/kannada/photo-gallery/this-south-star-has-helped-more-than-500-families-these-are-the-netizens-who-are-the-real-heroes-221337 500ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವಾಗಿದ್ದಾರೆ ಈ ಸೌತ್ ಸ್ಟಾರ್!!  ರಿಯಲ್ ಹೀರೋ ಇವರೇ ಎಂದ ನೆಟ್ಟಿಗರು 500ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವಾಗಿದ್ದಾರೆ ಈ ಸೌತ್ ಸ್ಟಾರ್!! ರಿಯಲ್ ಹೀರೋ ಇವರೇ ಎಂದ ನೆಟ್ಟಿಗರು 221337

ನವದೆಹಲಿ: ಆರ್‌ಪಿ ಗ್ರೂಪ್ ಆಫ್ ಕಂಪನಿಗಳ(RP Group of Companies) ಅಧ್ಯಕ್ಷ ಬಿ.ರವಿ ಪಿಳ್ಳೈ ಅವರು ಬರೋಬ್ಬರಿ 100 ಕೋಟಿ ರೂ. ಮೌಲ್ಯದ ಹೆಲಿಕಾಪ್ಟರ್ ಖರೀದಿಸಿದ್ದಾರೆ. ಈ ಮೂಲಕ ಏರ್‌ಬಸ್ H145 ಹೆಲಿಕಾಪ್ಟರ್‌ ಹೊಂದಿರುವ ಮೊದಲ ಭಾರತೀಯನೆಂಬ ಹೆಗ್ಗಳಿಕೆಗೆ ಪಾತ್ರರಾಗುವ ಮೂಲಕ ವಿಶೇಷ ದಾಖಲೆ ನಿರ್ಮಿಸಿದ್ದಾರೆ.

ನೂರು ಕೋಟಿ ರೂ. ಮೌಲ್ಯದ ಹೆಲಿಕಾಪ್ಟರ್‍(100 Crore Helicopter)ನ ಹೆಮ್ಮೆಯ ಮಾಲೀಕರಾಗಿರುವ 68 ವರ್ಷದ ಈ ಬಿಲಿಯನೇರ್ ಪ್ರಸ್ತುತ $2.5 ಶತಕೋಟಿ ರೂ. ಮೌಲ್ಯವನ್ನು ಹೊಂದಿದ್ದಾರೆ. ಇವರ ಒಡೆತನದಲ್ಲಿರುವ ವಿವಿಧ ಕಂಪನಿಯಲ್ಲಿ ಸುಮಾರು 70,000 ಉದ್ಯೋಗಿಗಳು ಕೆಲಸ ಮಾಡುತ್ತಿದ್ದಾರೆ. ಯುಎಇ ಮತ್ತು ಎಲ್ಲಾ ಮಧ್ಯಪ್ರಾಚ್ಯ ದೇಶಗಳಲ್ಲಿ ರವಿ ಪಿಳ್ಳೈ(B Ravi Pillai) ಉದ್ಯಮವನ್ನು ವಿಸ್ತರಿಸಿದ್ದಾರೆ.

ಇದನ್ನೂ ಓದಿ: LPG Price: ಅಗ್ಗವಾಯ್ತು LPG Cylinder! ಹಣದುಬ್ಬರದ ನಡುವೆಯ ಈ ಸಿಲಿಂಡರ್ ಬೆಲೆಯಲ್ಲಿ ಇಳಿಕೆ

100 ಕೋಟಿ ರೂ. ಅಂದಮೇಲೆ ಈ ಐಷಾರಾಮಿ ಹೆಲಿಕಾಪ್ಟರ್‍ನ(Airbus H 145 Helicopter)ಲ್ಲಿ ಹಲವಾರು ವಿಶೇಷತೆಗಳಿರಲೇಬೇಕಲ್ಲವೇ? ಹೌದು, ಈ ಏರ್‌ಬಸ್ H145 ಹೆಲಿಕಾಪ್ಟರ್‌ ನಲ್ಲಿ ಅನೇಕ ಸೌಲಭ್ಯಗಳು ಲಭ್ಯವಿವೆ. ಇದು ಇತ್ತೀಚಿನ ಎಲ್ಲಾ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿರುವ ಅತ್ಯಾಧುನಿಕ ಹೆಲಿಕಾಪ್ಟರ್ ಆಗಿದ್ದು, ಪೈಲಟ್ ಸೇರಿ ಒಟ್ಟು 8 ಜನರು ಇದರಲ್ಲಿ ಪ್ರಯಾಣಿಸಬಹುದು.

ಈ ಹೆಲಿಕಾಪ್ಟರ್ ಸಮುದ್ರ ಮಟ್ಟದಿಂದ 20,000 ಅಡಿ ಎತ್ತರದಿಂದಲೂ ಲ್ಯಾಂಡಿಂಗ್ ಮತ್ತು ಟೇಕ್ ಆಫ್ ಆಗುವ ಸಾಮರ್ಥ್ಯವನ್ನು ಹೊಂದಿದೆ. ಅಪಘಾತದ ತುರ್ತು ಸಂದರ್ಭದಲ್ಲಿ ಪ್ರಯಾಣಿಕರ ಸುರಕ್ಷತೆಗೆ ವಿಶೇಷ ತಂತ್ರಜ್ಞಾನವನ್ನು ಈ ಹೆಲಿಕಾಪ್ಟರ್ ಹೊಂದಿದೆಯಂತೆ. ಇದಲ್ಲದೆ H145 ಸುಧಾರಿತ ವೈರ್‌ಲೆಸ್ ಸಂವಹನ ವ್ಯವಸ್ಥೆ ಸಹ ಹೊಂದಿದೆ.

ಇದನ್ನೂ ಓದಿ: ಮಾರುಕಟ್ಟೆಗೆ ಬರುತ್ತಿದೆ ಅಗ್ಗದ ಬೆಲೆಯ ಎರಡು ಮಾರುತಿ ಕಾರುಗಳು..!

ಈ ಹೆಲಿಕಾಪ್ಟರ್‌ ಪಿಳ್ಳೈ(Kerala Businessman) ಅವರ ಪ್ರವಾಸೋದ್ಯಮ ಚಟುವಟಿಕೆಗಳಿಗೆ ಹೆಚ್ಚಿನ ಅನುಕೂಲ ಕಲ್ಪಿಸಲಿದೆ. ಏಕೆಂದರೆ ಸಾವಿರಾರು ಕೋಟಿ ರೂ. ಆಸ್ತಿ ಒಡೆಯನಾಗಿರುವ ಇವರು ರಾಜ್ಯದಾದ್ಯಂತ ಹಲವಾರು ಐಷಾರಾಮಿ ಹೋಟೆಲ್‍ ಗಳನ್ನು ಹೊಂದಿದ್ದಾರೆ. ರಾಜ್ಯದ ಪ್ರವಾಸಿ ತಾಣಗಳಾದ್ಯಂತ ತಮ್ಮ ಅತಿಥಿಗಳನ್ನು ಸಾಗಿಸಲು ಈ ಹೆಲಿಕಾಪ್ಟರ್(H145 Luxury Helicopter) ಬಳಕೆಯಾಗುತ್ತದೆ ಎಂದು ಆರ್‌ಪಿ ಗ್ರೂಪ್‌ನ ಉನ್ನತ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಆರ್‌ಪಿ ಗ್ರೂಪ್(RP Group of Companies) ಕೋಯಿಕ್ಕೋಡ್‌ನ ‘ದಿ ರವಿಜ್ ಕಡವು’, ಕೊಲ್ಲಂನ ‘ದಿ ರವಿಜ್ ಅಷ್ಟಮುಡಿ’ ಮತ್ತು ತಿರುವನಂತಪುರಂನ ‘ದಿ ರವಿಜ್ ಕೋವಲಂ’ನಲ್ಲಿ ಹೆಲಿಪ್ಯಾಡ್‌ಗಳನ್ನು ಹೊಂದಿದೆ. ಕಡಿಮೆ ಪ್ರೊಫೈಲ್ ಅನ್ನು ನಿರ್ವಹಿಸುವ ಪಿಳ್ಳೈ ತಮ್ಮ ಚಾರಿಟಿ ಚಟುವಟಿಕೆಗಳಿಗೆ ಮತ್ತು ರಾಜಕೀಯ ಪಕ್ಷಗಳಾದ್ಯಂತ ಉನ್ನತ ರಾಜಕೀಯ ನಾಯಕರೊಂದಿಗಿನ ನಿಕಟ ಸ್ನೇಹ ಹೊಂದಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Section: 
English Title: 
This Billionaire just became the first Indian to own an ₹100 crore luxury helicopter
News Source: 
Home Title: 

ಐಷಾರಾಮಿ ಹೆಲಿಕಾಪ್ಟರ್ ಖರೀದಿಸಿದ RP Group ಅಧ್ಯಕ್ಷ; ಇದು ಭಾರತದಲ್ಲಿಯೇ ಮೊದಲು!

ಐಷಾರಾಮಿ ಹೆಲಿಕಾಪ್ಟರ್ ಖರೀದಿಸಿದ RP Group ಅಧ್ಯಕ್ಷ; ಇದು ಭಾರತದಲ್ಲಿಯೇ ಮೊದಲು!
Caption: 
100 ಕೋಟಿ ರೂ. ಮೌಲ್ಯದ ಹೆಲಿಕಾಪ್ಟರ್ ಖರೀದಿ
Yes
Is Blog?: 
No
Tags: 
Facebook Instant Article: 
Yes
Highlights: 

100 ಕೋಟಿ ರೂ. ಮೌಲ್ಯದ ಹೆಲಿಕಾಪ್ಟರ್ ಖರೀದಿಸಿದ ಆರ್‌ಪಿ ಗ್ರೂಪ್ ಆಫ್ ಕಂಪನಿಗಳ ಅಧ್ಯಕ್ಷ

ಏರ್‌ಬಸ್ H145 ಹೆಲಿಕಾಪ್ಟರ್‌ ನ ಹೆಮ್ಮೆಯ ಮಾಲೀಕರಾದ ಕೇರಳದ ಖ್ಯಾತ ಉದ್ಯಮಿ ಬಿ.ರವಿ ಪಿಳ್ಳೈ

ಅತ್ಯಾಧುನಿಕ ಸೌಕರ್ಯ & ಐಷಾರಾಮಿ ಸೌಲಭ್ಯ ಹೊಂದಿರುವ ಹೆಲಿಕಾಪ್ಟರ್ ಹೊಂದಿರುವ ಮೊದಲ ಭಾರತೀಯ

Mobile Title: 
ಐಷಾರಾಮಿ ಹೆಲಿಕಾಪ್ಟರ್ ಖರೀದಿಸಿದ RP Group ಅಧ್ಯಕ್ಷ; ಇದು ಭಾರತದಲ್ಲಿಯೇ ಮೊದಲು!
Publish Later: 
No
Publish At: 
Tuesday, March 22, 2022 - 17:50
Created By: 
Puttaraj K Alur
Updated By: 
Puttaraj K Alur
Published By: 
Puttaraj K Alur
Request Count: 
2
Is Breaking News: 
No