Amul Milk Price Hike: ಅಮುಲ್ (Amul) ಹಾಲಿನ ದರವನ್ನು ಮತ್ತೊಮ್ಮೆ ಹೆಚ್ಚಿಸಿದೆ. ದೇಶಾದ್ಯಂತ ಹಾಲಿನ ದರವನ್ನು ಲೀಟರ್ಗೆ 2 ರೂಪಾಯಿ ಹೆಚ್ಚಿಸಲು ಕಂಪನಿ ನಿರ್ಧರಿಸಿದೆ. ಹೊಸ ದರಗಳು ನಾಳೆಯಿಂದ ಅಂದರೆ ಮಾರ್ಚ್ 1 ರಿಂದ ಅನ್ವಯಿಸಲಿವೆ. ಹೊಸ ಬೆಲೆ (Amul Milk New Price) ಜಾರಿಯಾದ ನಂತರ ಅಹಮದಾಬಾದ್ ಮತ್ತು ಸೌರಾಷ್ಟ್ರ ಮಾರುಕಟ್ಟೆಗಳಲ್ಲಿ ಅಮುಲ್ ಗೋಲ್ಡ್ ಹಾಲಿನ ಬೆಲೆ ಅರ್ಧ ಲೀಟರ್ ಗೆ 30 ರೂ. ಅಮುಲ್ ತಾಜಾ ಹಾಲಿನ ಬೆಲೆ ಅರ್ಧ ಲೀಟರ್ ಗೆ 24 ರೂ ಮತ್ತು ಅಮುಲ್ ಶಕ್ತಿ ಹಾಲಿನ ಬೆಲೆ ಅರ್ಧ ಲೀಟರ್ಗೆ 27 ರೂ.ಆಗಿದೆ.
ಇದನ್ನೂ ಓದಿ-PM Kisan Yojana : ಪಿಎಂ ಕಿಸಾನ್ ರೈತರೆ ಈಗಲೇ ಈ ಮಾಡಿ ಕೆಲಸ : ಇಲ್ಲದಿದ್ದರೆ ಬರುವುದಿಲ್ಲ 11ನೇ ಕಂತಿನ ಹಣ!
ಬಿಹಾರದ ಕುರಿತು ಹೇಳುವುದಾದರೆ, ಪಾಟ್ನಾದಲ್ಲಿ 56 ರೂ.ಗೆ ಮಾರಾಟವಗುತ್ತಿದ್ದ ಅಮುಲ್ ಗೋಲ್ಡ್ ಬೆಲೆ ಈಗ 58 ರೂ.ಗೆ ಏರಿಕೆಯಾಗಿದೆ. 49 ರೂ.ಗೆ ಮಾರಾಟವಾಗುತ್ತಿದ್ದ ಅಮುಲ್ ಶಕ್ತಿಯ ಬೆಲೆ ಮಾರ್ಚ್ 1 ರಿಂದ ಪಾಟ್ನಾದಲ್ಲಿ 51 ರೂ.ಗೆ ಸಿಗಲಿದೆ. ತಾಜಾ ಹಾಲಿನ ದರ ಲೀಟರ್ಗೆ 44 ರೂ.ನಿಂದ 46 ರೂ.ಗೆ ಏರಿಕೆಯಾಗಿದೆ. ಹಾಲು ಹೊರತುಪಡಿಸಿ ಹಾಲಿನ ಉತ್ಪನ್ನಗಳ (Amul Milk Products) ಬೆಲೆಯಲ್ಲಿ ಅಮೂಲ್ ಯಾವುದೇ ಏರಿಕೆಯನ್ನು ಮಾಡಿಲ್ಲ.
ಇದನ್ನೂ ಓದಿ-ಸೆಬಿಯ ಮೊದಲ ಮಹಿಳಾ ಅಧ್ಯಕ್ಷರಾಗಿ ಮಾಧಬಿ ಪುರಿ ಬುಚ್ ನೇಮಕ
ಇನ್ನೂರು ಗ್ರಾಂ ಮೊಸರಿನ ಬೆಲೆ ಮೊದಲಿನಂತೆ 15 ರೂ., 400 ಗ್ರಾಂ ಮೊಸರು ಪ್ಯಾಕೆಟ್ ಬೆಲೆ 28 ರೂ. ಮತ್ತು ಒಂದು ಕಿಲೋಗ್ರಾಂ ಮೊಸರು ಬೆಲೆ 63 ರೂ. ಮುಂದುವರೆಯಲಿದೆ(Business News In Kannada). ಅದೇ ರೀತಿ ಮಾರುಕಟ್ಟೆಯಲ್ಲಿ ಲಸ್ಸಿ ರೂ.10 ಪ್ಯಾಕೆಟ್ ಹಾಗೂ ಪನೀರ್ ರೂ.76ಕ್ಕೆ ಇನ್ನೂರು ಗ್ರಾಂ ಹಾಗೂ ಒಂದು ಕಿಲೋ ರೂ.352ಕ್ಕೆ ಸಿಗಲಿದೆ.
ಇದನ್ನೂ ಓದಿ-7th Pay Commission : ಕೇಂದ್ರ ನೌಕರರಿಗೆ ಸಿಹಿ ಸುದ್ದಿ! ಈ ತಿಂಗಳ ಸಂಬಳದಲ್ಲಿ ನಿಮಗೆ ಸಿಗಲಿದೆ 38,692 ರೂ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.