High Court : ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿಂದ ಖಡಕ್ ಆದೇಶ!

ಎರಡು ಕಡೆಯ ಉತ್ತರ ದಾಖಲಿಸಿಕೊಂಡ ಹೈಕೋರ್ಟ್ ಅರ್ಜಿಗಳನ್ನ ಇತ್ಯರ್ಥ ಪಡಿಸಿದೆ.

Written by - Channabasava A Kashinakunti | Last Updated : Jan 14, 2022, 01:12 PM IST
  • ಕಾಂಗ್ರೇಸ್ ನಿಂದ ಮೇಕೆದಾಟು ಪಾದಾಯತ್ರೆ ವಿಚಾರ
  • ಇಂದು ಹೈಕೋರ್ಟ್ ನಲ್ಲಿ ಎರಡು ಪಿಐಎಲ್ ಗಳ ಅರ್ಜಿ ವಿಚಾರಣೆ
  • ಎರಡು ಕಡೆಯ ಉತ್ತರ ದಾಖಲಿಸಿಕೊಂಡ ಹೈಕೋರ್ಟ್ ನಿಂದ ಅರ್ಜಿಗಳ ಇತ್ಯರ್ಥ
High Court : ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿಂದ ಖಡಕ್ ಆದೇಶ! title=

ಬೆಂಗಳೂರು : ಕಾಂಗ್ರೇಸ್ ನಿಂದ ಮೇಕೆದಾಟು ಪಾದಾಯತ್ರೆ ವಿಚಾರವಾಗಿ ಇಂದು ಹೈಕೋರ್ಟ್ ನಲ್ಲಿ ಎರಡು ಪಿಐಎಲ್ ಗಳ ಅರ್ಜಿ ವಿಚಾರಣೆ ನಡೆಸಲಾಯಿತು. ಮೊನ್ನೆ ಹೈಕೋರ್ಟ್ ರಾಜ್ಯ ಸರ್ಕಾರ ಮತ್ತು ಕೆಪಿಸಿಸಿಗೆ ತರಾಟೆ ತೆಗೆದುಕೊಂಡಿತ್ತು.

ಸರ್ಕಾರ ಮತ್ತು ಕೆಪಿಸಿಸಿಯಿಂದ ಹೈಕೋರ್ಟ್(Karnataka High Court) ಪ್ರಶ್ನೆಗಳಿಗೆ ಲಿಖಿತ ಉತ್ತರ ನೀಡಿದೆ. ಎರಡು ಕಡೆಯ ಉತ್ತರ ದಾಖಲಿಸಿಕೊಂಡ ಹೈಕೋರ್ಟ್ ಅರ್ಜಿಗಳನ್ನ ಇತ್ಯರ್ಥ ಪಡಿಸಿದೆ.

ಇದನ್ನೂ ಓದಿ : Video: ಮಾಸ್ಕ್ ವಿಚಾರಕ್ಕೆ ಬಿಬಿಎಂಪಿ ಮಾರ್ಷಲ್ಸ್ ಜೊತೆ ಸಾರ್ವಜನಿಕರ ವಾಗ್ವಾದ!

ಕಾಂಗ್ರೆಸ್ ಪಾದಯಾತ್ರೆ ಸ್ಥಗಿತಗೊಳಿಸಲಾಗಿದೆ ಎಂಬ ಹೇಳಿಕೆಯ ವಿಚಾರವಾಗಿ ಮತ್ತು ಸರ್ಕಾರದ ಪಾದಯಾತ್ರೆ ನಿಷೇಧಿಸಿ ಹೊರಡಿಸಿದ ಆದೇಶ ದಾಖಲಿಸಿಕೊಂಡು ವಿಲೇವಾರಿ ಸಂಭಂದಪಟ್ಟ ಹಾಗೆ ಹೈಕೋರ್ಟ್ ನಿಂದ ಕೆಲ ಮಹತ್ವದ ಸೂಚನೆಗಳನ್ನ ನೀಡಲಾಗಿದೆ. 

ಹೈಕೋರ್ಟ್, ಕೊವೀಡ್ ಅವಧಿಯ ಎಸ್ಓಪಿ ಉಲ್ಲಂಘನೆಗೆ ಬಗ್ಗೆ ಕ್ರಮ ಕೈಗೊಳ್ಳಿ, ಎಲ್ಲಾ ಉಲ್ಲಂಘನೆಗಳ ಬಗ್ಗೆಯೂ ಕ್ರಮ ತೆಗೆದುಕೊಳ್ಳಿ ಎಂದೂ ತಿಳಿಸಿದೆ. ಕೊರೋನಾ(Corona) ಮುಗಿಯುವವರೆಗೂ ಜ.4ರ ಮಾರ್ಗಸೂಚಿಗಳು ಜಾರಿ ಇರಲಿ. ಅಲ್ಲಿಯತನಕ ಯಾವುದೇ ರ್ಯಾಲಿ, ಪ್ರತಿಭಟನೆಗೆ ಅವಕಾಶ ನೀಡಬೇಡಿ. ಧರಣಿ ಮತ್ತು ರಾಜಕೀಯ ಸಭೆ ಸಮಾರಂಭಗಳಿಗೂ ಅವಕಾಶ ಬೇಡ ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿಂದ ಖಡಕ್ ಆದೇಶ ನೀಡಿದೆ. 

ಎಲ್ಲಾ ರಾಜಕೀಯ ಪಕ್ಷಗಳಿಗೂ ಎಸ್ ಒಪಿ ಅನ್ವಯವಾಗಲಿದೆ. ಯಾವುದೇ ರಾಜಕೀಯ ಪಕ್ಷಗಳೂ ನಿಯಮ‌ ಮೀರಬಾರದು ಎಂದು ಸಿಜೆ ರಿತುರಾಜ್ ಅವಸ್ತಿ ಅಭಿಪ್ರಾಯ ಪಟ್ಟಿದ್ದಾರೆ. 

ಇದನ್ನೂ ಓದಿ : Araga Jnanendra : 'ಕಾಂಗ್ರೆಸ್ ಪಾದಯಾತ್ರೆ ತಡೆಯುವಲ್ಲಿ ಯಾವುದೇ ಷಡ್ಯಂತ್ರ ಇಲ್ಲ'

ಕೆಪಿಸಿಸಿ(KPCC) ಪರ ಹಿರಿಯ ವಕೀಲ ಉದಯ್ ಹೊಳ್ಳ ವಾದ, ಕಾಂಗ್ರೆಸ್ ನ ಪಾದಯಾತ್ರೆಯನ್ನು ಮುಂದೂಡಲಾಗಿದೆ. ಆದರೆ, ಬೇರೆ ಪಕ್ಷಗಳ ಕಾರ್ಯಕ್ರಮ ನಡೆಯುತ್ತಿವೆ. ಸರ್ಕಾರದ ತಾರತಮ್ಯ ಧೋರಣೆ ಪರಿಗಣಿಸಲು‌ ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದ್ದಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News