Nirmalananda Swamiji : 'ಹೆಚ್‌ಡಿಕೆಯವರದ್ದು ತಾಯಿ ವಾತ್ಸಲ್ಯದ ಹೃದಯ, ಅವರಿಗೆ ಅಧಿಕಾರ ದೊರೆಯಬೇಕು'

ಅವರ ಎಲ್ಲಾ ಕನಸುಗಳು ಸಾಕಾರವಾಗಲು ಪೂರ್ಣಾವಧಿ ಅಧಿಕಾರ ಸಿಗಲಿ. ಕಾಲ ಭೈರವೇಶ್ವರ ಈ ನಿಟ್ಟಿನಲ್ಲಿ ಆಶೀರ್ವದಿಸಲಿ. ಹೆಚ್‌ಡಿಕೆ ಮತ್ತೊಮ್ಮೆ ಸಿಎಂ ಆಗಲೆಂದು ಆಶಯ ವ್ಯಕ್ತ ಪಡಿಸಿದ್ದಾರೆ.

Written by - Channabasava A Kashinakunti | Last Updated : Jan 21, 2022, 04:55 PM IST
  • ಹೆಚ್‌ಡಿ ಕುಮಾರಸ್ವಾಮಿ ಅವರಿಗೆ ಪೂರ್ಣಾವಧಿ ಅಧಿಕಾರ ಲಭಿಸಲಿ
  • ಆದಿಚುಂಚನಗಿರಿ ನಿರ್ಮಲಾನಂದ ಶ್ರೀಗಳು ಕುಮಾರಸ್ವಾಮಿ ಪರ ಭರ್ಜರಿ ಬ್ಯಾಟಿಂಗ್
  • ಹೆಚ್‌ಡಿಕೆ ಮತ್ತೊಮ್ಮೆ ಸಿಎಂ ಆಗಲೆಂದು ಆಶಯ ವ್ಯಕ್ತ ಪಡಿಸಿದ ಶ್ರೀಗಳು
Nirmalananda Swamiji : 'ಹೆಚ್‌ಡಿಕೆಯವರದ್ದು ತಾಯಿ ವಾತ್ಸಲ್ಯದ ಹೃದಯ, ಅವರಿಗೆ ಅಧಿಕಾರ ದೊರೆಯಬೇಕು' title=

ರಾಮನಗರ : ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ಅವರಿಗೆ ಪೂರ್ಣಾವಧಿ ಅಧಿಕಾರ ಲಭಿಸಲಿ. ಕಾಲ ಭೈರವೇಶ್ವರ ಹೆಚ್‌ಡಿಕೆ ಅವರಿಗೆ ಅನುಗ್ರಹಿಸಲಿ ಎಂದು ಆದಿಚುಂಚನಗಿರಿ ನಿರ್ಮಲಾನಂದ ಶ್ರೀಗಳು ಕುಮಾರಸ್ವಾಮಿ ಪರ ಭರ್ಜರಿ ಬ್ಯಾಟಿಂಗ್ ಬಿಸಿದ್ದಾರೆ.

ಜಿಲ್ಲೆಯ ಚನ್ನಪಟ್ಟಣದ ಹೊಂಗನೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀಗಳು(Adichunchanagiri Nirmalananda Swamiji), ಕುಮಾರಸ್ವಾಮಿ ಅವರ ಹೃದಯ ಮಿಡಿಯುತ್ತದೆ. ಅವರಿಗೆ ಬಡ ವರ್ಗದ ಜನರ ಪರ ಕಾಳಜಿ ಇದೆ. ಕುಮಾರಸ್ವಾಮಿಯವರದ್ದು ತಾಯಿ ವಾತ್ಸಲ್ಯದ ಹೃದಯ. ಗ್ರಾಮೀಣ ಹಾಗೂ ರೈತ ಪರ ಕಾಳಜಿ ಹೊಂದಿದ್ದಾರೆ. ಅಲ್ಪಾವಧಿಯಲ್ಲಿ ಉತ್ತಮ ಕೆಲಸ ಮಾಡಿದ್ದಾರೆ. ಅಪಾರ ಕನಸು, ಹಲವಾರು ಕೆಲಸ ಮಾಡಬೇಕು ಎಂಬ ಹಂಬಲ ಕುಮಾರಸ್ವಾಮಿಯವರಿಗೆ ಇದೆ. ಇವೆಲ್ಲವೂ ಸಾಕಾರಗೊಳ್ಳಲು ಪೂರ್ಣಾವಧಿ ಅಧಿಕಾರ ಬೇಕು ಎಂದರು. 

ಇದನ್ನೂ ಓದಿ : Karnataka weekend curfew Lift : ರಾಜ್ಯದಲ್ಲಿ ನಾಳೆಯಿಂದ ಇರಲ್ಲ 'ವೀಕೆಂಡ್ ಕರ್ಫ್ಯೂ'

ಅವರಿಗೆ(HD Kumaraswamy) ಅಲ್ಪಾವಧಿಯ ಅಧಿಕಾರದಿಂದ ಎಷ್ಟೋ ಕೆಲಸ ಪೂರ್ಣಗೊಳಿಸಲು ಸಾಧ್ಯವಾಗಿಲ್ಲ. ಅವರಿಗೆ ಅಧಿಕಾರ ದೊರೆತಿದ್ದೇ ಆದರೆ ಸಮಾಜದ ಸೇವೆ ಮಾಡುತ್ತಾರೆ. ಮಕ್ಕಳಿಗೆ ಉತ್ತಮ ದರ್ಜೆಯ ಶಿಕ್ಷಣದ ಕನಸಿದೆ. ಮಕ್ಕಳ ಕಲಿಕೆಗೆ ಅತ್ಯುತ್ತಮ ವಾತಾವರಣ ಇರಬೇಕು. ಸುಸಜ್ಜಿತ ಶಾಲೆಯನ್ನು ಕಲ್ಪಿಸಬೇಕೆಂಬ ಆಸೆ ಇತ್ತು. 2ನೇ ಬಾರಿ ಸಿಎಂ ಆಗಿದ್ದಾಗ ಈ ಪ್ರಯತ್ನಕ್ಕೆ ಕೈ ಹಾಕಿದ್ದರು. ಆದರೆ ಅಧಿಕಾರ ಕಳೆದುಕೊಂಡದ್ದರಿಂದ ಸಾಧ್ಯವಾಗಲಿಲ್ಲ. ಅವರ ಎಲ್ಲಾ ಕನಸುಗಳು ಸಾಕಾರವಾಗಲು ಪೂರ್ಣಾವಧಿ ಅಧಿಕಾರ ಸಿಗಲಿ. ಕಾಲ ಭೈರವೇಶ್ವರ ಈ ನಿಟ್ಟಿನಲ್ಲಿ ಆಶೀರ್ವದಿಸಲಿ. ಹೆಚ್‌ಡಿಕೆ ಮತ್ತೊಮ್ಮೆ ಸಿಎಂ ಆಗಲೆಂದು ಆಶಯ ವ್ಯಕ್ತ ಪಡಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News