ಪ್ರಧಾನಿ ಮೋದಿಯವರ ಫೋನ್ ಸಂಖ್ಯೆ ಮತ್ತು ಇಮೇಲ್ ಐಡಿ ನಿಮಗೆ ತಿಳಿದಿದೆಯೇ? ಇಲ್ಲಿದೆ ನೋಡಿ

ಪ್ರಧಾನಿ ನರೇಂದ್ರ ಮೋದಿ ಅವರು ಸಾಮಾಜಿಕ ಮಾಧ್ಯಮದಲ್ಲಿ ವಿಶ್ವದ ಅತ್ಯಂತ ಸಕ್ರಿಯ ಮತ್ತು ಪ್ರತಿಕ್ರಿಯಾತ್ಮಕ ನಾಯಕರಲ್ಲಿ ಒಬ್ಬರು.

Written by - Puttaraj K Alur | Last Updated : Dec 22, 2021, 10:18 PM IST
  • ಸೋಷಿಯಲ್ ಮೀಡಿಯಾ ಮೂಲಕ ದೇಶದ ಜನರಿಗೆ ಹತ್ತಿರವಾಗಿರುವ ಪ್ರಧಾನಿ ಮೋದಿ
  • ನೀವೂ ಕೂಡ ಪ್ರಧಾನಿ ಮೋದಿಯವರಿಗೆ ಪತ್ರ ಬರೆಯಬಹುದು, ನೇರವಾಗಿ ಇಮೇಲ್ ಮಾಡಬಹುದು
  • ನಿಮ್ಮ ಯಾವುದೇ ರೀತಿಯ ಪ್ರಶ್ನೆಗಳಿಗೆ ಪ್ರಧಾನಿ ಮೋದಿ ಮತ್ತವರ ಟೀಂ ಉತ್ತರ ನೀಡುತ್ತದೆ
ಪ್ರಧಾನಿ ಮೋದಿಯವರ ಫೋನ್ ಸಂಖ್ಯೆ ಮತ್ತು ಇಮೇಲ್ ಐಡಿ ನಿಮಗೆ ತಿಳಿದಿದೆಯೇ? ಇಲ್ಲಿದೆ ನೋಡಿ title=
ನೀವೂ ಪ್ರಧಾನಿ ಮೋದಿಗೆ ಇಮೇಲ್ ಮಾಡಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ(Narendra Modi) ಅವರು ಭಾರತಕ್ಕೆ ಮಾತ್ರವಲ್ಲ, ವಿಶ್ವಕ್ಕೆ ಸೆಲೆಬ್ರಿಟಿ. ಆದರೆ ಅವರು ತಮ್ಮನ್ನು ‘ಸಾರ್ವಜನಿಕ ಸೇವಕ’ ಎಂದು ಹೇಳಿಕೊಂಡಿದ್ದಾರೆ. ಬನಾರಸ್‌ನಲ್ಲಿ ನೈರ್ಮಲ್ಯ ಕಾರ್ಯಕರ್ತರೊಂದಿಗೆ ಊಟ ಮಾಡುವುದಾಗಲಿ ಅಥವಾ ಪ್ರಧಾನಿ ಕುರ್ಚಿ ತೆಗೆದು ನೆಲದ ಮೇಲೆ ಕೂರುವುದಾಗಲಿ. ಪ್ರಧಾನಿ ಮೋದಿಯವರು ಅನೇಕ ಸಂದರ್ಭಗಳಲ್ಲಿ ತಮ್ಮ ಸರಳತೆಯನ್ನು ತೋರಿಸಿದ್ದಾರೆ. 

ಸಾರ್ವಜನಿಕರು ನೇರವಾಗಿ ಪ್ರಧಾನಿಯನ್ನು ತಲುಪಬಹುದು

ಪ್ರಧಾನಿ ನರೇಂದ್ರ ಮೋದಿ(PM Modi) ದೇಶದ ಜನರೊಂದಿಗೆ ಆಗಾಗ ಸಂವಹನ ನಡೆಸಲು ಬಯಸುತ್ತಾರೆ. ಜನರಿಗೆ ಕೂಡ ತಮ್ಮ ಮನಸ್ಸಿನಲ್ಲಿರುವ ವಿಷಯಗಳನ್ನು ನೇರವಾಗಿ ಪ್ರಧಾನಿಗೆ ತಿಳಿಸಬಹುದೇ ಅನ್ನೋ ಆಸಕ್ತಿ ಮತ್ತು ಅನುಮಾನವಿರುತ್ತದೆ. ಇದಕ್ಕೆ ಉತ್ತರ ಹೌದು. ಅನೇಕ ಬಾರಿ ಜನಸಾಮಾನ್ಯರು ಪ್ರಧಾನಿಯೊಂದಿಗೆ ನೇರವಾಗಿ ಮಾತನಾಡಿದ್ದಾರೆ. ಹೀಗೆ ಪ್ರಧಾನಿ ಜೊತೆಗೆ ಮಾತನಾಡುವ ಜನರು ಚುನಾಯಿತ ಸರ್ಕಾರದ ಕೆಲಸವನ್ನು ಶ್ಲಾಘಿಸಬಹುದು, ಯಾವುದೇ ನಿರ್ಧಾರವನ್ನು ಟೀಕಿಸಬಹುದು, ದೂರಬಹುದು ಅಥವಾ ತಮ್ಮ ಅಭಿಪ್ರಾಯವನ್ನು ಯಾವುದೇ ಹಿಂಜರಿಕೆಯಿಲ್ಲದೆ ವ್ಯಕ್ತಪಡಿಸಬಹುದು. ಸಾಮಾನ್ಯವಾಗಿ ಒಬ್ಬ ಪ್ರಧಾನ ಮಂತ್ರಿ ನೇರ ಸಾರ್ವಜನಿಕ ಸಂಪರ್ಕದಿಂದ ದೂರವಿರುತ್ತಾರೆ. ಆದರೆ ಪಿಎಂ ಮೋದಿ(PM Modi) ಇದಕ್ಕೆ ಅಪವಾದವೆಂಬಂತೆ ಹೆಚ್ಚು ಹೆಚ್ಚು ಜನರನ್ನು ತಲುಪಲು ಪ್ರಯತ್ನಿಸುತ್ತಾರೆ. ತಮ್ಮ ಸರ್ಕಾರದ ಆಡಳಿತ ವೈಖರಿಯ ಬಗ್ಗೆ ದೇಶದ ಜನರಲ್ಲಿ ಯಾವ ರೀತಿಯ ಅಭಿಪ್ರಾಯವಿದೆ ಎಂಬುದನ್ನು ತಿಳಿಯುವುದು ಮೋದಿಯವರ ಅಭಿಲಾಷೆಯಾಗಿದೆ.   

ಇದನ್ನೂ ಓದಿ: ಚೀನಾ ಮಿಸೈಲ್​​ಗಳ ಪಾಲಿನ ಶತ್ರು: ಹೊಸ ತಲೆಮಾರಿನ 'ಪ್ರಳಯ್' ಕ್ಷಿಪಣಿ ಮೊದಲ ಪರೀಕ್ಷೆ ಯಶಸ್ವಿ

ಸೋಷಿಯಲ್ ಮೀಡಿಯಾ ಮೂಲಕ ಜನರ ಬಳಿಗೆ

ಇಂದಿನ ಕಾಲದಲ್ಲಿ ಸಾಮಾಜಿಕ ಮಾಧ್ಯಮ(Social Media)ವನ್ನು ಸಂವಹನದ ಅತ್ಯಂತ ಪರಿಣಾಮಕಾರಿ ಮಾಧ್ಯಮವೆಂದು ಪರಿಗಣಿಸಲಾಗಿದೆ. ಪಿಎಂ ಮೋದಿ ಅವರು ಸಾಮಾಜಿಕ ಮಾಧ್ಯಮದಲ್ಲಿ ವಿಶ್ವದ ಅತ್ಯಂತ ಸಕ್ರಿಯ ಮತ್ತು ಪ್ರತಿಕ್ರಿಯಾತ್ಮಕ ನಾಯಕರಲ್ಲಿ ಒಬ್ಬರು. ಕೋಟ್ಯಂತರ ಅಭಿಮಾನಿಗಳು ಸಾಮಾಜಿಕ ಮಾಧ್ಯಮದಲ್ಲಿ ಅವರೊಂದಿಗೆ ಸಂಪರ್ಕ ಹೊಂದಿದ್ದು, ಅವರ ವಿಷಯವನ್ನು ನೇರವಾಗಿ ತಿಳಿಸುತ್ತಾರೆ. ಸಾಮಾನ್ಯ ಜನರ ಪ್ರಶ್ನೆಗೆ ಪಿಎಂ ಮೋದಿಯವರು ಹಲವಾರು ಬಾರಿ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಿಂದ ಪ್ರತ್ಯುತ್ತರ ನೀಡಿದ ನಿದರ್ಶನಗಳಿವೆ.   

ಪ್ರಧಾನಿ ಮೋದಿಯವರ ಸಾಮಾಜಿಕ ಖಾತೆಗಳು

Facebook: https://www.facebook.com/narendramodi

Twitter: https://twitter.com/narendramodi

ಅವರನ್ನು ತಲುಪಲು ನಿಮ್ಮ ಟ್ವೀಟ್‌ಗಳಲ್ಲಿ ಈ ಎರಡು ಖಾತೆಗಳನ್ನು ನೀವು ಟ್ಯಾಗ್ ಮಾಡಬಹುದು: @PMOIndia ಅಥವಾ @Narendramodi.

YouTube: https://www.youtube.com/user/narendramodi

ಅಂದಹಾಗೆ ವಿವಿಧ ಪ್ಲಾಟ್‌ಫಾರ್ಮ್‌ಗಳಿಂದ ಬರುವ ಪ್ರತಿಯೊಂದು ಸಂದೇಶವನ್ನು ಪ್ರಧಾನಿ ಓದಲು ಮತ್ತು ಪ್ರತಿಕ್ರಿಯಿಸಲು ಸಾಧ್ಯವಿಲ್ಲ. ಆದರೆ ಪ್ರಧಾನಿ ಮೋದಿ ಈ ಕೆಲಸಕ್ಕಾಗಿ ಮೀಸಲಾದ ತಂಡವನ್ನು ಹೊಂದಿದ್ದಾರೆ ಮತ್ತು ಪ್ರಧಾನಿ ಸ್ವತಃ ಅವರಿಂದ ನಿಯಮಿತವಾಗಿ ಅಪ್ಡೇಟ್ ಗಳನ್ನು ತೆಗೆದುಕೊಳ್ಳುತ್ತಾರೆ.

ಇದನ್ನೂ ಓದಿ: ಸಂದರ್ಶನದ ಮೊದಲು ಡೆಂಗ್ಯೂ ಬಂದರೂ ಛಲ ಬಿಡಲಿಲ್ಲ: ರೈತನ ಮಗನಿಗೆ 1 ಕೋಟಿ ವೇತನದ ಉದ್ಯೋಗ!

ಪ್ರಧಾನಿ ಮೋದಿಗೆ ಇಮೇಲ್ ಮಾಡಿ

ನೀವು ನೇರವಾಗಿ ಪ್ರಧಾನ ಮಂತ್ರಿಗಳ ಕಚೇರಿಗೆ ನಿಮ್ಮ ವಿಷಯ ತಿಳಿಸಲು ಬಯಸಿದರೆ Connect@mygov.nic.in ನಲ್ಲಿ ಮೇಲ್ ಮಾಡಬಹುದು. ಸಾರ್ವಜನಿಕರೊಂದಿಗೆ ಸಂವಹನ ನಡೆಸಲು ಈ ಇಮೇಲ್ ಖಾತೆಯನ್ನು ವಿಶೇಷವಾಗಿ ರಚಿಸಲಾಗಿದೆ. ಇಲ್ಲಿ ಸಾರ್ವಜನಿಕ ಕುಂದುಕೊರತೆಗಳು ಅಥವಾ ಆಡಳಿತಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ಸಂಬಂಧಪಟ್ಟಂತೆ PMOಗೆ ಪತ್ರ ಬರೆಯಬಹುದು. ಹಲವು ಬಾರಿ ಪ್ರಧಾನಿ ಮೋದಿ ಅವರೇ ವಿವಿಧ ವಿಷಯಗಳ ಕುರಿತು ಜನರಿಂದ ಸಲಹೆಗಳನ್ನು ಕೇಳುತ್ತಾರೆ. PMಗೆ ಮೇಲ್ ಬರೆಯಲು ನೀವು ಈ ಕೆಳಗಿನ ಯಾವುದೇ ಇಮೇಲ್ ಐಡಿಯಲ್ಲಿ ಸಂಪರ್ಕಿಸಬಹುದು: PMO ಇಮೇಲ್ ಐಡಿ: Connect@mygov.nic.in

ಪ್ರಧಾನ ಮಂತ್ರಿ ಕಚೇರಿ ವಿಳಾಸ

Web Information Manager, ಸೌತ್ ಬ್ಲಾಕ್, ರೈಸಿನಾ ಹಿಲ್, ನವದೆಹಲಿ-110011

ದೂರವಾಣಿ ಸಂಖ್ಯೆ - +91-11-23012312 (ವಿವೇಕ್ ಕುಮಾರ್, ಪಿಎಂ ಮೋದಿಯವರ ಖಾಸಗಿ ಕಾರ್ಯದರ್ಶಿ)

ಫ್ಯಾಕ್ಸ್ - +91-11-23019545, 23016857

ನೀವು http://pmindia.gov.in ಮೂಲಕ ಪ್ರಧಾನಿ ಮೋದಿಯವರಿಗೆ ಪತ್ರ ಬರೆದರೆ ಅಥವಾ ‘ಭಾರತದ ಗೌರವಾನ್ವಿತ ಪ್ರಧಾನಿ’ ಅವರಿಗೆ ಪತ್ರವನ್ನು ಬರೆದರೆ ಮತ್ತು ಅವರ ಅಧಿಕೃತ ನಿವಾಸ 7, ರೇಸ್ ಕೋರ್ಸ್ ರಸ್ತೆ, ನವದೆಹಲಿಯ ವಿಳಾಸವನ್ನು ನಮೂದಿಸಿದರೆ ಅದು ನೇರವಾಗಿ ತಲುಪುತ್ತದೆ. ಪ್ರಧಾನಮಂತ್ರಿಯವರು ಸಾರ್ವಜನಿಕರೊಂದಿಗೆ ಸಂವಹನ ನಡೆಸಲು ಇ-ಆಡಳಿತವನ್ನು ಉತ್ತಮ ರೀತಿಯಲ್ಲಿ ಬಳಸುತ್ತಿದ್ದಾರೆ.  

ಸಾರ್ವಜನಿಕ ಕುಂದುಕೊರತೆಗಳಿಗೆ ಪ್ರತ್ಯೇಕ ಪೋರ್ಟಲ್ ರಚನೆ

ಸಾರ್ವಜನಿಕ ಕುಂದುಕೊರತೆ ಪರಿಹಾರಕ್ಕಾಗಿ ಮೀಸಲಾದ ಪೋರ್ಟಲ್ ಇದೆ. ಇಲ್ಲಿ ನೀವು ನೇರವಾಗಿ ಪ್ರಧಾನ ಮಂತ್ರಿಗಳಿಗೆ ಬರೆಯಬಹುದು. ನಿಮ್ಮ ಕುಂದುಕೊರತೆಯ ಬಗ್ಗೆ ಅವರಿಗೆ ತಿಳಿಸಬಹುದು. ಅಗತ್ಯವಿದ್ದರೆ ದಾಖಲೆಗಳನ್ನು ಲಗತ್ತಿಸಬಹುದು. ಈ ಪೋರ್ಟಲ್‌ನಲ್ಲಿ ಸಲಹೆಗಳು, ಪ್ರತಿಕ್ರಿಯೆ, ದೂರುಗಳು, ಶುಭಾಶಯಗಳು, ಅಪಾಯಿಂಟ್‌ಮೆಂಟ್ ವಿನಂತಿಗಳು ಮತ್ತು ಸಂದೇಶ ವಿನಂತಿಗಳನ್ನು ಸಹ ತೆಗೆದುಕೊಳ್ಳುತ್ತಾರೆ. ನಿಮ್ಮ ವಿಷಯವನ್ನು ನೀವು ಇಲ್ಲಿ ಬರೆಯಬಹುದು: http://pgportal.gov.in/pmocitizen/Grievancepmo.aspx. ಈ ಪೋರ್ಟಲ್ ಸಂಭಾಷಣೆಗೆ ಸಾಕಷ್ಟು ಆಯ್ಕೆಗಳನ್ನು ನೀಡುತ್ತದೆ. ಮಾತುಕತೆಗಳು, ರೇಡಿಯೋ ಪ್ರಸಾರಗಳು, ವೇದಿಕೆ ಚರ್ಚೆಗಳು ಇತ್ಯಾದಿಗಳ ಸಮಯದಲ್ಲಿ ನೀವು ನೇರ ಸಂವಾದಗಳನ್ನು ಹೊಂದಬಹುದು. ವಿಶೇಷವೆಂದರೆ ಪಿಎಂಒ ತಂಡವೂ ಇಲ್ಲಿ ಸಕ್ರಿಯವಾಗಿ ಪ್ರತಿಕ್ರಿಯಿಸುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News