Video: ಮಾಸ್ಕ್ ವಿಚಾರಕ್ಕೆ ಬಿಬಿಎಂಪಿ ಮಾರ್ಷಲ್ಸ್ ಜೊತೆ ಸಾರ್ವಜನಿಕರ ವಾಗ್ವಾದ!

ಬೆಂಗಳೂರಿನ ಮಲ್ಲೇಶ್ವರಂನಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಹಾಗೂ ಮಾಸ್ಕ್ ಸರಿಯಾಗಿ ಧರಿಸುವ ವಿಚಾರವಾಗಿ ಬಿಬಿಎಂಪಿ ಮಾರ್ಷಲ್ ಗಳ ಜೊತೆಗೆ ಸಾರ್ವಜನಿಕರು ವಾಗ್ವಾದಕ್ಕಿಳಿದಿರುವ ದೃಶ್ಯ ವೈರಲ್ ಆಗುತ್ತಿದೆ.  

Edited by - Yashaswini V | Last Updated : Jan 14, 2022, 12:06 PM IST
  • ಸರಿಯಾಗಿ ಮಾಸ್ಕ್ ಧರಿಸದಿದ್ದಕ್ಕೆ ದಂಡ ಪಾವತಿಸುವಂತೆ ಹೇಳಿದ ಬಿಬಿಎಂಪಿ ಮಾರ್ಷಲ್ಸ್
  • ಮಲ್ಲೇಶ್ವರಂ ಸರ್ಕಲ್ ಬಳಿ ಸಾರ್ವಜನಿಕರು ಮತ್ತು ಮಾರ್ಷಲ್ ಗಳ ನಡುವೆ ಮಾತಿನ ಜಟಪಾಟಿ
  • ತಾಕತ್ತಿದ್ದರೆ ಸಿದ್ದರಾಮಯ್ಯ, ಡಿಕೆಶಿ ಬಳಿ ಹೋಗಿ ಮಾತಾಡಿ.. ಎಂದ ಜನ
Video: ಮಾಸ್ಕ್ ವಿಚಾರಕ್ಕೆ ಬಿಬಿಎಂಪಿ ಮಾರ್ಷಲ್ಸ್ ಜೊತೆ ಸಾರ್ವಜನಿಕರ ವಾಗ್ವಾದ! title=
Argument between Public and BBMP marshals on mask issue

ಬೆಂಗಳೂರು: ದೇಶಾದ್ಯಂತ ಕರೋನಾವೈರಸ್ ಮೂರನೇ ಅಲೆಯ ಜೊತೆಗೆ ಕರೋನಾ  ಹೊಸ ರೂಪಾಂತರ ಒಮಿಕ್ರಾನ್ ಹಾವಳಿ ಹೆಚ್ಚಾಗಿದೆ. ಈ ಹಿನ್ನಲೆಯಲ್ಲಿ ಎಲ್ಲೆಡೆ ಕೋವಿಡ್-19 ಮಾರ್ಗಸೂಚಿಗಳನ್ನೂ ಕಟ್ಟುನಿಟ್ಟಾಗಿ ಪಾಲಿಸುವಂತೆ ಟಫ್ ರೂಲ್ಸ್ ಜಾರಿಗೆ ತರಲಾಗುತ್ತಿದೆ. ಈ ಮಧ್ಯೆ ಮಾಸ್ಕ್ ಸರಿಯಾಗಿ ಧರಿಸದ ಕಾರಣ ಬಿಬಿಎಂಪಿ ಮಾರ್ಷಲ್ ಗಳ ಜೊತೆ ಸಾರ್ವಜನಿಕರು ಗಲಾಟೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.

ಬೆಂಗಳೂರಿನ ಮಲ್ಲೇಶ್ವರಂನಲ್ಲಿ ಸಾಮಾಜಿಕ ಅಂತರ (Social Distance) ಕಾಯ್ದುಕೊಳ್ಳುವ ಹಾಗೂ ಮಾಸ್ಕ್ ಸರಿಯಾಗಿ ಧರಿಸುವ ವಿಚಾರವಾಗಿ ಬಿಬಿಎಂಪಿ ಮಾರ್ಷಲ್ ಗಳ ಜೊತೆಗೆ ಸಾರ್ವಜನಿಕರು ವಾಗ್ವಾದಕ್ಕಿಳಿದಿರುವ ದೃಶ್ಯ ವೈರಲ್ ಆಗುತ್ತಿದೆ.

ಇದನ್ನೂ ಓದಿ- Araga Jnanendra : 'ಕಾಂಗ್ರೆಸ್ ಪಾದಯಾತ್ರೆ ತಡೆಯುವಲ್ಲಿ ಯಾವುದೇ ಷಡ್ಯಂತ್ರ ಇಲ್ಲ'

ವಾಸ್ತವವಾಗಿ, ಬಿಬಿಎಂಪಿ (BBMP) ಮಾರ್ಷಲ್ ಗಳು ರಸ್ತೆಯಲ್ಲಿ ಸರಿಯಾಗಿ ಮಾಸ್ಕ್ ಧರಿಸದವರನ್ನು ಹಿಡಿದು ದಂಡ ಪಾವತಿಸುವಂತೆ ಹೇಳುತ್ತಾರೆ. ಇದರಿಂದ ತಿರುಗಿಬಿದ್ದ ಸಾರ್ವಜನಿಕರು ನಮ್ಮಂತ ಜನಸಾಮಾನ್ಯರ ಬಳಿ ಬಂದು ದಂಡ ಪಾವತಿಸುವಂತೆ ಹೇಳುತ್ತೀರ ಎಂದು ಬಿಬಿಎಂಪಿ ಮಾರ್ಷಲ್ ಗಳ ವಿರುದ್ಧವೇ ತಿರುಗಿಬಿದ್ದಿದ್ದಾರೆ.

ಇದನ್ನೂ ಓದಿ- ವಸತಿ ಶಾಲೆಗಳ 6ನೇ ತರಗತಿ ಪ್ರವೇಶಕ್ಕೆ ಜ.17 ರಂದು ಕೌನ್ಸೆಲಿಂಗ್

ತಾಕತ್ತಿದ್ದರೆ ಸಿದ್ದರಾಮಯ್ಯ, ಡಿಕೆಶಿ ಬಳಿ ಹೋಗಿ ಮಾತಾಡಿ..!
ಈ ವಿಷಯದಲ್ಲಿ ಮಧ್ಯ ಪ್ರವೇಶಿಸಿದ ಹಿರಿಯ ನಾಗರೀಕರೊಬ್ಬರು, ತಾಕತ್ತಿದ್ದರೆ ಸಿದ್ದರಾಮಯ್ಯ. ಡಿಕೆಶಿ ಬಳಿ ಹೋಗಿ ಮಾತಾಡಿ.. ಅದನ್ನ ಬಿಟ್ಟು ನಮ್ಮಂತ ಇನ್ನೋಸೆಂಟ್ ಬಳಿ ಬಂದು ದಂಡ ಕಟ್ಟಿ ಅಂತೀರಾ ಎಂದು ಬಿಬಿಎಂಪಿ ಮಾರ್ಷಲ್ಸ್ ಗೆ ಅವಾಜ್ ಹಾಕಿದ್ದಾರೆ. ಹಿರಿಯ ನಾಗರೀಕರ ಈಇ ಪ್ರಶ್ನೆಗೆ ಉತ್ತರಿಸಲಾಗದ ಬಿಬಿಎಂಪಿ ಮಾರ್ಷಲ್ಸ್ ಸುಮ್ಮನಾಗಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News