ಜಗತ್ತಿನಾದ್ಯಂತ ಕೆಲ ಕಾಲ ಡೌನ್ ಆದ ಟ್ವಿಟ್ಟರ್ ..!

ಪ್ರಪಂಚದಾದ್ಯಂತದ ಟ್ವಿಟ್ಟರ್ ಮಾಧ್ಯಮ ಬಳಕೆದಾರರು ಸಂಕ್ಷಿಪ್ತ ನಿಲುಗಡೆ ಕುರಿತಾಗಿ ದೂರು ನೀಡಿದ್ದಾರೆ.

Written by - Zee Kannada News Desk | Last Updated : Feb 12, 2022, 12:17 AM IST
  • ಪ್ರಪಂಚದಾದ್ಯಂತದ ಟ್ವಿಟ್ಟರ್ ಮಾಧ್ಯಮ ಬಳಕೆದಾರರು ಸಂಕ್ಷಿಪ್ತ ನಿಲುಗಡೆ ಕುರಿತಾಗಿ ದೂರು ನೀಡಿದ್ದಾರೆ.
 ಜಗತ್ತಿನಾದ್ಯಂತ ಕೆಲ ಕಾಲ ಡೌನ್ ಆದ ಟ್ವಿಟ್ಟರ್ ..! title=

ನವದೆಹಲಿ: ಪ್ರಪಂಚದಾದ್ಯಂತದ ಟ್ವಿಟ್ಟರ್ ಮಾಧ್ಯಮ ಬಳಕೆದಾರರು ಸಂಕ್ಷಿಪ್ತ ನಿಲುಗಡೆ ಕುರಿತಾಗಿ ದೂರು ನೀಡಿದ್ದಾರೆ.

ಡೌನ್ ಡಿಟೆಕ್ಟರ್ ಪ್ರಕಾರ, ಟ್ವಿಟರ್ ಸರ್ವರ್ ಭಾರತ ಮತ್ತು ಯುನೈಟೆಡ್ ಸ್ಟೇಟ್ಸ್ ಸೇರಿದಂತೆ ವಿಶ್ವದ ಹಲವು ಭಾಗಗಳಲ್ಲಿ ಸುಮಾರು ಒಂದು ಗಂಟೆಗಳ ಕಾಲ ಡೌನ್ ಆಗಿತ್ತು.ಶುಕ್ರವಾರದದಂದು ಭಾರತೀಯ ಕಾಲಮಾನ ರಾತ್ರಿ 10:30 ರ ಸುಮಾರಿಗೆ ಡೌನ್ ಆಗಿರುವ ಕುರಿತಾಗಿ ಮೊದಲು ವರದಿಯಾಗಿದೆ.

ಇದನ್ನೂ ಓದಿ-#JamesTeaser: ದೊಡ್ಮನೆ ಅಭಿಮಾನಿಗಳಿಗೆ ಬಿಗ್ ಗಿಫ್ಟ್; ಬಹುನಿರೀಕ್ಷಿತ 'ಜೇಮ್ಸ್' ಚಿತ್ರದ ಟೀಸರ್ ರಿಲೀಸ್

ಡೌನ್‌ಡೆಕ್ಟರ್ ಸುಮಾರು 15,000 ಬಳಕೆದಾರರ ನಿಲುಗಡೆ ವರದಿಗಳನ್ನು ತೋರಿಸಿದೆ. ನಂತರ, ಟ್ವಿಟ್ಟರ್ ಇದು ಹೆಚ್ಚಿನ ಸಂಖ್ಯೆಯ ಅಪ್ಲಿಕೇಶನ್ ಪ್ರೋಗ್ರಾಮಿಂಗ್ ಇಂಟರ್ಫೇಸ್ ದೋಷಗಳನ್ನು ಅನುಭವಿಸುತ್ತಿದೆ ಮತ್ತು ಪ್ರಸ್ತುತ ಸಮಸ್ಯೆಯನ್ನು ತನಿಖೆ ಮಾಡುತ್ತಿದೆ ಎಂದು ಹೇಳಿಕೆ ನೀಡಿತು.ಅಪ್ಲಿಕೇಶನ್ ಪ್ರೋಗ್ರಾಮಿಂಗ್ ಇಂಟರ್ಫೇಸ್, ಅಥವಾ API, ಅಪ್ಲಿಕೇಶನ್ ಸಾಫ್ಟ್‌ವೇರ್ ಅನ್ನು ನಿರ್ಮಿಸಲು ಮತ್ತು ಸಂಯೋಜಿಸಲು ಪ್ರೋಟೋಕಾಲ್‌ಗಳ ಒಂದು ಸೆಟ್ ಆಗಿದೆ.

ಇದನ್ನೂ ಓದಿ-10 Rupee Coin: 10 ರೂಪಾಯಿಯ ಯಾವ ನಾಣ್ಯ ಮಾನ್ಯವಾಗಿದೆ? ಗೊಂದಲ ನಿವಾರಿಸಿದ ಸರ್ಕಾರ

ರೆಡ್ಡಿಟ್‌ನಲ್ಲಿನ ಕೆಲವು ಬಳಕೆದಾರರು ತಮ್ಮ ಟ್ವಿಟರ್ ಖಾತೆಯಿಂದ ಲಾಗ್ ಔಟ್ ಆಗಿದ್ದಾರೆ ಎಂದು ದೂರಿದ್ದಾರೆ, ಆದರೆ ಇತರರು ಟ್ವೀಟ್‌ಗಳನ್ನು ಕಳುಹಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News