Amarnath Yatra 2022: ಅಮರನಾಥ ಯಾತ್ರೆಯು ಈ ವರ್ಷ ಜೂನ್ 30 ರಿಂದ ಜಮ್ಮು ಮತ್ತು ಕಾಶ್ಮೀರದ (Jammu And Kashmir) ರಾಜ್ಯಪಾಲರ ಕಚೇರಿಯಿಂದ (Jammu And Kashmir Governor Office) ಪ್ರಾರಂಭವಾಗಲಿದೆ. ಈ ಬಾರಿಯ ಅಮರನಾಥ ಯಾತ್ರೆಯು 47 ದಿನಗಳ ಕಾಲ ನಡೆಯಲಿದ್ದು, ಸಂಪ್ರದಾಯದಂತೆ ರಕ್ಷಾ ಬಂಧನ ದಿನದಂದು ಮುಕ್ತಾಯವಾಗಲಿದೆ ಎಂದು ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲರ ಕಚೇರಿ ಮಾಹಿತಿ ನೀಡಿದೆ. ಭಕ್ತರು ಪ್ರಯಾಣದ ಸಮಯದಲ್ಲಿ ಕರೋನಾ ಪ್ರೋಟೋಕಾಲ್ (Covid-19 Protocol) ಅನ್ನು ಅನುಸರಿಸಬೇಕು ಎಂದೂ ಕೂಡ ಸೂಚಿಸಲಾಗಿದೆ.
Today chaired Board meeting of Shri Amarnathji Shrine Board. The 43-day holy pilgrimage will commence on 30th June with all covid protocols in place & culminate, as per the tradition,on the day of Raksha Bandhan.We had in-depth discussion on various issues also on upcoming Yatra. pic.twitter.com/MxbYqJrVDL
— Office of LG J&K (@OfficeOfLGJandK) March 27, 2022
ಇದನ್ನೂ ಓದಿ-Python Swallow Deer Video: ಜಿಂಕೆಯನ್ನೇ ನುಂಗಿ ಹಾಕಲು ಮುಂದಾದ ಹೆಬ್ಬಾವು… Video ನೋಡಿ
ಯಾತ್ರೆಗೆ (Amarnath Yatra) ಸಂಬಂಧಿಸಿದಂತೆ ಜಮ್ಮು ಮತ್ತು ಕಾಶ್ಮೀರ ರಾಜ್ಯಪಾಲ ಮನೋಜ್ ಸಿನ್ಹಾ (Governor Manoj Sinha) ಅವರು ಅಮರನಾಥ ದೇಗುಲ ಮಂಡಳಿಯೊಂದಿಗೆ ಭಾನುವಾರ ಸಭೆ ನಡೆಸಿದ್ದಾರೆ. ಈ ಸಭೆ ಬಗ್ಗೆ ಟ್ವಿಟ್ಟರ್ ಮೂಲಕ ಮಾಹಿತಿ ಹಂಚಿಕೊಂಡ ರಾಜ್ಯಪಾಲರ ಕಚೇರಿ "ಇಂದು ಶ್ರೀ ಅಮರನಾಥ ಯಾತ್ರಾ ದೇಗುಲ ಮಂಡಳಿಯೊಂದಿಗೆ ಸಭೆ ನಡೆಸಲಾಗಿದೆ. 43 ದಿನಗಳ ಸುದೀರ್ಘ ಪವಿತ್ರ ಯಾತ್ರೆಯು ಕೋವಿಡ್ ಎಲ್ಲಾ ಪ್ರೋಟೋಕಾಲ್ ಗಳನ್ನು ಅನುಸರಿಸುವ ಮೂಲಕ ಮತ್ತು ಸಂಪ್ರದಾಯದ ಪ್ರಕಾರ ಜೂನ್ 30 ರಂದು ಪ್ರಾರಂಭವಾಗಲಿದೆ. ರಕ್ಷಾ ಬಂಧನದ ದಿನ ಯಾತ್ರೆ ಮುಗಿಯಲಿದೆ. ಮುಂದಿನ ದಿನಗಳಲ್ಲಿ ನಡೆಸಲಾಗುವ ಸಭೆಯ ಹೊರತಾಗಿ ಇನ್ನೂ ಹಲವು ವಿಷಯಗಳ ಬಗ್ಗೆ ನಾವು ಆಳವಾಗಿ ಚರ್ಚಿಸಿದ್ದೇವೆ" ಎಂದು ಹೇಳಿದೆ.
ಇದನ್ನೂ ಓದಿ-'Breast Milk Jewelry' ಬಗ್ಗೆ ನಿಮಗೆಷ್ಟು ಗೊತ್ತು? ಇದರಿಂದ ಒಂದು ಕಂಪನಿ ಕೋಟ್ಯಾಂತರ ರೂ. ಸಂಪಾದಿಸುತ್ತಿದೆ
ಅಮರನಾಥ ಯಾತ್ರೆಗೆ ಯಾತ್ರಾರ್ಥಿಗಳ ಆನ್‌ಲೈನ್ ನೋಂದಣಿ ಏಪ್ರಿಲ್‌ನಿಂದ ಆರಂಭವಾಗಲಿದೆ. ಶ್ರೀ ಅಮರನಾಥ ದೇಗುಲ ಮಂಡಳಿ ಇತ್ತೀಚೆಗೆ ಈ ವಿಷಯವನ್ನು ಪ್ರಕಟಿಸಿತ್ತು. ಏಪ್ರಿಲ್‌ನಿಂದ ಆನ್‌ಲೈನ್ ಪ್ರಕ್ರಿಯೆಯ ಮೂಲಕ ಯಾತ್ರೆಗೆ ಯಾತ್ರಾರ್ಥಿಗಳ ನೋಂದಣಿಯನ್ನು ಪ್ರಾರಂಭಿಸುವುದಾಗಿ ಘೋಷಿಸಿದ ಶ್ರೈನ್ ಬೋರ್ಡ್ (Amarnath Shrine Board), ದಕ್ಷಿಣ ಕಾಶ್ಮೀರದ ಹಿಮಾಲಯ ಪ್ರದೇಶದಲ್ಲಿನ ದೇಗುಲದಲ್ಲಿ ಯಾತ್ರಾರ್ಥಿಗಳ ಚಲನವಲನಕ್ಕಾಗಿ RFID ಆಧಾರಿತ ಟ್ರ್ಯಾಕಿಂಗ್ ಮಾಡಲಾಗುವುದು ಎಂದು ಹೇಳಿದೆ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.