ನವದೆಹಲಿ : ಪ್ರತಿಯೊಬ್ಬ ವ್ಯಕ್ತಿಯಲ್ಲೂ ಕೆಲವು ಒಳ್ಳೆಯ ಮತ್ತು ಕೆಟ್ಟ ಅಭ್ಯಾಸಗಳಿರುತ್ತವೆ. ಒಳ್ಳೆಯ ಅಭ್ಯಾಸಗಳು ಗೌರವ ಮತ್ತು ಪ್ರತಿಷ್ಠೆಯನ್ನು ತರುತ್ತವೆ. ಮತ್ತೊಂದೆಡೆ, ಕೆಟ್ಟ ಅಭ್ಯಾಸಗಳಿಂದ ಜೀವನದಲ್ಲಿ ಹಲವಾರು ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಜ್ಯೋತಿಷಿಗಳ (Astrology) ಪ್ರಕಾರ, ಗ್ರಹಗಳ ಪ್ರಭಾವದಿಂದ ಒಳ್ಳೆಯ ಅಥವಾ ಕೆಟ್ಟ ಅಭ್ಯಾಸಗಳು (Bad habits) ರೂಪುಗೊಳ್ಳುತ್ತವೆ.
ಕುಳಿತಲ್ಲೇ ಕಾಲು ಅಲ್ಲಾಡಿಸುವುದು :
ಕೆಲವರಿಗೆ ಕುಳಿತಲ್ಲೇ ಕಾಲು ಅಲ್ಲಾಡಿಸುವ ಅಭ್ಯಾಸವಿರುತ್ತದೆ. ಈ ಅಭ್ಯಾಸ ಒಳ್ಳೆಯದಲ್ಲ. ಒಳ್ಳೆಯದಲ್ಲ. ಇದು ಚಂದ್ರ (moon) ದುರ್ಬಲವಾಗಿದೆ ಎನ್ನುವುದನ್ನು ಸೂಚಿಸುತ್ತದೆ. ಬಿಡುವಿನ ವೇಳೆಯಲ್ಲಿ ಕುಳಿತು ಕಾಲುಗಳನ್ನು ಅಲ್ಲಾಡಿಸುವ ಜನರ ಮಾನಸಿಕ ಸ್ಥಿತಿ ದುರ್ಬಲವಾಗಿರುತ್ತದೆ ಎಂದು ಹೇಳಲಾಗುತ್ತದೆ.
ಇದನ್ನೂ ಓದಿ : ನೋಟು ಎಣಿಕೆ ಮಾಡುವಾಗ ತಪ್ಪಿಯೂ ಈ ತಪ್ಪು ಮಾಡದಿರಿ, ಶಾಶ್ವತವಾಗಿ ದೂರವಾಗುತ್ತಾಳೆ ಲಕ್ಷ್ಮೀ
ಉಗುರು ಕಚ್ಚುವುದು :
ಕೆಲವರಿಗೆ ಹಲ್ಲುಗಳಿಂದ ಉಗುರು ಕಚ್ಚುವ ಅಭ್ಯಾಸವಿರುತ್ತದೆ. ಹಲ್ಲುಗಳಿಂದ ಉಗುರುಗಳನ್ನು ಕತ್ತರಿಸುವವರಿಗೆ ಸೂರ್ಯನು (Sun God) ದುರ್ಬಲವಾಗಲು ಪ್ರಾರಂಭಿಸುತ್ತಾನೆ. ಇದರೊಂದಿಗೆ, ಕಣ್ಣುಗಳಿಗೆ ಸಂಬಂಧಿಸಿದ ಸಮಸ್ಯೆಯು ಎದುರಾಗುತ್ತದೆ. ಸೂರ್ಯನ ಗ್ರಹದ ಮಂಗಳಕರ ಫಲಿತಾಂಶಗಳನ್ನು ಪಡೆಯಲು ಬಯಸುವುದಾದರೆ, ಹಲ್ಲುಗಳಿಂದ ಉಗುರುಗಳನ್ನು ಕತ್ತರಿಸುವುದನ್ನು ನಿಲ್ಲಿಸಿ.
ಮಲಗುವ ಕೋಣೆ ಅಥವಾ ಸ್ನಾನಗೃಹವನ್ನು ಸ್ವಚ್ಚವಾಗಿಟ್ಟುಕೊಳ್ಳದಿರುವುದು :
ಮಲಗುವ ಕೋಣೆ ಅಥವಾ ಸ್ನಾನಗೃಹದ ಶುಚಿತ್ವವನ್ನು (bath room remedy) ಕಾಪಾಡಿಕೊಳ್ಳದಿದ್ದರೆ ಶುಕ್ರ ಗ್ರಹವು (venus) ದುರ್ಬಲವಾಗುತ್ತದೆ. ಈ ಹಿನ್ನೆಲೆಯಲ್ಲಿ ಮಲಗುವ ಕೋಣೆ ಮತ್ತು ಸ್ನಾನದ ಮನೆಯನ್ನು ಯಾವತ್ತೂ ಶುಚಿಯಾಗಿಟ್ಟು ಕೊಳ್ಳಿ. ಬಾತ್ರೂಮ್ ಅನ್ನು ಕಾಲಕಾಲಕ್ಕೆ ಸ್ವಚ್ಛಗೊಳಿಸುವುದು ಮುಖ್ಯವಾಗಿರುತ್ತದೆ. ಮಲಗುವ ಕೋಣೆ ಮತ್ತು ಸ್ನಾನಗೃಹವನ್ನು ಕೊಳಕಾಗಿ ಇಟ್ಟುಕೊಂಡರೆ ಯಶಸ್ಸು ಸಿಗುವುದಿಲ್ಲ.
ಇದನ್ನೂ ಓದಿ : Mangal Gochar: ಮಂಗಳನ ಸಂಚಾರದಿಂದ ಈ 4 ರಾಶಿಯವರಿಗೆ ಶುಭ, ಬಡ್ತಿ, ಆರ್ಥಿಕ ಪ್ರಗತಿ ಸಾಧ್ಯತೆ
ಎಲ್ಲೆಂದರಲ್ಲಿ ಉಗುಳುವ ಅಭ್ಯಾಸ :
ಕಂಡ ಕಂಡಲ್ಲಿ ಉಗುಳುವ ಅಭ್ಯಾಸ ಸರಿಯಲ್ಲ. ಈ ಕೆಟ್ಟ ಅಭ್ಯಾಸದಿಂದಾಗಿ ಶನಿ ಗ್ರಹ (shani dev) ದುರ್ಬಲವಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಈ ಅಭ್ಯಾಸವನ್ನು ಆದಷ್ಟು ಬೇಗ ಬಿಟ್ಟುಬಿಡಿ. ಇಲ್ಲದಿದ್ದರೆ ಜೀವನದಲ್ಲಿ ಶನಿದೇವನ ಕೋಪವನ್ನು ಎದುರಿಸಬೇಕಾಗಬಹುದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.