Exit Poll Result:ಗಾಬರಿಯಿಂದ ಗೋವಾಗೆ ಡಿಕೆಶಿ ದೌಡು! ಟ್ರಬಲ್ "ಶೂಟ್" ಮಾಡುತ್ತಾರಾ ಕೈ ನಾಯಕ?

ಇಂದು ರಾತ್ರಿ ವಿಶೇಷ ವಿಮಾನದ ಮೂಲಕ ಡಿಕೆಶಿ ಗೋವಾಗೆ ತೆರಳಲಿದ್ದು, ಎರಡು ದಿನಗಳ ಕಾಲ ಗೋವಾದಲ್ಲಿ ಬೀಡು ಬಿಡಲಿದ್ದಾರೆ. ನಿನ್ನೆ ಎಕ್ಸಿಟ್ ಪೋಲ್ (Exit Poll) ಫಲಿತಾಂಶ ಪ್ರಕಟಗೊಂಡಿತ್ತು. 

Written by - Prashobh Devanahalli | Edited by - Chetana Devarmani | Last Updated : Mar 8, 2022, 01:42 PM IST
  • ಫಲಿತಾಂಶಕ್ಕೂ ಮುನ್ನವೇ ಸರ್ಕಾರ ರಚಿಸಲು ಕಾಂಗ್ರೆಸ್ ಪ್ರಯತ್ನ
  • ಹೈ ಕಮಾಂಡ್‌ ಸೂಚನೆಯಂತೆ ಗೋವಾಗೆ ದೌಡಾಯಿಸಿದ ಡಿ.ಕೆ.ಶಿವಕುಮಾರ್
  • ಗೋವಾದಲ್ಲಿ ಈ ಬಾರಿ ಸರ್ಕಾರ ರಚಿಸುವ ನಿರೀಕ್ಷೆಯಲ್ಲಿ ಇದ್ದ ಕಾಂಗ್ರೆಸ್
  • ತಲೆನೋವಾಗಿ ಪರಿಣಮಿಸಿದ ಎಕ್ಸಿಟ್ ಪೋಲ್ ಫಲಿತಾಂಶ
  • ಟ್ರಬಲ್ "ಶೂಟ್" ಮಾಡುತ್ತಾರಾ ಕೈ ನಾಯಕ?
Exit Poll Result:ಗಾಬರಿಯಿಂದ ಗೋವಾಗೆ ಡಿಕೆಶಿ ದೌಡು! ಟ್ರಬಲ್ "ಶೂಟ್" ಮಾಡುತ್ತಾರಾ ಕೈ ನಾಯಕ?  title=
ಡಿ.ಕೆ.ಶಿವಕುಮಾರ್

ಬೆಂಗಳೂರು: ಫಲಿತಾಂಶಕ್ಕೂ ಮುನ್ನವೇ ಸರ್ಕಾರ ರಚಿಸಲು ಕಾಂಗ್ರೆಸ್ (Congress) ಪ್ರಯತ್ನ ನಡೆಸುತ್ತಿದ್ದು, ಹೈ ಕಮಾಂಡ್‌ ಸೂಚನೆಯಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (DK Shivakumar) ಗೋವಾಗೆ ದೌಡಾಯಿಸುತ್ತಿದ್ದಾರೆ.

ಇಂದು ರಾತ್ರಿ ವಿಶೇಷ ವಿಮಾನದ ಮೂಲಕ ಡಿಕೆಶಿ ಗೋವಾಗೆ ತೆರಳಲಿದ್ದು, ಎರಡು ದಿನಗಳ ಕಾಲ ಗೋವಾದಲ್ಲಿ ಬೀಡು ಬಿಡಲಿದ್ದಾರೆ. ನಿನ್ನೆ ಎಕ್ಸಿಟ್ ಪೋಲ್ (Exit Poll) ಫಲಿತಾಂಶ ಪ್ರಕಟಗೊಂಡಿತ್ತು. ಗೋವಾದಲ್ಲಿ ಈ ಬಾರಿ ಸರ್ಕಾರ ರಚಿಸುವ ನಿರೀಕ್ಷೆಯಲ್ಲಿ ಇದ್ದ ಕಾಂಗ್ರೆಸ್ ಗೆ (Congress) ಎಕ್ಸಿಟ್ ಪೋಲ್ ಫಲಿತಾಂಶ ತಲೆನೋವಾಗಿ ಪರಿಣಮಿಸಿದೆ. 

ಇದನ್ನೂ ಓದಿ:  Punjab Exit Poll Update 2022: ಪಂಜಾಬ್ ನಲ್ಲಿ AAP ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮುವ ಸಾಧ್ಯತೆ!

ಬಹುತೇಕ ಎಕ್ಸಿಟ್ ಪೋಲ್ ಗಳ ಪ್ರಕಾರ, ಗೋವಾದಲ್ಲಿ ಬಹುಮತ ಪಡೆಯಲು ಸಾಧ್ಯವಾಗದ ಪರಿಸ್ಥಿತಿ ಹಿನ್ನೆಲೆ ಅತಂತ್ರ ಆಗುವ ಲಕ್ಷಣ ಕಂಡುಬಂದಿತ್ತು. ಪಂಚರಾಜ್ಯ ಚುನಾವಣಾ ಎಕ್ಸಿಟ್ ಪೋಲ್ ಪ್ರಕಾರ, ಯಾವ ರಾಜ್ಯದಲ್ಲೂ ಕಾಂಗ್ರೆಸ್ ಅಧಿಕಾರಕ್ಕೆ ಬರುವ ಲಕ್ಷಣ ತೋರಿಲ್ಲ. ಹೀಗಾಗಿ ಮುಖಭಂಗ ತಡೆಯಲು ಕಾಂಗ್ರೆಸ್ ಶತಾಯ ಗತಾಯ ಗೋವಾದಲ್ಲಿ ಸರ್ಕಾರ ರಚನೆಗೆ ಸರ್ಕಸ್ ನಡೆಸುತ್ತಿದೆ.

ಗೋವಾದ ಕಾಂಗ್ರೆಸ್ ಉಸ್ತುವಾರಿಯಾಗಿ ದಿನೇಶ್ ಗುಂಡೂರಾವ್ (Dinesh Gundurao) ಅವರಿಗೆ ಎಐಸಿಸಿ ಜವಾಬ್ದಾರಿ ನೀಡಿದೆ. ಹೀಗಿದ್ದರೂ ಟ್ರಬಲ್ ಶೂಟರ್ ಎಂದೇ ಗುರುತಿಸಿಕೊಂಡಿರುವ ಡಿ.ಕೆ.ಶಿವಕುಮಾರ್ ಅವರನ್ನು ಗೋವಾಗೆ ತೆರಳಲು ಹೈಕಮಾಂಡ್ ಸೂಚನೆ ನೀಡಿದೆ.

ಗೋವಾದಲ್ಲಿ ಪಕ್ಷಾಂತರವೇ ಕಾಂಗ್ರೆಸ್ ಗೆ ಸವಾಲಾಗಿದೆ.ಈ ಹಿಂದೆ ಪಕ್ಷಾಂತರ ತಪ್ಪಿಸುವ ನಿಟ್ಟಿನಲ್ಲಿ ಗೋವಾ (Goa Election) ಕಾಂಗ್ರೆಸ್ ಅಭ್ಯರ್ಥಿಗಳನ್ನು ದೇವರ ಮುಂದೆ ಆಣೆ ಪ್ರಮಾಣ ಮಾಡಿಸಲಾಗಿತ್ತು. ಈಗ ಗೋವಾ ಚುನಾವಣೆಯಲ್ಲಿ ಕಾಂಗ್ರೆಸ್-ಬಿಜೆಪಿ ನಡುವೆ ತೀವ್ರ ಪೈಪೋಟಿ ಏರ್ಪಡುವ ಸಾಧ್ಯತೆ ಹಿನ್ನೆಲೆಯಲ್ಲಿ ಅಧಿಕಾರ ಹಿಡಿಯಲು ಕಾಂಗ್ರೆಸ್ ತಯಾರಿ ನಡೆಸುತ್ತಿದೆ.

ಇದನ್ನೂ ಓದಿ:  Uttarakhand Exit Poll 2022: ಉತ್ತರಾಖಂಡ್ ನಲ್ಲಿ ಅಧಿಕಾರ ಉಳಿಸಿಕೊಳ್ಳಲಿದೆಯಾ BJP? Exit Poll ಏನ್ ಹೇಳುತ್ತಿದೆ?

ಮಾರ್ಚ್ 10ಕ್ಕೆ ಪಂಚರಾಜ್ಯಗಳ ಚುನಾವಣೆ ಫಲಿತಾಂಶ ಪ್ರಕಟಗೊಳ್ಳಲಿದೆ. ಗೋವಾ ಹೊರತು ಪಡಿಸಿ ಬೇರೆ ಯಾವ ರಾಜ್ಯದಲ್ಲೂ ಕಾಂಗ್ರೆಸ್ ಗೆ ಸಮಾಧಾನ ಆಗುವ ಎಕ್ಸಿಟ್ ಪೋಲ್ ಫಲಿತಾಂಶ ಬಂದಿರಲಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News