ನವದೆಹಲಿ: ರಾಷ್ಟ್ರಗೀತೆ ವೇಳೆ ತೋರಿದ ವರ್ತನೆಗೆ ವಿರಾಟ್ ಕೊಹ್ಲಿ (Virat Kohli) ಇದೀಗ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದು, ಟ್ರೋಲ್ ಆಗಿದ್ದಾರೆ.
ಕೇಪ್ಟೌನ್ನಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ (India vs South Africa) ನಡುವಿನ ಮೂರನೇ ಏಕದಿನ ಪಂದ್ಯದ ಆರಂಭಕ್ಕೂ ಮುನ್ನ ದೇಶದ ರಾಷ್ಟ್ರಗೀತೆಯನ್ನು ನುಡಿಸುವಾಗ 'ಚೂಯಿಂಗ್ ಗಮ್' ಜಗಿದ ಆರೋಪದ ಮೇಲೆ ಟೀಮ್ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಭಾನುವಾರ ವಿವಾದಕ್ಕೆ ಒಳಗಾಗಿದ್ದಾರೆ.
ಇದನ್ನೂ ಓದಿ: Salman Khan ಫಾರ್ಮ್ ಹೌಸ್ ಕೆಳಗಡೆ ಫಿಲ್ಮ್ ಸ್ಟಾರ್ಸ್ ಗಳ ಶವಗಳನ್ನು ಹೂಳಲಾಗಿದೆಯಂತೆ!
ಮೂರನೇ ಏಕದಿನ ಪಂದ್ಯ ಆರಂಭಕ್ಕೂ ಮುನ್ನ ಎರಡೂ ತಂಡಗಳು ರಾಷ್ಟ್ರಗೀತೆ ಹಾಡಲು ಮೈದಾನಕ್ಕಿಳಿದಿದ್ದವು. ಭಾರತದ ರಾಷ್ಟ್ರಗೀತೆ ಆರಂಭವಾಗುತ್ತಿದ್ದಂತೆಯೇ ಕ್ಯಾಮೆರಾ ವಿರಾಟ್ ಮೇಲೆ ಕೇಂದ್ರೀಕೃತವಾಗಿತ್ತು. ಈ ವೇಳೆ ಕೊಹ್ಲಿ ಚೂಯಿಂಗ್ ಗಮ್ (Chewing gum) ಜಗಿಯುತ್ತಾ ಮಧ್ಯೆ ಮಧ್ಯೆ ರಾಷ್ಟ್ರಗೀತೆ ಹಾಡುತ್ತಿದ್ದ ದೃಶ್ಯ ಸೆರೆಯಾಗಿದೆ. ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಸಖತ್ ವೈರಲ್ ಆಗಿದೆ.
Virat Kohli busy chewing something while National Anthem is playing. Ambassador of the nation.@BCCI pic.twitter.com/c9DzJo2vq7
— soul of wintertime (@loadingwaitt) January 23, 2022
ವಿರಾಟ್ ಕೊಹ್ಲಿಯ ಈ ವರ್ತನೆಯನ್ನು ಭಾರತೀಯ ಅಭಿಮಾನಿಗಳು ರೆಕಾರ್ಡ್ ಮಾಡಿದ್ದಾರೆ. ರಾಷ್ಟ್ರಗೀತೆಗೆ (National anthem) ಅಗೌರವ ತೋರಿದ್ದಕ್ಕಾಗಿ ನೆಟ್ಟಿಗರು ಕೊಹ್ಲಿ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
"ವಿರಾಟ್ ಕೊಹ್ಲಿ ರಾಷ್ಟ್ರಗೀತೆ ನುಡಿಸುವಾಗ ಏನನ್ನೋ ಜಗಿಯುವುದರಲ್ಲಿ ನಿರತರಾಗಿದ್ದಾರೆ. ರಾಷ್ಟ್ರದ ರಾಯಭಾರಿ. @BCCI" ಎಂದು ಬರೆದು, ನೆಟ್ಟಿಗರೊಬ್ಬರು ಟ್ವಿಟರ್ನಲ್ಲಿ ಈ ವಿಡಿಯೋ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: South Africa vs India: ಕೆ.ಎಲ್.ರಾಹುಲ್ ನಾಯಕತ್ವವನ್ನು ಬೆಂಬಲಿಸಿದ ಕೋಚ್ ರಾಹುಲ್ ದ್ರಾವಿಡ್
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.