ಬೆಂಗಳೂರು: ಬಿಜೆಪಿ ಆಡಳಿತದ ರಾಜ್ಯ ಸರ್ಕಾರ 40% ಕಮಿಷನ್ ಪಡೆಯುತ್ತಿದೆ ಎಂದು ಗುತ್ತಿಗೆದಾರರ ಪತ್ರ ವಿಚಾರಕ್ಕೆ ನಿಯಮ 60 ರಡಿ ಕೋರಿದ್ದನ್ನ ಸ್ಪೀಕರ್ ಕಾಗೇರಿ ತಿರಸ್ಕಾರ ಮಾಡಿದಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ಕೆಂಡಾಮಂಡಲವಾದ ಘಟನೆ ಇಂದು ಕಲಾಪದಲ್ಲಿ ನಡೆದಿದೆ.
ಇದನ್ನೂ ಓದಿ: DogMan ರಾಮ್ ಶ್ವಾನಪ್ರೀತಿಗೆ ಪುನೀತ್ ಕೂಡಾ ಶಹಬ್ಬಾಸ್ ಅಂದಿದ್ರು..!
40% ಕಮಿಷನ್ ಆರೋಪ ವಿಚಾರ ಚರ್ಚೆ ಕುರಿತು ನಿಲುವಳಿ ನೋಟೀಸ್ ತಿರಸ್ಕಾರ ಮಾಡಿದ್ದ ಸ್ಪೀಕರ್ ವಿರುದ್ಧ ಸಿದ್ದರಾಮಯ್ಯ (Siddaramaiah) ಅವರು ಆಕ್ಷೇಪ ವ್ಯಕ್ತಪಡಿಸಿ,ಈಗ ನಿಲುವಳಿ ಪ್ರಸ್ತಾಪಕ್ಕೆ ಅವಕಾಶ ಕೊಡಿ ಎಂದು ಆಗ್ರಹ ಮಾಡಿದರು. 40% ಕಮೀಷನ್ ವಿಚಾರವಾಗಿ ಗುತ್ತಿಗೆದಾರರು ಪ್ರಧಾನಿಗೇ ಪತ್ರ ಬರೆದಿದ್ದಾರೆ.ಈ ಸರ್ಕಾರದಲ್ಲಿ 40% ಕಮೀಷನ್ ಕೊಡ್ಬೇಕು ಅಂತ ಆರೋಪ ಮಾಡಿದ್ದಾರೆ.ಬೆಳಗಾವಿ ಅಧಿವೇಶನದಲ್ಲಿ ಚರ್ಚೆಗೆ ಕೊಡ್ಲಿಲ್ಲ.ಜಂಟಿ ಅಧಿವೇಶನದಲ್ಲಿ ಚರ್ಚೆಯೇ ಆಗಿಲ್ಲ, ಈಗ ಈ ಅಧಿವೇಶನದಲ್ಲಿ ಚರ್ಚೆಗೆ ಕೊಡಿ ಎಂದು ಸಿದ್ದರಾಮಯ್ಯ ಆಗ್ರಹಿಸಿದರು.
Ravindra Jadeja : ಒಂದು ವಾರದಲ್ಲಿ ನಂಬರ್-1 ಸ್ಥಾನ ಕಳೆದುಕೊಂಡ ರವೀಂದ್ರ ಜಡೇಜಾ!
ಈ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿ,40% ಕಮೀಷನ್ ವಿಷಯದ ಮೇಲೆ ನಾವು ಚರ್ಚೆಗೆ ಸಿದ್ಧ.ಆದ್ರೆ ಬೇರೆ ನಿಯಮದಡಿ ಚರ್ಚೆಗೆ ತನ್ನಿ, ನಿಯಮ 60 ರಲ್ಲಿ ಇದು ಬರಲ್ಲ ಎಂದರು.ಇವರಿಗೆ ಧ್ವನಿಗೂಡಿಸಿದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಸಿದ್ದರಾಮಯ್ಯಗೆ ಸಾಕಷ್ಟು ಅನುಭವ ಇದೆ.ಅವರು ಸಿಎಂ ಆಗಿದ್ದವರು, ಈಗಾಗಲೇ ಒಮ್ಮೆ ಸ್ಪೀಕರ್ ನಿಲುವಳಿಯನ್ನು ತಿರಸ್ಕರಿಸಿದ್ದಾರೆ.ಈಗ ಮತ್ತೆ ಪ್ರಸ್ತಾಪ ಮಾಡೋದು ಅಕ್ಷಮ್ಯ ಅಪರಾಧ.ವಿಪಕ್ಷ ನಾಯಕರಾಗಿ ನಿಮಗೆ ಇದು ಶೋಭೆ ತರಲ್ಲ.ನೀವು ಸ್ಪೀಕರ್ ರೂಲಿಂಗ್ ಪ್ರಶ್ನೆ ಮಾಡೋದು ಸರಿಯಲ್ಲ ಎಂದು ಪ್ರತಿಕ್ರಿಯಿಸಿದರು.
ಕೊನೆಗೂ 40% ಕಮೀಷನ್ ಆರೋಪದ ನಿಲುವಳಿ ಸೂಚನೆಯ ಚರ್ಚೆಗೆ ಅವಕಾಶ ಕೊಡದ ಸ್ಪೀಕರ್ ನಡೆ ಬಗ್ಗೆ ಸಿದ್ದರಾಮಯ್ಯ ಕೆಂಡಕಾರುತ್ತ, ನೀವೆಲ್ಲ ತೀರ್ಮಾನ ಮಾಡಿದಂತಿದೆ, ಅದಕ್ಕೆ ಅವಕಾಶ ಕೊಡ್ಲಿಲ್ಲ ಎಂದು ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.