Team India: ಬಹುತೇಕ ಕೊನೆಗೊಂಡಿದೆ ಟೀಂ ಇಂಡಿಯಾದ ಈ ಆಟಗಾರನ ವೃತ್ತಿಜೀವನ!

Team India: ಈ ಆಟಗಾರನಿಗೆ ಟೀಂ ಇಂಡಿಯಾದ ಬಾಗಿಲು ಬಹುತೇಕ ಮುಚ್ಚಿದೆ. ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಸಿರಾಜ್ ಈ ಮೂವರು ಟೀಮ್ ಇಂಡಿಯಾದ ಮೊದಲ ಆಯ್ಕೆಯಾಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಇಶಾಂತ್ ಶರ್ಮಾ ಅವರ ಟೆಸ್ಟ್ ವೃತ್ತಿಜೀವನವೂ ಬಹುತೇಕ ಮುಗಿದಿದೆ ಎಂದು ನಂಬಲಾಗಿದೆ.   

Written by - Yashaswini V | Last Updated : Jan 6, 2022, 11:37 AM IST
  • ಈ ಆಟಗಾರ ಟೀಂ ಇಂಡಿಯಾ ತಂಡಕ್ಕೆ ಮರಳುವುದು ಯಾವುದೇ ಪವಾದಕ್ಕಿಂತ ಕಡಿಮೆಯಿಲ್ಲ
  • ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಎರಡು ಟೆಸ್ಟ್ ಪಂದ್ಯಗಳಲ್ಲಿ ಇಶಾಂತ್ ಶರ್ಮಾಗೆ ಅವಕಾಶ ನೀಡಿರಲಿಲ್ಲ
  • ಹಿರಿಯ ವೇಗದ ಬೌಲರ್ ಇಶಾಂತ್ ಶರ್ಮಾ ಟೀಮ್ ಇಂಡಿಯಾದ ಪ್ಲೇಯಿಂಗ್ XI ನಿಂದ ಹೊರಗುಳಿಯಬೇಕಾಯಿತು
Team India: ಬಹುತೇಕ ಕೊನೆಗೊಂಡಿದೆ ಟೀಂ ಇಂಡಿಯಾದ ಈ ಆಟಗಾರನ ವೃತ್ತಿಜೀವನ! title=
Ishant Sharm

Team India: ಭಾರತ ಕ್ರಿಕೆಟ್ ತಂಡದಲ್ಲಿ ಸ್ಟಾರ್ ಆಟಗಾರನ ವೃತ್ತಿಜೀವನ ಅಂತ್ಯಗೊಳ್ಳುವ ಹಂತದಲ್ಲಿದೆ. ಈ ಆಟಗಾರ ಟೀಂ ಇಂಡಿಯಾಗೆ ಮರಳುವುದು ಈಗ  ಯಾವುದೇ ಪವಾದಕ್ಕಿಂತ ಕಡಿಮೆಯಿಲ್ಲ. ಈ ಆಟಗಾರನಿಗೆ ಟೀಂ ಇಂಡಿಯಾದ ಬಾಗಿಲು ಬಹುತೇಕ ಮುಚ್ಚಿದೆ. ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಸಿರಾಜ್ ಈ ಮೂವರು ಟೀಮ್ ಇಂಡಿಯಾದ ಮೊದಲ ಆಯ್ಕೆಯಾಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಇಶಾಂತ್ ಶರ್ಮಾ ಅವರ ಟೆಸ್ಟ್ ವೃತ್ತಿಜೀವನವೂ ಬಹುತೇಕ ಮುಗಿದಿದೆ ಎಂದು ನಂಬಲಾಗಿದೆ. 

ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಎರಡು ಟೆಸ್ಟ್ ಪಂದ್ಯಗಳಲ್ಲಿ ಇಶಾಂತ್ ಶರ್ಮಾಗೆ ಅವಕಾಶ ನೀಡಿರಲಿಲ್ಲ. ಹಿರಿಯ ವೇಗದ ಬೌಲರ್ ಇಶಾಂತ್ ಶರ್ಮಾ (Ishant Sharma) ಟೀಮ್ ಇಂಡಿಯಾದ ಪ್ಲೇಯಿಂಗ್ XI ನಿಂದ ಹೊರಗುಳಿಯಬೇಕಾಯಿತು, ಆದರೆ ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಸಿರಾಜ್ ಅವರಿಗೆ ಪ್ಲೇಯಿಂಗ್ 11 ರಲ್ಲಿ ಅವಕಾಶ ನೀಡಲಾಯಿತು. ಮುಂಬರುವ ದಿನಗಳಲ್ಲಿಯೂ ಸಹ ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಸಿರಾಜ್ ತ್ರಿಮೂರ್ತಿಗಳು ಟೀಂ ಇಂಡಿಯಾಕ್ಕೆ ಫೇವರಿಟ್ ಆಗಿರುತ್ತಾರೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಇಶಾಂತ್ ಶರ್ಮಾ ಪುನರಾಗಮನವು ಈಗ ಯಾವುದೇ ಪವಾಡಕ್ಕಿಂತ ಕಡಿಮೆಯಿಲ್ಲ ಎಂದು ಬಣ್ಣಿಸಲಾಗುತ್ತಿದೆ.

ಇದನ್ನೂ ಓದಿ- India vs South Africa: ಆಫ್ರಿಕನ್ ನಾಯಕನೊಂದಿಗೆ ಕೆಎಲ್ ರಾಹುಲ್ ಘರ್ಷಣೆ, ವಿಡಿಯೋ ವೈರಲ್

ಇಶಾಂತ್ ಶರ್ಮಾ ಅವರನ್ನು ಟೀಮ್ ಇಂಡಿಯಾದ ಪ್ಲೇಯಿಂಗ್ XI (Team India Playint XI) ನಿಂದ ಕೈಬಿಟ್ಟ ನಂತರ, ಅವರ ಸ್ಥಾನ ಟೀಮ್ ಇಂಡಿಯಾದಲ್ಲಿ ಇಲ್ಲ ಎಂಬುದು ಈಗ ಸ್ಪಷ್ಟವಾಗಿದೆ.  ಹಿರಿಯ ವೇಗದ ಬೌಲರ್ ಇಶಾಂತ್ ಶರ್ಮಾ ಕಳೆದ ಎರಡು ಸರಣಿಗಳಿಂದ ದಯನೀಯವಾಗಿ ವಿಫಲವಾಗುತ್ತಿದ್ದಾರೆ. ಆಗಸ್ಟ್ 2021 ರಲ್ಲಿ ಇಂಗ್ಲೆಂಡ್ ಪ್ರವಾಸದ ನಂತರ, ಇಶಾಂತ್ ಶರ್ಮಾ 3 ಟೆಸ್ಟ್ ಪಂದ್ಯಗಳಲ್ಲಿ ಕೇವಲ 5 ವಿಕೆಟ್ ಪಡೆದಿದ್ದಾರೆ. ಕೊನೆಯ ಎರಡು ಟೆಸ್ಟ್ ಪಂದ್ಯಗಳ ಮೂರು ಇನ್ನಿಂಗ್ಸ್‌ಗಳಲ್ಲಿ ಇಶಾಂತ್ ಶರ್ಮಾ ಒಂದು ವಿಕೆಟ್ ಸಹ ಪಡೆಯಲು ಸಾಧ್ಯವಾಗಲಿಲ್ಲ.  

ಟೀಂ ಇಂಡಿಯಾದಲ್ಲಿ ನಿರಂತರವಾಗಿ ಹೆಚ್ಚುತ್ತಿರುವ ಪೈಪೋಟಿ:
ಟೀಂ ಇಂಡಿಯಾದಲ್ಲಿ (Team India) ನಿರಂತರವಾಗಿ ಪೈಪೋಟಿ ಹೆಚ್ಚುತ್ತಿದೆ. ಶಮಿ, ಬುಮ್ರಾ ಮತ್ತು ಸಿರಾಜ್ ಅವರಂತಹ ಬೌಲರ್‌ಗಳು ಟೆಸ್ಟ್ ಮಾದರಿಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಹೀಗಿರುವಾಗ ಟೀಂ ಇಂಡಿಯಾದಿಂದ ಇಶಾಂತ್ ಶರ್ಮಾ ಅವರ ವೈಫಲ್ಯದಿಂದಾಗಿ ತಂಡದಿಂದ ಹೊರಗುಳಿದಿದ್ದಾರೆ. ಗಮನಾರ್ಹವಾಗಿ, ಇಶಾಂತ್ ಅವರು 100 ಕ್ಕೂ ಹೆಚ್ಚು ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ, ಇದರಲ್ಲಿ ಅವರು 311 ವಿಕೆಟ್ಗಳನ್ನು ಪಡೆದಿದ್ದಾರೆ. 

ಹಿರಿಯ ವೇಗದ ಬೌಲರ್ ಇಶಾಂತ್ ಶರ್ಮಾ 2007 ರಲ್ಲಿ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಪಂದ್ಯದೊಂದಿಗೆ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಅದೇ ವರ್ಷ ಇಶಾಂತ್ ತಮ್ಮ ODI ಗೆ ಪದಾರ್ಪಣೆ ಮಾಡುವ ಅವಕಾಶವನ್ನು ಪಡೆದರು. ಇಶಾಂತ್ ಇದುವರೆಗೆ 80 ODI ಪಂದ್ಯಗಳನ್ನು ಆಡಿದ್ದಾರೆ, ಅದರಲ್ಲಿ ಅವರು 115 ವಿಕೆಟ್‌ಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ, ಆದರೂ ಶರ್ಮಾ T20 ಕ್ರಿಕೆಟ್‌ನಲ್ಲಿ ಯಶಸ್ವಿಯಾಗಲಿಲ್ಲ. ನೋಡಿದರೆ ಇಶಾಂತ್ ಅವರ ODI ವೃತ್ತಿಜೀವನ ಚೆನ್ನಾಗಿದೆ ಎನ್ನಬಹುದು. ಅದಾಗ್ಯೂ, 2016 ರಿಂದ ಒಂದೇ ಒಂದು ODI ಪಂದ್ಯದಲ್ಲಿ ಆಡುವ ಅವಕಾಶವನ್ನು ಇಶಾಂತ್ ಪಡೆಯಲಿಲ್ಲ ಎಂಬುದು ವಿಪರ್ಯಾಸ.

ಇದನ್ನೂ ಓದಿ- Hardik Pandya: ಟೀಂ ಇಂಡಿಯಾದಿಂದ ಹೊರಬಂದರೂ ಕೋಟಿ ಒಡೆಯ ಪಾಂಡ್ಯ, ಅಚ್ಚರಿ ಮೂಡಿಸುತ್ತವೆ ಬಂಗಲೆಯ ಫೋಟೋಗಳು

ಪ್ರಸ್ತುತ ಭಾರತ ತಂಡದಲ್ಲಿ 100 ಟೆಸ್ಟ್ ಪಂದ್ಯಗಳನ್ನು ಆಡಿದ ಏಕೈಕ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಇಶಾಂತ್ ಶರ್ಮಾ ಇಂಗ್ಲೆಂಡ್ ಪ್ರವಾಸದಲ್ಲಿ ವಿಫಲರಾಗಿದ್ದರು ಮತ್ತು ನ್ಯೂಜಿಲೆಂಡ್ ವಿರುದ್ಧ ಒಂದೇ ಒಂದು ವಿಕೆಟ್ ಪಡೆಯಲು ಸಾಧ್ಯವಾಗಲಿಲ್ಲ. ಇಶಾಂತ್ ದೀರ್ಘಕಾಲದಿಂದ ಹೆಚ್ಚು ಟೆಸ್ಟ್ ಕ್ರಿಕೆಟ್ ಆಡಿರಲಿಲ್ಲ. ಅವರು ಐಪಿಎಲ್ ಆಡಿಲ್ಲ, ಟಿ20 ವಿಶ್ವಕಪ್ ಆಡಿಲ್ಲ. ಅಂತಹ ಸುದೀರ್ಘ ವಿರಾಮ ಅವರ ಮೇಲೆ ಪರಿಣಾಮ ಬೀರಿದೆ ಎಂದು ಹೇಳಲಾಗುತ್ತಿದೆ. ಇಶಾಂತ್ ಕಳೆದ ನಾಲ್ಕು ಟೆಸ್ಟ್‌ಗಳಲ್ಲಿ 109.2 ಓವರ್‌ಗಳಲ್ಲಿ ಕೇವಲ ಎಂಟು ವಿಕೆಟ್‌ಗಳನ್ನು ಪಡೆದಿದ್ದಾರೆ. ಐಪಿಎಲ್‌ನ ಎರಡನೇ ಹಂತದಲ್ಲಿ ಅವರಿಗೆ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡುವ ಅವಕಾಶ ಸಿಗಲಿಲ್ಲ. ಅವರು ಟಿ20 ವಿಶ್ವಕಪ್‌ಗೂ ಆಯ್ಕೆಯಾಗಿರಲಿಲ್ಲ ಎಂಬುದು ಗಮನಾರ್ಹ ಸಂಗತಿ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News