Medicine price hike : ಗಗನ ಮುಖಿಯಾಯಿತು ಅಗತ್ಯ ವಸ್ತುಗಳ ಬೆಲೆ ; ಇಂದಿನಿಂದ ಔಷಧಿಗಳ ಬೆಲೆಯಲ್ಲಿಯೂ ಹೆಚ್ಚಳ

ಕೊರೊನಾ ಹೊಡೆತಕ್ಕೆ ಸಿಲುಕಿ ಆರ್ಥಿಕ ಸಂಕಷ್ಟದಲ್ಲಿರುವ ಜನರಿಗೆ ಈಗ ಮತ್ತೊಂದು ಏಟು ಬಿದ್ದಿದೆ. ಆರ್ಥಿಕ ಪರಿಸ್ಥಿತಿ ಸುಧಾರಿಸುವ ಮುನ್ನವೇ ಮತ್ತೊಮ್ಮೆ ಬೆಲೆ ಏರಿಕೆ ಬಿಸಿ ಬಂದು ತಟ್ಟಿದೆ.

Written by - Ranjitha R K | Last Updated : Apr 1, 2022, 08:41 AM IST
  • ಜನ ಸಾಮಾನ್ಯರ ಜೇಬು ಸುಡುತ್ತಿದೆ ಬೆಲೆ ಏರಿಕೆ
  • ದಿನೇ ದಿನೇ ಅಗತ್ಯ ವಸ್ತುಗಳ ಬೆಲೆಯಲ್ಲಿ ಏರಿಕೆ
  • ಇಂದಿನಿಂದ ಔಷಧಿಗಳ ಬೆಲೆಯಲ್ಲಿಯೂ ಹೆಚ್ಚಳ
Medicine price hike : ಗಗನ ಮುಖಿಯಾಯಿತು ಅಗತ್ಯ ವಸ್ತುಗಳ ಬೆಲೆ ; ಇಂದಿನಿಂದ ಔಷಧಿಗಳ ಬೆಲೆಯಲ್ಲಿಯೂ ಹೆಚ್ಚಳ  title=
Medicine price hike (representative photo)

ಬೆಂಗಳೂರು : ಬೆಲೆ ಏರಿಕೆ ಬಿಸಿ ಜನ ಸಾಮಾನ್ಯರ ಜೇಬು ಸುಡುತ್ತಿದೆ. ದಿನೇ ದಿನೇ ಅಗತ್ಯ ವಸ್ತುಗಳ ಬೆಲೆ ಏರಿಕೆ ಕಾಣುತ್ತಲೇ ಇದೆ (Price Hike). ಬೆಲೆ ಏರಿಕೆ ಭೂತ. ಜನಸಾಮಾನ್ಯರನ್ನು ಬೆನ್ನು ಬಿಡದೆ ಕಾಡುತ್ತಿದೆ. ಗ್ಯಾಸ್,  ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದ ತತ್ತರಿಸಿದ್ದ ಜನ ಇದೀಗ ಔಷಧಿಗಳಿಗೂ ಹೆಚ್ಚು ಬೆಲೆ ನೀಡಬೇಕಾಗುತ್ತದೆ (Medicine price hike). 

ಕೊರೊನಾ ಹೊಡೆತಕ್ಕೆ ಸಿಲುಕಿ ಆರ್ಥಿಕ ಸಂಕಷ್ಟದಲ್ಲಿರುವ ಜನರಿಗೆ ಈಗ ಮತ್ತೊಂದು ಏಟು ಬಿದ್ದಿದೆ. ಆರ್ಥಿಕ ಪರಿಸ್ಥಿತಿ ಸುಧಾರಿಸುವ ಮುನ್ನವೇ ಮತ್ತೊಮ್ಮೆ ಬೆಲೆ ಏರಿಕೆ ಬಿಸಿ ಬಂದು ತಟ್ಟಿದೆ (Price hike today).  ಬೆಲೆ ಏರಿಕೆ ಎನ್ನುವುದು ಜನ ಸಾಮಾನ್ಯರಿಗೆ ಬೆಂಬಿಡದೇ ಕಾಡುತ್ತಿದೆ. ಗ್ಯಾಸ್, ಪೆಟ್ರೋಲ್, ಡೀಸೆಲ್, ಅಡುಗೆ ಎಣ್ಣೆ ಬೆಲೆ ಏರಿಕೆಯಿಂದ ಈಗಾಗಲೇ ಜನ ಬೇಸತ್ತಿದ್ದರು (Petrol diesel price hike). ಇದೀಗ ಆರೋಗ್ಯ ಕ್ಷೇತ್ರದ ಔಷಧಿಗಳ ಬೆಲೆಯೂ  ಗಗನಕ್ಕೇರಿದೆ . 

ಇದನ್ನೂ ಓದಿ :  ನೀವು NPS ಖಾತೆ ತೆರೆಯಬೇಕೆ? ಹಾಗಿದ್ರೆ, ಇಲ್ಲಿದೆ ನೋಡಿ

ಇಂದಿನಿಂದ 800ಕ್ಕೂ ಹೆಚ್ಚು ಅಗತ್ಯ ಔಷಧಿಗಳ ಬೆಲೆ ಯಲ್ಲಿ ಏರಿಕೆಯಾಗಿದೆ. ಇಂದಿನಿಂದ ಅಂದರೆ ಏಪ್ರಿಲ್ 1ರಿಂದಲೇ ಇಡೀ ದೇಶವ್ಯಾಪ್ತಿ ಔಷಧಿಗಳ ಬೆಲೆ‌  ದುಪ್ಪಟ್ಟಾಗಿದೆ (Medicine price hike today). ಸಗಟು ಸೂಚ್ಯಂಕದ ಆಧಾರದ ಮೇಲೆ ಔಷಧಿಗಳ ಬೆಲೆಯನ್ನು ಶೇಕಡಾ 10.76 ರಷ್ಟು ಏರಿಕೆ ಮಾಡಲಾಗಿದೆ. 2013ರ ಬೆಲೆ ನಿಯಂತ್ರಣ ಕಾಯ್ದೆ ಪ್ರಕಾರ ಬೆಲೆ ಏರಿಕೆ ಮಾಡಲಾಗಿದೆ. ಈ ಬಗ್ಗೆ ರಾಷ್ಟ್ರೀಯ ಔಷಧೀಯ ಪ್ರಾಧಿಕಾರದಿಂದ ಪ್ರಕಟಣೆ ಕೂಡಾ ಹೊರಡಿಸಲಾಗಿದೆ. 

ಯಾವ್ಯಾವ ಔಷಧಿ ಬೆಲೆ ಏರಿಕೆ..?

1.ಆ್ಯಂಟಿ ಬಯೋಟೆಕ್ ಔಷಧಿಗಳು
2. ಉರಿಯೂತ ನಿವಾರಕ ಔಷಧಗಳು
3. ಕಿವಿ, ಮೂಗು, ಗಂಟಲಿನ ಸಮಸ್ಯೆಗೆ ಸಂಬಂಧಿಸಿದ ಔಷಧಿಗಳು
4. ಆ್ಯಂಟಿ ಸೆಪ್ಟಿಕ್ ಔಷಧಿಗಳು
5. ಆ್ಯಂಟಿ ಫಂಗಸ್ ಔಷಧಿಗಳು

ಇದನ್ನೂ ಓದಿ : ನಾಳೆಯಿಂದ ಬದಲಾಗಲಿದೆ PF ಖಾತೆ ಈ ನಿಯಮ : 6 ಕೋಟಿ ಉದ್ಯೋಗಿಗಳು ಕಟ್ಟಬೇಕು ತೆರಿಗೆ 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News