ಆಟಕ್ಕಿಂತ ದೊಡ್ಡದು ಯಾವುದೂ ಇಲ್ಲ, ರೋಹಿತ್ ಶರ್ಮಾ ಮನಸ್ಥಾಪದ ಬಗ್ಗೆ ಕೊಹ್ಲಿಗೆ ಸಿಕ್ಕ ಎಚ್ಚರಿಕೆ

ವಿರಾಟ್ ಕೊಹ್ಲಿಯನ್ನು ಹೆಸರಿಸದೆ ಅನುರಾಗ್ ಠಾಕೂರ್, ಯಾವ ಆಟಗಾರನೂ ಆಟಕ್ಕಿಂತ ದೊಡ್ಡವನಲ್ಲ ಎಂದು ಹೇಳಿದ್ದಾರೆ. '  

Written by - Ranjitha R K | Last Updated : Dec 15, 2021, 01:15 PM IST
  • ಕೊಹ್ಲಿಗೆ ನೀಡಲಾಗಿದೆ ಎಚ್ಚರಿಕೆ
  • ಬಿಸಿಸಿಐ ನೀಡಿದೆ ಹೇಳಿಕೆ
  • ರೋಹಿತ್ ಶರ್ಮಾ ODI ಹೊಸ ನಾಯಕ
ಆಟಕ್ಕಿಂತ ದೊಡ್ಡದು ಯಾವುದೂ ಇಲ್ಲ,  ರೋಹಿತ್ ಶರ್ಮಾ ಮನಸ್ಥಾಪದ ಬಗ್ಗೆ ಕೊಹ್ಲಿಗೆ ಸಿಕ್ಕ ಎಚ್ಚರಿಕೆ   title=
ಕೊಹ್ಲಿಗೆ ನೀಡಲಾಗಿದೆ ಎಚ್ಚರಿಕೆ (file photo)

ನವದೆಹಲಿ : ಏಕದಿನ ನಾಯಕತ್ವದಿಂದ ವಿರಾಟ್ ಕೊಹ್ಲಿಯನ್ನು (Virat Kohli) ವಜಾಗೊಳಿಸಿದ ನಂತರ ವಾತಾವರಣ ಬದಲಾಗುತ್ತಿದೆ.  ಇತ್ತೀಚೆಗಷ್ಟೇ ಬಿಸಿಸಿಐ (BCCI) ಏಕದಿನ ನಾಯಕನ ಸ್ಥಾನದಿಂದ ವಿರಾಟ್ ಕೊಹ್ಲಿಯನ್ನು ಕೆಳಗಿಳಿಸಿ ರೋಹಿತ್ ಶರ್ಮಾ ಅವರನ್ನು ನಾಯಕನನ್ನಾಗಿ ಮಾಡಲಾಗಿದೆ. ಬಳಿಕ ಟೀಂ ಇಂಡಿಯಾದಲ್ಲಿ (Team India) ವಿವಾದದ ಸುದ್ದಿಗಳು ಕೇಳಿ ಬರುತ್ತಲೇ ಇದೆ. ಇದೇ ವೇಳೆ ಬುಧವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಕ್ರೀಡಾ ಸಚಿವ ಅನುರಾಗ್ ಠಾಕೂರ್ (Anurag Takur), ವಿರಾಟ್ ಕೊಹ್ಲಿಗೆ ಎಚ್ಚರಿಕೆ ನೀಡಿದ್ದಾರೆ.

ವಿರಾಟ್ ಕೊಹ್ಲಿಗೆ ಎಚ್ಚರಿಕೆ :
ವಿರಾಟ್ ಕೊಹ್ಲಿಯ (Virat Kohli) ಹೆಸರೂ ತೆಗೆಯದೆ ಅನುರಾಗ್ ಠಾಕೂರ್, ಯಾವ ಆಟಗಾರನೂ ಆಟಕ್ಕಿಂತ ದೊಡ್ಡವನಲ್ಲ ಎಂದು ಹೇಳಿದ್ದಾರೆ. 'ಕ್ರೀಡೆಗಿಂತ ಯಾರೂ ದೊಡ್ಡವರಲ್ಲ. ಆಟಗಾರನ ಮಧ್ಯದಲ್ಲಿ ಏನು ನಡೆಯುತ್ತಿದೆ ಎಂಬುದರ ಕುರಿತು ನಾನು ಯಾವುದೇ ಮಾಹಿತಿಯನ್ನು ನೀಡಲು ಸಾಧ್ಯವಿಲ್ಲ. ಇದು ಅವರಿಗೆ ಸಂಬಂಧಿಸಿದ ಸಂಘ ಅಥವಾ ಸಂಸ್ಥೆಯ ಜವಾಬ್ದಾರಿಯಾಗಿದೆ ಎಂದು ಹೇಳಿದ್ದಾರೆ. 

 

ಇದನ್ನೂ ಓದಿ : ಏಕದಿನ ಸರಣಿಯಿಂದ ಹೊರಗುಳಿಯಲಿದ್ದಾರೆ Virat Kohli, ಮೂರನೇ ಕ್ರಮಾಂಕದಲ್ಲಿ ಆಡಲಿರುವ ಆಟಗಾರ ಇವರು

ಬಿಸಿಸಿಐ ಹೇಳಿಕೆ :
ಟಿ20 ಮತ್ತು ಏಕದಿನಕ್ಕೆ ಬೇರೆ ಬೇರೆ ನಾಯಕರನ್ನು ಹೊಂದುವುದು  ಸರಿಯಲ್ಲ ಎನ್ನುವುದು ಬಿಸಿಸಿಐ (BCCI) ನಿರ್ಧಾರ. ಈ ಹಿನ್ನೆಲೆಯಲ್ಲಿ ವಿರಾಟ್ ಕೊಹ್ಲಿಯನ್ನು ಏಕದಿನ ನಾಯಕತ್ವದಿಂದ ಕೈಬಿಡಲಾಗಿದೆ. ' ಏಕದಿನ ನಾಯಕತ್ವದಿಂದ ಕೈಬಿಟ್ಟಿರುವ ವಿಷಯವನ್ನು ವಿರಾಟ್ ಕೊಹ್ಲಿ ಲಘುವಾಗಿ ತೆಗೆದುಕೊಂಡಿಲ್ಲ ಎಂದು ಸಂದರ್ಶನವೊಂದರಲ್ಲಿ ಬಿಸಿಸಿಐ ಅಧಿಕಾರಿಯೊಬ್ಬರು ಹೇಳಿದ್ದಾರೆ. ಕುಟುಂಬದೊಂದಿಗೆ ಸಮಯ ಕಳೆಯುವ ಸಲುವಾಗಿ, ಏಕದಿನ ಸರಣಿಯಿಂದ ಹಿಂದೆ ಸರಿಯಲು ಕೊಹ್ಲಿ ನಿರ್ಧರಿಸಿದ್ದಾರೆ. ಇಲ್ಲಿ ಯಾರೂ ದಡ್ಡರಲ್ಲ. ಈಗ ನಡೆಯುತ್ತಿರುವುದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ರೋಹಿತ್ ಶರ್ಮಾ (Rohit Sharma) ಅವರನ್ನು ಏಕದಿನ ನಾಯಕ ಎಂದು ಘೋಷಿಸಿದ ದಿನದಿಂದಲೂ, ಈ ಬಗ್ಗೆ ಸಾಕಷ್ಟು ವಿವಾದಗಳಿವೆ.

ರೋಹಿತ್ ಅವರನ್ನು ಏಕದಿನ ನಾಯಕನನ್ನಾಗಿ ಘೋಷಣೆ ಮಾಡಿದ ನಂತರ, ವಿರಾಟ್ ಕೊಹ್ಲಿ ಈ ಬಗ್ಗೆ ಮೊದಲೇ ಮಾತುಕತೆ ನಡೆಸಲಾಗಿತ್ತು ಎಂದು, ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ (Sourav Ganguly) ಸ್ಪಷ್ಟಪಡಿಸಿದ್ದರು ಎಂದು ಬಿಸಿಸಿಐ ಅಧಿಕಾರಿ ತಿಳಿಸಿದ್ದಾರೆ. ವೈಟ್ ಬಾಲ್ ಕ್ರಿಕೆಟ್‌ನಲ್ಲಿ ಇಬ್ಬರು ನಾಯಕರು ಇರಬಾರದು, ಆದ್ದರಿಂದ ರೋಹಿತ್‌ಗೆ ಏಕದಿನ ತಂಡದ ನಾಯಕತ್ವವನ್ನೂ ನೀಡಲಾಯಿತು ವಂದು ಅವ್ರು ಹೇಳಿದ್ದಾರೆ. 'ದಕ್ಷಿಣ ಆಫ್ರಿಕಾ ಪ್ರವಾಸದ ನಂತರ ನಾವು ಇಬ್ಬರೂ ನಾಯಕರೊಂದಿಗೆ ಕುಳಿತು ಮಾತುಕತೆ ನಡೆಸಿ, ಮುಂದಿನ ಹಾದಿಯನ್ನು ರೂಪಿಸುತ್ತೇವೆ. ಏಕದಿನ ತಂಡಡ ನಾಯಕತ್ವದಿಂದ ವಿರಾಟ್ ಅವರನ್ನು ತೆಕೈ ಬಿಟ್ಟಿರುವುದು ತಂಡದ ಒಳಿತಿಗಾಗಿ ತೆಗೆದುಕೊಂಡ ನಿರ್ಧಾರವಾಗಿದೆ ಎಂದವರು ಹೇಳಿದ್ದಾರೆ. ಈ ಬಗ್ಗೆ ವಿರಾಟ್ ಸ್ವಾರ್ಥದಿಂದ ಪ್ರತಿಕ್ರಿಯಿಸಬಾರದು ಎದ್ನು ಹೇಳಿದ್ದಾರೆ. 

ಇದನ್ನೂ ಓದಿ : Rohit Sharma: ಏಕದಿನ ಸರಣಿಯಿಂದಲೂ ಹೊರಗುಳಿಯಲಿದ್ದಾರೆಯೇ ಹಿಟ್ ಮ್ಯಾನ್? ಈ ಆಟಗಾರನಿಗೆ ಟೀಂ ಇಂಡಿಯಾದ ನಾಯಕತ್ವ!

ಪ್ರಶ್ನೆ ಎತ್ತಿದ ಅಜರುದ್ದೀನ್ : 
ಭಾರತ ತಂಡದ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಟ್ವೀಟ್ ಮಾಡಿ, 'ವಿರಾಟ್ ಕೊಹ್ಲಿ ಏಕದಿನ ಸರಣಿಗೆ ಲಭ್ಯವಿಲ್ಲ ಎಂದು ತಿಳಿಸಿದ್ದಾರೆ. ರೋಹಿತ್ ಶರ್ಮಾ ಮುಂಬರುವ ಟೆಸ್ಟ್ ಸರಣಿಯಿಂದ ಹೊರಗುಳಿದಿದ್ದಾರೆ. ವಿಶ್ರಾಂತಿ ತೆಗೆದುಕೊಳ್ಳುವುದರಲ್ಲಿ ತಪ್ಪೇನಿಲ್ಲ. ಆದರೆ, ಸರಿಯಾದ ಸಮಯಕ್ಕೆ ರಜೆ ಹಾಕಬೇಕಿತ್ತು ಎಂದು ಹೇಳಿದ್ದಾರೆ. ಈ ನಿರ್ಧಾರದಿಂದ ಭಾರತ ತಂಡದಲ್ಲಿ ಬಿರುಕು ಮೂಡಲಿದೆ ಎಂಬ ಊಹಾಪೋಹವನ್ನು ಇನ್ನಷ್ಟು ತೀವ್ರಗೊಳಿಸಲಿದೆ ಎದ್ನು ಹೇಳಿದ್ದಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News