KGF2 Trailer:ಯುಟ್ಯೂಬ್‌ನಲ್ಲಿ ಡಿಲೀಟ್‌ ಆಗಿತ್ತಾ ಕೆಜಿಎಫ್‌2 ಟ್ರೇಲರ್‌!?

KGF 2 Trailer: ಕೆಜಿಎಫ್​ 2 ಟ್ರೇಲರ್‌ನಲ್ಲಿ ರಣ ಬೇಟೆಗಾರನ ರೌದ್ರಾವತಾರಕ್ಕೆ ಫ್ಯಾನ್ಸ್‌ ಫಿದಾ ಆಗಿದ್ದಾರೆ. ಟ್ರೇಲರ್‌ ಬಿಡುಗಡೆಯಾಗುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಧೂಳೆಬ್ಬಿಸುತ್ತಿದೆ. ರಾಕಿ ಭಾಯ್​ ಅಬ್ಬರಕ್ಕೆ ಯುಟ್ಯೂಬ್​ ಕ್ರ್ಯಾಶ್ ಆಗಿದೆ.

Written by - Chetana Devarmani | Last Updated : Mar 28, 2022, 06:23 PM IST
  • ಕೆಜಿಎಫ್​ 2 ಟ್ರೇಲರ್‌ನಲ್ಲಿ ರಣ ಬೇಟೆಗಾರನ ರೌದ್ರಾವತಾರ
  • ಯಶ್‌ ಲುಕ್‌ ಕಂಡು ಫ್ಯಾನ್ಸ್‌ ಫಿದಾ
  • ಸಾಮಾಜಿಕ ಜಾಲತಾಣದಲ್ಲಿ ಧೂಳೆಬ್ಬಿಸಿದ ಟ್ರೇಲರ್‌
  • ರಾಕಿ ಭಾಯ್​ ಅಬ್ಬರಕ್ಕೆ ಯುಟ್ಯೂಬ್​ ಕ್ರ್ಯಾಶ್!
KGF2 Trailer:ಯುಟ್ಯೂಬ್‌ನಲ್ಲಿ ಡಿಲೀಟ್‌ ಆಗಿತ್ತಾ ಕೆಜಿಎಫ್‌2 ಟ್ರೇಲರ್‌!? title=
ಕೆಜಿಎಫ್​ 2

ಬಹುನಿರೀಕ್ಷಿತ 'ಕೆಜಿಎಫ್ 2' ಟ್ರೇಲರ್‌ (KGF 2) ಕೊನೆಗೂ ಬಿಡುಗಡೆಯಾಗಿದೆ. ಇಷ್ಟು ದಿನ ಕಾದು ಕೂತಿದ್ದ ಅಭಿಮಾನಿಗಳು ಕೊನೆಗೂ ಸಂತಸಗೊಂಡಿದ್ದಾರೆ. ಯಶ್ ಅವತಾರ ಕಂಡು ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.

ಇಡೀ ಭಾರತೀಯ ಚಿತ್ರರಂಗವೇ ಕುತೂಹಲದಿಂದ ಕಾಯುತ್ತಿರುವ ಕೆಜಿಎಫ್ 2  (KGF 2 Trailer) ಸಿನಿಮಾ ಏಪ್ರಿಲ್ 14 ರಂದು ವಿಶ್ವಾದ್ಯಂತ ರಿಲೀಸ್ ಆಗಲಿದೆ. ಇದೀಗ ಕೆಜಿಎಫ್​ 2 ಚಿತ್ರದ ಟ್ರೈಲರ್‌​ ರಿಲೀಸ್ ಆಗಿದ್ದು, ಸೋಷಿಯಲ್‌ ಮಿಡಿಯಾದಲ್ಲಿ ದೂಳೆಬ್ಬಿಸಿದೆ.

ಇದನ್ನೂ ಓದಿ: Taledanda: 'ತಲೆದಂಡ' ಸಿನಿಮಾಗೆ ಶುಭ ಹಾರೈಸಿದ ಮಲಯಾಳಂ 'ಸೂಪರ್ ಸ್ಟಾರ್' ಮಮ್ಮುಟ್ಟಿ

ನಿನ್ನೆ ಟ್ರೈಲರ್‌ ರಿಲೀಸ್‌ ಆಗುತ್ತಿದ್ದಂತೆ ಎಲ್ಲ ದಾಖಲೆಗಳನ್ನು ಉಡೀಸ್‌ ಮಾಡಿದೆ ಎನ್ನಲಾಗುತ್ತಿದೆ.  2 ನಿಮಿಷ 57 ಸೆಕೆಂಡ್‌ನ ಈ ಟ್ರೈಲರ್‌ ಹಾಲಿವುಡ್ (Hollywood) ಲೆವೆಲ್​ನಲ್ಲಿದೆ ಅಂತಿದ್ದಾರೆ ಸಿನಿ ಪ್ರಿಯರು. ಪ್ರಶಾಂತ್‌ ನೀಲ್‌ () ನಿರ್ದೇಶನ ಅತ್ಯದ್ಭುತ ಎಂಬುದಕ್ಕೆ ಈ ಟ್ರೈಲರ್‌ ಸಾಕ್ಷಿಯಾಗಿದೆ. 

ಇನ್ನೂ ಹಿಂದಿ ಟ್ರೈಲರ್‌ (KGF 2 Hindi Trailer) ಅಂತೂ ಅಬ್ಬರಿಸಿ ಬೊಬ್ಬಿರಿಯುತ್ತಿದೆ. ಆದರೆ ರಿಲೀಸ್‌ ಆಗಿ ಕೇವಲ 15 ನಿಮಿಷದಲ್ಲಿ ಕೆಜಿಎಫ್‌ 2 ಹಿಂದಿ ಟ್ರೈಲರ್‌ ಡಿಲೀಟ್‌ ಆಯ್ತು ಅಂತಾ ಫ್ಯಾನ್ಸ್‌ ಅಸಮಾಧಾನ ಹೊರಹಾಕಲು ಶುರು ಮಾಡಿದ್ರು. ಇದಾಗಿ 10 ನಿಮಿಷದಲ್ಲಿ ಟ್ರೈಲರ್‌ ಮತ್ತೆ ವಾಪಾಸ್‌ ಬಂತು. ಯಾಕೆ ಟ್ರೈಲರ್‌ ಡಿಲೀಟ್‌ ಮಾಡಿದ್ದು ಎಂದು ಎಲ್ಲರೂ ಅರೆಕ್ಷಣ ಶಾಕ್‌ ಆದರು. ಆದರೆ ಅದು ಡಿಲೀಟ್‌ ಮಾಡಿದ್ದಲ್ಲ.  

ಇದನ್ನೂ ಓದಿ: Ram Charan Birthday:ಇಂದು ತೆಲುಗು ನಟ ರಾಮ್‌ ಚರಣ್‌ಗೆ ಹುಟ್ಟುಹಬ್ಬದ ಸಂಭ್ರಮ

ಟ್ರೈಲರ್‌ ರಿಲೀಸ್‌ ಆಗಿ 1 ಗಂಟೆ ಕಳೆದರೂ ಕೇವಲ 9 ಸಾವಿರ ವೀವ್ಸ್‌.. 5 ಲಕ್ಷ ಲೈಕ್ಸ್‌.. ಬಂದಿತ್ತು. ಇದು ಯುಟ್ಯೂಬ್ ಕ್ರ್ಯಾಶ್‌ (Youtube Crash) ಆಗುವ ರೀತಿಯಲ್ಲಿ ಕೆಜಿಎಫ್‌2 ಹಿಂದಿ ಟ್ರೈಲರ್‌ ಟ್ರೆಂಡ್‌ ಕ್ರಿಯೇಟ್‌ ಮಾಡಿತ್ತು. ಒಟ್ಟಾರೆ 'ಕೆಜಿಎಫ್ 2' ಟ್ರೈಲರ್‌ ನೋಡಿದ ಜನರೆಲ್ಲ ಏಪ್ರಿಲ್ 14 ಯಾವಾಗಪ್ಪ ಬರುತ್ತೆ ಅಂತಾ ಕಾದು ಕುಳಿತಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News