Aliens On Earth: ನೀವು ಚಲನಚಿತ್ರಗಳಲ್ಲಿ ಏಲಿಯನ್ ಗಳನ್ನು (Aliens) ನೋಡಿರಬಹುದು. ಆದರೆ, ಏಲಿಯನ್ ಗಳು ನಿಜವಾಗಲೂ ಅಸ್ತಿತ್ವದಲ್ಲಿವೆಯಾ? ಇದಕ್ಕೆ ಸಂಬಂಧಿಸಿದಂತೆ ವಿಜ್ಞಾನಿಗಳಲ್ಲೇ ಭಿನ್ನಾಭಿಪ್ರಾಯವಿದೆ. ಹಾಗೆ ನೋಡಿದರೆ, ಏಲಿಯನ್ ಗಳ ಕುರಿತು ಹಲವು ವಾದಗಳು ಮಂಡನೆಯಾಗಿವೆ.
Aliens On Earth: ನೀವು ಚಲನಚಿತ್ರಗಳಲ್ಲಿ ಏಲಿಯನ್ ಗಳನ್ನು (Aliens) ನೋಡಿರಬಹುದು. ಆದರೆ, ಏಲಿಯನ್ ಗಳು ನಿಜವಾಗಲೂ ಅಸ್ತಿತ್ವದಲ್ಲಿವೆಯಾ? ಇದಕ್ಕೆ ಸಂಬಂಧಿಸಿದಂತೆ ವಿಜ್ಞಾನಿಗಳಲ್ಲೇ ಭಿನ್ನಾಭಿಪ್ರಾಯವಿದೆ. ಹಾಗೆ ನೋಡಿದರೆ, ಏಲಿಯನ್ ಗಳ ಕುರಿತು ಹಲವು ವಾದಗಳು ಮಂಡನೆಯಾಗಿವೆ. ಬಯೋಸೈನ್ಸ್ (BioScience) ಜರ್ನಲ್ ನಲ್ಲಿ ಪ್ರಕಟಗೊಂಡ ಒಂದು ಹೊಸ ಅಧ್ಯಯನದ ಪ್ರಕಾರ, ಶೀಘ್ರದಲ್ಲಿಯೇ ಭೂಮಿಯ ಮೇಲೆ ಏಲಿಯನ್ ಗಳ ಎಂಟ್ರಿ ಆಗಲಿದೆ (UFO) ಮತ್ತು ಮಾನವರು ಇದಕ್ಕೆ ಸಿದ್ಧತೆಗಳನ್ನು ಮಾಡಿಕೊಳ್ಳಬೇಕಿದೆ ಎನ್ನಲಾಗಿದೆ.
ಇದನ್ನೂ ಓದಿ-Prototype Lickable TV:ಟಿವಿ ಪರದೆಯ ಮೇಲೆ ನೀವು ವಿಕ್ಷೀಸುವ ಆಹಾರದ ಟೇಸ್ಟ್ ಮಾಡಿಸುತ್ತಂತೆ ಈ TV
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
1. ಬಾಹ್ಯಾಕಾಶ ಉದ್ಯಮಕ್ಕೆ ಭಾರಿ ನಷ್ಟ - ಸಂಶೋಧಕರ ಪ್ರಕಾರ ಭವಿಷ್ಯದಲ್ಲಿ ಬಾಹ್ಯಾಕಾಶ ಉದ್ಯಮಕ್ಕೆ ಭಾರಿ ನಷ್ಟ ಉಂಟಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ನಷ್ಟ ಭೂಮಿಯ ಮೇಲೆ ಇರುವ ಜೀವಗಳಿಗೂ ಕೂಡ ಹಾನಿಕಾರಕ ಸಾಬೀತಾಗುವ ಸಾಧತೆ ಇದೆ. ಅಂತಾರಾಷ್ಟ್ರೀಯ ಜರ್ನಲ್ ಆಫ್ ಬಯೋಸೈನ್ಸ್ ನಲ್ಲಿ (BioScience Journal) ಈ ಅಧ್ಯಯನ ಪ್ರಕಟಗೊಂಡಿದೆ.
2. ಭೂಮಿಗೆ ಏಲಿಯನ್ ಗಳು ನುಸುಳುವ ಸಾಧ್ಯತೆ ಇದೆ - ವಿಶ್ವಾದ್ಯಂತ ಇರುವ ಬಾಹ್ಯಾಕಾಶ ಸಂಸ್ಥೆಗಳು ಏಲಿಯನ್ ಗಳ ಶೋಧ ಕಾರ್ಯಾಚರಣೆಯಲ್ಲಿ ತೊಡಗಿವೆ. ಹೊಸ ಅಧ್ಯಯನದ ಪ್ರಕಾರ, ಬಾಹ್ಯಾಕಾಶ ಪರಿಶೋಧನೆಯಲ್ಲಿನ ಹೆಚ್ಚಳದಿಂದಾಗಿ, ಅನ್ಯಗ್ರಹ ಜೀವಿಗಳು ಭೂಮಿಯ ಮೇಲೆ ನುಸುಳಬಹುದು. ಮಾನವ ಬಾಹ್ಯಾಕಾಶ ನೌಕೆಗಳು ಅಜಾಗರೂಕತೆಯಿಂದ ಅನ್ಯಗ್ರಹದ ಜೀವಿಗಳನ್ನು ಮತ್ತೊಂದು ಗ್ರಹದಿಂದ ಭೂಮಿಗೆ ತರಬಹುದು ಎಂದು ವಿಜ್ಞಾನಿಗಳು ಪ್ರತಿಪಾದಿಸುತ್ತಿದ್ದಾರೆ.
3. ಮಾನವತೆಯ ಇತಿಹಾಸದ ಮೇಲೆ ಆಧರಿಸಿದೆ ಈ ಥಿಯರಿ - ಈ ಅಧ್ಯಯನ ಮಾನವತೆಯ ಇತಿಹಾಸದ ಮೇಲೆ ಆಧರಿಸಿದೆ. ಏಕೆಂದರೆ ಈ ಮೊದಲು ಕೂಡ ಈ ರೀತಿಯ ಘಟನೆಗಳು ಬೆಳಕಿಗೆ ಬಂದಿವೆ. ಮಾನವರ ಕಾರಣವೇ ಭೂಮಿಯ ಕೆಲ ಭಾಗಗಳಲ್ಲಿ ಇಂತಹ ಪ್ರಾಣಿಗಳು ತಲುಪಿದ್ದು, ಅವು ಅಲ್ಲಿನ ಮೂಲ ಪ್ರಜಾತಿಯನ್ನೇ ನಾಶಪಡಿಸಿವೆ. ದುರ್ವಾಸನೆ ಹೊರಸೂಸುವ ಒಂದು ಕೀಟವವನ್ನು ಇದಕ್ಕೆ ಉದಾಹರಣೆಯ ರೂಪದಲ್ಲಿ ನೋಡಬಹುದು. ಈ ಕೀಟ ಪೂರ್ವ ಏಷ್ಯಾದ ಒಂದು ಶಿಪ್ಪಿಂಗ್ ಕ್ರೇಟ್ ಮೇಲೆ ಸವಾರಿ ನಡೆಸಿ ಅಮೇರಿಕಾ ತಲುಪಿತ್ತು.
4. ಇದಕ್ಕಾಗಿ Space Exploration ಯೋಜನೆಯನ್ನು ತೀವ್ರಗೊಳಿಸಲಾಗಿದೆ - ಹೊಸ ಅಧ್ಯಯನದ ಪ್ರಕಾರ ಅನ್ಯ ಗ್ರಹಗಳ ಏಲಿಯನ್ ಗಳ ಜೊತೆಗೂ ಕೂಡ ಈ ರೀತಿ ಸಂಭವಿಸುವ ಸಾಧ್ಯತೆ ಇದೆ ಅಥವಾ ಮಾನವರು ಭೂಮಿಯ ಜೀವಿಗಳ ಮೂಲಕ ಇತರ ಗ್ರಹಗಳನ್ನು ಕಲುಷಿತಗೊಳಿಸಬಹುದು ಎಂಬುದು ತೋರುತ್ತಿದೆ ಎಂದು ಸಂಶೋಧಕರು ತಮ್ಮ ಲೇಖನದಲ್ಲಿ ಬರೆದಿದ್ದಾರೆ, ಬಾಹ್ಯಾಕಾಶ ಪರಿಶೋಧನೆ ಮತ್ತು ವಾಣಿಜ್ಯ ಬಳಕೆಯ ಯೋಜನೆಯು ವೇಗವಾಗಿ ವಿಸ್ತರಿಸುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ, ನಾವು ಜೈವಿಕ ಸುರಕ್ಷತಾ ಕ್ರಮಗಳನ್ನು ಮತ್ತು ಅಪಾಯದ ಮೌಲ್ಯಮಾಪನವನ್ನು ಸುಧಾರಿಸಬೇಕಾಗಿದೆ ಎಂದು ಸಂಶೋಧಕರು ಹೇಳಿದ್ದಾರೆ.
5. ಮೇ 2022ರಲ್ಲಿ ಏಲಿಯನ್ ಗಳು ಭೂಮಿಗೆ ಬರುವ ಸಾಧ್ಯತೆ - ಈ ಮೊದಲು ಕೂಡ ಪ್ರಕಟಗೊಂಡ ಕೆಲ ವರದಿಗಳು ಏಲಿಯನ್ ಗಳ ಕುರಿತು ಭವಿಷ್ಯ ನುಡಿದಿವೆ. ಈ ವರದಿಗಳು ಮೇ 2022ರಲ್ಲಿ ಏಲಿಯನ್ ಗಳು ಭೂಮಿಯತ್ತ ಮುಖಮಾಡಲಿವೆ ಹಾಗೂ ಅವು ಅಮೆರಿಕಾದ ಜೊತೆಗೆ 'ಅಂತರ್-ಆಯಾಮದ ಯುದ್ಧ' ನಡೆಸಲಿವೆ. ಅಷ್ಟೇ ಅಲ್ಲ ಈ ಏಲಿಯನ್ ಗಳು ಮೊಟ್ಟಮೊದಲ ಬಾರಿಗೆ ಮೇ 24, 2022 ರಲ್ಲಿ ಕಾಲಿಡಲಿದ್ದು, ಪರಿಣಾಮ ಭೀಕರವಾಗಿರಲಿದೆ ಎಂದೂ ಕೂಡ ಹೇಳಲಾಗಿದೆ.