ಶ್ರೀವೈಷ್ಣವರನ್ನು ಕರ್ನಾಟಕದ ಜಾತಿಪಟ್ಟಿಗೆ ಸೇರಿಸಲು ಕ್ರಮ: ಡಿಸಿಎಂ ಡಿ.ಕೆ.ಶಿವಕುಮಾರ್

ಧರ್ಮ ಯಾವುದಾದರೂ ತತ್ವ ಒಂದೇ. ನಾಮ ನೂರಾದರೂ ದೈವ ಒಂದೇ. ಪೂಜೆ ಯಾವುದಾದರೂ ಭಕ್ತಿ ಒಂದೆ. ಕರ್ಮ ಯಾವುದಾದರೂ ನಿಷ್ಠೆ ಒಂದೆ. ದೇವನೊಬ್ಬ ನಾಮ ಹಲವು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿದರು.

Written by - Krishna N K | Last Updated : Nov 24, 2024, 08:29 PM IST
    • ಜಾತಿಭೇದವಿಲ್ಲದೆ ದೇವರ ಪೂಜೆಗೆ ಅವಕಾಶ ಮಾಡಿಕೊಟ್ಟವರು ರಾಮಾನುಜಾಚಾರ್ಯರು
    • ಶ್ರೀವೈಷ್ಣವರನ್ನು ಕರ್ನಾಟಕದ ಜಾತಿ ಪಟ್ಟಿಗೆ ಸೇರಿಸಿ, ಗೆಜೆಟ್ ಆದೇಶ ಹೊರಡಿಸಬೇಕು
    • ಸರ್ಕಾರದ ಮಟ್ಟದಲ್ಲಿ ಇದರ ಬಗ್ಗೆ ಚರ್ಚೆ ಮಾಡಿ ನಿಮಗೆ ಸಹಾಯ
ಶ್ರೀವೈಷ್ಣವರನ್ನು ಕರ್ನಾಟಕದ ಜಾತಿಪಟ್ಟಿಗೆ ಸೇರಿಸಲು ಕ್ರಮ: ಡಿಸಿಎಂ ಡಿ.ಕೆ.ಶಿವಕುಮಾರ್ title=

ಬೆಂಗಳೂರು : ಶ್ರೀವೈಷ್ಣವರನ್ನು ಕರ್ನಾಟಕದ ಜಾತಿ ಪಟ್ಟಿಗೆ ಸೇರಿಸಿ, ಗೆಜೆಟ್ ಆದೇಶ ಹೊರಡಿಸಬೇಕು ಎಂದು ಸಮುದಾಯದ ಮುಖಂಡರು ಮನವಿ ಮಾಡಿದ್ದಾರೆ. ಸರ್ಕಾರದ ಮಟ್ಟದಲ್ಲಿ ಇದರ ಬಗ್ಗೆ ಚರ್ಚೆ ಮಾಡಿ ನಿಮಗೆ ಸಹಾಯ ಮಾಡಲಾಗುವುದು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತಿಳಿಸಿದರು.

ಅಖಿಲ ಕರ್ನಾಟಕ ಶ್ರೀವೈಷ್ಣವ ಮಹಾಸಭಾದಿಂದ ನಗರದ ಅರಮನೆ ಮೈದಾನದಲ್ಲಿ ಭಾನುವಾರ ಏರ್ಪಡಿಸಿದ್ದ ಶ್ರೀ ರಾಮಾನುಜ ವಿಶ್ವವಿಜಯ ಮಹೋತ್ಸವದ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದರು. ಯಾವುದೇ ಲಿಂಗ, ಜಾತಿ, ಧರ್ಮ ಭೇದವಿಲ್ಲದೆ ಎಲ್ಲರಿಗೂ ದೇವರನ್ನು ಪೂಜಿಸುವ ಅವಕಾಶ ದೊರೆಯಬೇಕು ಎಂದು ಸಾವಿರಾರು ವರ್ಷಗಳ ಹಿಂದೆಯೇ ಹೋರಾಟ ಮಾಡಿದ ಮಹಾನ್ ಚೇತನ ರಾಮಾನುಜಾಚಾರ್ಯರು ಎಂದು ಅಭಿಪ್ರಾಯ ಪಟ್ಟರು.

ಇದನ್ನೂ ಓದಿ:ಕಾಂಗ್ರೆಸ್‌ ಕೇವಲ ಮೂರು ಸೀಟು ಗೆದ್ದಿದೆ, ಆದರೆ ಬಿಜೆಪಿ ಅಂದು 18 ಸೀಟು ಗೆದ್ದಿತ್ತು : ಆರ್‌ ಅಶೋಕ 

ಧರ್ಮಕ್ಕೆ ತಲೆಬಾಗ ಬೇಕೆ ಹೊರತು ದುಷ್ಟರಿಗಲ್ಲ. ಮಾನವೀಯತೆಗೆ ತಲೆಬಾಗಬೇಕೆ ಹೊರತು ಅವಿವೇಕಿಗಳಿಗಲ್ಲ ಎನ್ನುವ ತತ್ವ ಸಾರಿದವರು ರಾಮಾನುಜಾಚಾರ್ಯರು. ಭಕ್ತಿಯನ್ನು ಯಾರಿಂದಲೂ ನಾಶ ಮಾಡಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದವರು. ಸುಮಾರು 32 ವರ್ಷಗಳಿಗೂ ಹೆಚ್ಚು ಕಾಲ ಕನ್ನಡ ನಾಡಿನಾದ್ಯಂತ ಸಂಚರಿಸಿ ತಮ್ಮ ಸಿದ್ದಾಂತವನ್ನು ಪ್ರಚಾರ ಮಾಡಿದವರು ಎಂದರು.

ಆಚಾರ್ಯರು ತಮ್ಮ ಧಾರ್ಮಿಕ ದೃಷ್ಟಿಕೋನಗಳನ್ನು ಜನಸಾಮಾನ್ಯರಿಗೆ ತಲುಪುವಂತೆ ಮಾಡಿದ ಕಾರಣಕ್ಕೆ ನಾವೆಲ್ಲರೂ ಇನ್ನೂ ಮನುಷ್ಯರಾಗಿ ಉಳಿದುಕೊಂಡಿದ್ದೇವೆ. ಹಿರಿಯರು ಮನೆ ಹುಷಾರು ಮಠ ಹುಷಾರು ಎಂದು ಕಿವಿಮಾತು ಹೇಳಿದ್ದಾರೆ. ನೀವು ನಿಮ್ಮ ಮಠ, ಆಚಾರ ವಿಚಾರಗಳನ್ನು ಉಳಿಸಿಕೊಳ್ಳಬೇಕು ಎಂದು ಹೇಳಿದರು.

ಒಳ್ಳೆಯ ಕೆಲಸಗಳನ್ನು ಮಾಡಲು ದೇವರು ಕೈ ಕೊಟ್ಟಿದ್ದಾನೆ. ಒಳ್ಳೆಯದನ್ನು ನೋಡಲು ಕಣ್ಣುಗಳಿವೆ, ಒಳ್ಳೆಯದನ್ನು ಕೇಳಲು ಕಿವಿಗಳಿವೆ. ಅದೇ ರೀತಿ ನೀವು ಧಾರ್ಮಿಕ ಪ್ರವಚನಕಾರರ ಮಾತುಗಳನ್ನು ಕೇಳಿ ಉತ್ತಮವಾದದನ್ನು ಜೀವನದಲ್ಲಿ ರೂಡಿಸಿಕೊಳ್ಳಬೇಕು ಎಂದು ಹೇಳಿದರು.

ಇದನ್ನೂ ಓದಿ:ಎಲ್ಲಿ ಕಳೆದುಕೊಂಡಿದ್ದೇನೋ ಅಲ್ಲಿಯೇ ಹುಡುಕುತ್ತೇನೆ : ನಿಖಿಲ್ ಶಪಥ

ಈ ದೇಶದಲ್ಲಿ ಸಾಧುಸಂತರು ಇರುವ ಕಾರಣಕ್ಕೆ ನೆಮ್ಮದಿ ಇದೆ. ನೆಮ್ಮದಿಯನ್ನು ಕಾಣಲು ನಾವು ದೇವಸ್ಥಾನ ಹಾಗೂ ದೇವರ ಮೊರೆ ಹೋಗುತ್ತೇವೆ. ಮನುಷ್ಯನ ಪ್ರಯತ್ನ ವಿಫಲವಾಗಬಹುದು ಆದರೆ ಪ್ರಾರ್ಥನೆ ಎಂದಿಗೂ ವಿಫಲವಾಗುವುದಿಲ್ಲ ಎಂದು ತಿಳಿಸಿದರು.

ನನ್ನನ್ನು ಬಂಡೆ ಎಂದು ಕರೆಯುತ್ತಾರೆ. ಅದಕ್ಕೆ ನಾನು ಉತ್ತರವಾಗಿ ಕಲ್ಲು ಪ್ರಕೃತಿ, ಕಡೆದರೆ ಆಕೃತಿ, ಪೂಜಿಸಿದರೆ ಸಂಸ್ಕೃತಿ. ಒಂದು ಕಲ್ಲನ್ನು ಮೆಟ್ಟಿಲನ್ನಾಗಿಗಿ ಮಾಡಿಕೊಳ್ಳಬಹುದು. ಚಪ್ಪಡಿಯಾಗಿ, ಗರುಡಗಂಬವಾಗಿ, ನೆಲಹಾಸಾಗಿ ಬಳಸಿಕೊಳ್ಳಬಹುದು ಎಂದರು.

ನಿಮ್ಮ ಅಖಿಲ ಕರ್ನಾಟಕ ವೈಷ್ಣವ ಮಹಾಸಭಾದ ಎಲ್ಲಾ ಕಾರ್ಯಕ್ರಮಗಳಿಗೆ ನಿಮ್ಮ ಮನೆ ಮಗನಾಗಿ ನನ್ನ ಬೆಂಬಲ ಇದ್ದೇ ಇರುತ್ತದೆ. ಅರ್ಚಕಸ್ಯ ಪ್ರಭಾಯನ ಶಿಲಾಭೂತಿ ಶಂಕರಃ ಅಂದರೆ ಅರ್ಚಕನ ಪ್ರಭಾವದಿಂದ ಶಿಲೆಯಲ್ಲಿ ಕೂಡ ಶಂಕರನನ್ನು ಕಾಣಬಹುದು. ಅರ್ಚಕರ ಮೂಲಕ ಬದುಕಿನಲ್ಲಿ ನೆಮ್ಮದಿ ಸಿಗಲಿ ನಮ್ಮ ಮಕ್ಕಳಿಗೆ ಒಳ್ಳೆಯದಾಗಲಿ ಎಂದು ದೇವರಲ್ಲಿ ಬೇಡಿಕೊಳ್ಳುತ್ತೇವೆ ಎಂದರು.

ಇದನ್ನೂ ಓದಿ:ಬಡವರ ಪರವೆನ್ನುವ ಸಿಎಂ ಸಿದ್ದರಾಮಯ್ಯ ಎಷ್ಟು ಜಲಾಶಯ ನಿರ್ಮಿಸಿದ್ದಾರೆ?-ಪ್ರತಿಪಕ್ಷ ನಾಯಕ ಆರ್‌.ಅಶೋಕ

ಅಲೆಕ್ಸಾಂಡರ್ ಪ್ರಪಂಚವನ್ನು ವಶಪಡಿಸಿಕೊಳ್ಳಲು ಮುಂದಾಗಿ ಭಾರತದತ್ತ ಬರುವಾಗ ಅವರ ಗುರು ಒಂದು ಮಾತು ಹೇಳಿದರಂತೆ. ಭಾರತದಿಂದ ಬರುವಾಗ ಐದು ವಸ್ತುಗಳನ್ನು ತೆಗೆದುಕೊಂಡು ಬಾ. ಮಹಾಭಾರತ, ರಾಮಾಯಣ ಗ್ರಂಥ, ಕೃಷ್ಣನ ಕೊಳಲು, ಗಂಗಾಜಲ ಹಾಗೂ ರಾಮಾನುಜಾಚಾರ್ಯರಂತಹ ತತ್ವಜ್ಞಾನಿಗಳನ್ನು ಕರೆದುಕೊಂಡು ಬಾ. ಈ ಐದು ವಸ್ತುಗಳನ್ನು ಗೆದ್ದರೆ ಭಾರತವನ್ನು ಗೆದ್ದಂತೆ ಎಂದು ಹೇಳಿದರಂತೆ ಎಂದರು.

ಧರ್ಮ ಯಾವುದಾದರೂ ತತ್ವ ಒಂದೇ. ನಾಮ ನೂರಾದರೂ ದೈವ ಒಂದೇ. ಪೂಜೆ ಯಾವುದಾದರೂ ಭಕ್ತಿ ಒಂದೆ. ಕರ್ಮ ಯಾವುದಾದರೂ ನಿಷ್ಠೆ ಒಂದೆ. ದೇವನೊಬ್ಬ ನಾಮ ಹಲವು ಎಂದು ಹೇಳಿದರು.

ಇದು ಭಾಗ್ಯ ಇದು ಭಾಗ್ಯ ಇದು ಭಾಗ್ಯವಯ್ಯ, ಪದುಮನಾಭನ ಪಾದ ಭಜನೆ ಪರಮ ಸುಖವಯ್ಯ ಎನ್ನುವ ಪುರಂದರದಾಸರ ಮಾತಿನಂತೆ, ನ್ಯಾಯ ನೀತಿ ಧರ್ಮಕ್ಕಾಗಿ ಶ್ರಮ ಪಡುತ್ತಿರುವ ಹಿರಿಯರ ಮಾತುಗಳನ್ನು ಕೇಳುವ ಭಾಗ್ಯ ಈ ಕಾರ್ಯಕ್ರಮದಿಂದ ನನಗೆ ಒದಗಿ ಬಂದಿದೆ. ಕಾರ್ಯಕ್ರಮದಲ್ಲಿ ನಾವೆಲ್ಲರೂ ಭಾಗವಹಿಸಿರುವುದೇ ನಮ್ಮ ಭಾಗ್ಯ ಎಂದು ಹೇಳಿದರು.

ಧಾರ್ಮಿಕ ಕಾರ್ಯದಲ್ಲಿ ರಾಜಕಾರಣಿಗಳಿಗೆ ಯಾವುದೇ ಕೆಲಸವಿರುವುದಿಲ್ಲ. ಆದರೂ ನನ್ನ ಮೇಲೆ ಪ್ರೀತಿ ಇಟ್ಟು ಈ ಧರ್ಮ ಸಂಸತ್ ಸಭೆಗೆ ಕರೆದ ಎಲ್ಲರಿಗೂ ಧನ್ಯವಾದಗಳು. ಇದರಿಂದ ನನಗೂ ಒಂದಷ್ಟು ಉತ್ತಮ ಮಾತುಗಳನ್ನು ಕೇಳಿಸಿಕೊಳ್ಳುವ ಅವಕಾಶ ದೊರೆಯುತ್ತದೆ ಎಂದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News