'ಆಟ ಇನ್ನೂ ಮುಗಿದಿಲ್ಲ' ಎಂದು ಮಮತಾ ಬಿಜೆಪಿಗೆ ಹೇಳಿದ್ದೇಕೆ?

ಮುಂಬರುವ ರಾಷ್ಟ್ರಪತಿ ಚುನಾವಣೆಯಲ್ಲಿ ಗೆಲುವು ಸಾಧಿಸುವುದು ಬಿಜೆಪಿಗೆ ಅಷ್ಟು ಸುಲಭವಲ್ಲ, ಏಕೆಂದರೆ ಅದು ದೇಶದ ಒಟ್ಟು ಶಾಸಕರ ಅರ್ಧದಷ್ಟು ಶಾಸಕರನ್ನು ಹೊಂದಿಲ್ಲ ಎಂದು ಹೇಳಿದ್ದಾರೆ.

Written by - Zee Kannada News Desk | Last Updated : Mar 16, 2022, 08:02 PM IST
  • 'ಆಟ ಇನ್ನೂ ಮುಗಿದಿಲ್ಲ. ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಕಳೆದ ಬಾರಿಗಿಂತ ಈ ಬಾರಿ ಸಮಾಜವಾದಿಯಂತಹ ಪಕ್ಷಗಳು ಹೆಚ್ಚಿನ ಶಾಸಕರನ್ನು ಹೊಂದಿವೆ ಎಂದು ಅವರು ಹೇಳಿದರು.
'ಆಟ ಇನ್ನೂ ಮುಗಿದಿಲ್ಲ' ಎಂದು ಮಮತಾ ಬಿಜೆಪಿಗೆ ಹೇಳಿದ್ದೇಕೆ?    title=

ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ನಾಲ್ಕು ರಾಜ್ಯಗಳಲ್ಲಿ ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದರೂ, ಮುಂಬರುವ ರಾಷ್ಟ್ರಪತಿ ಚುನಾವಣೆಯಲ್ಲಿ ಗೆಲುವು ಸಾಧಿಸುವುದು ಬಿಜೆಪಿಗೆ ಅಷ್ಟು ಸುಲಭವಲ್ಲ, ಏಕೆಂದರೆ ಅದು ದೇಶದ ಒಟ್ಟು ಶಾಸಕರ ಅರ್ಧದಷ್ಟು ಶಾಸಕರನ್ನು ಹೊಂದಿಲ್ಲ ಎಂದು ಹೇಳಿದ್ದಾರೆ.

''ಆಟ ಇನ್ನೂ ಮುಗಿದಿಲ್ಲ' ಎಂದು ಪ್ರತಿಪಾದಿಸಿದ ಮಮತಾ ಬ್ಯಾನರ್ಜಿ (Mamata Banerjee),"ಈ ಬಾರಿ ಬಿಜೆಪಿಗೆ ರಾಷ್ಟ್ರಪತಿ ಚುನಾವಣೆ ಅಷ್ಟು ಸುಲಭವಲ್ಲ. ಅವರು ದೇಶದ ಒಟ್ಟು ಶಾಸಕರ ಅರ್ಧದಷ್ಟು ಶಾಸಕರನ್ನು ಹೊಂದಿಲ್ಲ. ವಿರೋಧ ಪಕ್ಷಗಳು ಒಟ್ಟಾಗಿ ರಾಷ್ಟ್ರದಾದ್ಯಂತ ಹೆಚ್ಚು ಶಾಸಕರನ್ನು ಹೊಂದಿವೆ," ಎಂದು ಅವರು ವಿಧಾನಸಭೆಯಲ್ಲಿ ಹೇಳಿದರು.

ಇದನ್ನೂ ಓದಿ: ಬಿಜೆಪಿ ಪ್ರಜಾಪ್ರಭುತ್ವವನ್ನು ನಾಶಪಡಿಸಲು ಯತ್ನಿಸುತ್ತಿದೆ- ಮಮತಾ ಬ್ಯಾನರ್ಜೀ

'ಆಟ ಇನ್ನೂ ಮುಗಿದಿಲ್ಲ. ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಕಳೆದ ಬಾರಿಗಿಂತ ಈ ಬಾರಿ ಸಮಾಜವಾದಿಯಂತಹ ಪಕ್ಷಗಳು ಹೆಚ್ಚಿನ ಶಾಸಕರನ್ನು ಹೊಂದಿವೆ ಎಂದು ಹೇಳಿದರು.

ಸಂಸತ್ತಿನ ಚುನಾಯಿತ ಸದಸ್ಯರು ಮತ್ತು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಶಾಸಕಾಂಗ ಸಭೆಗಳನ್ನು ಒಳಗೊಂಡಿರುವ ಚುನಾವಣಾ ಕಾಲೇಜಿನ ಮೂಲಕ ಪರೋಕ್ಷವಾಗಿ ರಾಷ್ಟಪತಿ ಚುನಾವಣೆಯನ್ನು ನಡೆಸಲಾಗುತ್ತದೆ.1971 ರಿಂದ ರಾಜ್ಯದ ಜನಸಂಖ್ಯೆಯನ್ನು ಗಣನೆಗೆ ತೆಗೆದುಕೊಳ್ಳುವ ಸೂತ್ರದ ಮೂಲಕ ರಾಜ್ಯ ಶಾಸಕಾಂಗಗಳಿಂದ ಪ್ರತಿ ಮತದಾರನ ಮತಗಳ ಸಂಖ್ಯೆ ಮತ್ತು ಮೌಲ್ಯವನ್ನು ರೂಪಿಸಲಾಗಿದೆ.

ಇದನ್ನೂ ಓದಿ:ಮೊದಲೇ ಭಾರತೀಯರನ್ನು ವಾಪಸ್ ಯಾಕೆ ಕರೆ ತರಲಿಲ್ಲ?- ಪ್ರಧಾನಿ ಮೋದಿ ವಿರುದ್ಧ ದೀದಿ ವಾಗ್ದಾಳಿ

2024 ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ವಿರೋಧಿ ಒಕ್ಕೂಟವನ್ನು ಸಜ್ಜುಗೊಳಿಸಲು ಯತ್ನಿಸುತ್ತಿರುವ ಮಮತಾ ಬ್ಯಾನರ್ಜೀ ಅವರು ದೇಶದಲ್ಲಿ ಬಿಜೆಪಿ ವಿರುದ್ಧ ಹೋರಾಡಲು ತಯಾರಿ ನಡೆಯುತ್ತಿದೆ ಎಂದು ಹೇಳಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News