕೆಟ್ ನಿಂದ ರವೀಂದ್ರ ಜಡೇಜಾ ನಿವೃತ್ತಿ..?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News