ಶಾಸ್ತ್ರಗಳ ಪ್ರಕಾರ, ಸಂಪತ್ತಿನ ಅಧಿದೇವತೆಯಾದ ಲಕ್ಷ್ಮೀ ದೇವಿಯು ಶುಚಿತ್ವವನ್ನು ಇಷ್ಟ ಪಡುತ್ತಾಳೆ. ಹಾಗಾಗಿ ಲಕ್ಷ್ಮೀ ಯನ್ನು ಒಲಿಸಿಕೊಳ್ಳಬೇಕಾದರೆ ಶುಚಿತ್ವಕ್ಕೆ ವಿಶೇಷ ಗಮನ ಹರಿಸಬೇಕು.
ನವದೆಹಲಿ : ಹಿಂದೂ ಧರ್ಮದಲ್ಲಿ, ಲಕ್ಷ್ಮೀ ದೇವಿಯನ್ನು ಸಂಪತ್ತಿನ ದೇವತೆ ಎಂದು ಪೂಜಿಸಲಾಗುತ್ತದೆ. ಲಕ್ಷ್ಮೀಯ ಆರಾಧನೆಯು ಜೀವನದಲ್ಲಿ ಸಂಪತ್ತು, ಐಶ್ವರ್ಯ, ಸಂತೋಷ-ಸಮೃದ್ಧಿಯನ್ನು ತರುತ್ತದೆ ಎನ್ನುವುದು ನಂಬಿಕೆ. ಧರ್ಮಗ್ರಂಥಗಳಲ್ಲಿ, ಲಕ್ಷ್ಮೀ ದೇವಿಯನ್ನು ಮೆಚ್ಚಿಸಲು ಅನೇಕ ಪರಿಹಾರಗಳನ್ನು, ಪೂಜಾ ವಿಧಾನಗಳನ್ನು ಹೇಳಲಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ
ಶಾಸ್ತ್ರಗಳ ಪ್ರಕಾರ, ಸಂಪತ್ತಿನ ಅಧಿದೇವತೆಯಾದ ಲಕ್ಷ್ಮೀ ದೇವಿಯು ಶುಚಿತ್ವವನ್ನು ಇಷ್ಟ ಪಡುತ್ತಾಳೆ. ಹಾಗಾಗಿ ಲಕ್ಷ್ಮೀ ಯನ್ನು ಒಲಿಸಿಕೊಳ್ಳಬೇಕಾದರೆ ಶುಚಿತ್ವಕ್ಕೆ ವಿಶೇಷ ಗಮನ ಹರಿಸಬೇಕು. ಸ್ವಚತೆಯನ್ನು ಕಾಪಾಡದಿದ್ದರೆ, ಅಂಥಹ ಜಾಗದಲ್ಲಿ ಲಕ್ಷ್ಮೀ ನೆಲೆಸುವುದಿಲ್ಲ. ಮನೆಯ ಮುಖ್ಯ ಬಾಗಿಲಿನಲ್ಲಿ ಕಸ ಹರಡಿಕೊಂಡಿದ್ದರೆ, ಅಲ್ಲಿ ಲಕ್ಷ್ಮೀ ವಾಸವಾಗುವುದಿಲ್ಲ. ಅಷ್ಟು ಮಾತ್ರವಲ್ಲ, ಎಲ್ಲಿ ಪಾದರಕ್ಷೆ, ಚಪ್ಪಲಿಯನ್ನು ಚೆಲ್ಲಾಪಿಲ್ಲಿಯಾಗಿ ಹರಡಿಕೊಂಡು ಇಟ್ಟಿರುತ್ತಾರೆಯೋ, ಅಲ್ಲಿ ಬಡತನ ನೆಲೆಯಾಗುತ್ತದೆ.
ಮಾನ್ಯ ಉತ್ತರ ದಿಕ್ಕು ಲಕ್ಷ್ಮೀ ದೇವಿ ಮತ್ತು ಕುಬೇರನಿಗೆ ಸಂಬಂಧಿಸಿದ್ದಾಗಿದೆ. ಹಾಗಾಗಿ ಈ ದಿಕ್ಕನ್ನು ಯಾವಾಗಲೂ ಸ್ವಚ್ಛವಾಗಿಟ್ಟುಕೊಳ್ಳಬೇಕು, ಹೀಗೆ ಮಾಡುವುದರಿಂದ ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳು ಉಂಟಾಗುವುದಿಲ್ಲ. ಈ ದಿಕ್ಕಿನಲ್ಲಿ ಭಾರವಾದ ಮತ್ತು ಅನುಪಯುಕ್ತ ವಸ್ತುಗಳನ್ನು ಇಡಬಾರದು.
ಧಾರ್ಮಿಕ ನಂಬಿಕೆಗಳ ಪ್ರಕಾರ, ಲಕ್ಷ್ಮೀ ದೇವಿಯು ಪೊರಕೆಯಲ್ಲಿ ನೆಲೆಸಿರುತ್ತಾಳೆ. ನಾವು ಬಳಸುವ ಪೊರಕೆ ಎಲ್ಲರ ಕಣ್ಣಿಗೆ ಬೀಳದಂತೆ ಇಡಬೇಕು. ಪೊರಕೆಯ ಮೇಲೆ ಕಾಲಿಡಬಾರದು. ಪೊರಕೆಯನ್ನು ಕಾಲಿನಿಂದ ಮುಟ್ಟುವುದರಿಂದ ಹಣದ ನಷ್ಟವಾಗುತ್ತದೆ. ಪೊರಕೆಗೆ ಅವಮಾನವಾದ ಮನೆಯಿಂದ ಲಕ್ಷ್ಮೀ ಶಾಶ್ವತವಾಗಿ ಹೊರತು ಬಿಡುತ್ತಾಳೆ.
ಎಂಜಲು ಪಾತ್ರೆಯನ್ನು ಯಾವತ್ತೂ ಹಾಗೆಯೇ ಬಿಡಬಾರದು. ಎಂಜಲು ಪಾತ್ರೆಗಳನ್ನು ಹಾಗೆಯೇ ಬಿಡುವ ಮನೆಗಳಲ್ಲಿಯೂ ಲಕ್ಷ್ಮೀ ನೆಲೆಸುವುದಿಲ್ಲ.
ಲಕ್ಷ್ಮೀ , ವಿಷ್ಣು ಮತ್ತು ಶಂಖವನ್ನು ಬೆಳಿಗ್ಗೆ ಮತ್ತು ಸಂಜೆ ನಿಯಮಿತವಾಗಿ ಪೂಜಿಸುವ ಮನೆಗಳಲ್ಲಿ ಲಕ್ಷ್ಮೀ ಸದಾ ವಾಸಿಸುತ್ತಾಳೆ.