Mystery Of Cubes - ಚಂದ್ರನ ಅಂಗಳದ 'ಏಲಿಯನ್' ಗಳ ಮನೆ ಹಿಂದಿನ ಮಿಸ್ಟ್ರಿಯನ್ನು ಹಿಸ್ಟ್ರಿಯಾಗಿಸಿದ ವಿಜ್ಞಾನಿಗಳು

Moon Dark Side - ಚಂದ್ರನ ಕಪ್ಪು ಭಾಗದಲ್ಲಿ ಕಾಣುವ ಘನಾಕೃತಿಯ ಆಕೃತಿಯು ಏಲಿಯನ್ ನೆಲೆಯಾಗಿದೆ ಎಂದು ದೀರ್ಘಕಾಲದವರೆಗೆ ನಂಬಲಾಗಿತ್ತು. ಈ ಬಗ್ಗೆ ಅನೇಕ ಮೀಮ್‌ಗಳು ಕೂಡ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ್ದವು. ಆದರೆ ಇದೀಗ ಈ ರಹಸ್ಯವನ್ನು ಭೇದಿಸಲಾಗಿದೆ.

Written by - Nitin Tabib | Last Updated : Jan 10, 2022, 10:11 PM IST
  • ಚಂದ್ರನ ಮೇಲೆ ಕಾಣಿಸಿಕೊಳ್ಳುವ ನಿಗೂಢ ಆಕೃತಿಗಳ ರಹಸ್ಯ ಭೇದ
  • ಚಂದ್ರನ ಕಪ್ಪು ಭಾಗದ ಹಿಂದಿನ ರಹಸ್ಯ ಭೇದಿಸಿದ ಚೀನಾ ಮಿಶನ್
  • 80 ಮೀಟರ್ ಅಂತರದಿಂದ ಕ್ಲಿಕ್ಕಿಸಲಾದ ಚಿತ್ರದಲ್ಲಿ ಬಹಿರಂಗಗೊಂಡ ಮಾಹಿತಿ
Mystery Of Cubes - ಚಂದ್ರನ ಅಂಗಳದ 'ಏಲಿಯನ್' ಗಳ ಮನೆ ಹಿಂದಿನ ಮಿಸ್ಟ್ರಿಯನ್ನು ಹಿಸ್ಟ್ರಿಯಾಗಿಸಿದ ವಿಜ್ಞಾನಿಗಳು title=
Moon, Mistry Hut (File Photo)

ನವದೆಹಲಿ: Moon, Mistry Hut - ಚಂದ್ರನ ಕಪ್ಪು ಭಾಗದಲ್ಲಿ ಕಾಣುವ ಘನಾಕೃತಿಯ ಆಕಾರದ ಹಿಂದಿನ ರಹಸ್ಯವನ್ನು ಖಗೋಳಶಾಸ್ತ್ರಜ್ಞರು (Chinese Astronomers) ಕೊನೆಗೂ ಭೇದಿಸಿದ್ದಾರೆ. ಚೀನಾದ ಚಂದ್ರಯಾನದಿಂದ ಈ ಅಚ್ಚರಿಯ ವಿಷಯ ಬಹಿರಂಗಗೊಂಡಿದೆ.

ಬಹಿರಂಗಗೊಂಡ ವಿಚಿತ್ರ ಆಕೃತಿಗಳ ರಹಸ್ಯ
ನಮ್ಮ ಪಾಲುದಾರ ವೆಬ್‌ಸೈಟ್ WION ನಲ್ಲಿ ಪ್ರಕಟಗೊಂಡ ವರದಿಯ ಪ್ರಕಾರ, ಚೀನಾ ನ್ಯಾಷನಲ್ ಸ್ಪೇಸ್ ಅಡ್ಮಿನಿಸ್ಟ್ರೇಷನ್‌ನೊಂದಿಗೆ (Chinese National Space Administration) ಸಂಯೋಜಿತವಾಗಿರುವ ವಿಜ್ಞಾನ ವೆಬ್‌ಸೈಟ್ ಚಂದ್ರನ (Moon) ಮೇಲ್ಮೈಯಲ್ಲಿ ಕಂಡುಬರುವ ವಿಚಿತ್ರ ಘನಾಕೃತಿಯ ರಹಸ್ಯವನ್ನು ಬಹಿರಂಗಪಡಿಸಿದೆ.

ಸಾಮಾಜಿಕ ಮಾಧ್ಯಮ ಬಳಕೆದಾರರು ಇದು ಚಂದ್ರನ ಮೇಲಿನ ಅರಮನೆ ಎಂದು ನಂಬಿದ್ದರು
ಇದುವರೆಗೆ ಚಂದ್ರನ ಮೇಲಿರುವ ಈ ಘನಾಕೃತಿಗಳನ್ನು 'ಮಿಸ್ಟರಿ ಹಟ್' (Mistery Hut) ಎಂದೇ ಕರೆಯಲಾಗುತ್ತಿತ್ತು ಮತ್ತು ಸಾಮಾಜಿಕ ಮಾಧ್ಯಮ ಬಳಕೆದಾರರು ಇದನ್ನು ಚಂದ್ರನ ಮೇಲಿನ ಅರಮನೆಯಾಗಿದ್ದು, ಕೆಲವರು ಇವುಗಳಿಗೆ 'ಏಲಿಯನ್ಸ್' ಮನೆ ಎಂದು ಕರೆಯುತ್ತಿದ್ದರು. 

ಸಾಧಾರಣ ಬಂಡೆಗಲ್ಲುಗಳಾಗಿವೆ
ಇದೀಗ ಚೀನಾದ ಲೂನಾರ್ ಯುಟು-2 ಈ ವಸ್ತುವಿನ ಚಿತ್ರವನ್ನು 80 ಮೀಟರ್ ದೂರದಿಂದ ಸೆರೆ ಹಿಡಿದಿದೆ. ಇದನ್ನು ಸಾಮಾಜಿಕ ಜಾಲತಾಣಗಳಲ್ಲಿ "ಯುಟು ಇತ್ತೀಚಿನ ಆವಿಷ್ಕಾರ" ಎಂಬ ಹ್ಯಾಶ್‌ಟ್ಯಾಗ್‌ನೊಂದಿಗೆ ತೋರಿಸಲಾಗುತ್ತಿದೆ. ಆದರೆ, ಇದೀಗ ಅದರ ಹಿಂದಿನ ನಿಜಾಂಶ ಬಹಿರಂಗಗೊಂಡಿದ್ದು, ಇವು ಸಾಧಾರಣ ಬಂಡೆಗಲ್ಲುಗಳಾಗಿವೆ. ಇದುವರೆಗೂ ಒಂದು ರಹಸ್ಯವೆಂದು ಪರಿಗಣಿಸಲ್ಪಟ್ಟ ಚಂದ್ರನ ಈ ಭಾಗವು ಯಾವಾಗಲೂ ಭೂಮಿಯಿಂದ ಮರೆಮಾಡಲ್ಪಟ್ಟಿದೆ ಮತ್ತು ಎಂದಿಗೂ ಗೋಚರಿಸುವುದಿಲ್ಲ. ಯಾವುದೇ ಬಾಹ್ಯಾಕಾಶ ನೌಕೆ ಅಲ್ಲಿಗೆ ತಲುಪಿಲ್ಲ, ಅದು ತನ್ನ ರಹಸ್ಯಗಳನ್ನು ಇಂದಿಗೂ ಹಿಡಿದಿಟ್ಟುಕೊಂಡ ಕಾರಣ ಅಲ್ಲಿನ ಸರಳವಾದ ವಿಷಯಗಳು ಕೂಡ ಭೂಮಿಯಿಂದ ಇಂದಿಗೂ ನಿಗೂಢವಾಗಿ ಕಾಣುತ್ತವೆ.

ಇದನ್ನೂ ಓದಿ-ಈ ಕಾರಣಗಳಿಗಾಗಿ ಚಂದ್ರಗ್ರಹಣದ ವೇಳೆ ಆಹಾರ ಸೇವನೆ ನಿಷೇಧ

ಚಂದ್ರನ ಕಪ್ಪು ಭಾಗವು ಭೂಮಿಯ ಮೇಲೆ ಗೋಚರಿಸುವುದಿಲ್ಲ
ಚಂದ್ರನು ನಮ್ಮ ಭೂಮಿಯನ್ನು ಸುತ್ತುವ ವೇಗದಲ್ಲಿಯೇ  ತನ್ನ ಅಕ್ಷದ ಸುತ್ತ ಕೂಡ ಸುತ್ತುತ್ತಾನೆ. ಆದ್ದರಿಂದ ಅದರ ಹೆಚ್ಚಿನ ಕಪ್ಪು ಭಾಗವು ಭೂಮಿಯ ಮೇಲಿನ ಜನರಿಗೆ ಎಂದಿಗೂ ಗೋಚರಿಸುವುದಿಲ್ಲ.

ಇದನ್ನೂ ಓದಿ-NASA Video: ಚಂದ್ರನ ದಕ್ಷಿಣ ಧ್ರುವದಿಂದ ಭೂಮಿ ಹೇಗೆ ಕಾಣಿಸುತ್ತೆ ಗೊತ್ತಾ? ವಿಡಿಯೋ ನೋಡಿ

ಬಾಹ್ಯಾಕಾಶ ಯೋಜನೆಗಳಲ್ಲಿ ಚೀನಾ ಅಮೆರಿಕ ಮತ್ತು ರಷ್ಯಾದೊಂದಿಗೆ ಪೈಪೋಟಿ ನಡೆಸುತ್ತಿದೆ. 
ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ಚೀನಾದ ಬಾಹ್ಯಾಕಾಶ ಯೋಜನೆಗಳನ್ನು ವೇಗಗೊಳಿಸಿದ್ದಾರೆ. ಚೀನಾ ಅಂತಿಮವಾಗಿ ಯುನೈಟೆಡ್ ಸ್ಟೇಟ್ಸ್ ಮತ್ತು ರಷ್ಯಾದೊಂದಿಗೆ ಸ್ಪರ್ಧಿಸಲು ಪ್ರಯತ್ನಿಸುತ್ತಿದೆ. ಬಾಹ್ಯಾಕಾಶ ನಿಲ್ದಾಣವಲ್ಲದೆ, ಚಂದ್ರನ ಮೇಲೆ ಬೇಸ್ ಕ್ಯಾಂಪ್ ನಿರ್ಮಿಸಲು ಚೀನಾ ಯೋಜಿಸುತ್ತಿದೆ. 2029 ರ ವೇಳೆಗೆ ಮಾನವರೊಂದಿಗೆ ಚಂದ್ರಯಾನವನ್ನು ಪ್ರಾರಂಭಿಸುವುದು ತನ್ನ ಗುರಿಯಾಗಿದೆ ಎಂದು ಚೀನಾದ ರಾಷ್ಟ್ರೀಯ ಬಾಹ್ಯಾಕಾಶ ಆಡಳಿತ ಹೇಳಿದ್ದು ಇಲ್ಲಿ ಗಮನಾರ್ಹ.

ಇದನ್ನೂ ಓದಿ-Moon Latest News: ಭೂವಿಯಿಂದ ಮುನಿಸಿಕೊಳ್ಳುತ್ತಿದ್ದಾನೆಯೇ ಚಂದಿರ? ಹೌದು ಎನ್ನುತ್ತೆ ಈ ವರದಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News