ಮುಂದಿನ 17 ದಿನಗಳು ಈ 4 ರಾಶಿಯವರಿಗೆ ರಾಜಯೋಗ, ಪ್ರಾಪ್ತಿಯಾಗಲಿದೆ ಅಪಾರ ಸಂಪತ್ತು

ಪ್ರಸ್ತುತ, ಶನಿಯು ತನ್ನ ಸ್ವಂತ ರಾಶಿಚಕ್ರವಾದ ಮಕರ ರಾಶಿಯಲ್ಲಿ ಅಸ್ತವಾಗಿದ್ದಾನೆ. ಫೆಬ್ರವರಿ 24 , 2022 ರವರೆಗೆ ಶನಿ ಅಸ್ತವಾಗಿಯೇ ಇರಲಿದ್ದಾನೆ. 

ನವದೆಹಲಿ :  ಶನಿದೇವನ ಕೃಪೆಯಿದ್ದರೆ ಭಿಕ್ಷುಕ ಕೂಡಾ ರಾತೋರಾತ್ರಿ ರಾಜನಾಗಿ ಬಿಡಬಹುದು.  ಅದೇ ಶನಿಯ ವಕ್ರ ದೃಷ್ಟಿ ಬಿದ್ದರೆ, ರಾಜನಾಗಿದ್ದವನು ಕೂಡಾ ದಟ್ಟ ದಾರಿದ್ರ್ಯ ಅನುಭವಿಸಿಬಿಡಬಹುದು. ಪ್ರಸ್ತುತ, ಶನಿಯು ತನ್ನ ಸ್ವಂತ ರಾಶಿಚಕ್ರವಾದ ಮಕರ ರಾಶಿಯಲ್ಲಿ ಅಸ್ತವಾಗಿದ್ದಾನೆ. ಫೆಬ್ರವರಿ 24 , 2022 ರವರೆಗೆ ಶನಿ ಅಸ್ತವಾಗಿಯೇ ಇರಲಿದ್ದಾನೆ. ಶನಿಯ ಅಸ್ತವಾಗಿರುವ ಈ ಸಮಯ  4 ರಾಶಿಚಕ್ರದವರ ಜೀವನದಲ್ಲಿ ರಾಜಯೋಗ ತರಲಿದೆ. ಇದರಿಂದ ಮುಂದಿನ 17 ದಿನಗಳ ಕಾಲ ಈ ರಾಶಿಯವರಿಗೆ ಭಾರೀ ಲಾಭ ದೊರೆಯಲಿದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಎದುರು ರಾಜಯೋಗದಿಂದಾಗಿ, ಈ 4 ರಾಶಿಯ ಜನರು ಉದ್ಯೋಗ, ವ್ಯವಹಾರ ಮತ್ತು ರಾಜಕೀಯದಲ್ಲಿ ಅದ್ಭುತ ಯಶಸ್ಸನ್ನು ಸಾಧಿಸಬಹುದು. ಅಲ್ಲದೆ, ದೀರ್ಘಕಾಲದ ಕಾಯಿಲೆಗಳಿಂದ ಬಳಲುತ್ತಿದ್ದರೆ, ಪರಿಹಾರ ಸಿಗಲಿದೆ. ಈ ಸಮಯದಲ್ಲಿ ಈ ನಾಲ್ಕು ರಾಶಿಯವರಿಗೆ ಭಾರೀ ಪ್ರಮಾಣದಲ್ಲಿ ಆರ್ಥಿಕ ಲಾಭವಾಗಲಿದೆ. 

2 /5

ಈ ಎದುರು ರಾಜಯೋಗವು ಮಿಥುನ ರಾಶಿಯವರಿಗೆ ಅಗಾಧವಾದ ಲಾಭಗಳನ್ನು ನೀಡುತ್ತದೆ. ವ್ಯಾಪಾರದಲ್ಲಿ ದೊಡ್ಡ ಮಟ್ಟದ ಲಾಭವಾಗಬಹುದು. ಮಹತ್ವದ ಒಪ್ಪಂದವನ್ನು ಅಂತಿಮಗೊಳಿಸಬಹುದು. ಹೂಡಿಕೆ ಮಾಡಲು ಇದು ಉತ್ತಮ ಸಮಯವಾಗಿರಲಿದೆ.  ರಾಜಕೀಯದಲ್ಲಿ ಸಕ್ರಿಯರಾಗಿರುವವರು ದೊಡ್ಡ ಹುದ್ದೆಯನ್ನು ಪಡೆಯಬಹುದು.  

3 /5

ಎದುರು ರಾಜ ಯೋಗವು ಸಿಂಹ ರಾಶಿಯ ಜನರಿಗೆ ಭಾರೀ ವಿತ್ತೀಯ ಲಾಭವನ್ನು ನೀಡುತ್ತದೆ. ಗಳಿಕೆ ಹೆಚ್ಚಾಗುತ್ತದೆ. ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ಜನರು ನಿಮ್ಮ ಕೆಲಸವನ್ನು ಮೆಚ್ಚುತ್ತಾರೆ. ವಿದೇಶದಲ್ಲಿ ಕೆಲಸ ಮಾಡುವವರಿಗೆ ವಿಶೇಷವಾಗಿ ಲಾಭವಾಗಲಿದೆ. ಹೂಡಿಕೆಯಲ್ಲಿ ಲಾಭ ಸಿಗುವ ಲಕ್ಷಣಗಳಿವೆ. ಯಾವುದೇ ಗಂಭೀರ ಅಥವಾ ಹಳೆಯ ಗಾಯದಿಂದ ನೀವು ತೊಂದರೆಗೊಳಗಾಗಿದ್ದರೆ, ಅದರಿಂದ ಗುಣಮುಖವಾಗಲಿದ್ದೀರಿ.  ರಾಜಕಾರಣಿಗಳು ದೊಡ್ಡ ಯಶಸ್ಸನ್ನು ಪಡೆಯುವ ಸಾಧ್ಯತೆಯಿದೆ.

4 /5

ಎದುರು ರಾಜಯೋಗವು ವೃಶ್ಚಿಕ ರಾಶಿಯವರಿಗೆ ಹಠಾತ್ ಸಂಪತ್ತನ್ನು ತರುತ್ತದೆ. ಉದ್ಯೋಗ-ವ್ಯವಹಾರದಲ್ಲಿ ಪ್ರಗತಿ ಸಾಧಿಸುವಿರಿ. ವಿದೇಶದಿಂದಲೂ ಹಣ ಬರಲಿದೆ. ರಾಜಕೀಯದಲ್ಲಿ ಲಾಭವಾಗಲಿದೆ. ಬಡ್ತಿ ಸಿಗುವ ಸಾಧ್ಯತೆಗಳಿವೆ. 

5 /5

ಎದುರು ರಾಜಯೋಗವು ಕುಂಭ ರಾಶಿಯವರಿಗೆ ವ್ಯವಹಾರದಲ್ಲಿ ಹಠಾತ್ ದೊಡ್ಡ ಲಾಭವನ್ನು ನೀಡುತ್ತದೆ. ಶ್ರಮಕ್ಕೆ ತಕ್ಕ ಫಲ ಸಿಗಲಿದೆ. ರಾಜಕೀಯ ಮತ್ತು ಆಡಳಿತಕ್ಕೆ ಸಂಬಂಧಿಸಿದವರು ದೊಡ್ಡ ಹುದ್ದೆಯನ್ನು ಪಡೆಯುತ್ತಾರೆ. ಷೇರುಪೇಟೆಯಲ್ಲಿ ಹಠಾತ್ ಲಾಭವೂ ಆಗಬಹುದು.