ಬೆಂಗಳೂರು: ಹಿಂದೂ ಧರ್ಮದಲ್ಲಿ ದಾನಕ್ಕೆ ಬಹಳ ಪ್ರಾಮುಖ್ಯತೆ ಇದೆ. ದಾನ ಮಾಡುವ ಕೆಲಸವನ್ನು ಅತ್ಯಂತ ಧರ್ಮದ ಕಾರ್ಯ ಎಂದು ಬಣ್ಣಿಸಲಾಗಿದೆ. ಪ್ರತಿ ಹಬ್ಬ-ಉತ್ಸವ ಮತ್ತು ವಿಶೇಷ ಸಂದರ್ಭಗಳಲ್ಲಿ ನೀಡುವ ದೇಣಿಗೆ, ಯಾವ ಸಮಯದಲ್ಲಿ ಯಾವ ವಸ್ತುಗಳನ್ನು ದಾನ ಮಾಡಬೇಕು ಎಂಬ ನಿಯಮಗಳನ್ನು ಸಹ ಹೇಳಲಾಗಿದೆ. ಇದಲ್ಲದೇ ವಿವಿಧ ಋತುಗಳಲ್ಲಿ ದಾನ ಮಾಡಬೇಕಾದ ವಸ್ತುಗಳ ಬಗ್ಗೆಯೂ ಮಾರ್ಗದರ್ಶನ ನೀಡಲಾಗಿದೆ. ಇಂದು ಸೂರ್ಯನು ಮೇಷರಾಶಿಗೆ ಪ್ರವೇಶಿಸಿದ ಕೂಡಲೇ ಸೂರ್ಯನು ಪ್ರಖರವಾಗತೊಡಗಿದ್ದಾನೆ. ಈ ಬೇಸಿಗೆ ಕಾಲದಲ್ಲಿ ಯಾವ ವಸ್ತುಗಳನ್ನು ದಾನ ಮಾಡುವುದು ಹೆಚ್ಚು ಉತ್ತಮ ಎಂದು ತಿಳಿಯೋಣ...
ಬೇಸಿಗೆಯಲ್ಲಿ ಈ ವಸ್ತುಗಳನ್ನು ದಾನ ಮಾಡುವುದರಿಂದ ಧನವೃದ್ಧಿ :
ಬೆಲ್ಲ: ಬೇಸಿಗೆ ಕಾಲದಲ್ಲಿ ಬೆಲ್ಲವನ್ನು ದಾನ ಮಾಡುವುದರಿಂದ ಅನೇಕ ಲಾಭಗಳು ಸಿಗುತ್ತವೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಬೆಲ್ಲವನ್ನು ದಾನ ಮಾಡುವುದರಿಂದ ಜಾತಕದಲ್ಲಿ ಸೂರ್ಯನನ್ನು ಬಲಪಡಿಸುತ್ತದೆ. ಇದು ವ್ಯಕ್ತಿಯ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ, ಗೌರವ ಮತ್ತು ಯಶಸ್ಸನ್ನು ನೀಡುತ್ತದೆ. ಜೊತೆಗೆ ಜೀವನದಲ್ಲಿ ಸಾಕಷ್ಟು ಪ್ರಗತಿಯೂ ಲಭ್ಯವಾಗಲಿದೆ.
ಇದನ್ನೂ ಓದಿ- Guru Gochar 2022: ಇಂದಿನಿಂದ ಈ 3 ರಾಶಿಯವರ ಬದುಕಿನಲ್ಲಿ ಹಣದ ಸುರಿಮಳೆ
ಕಡಲೆ: ಕಡಲೆ ಅಥವಾ ಹುರ್ಗಡ್ಲೆ ಗುರು ಮತ್ತು ಸೂರ್ಯ 2 ಗ್ರಹಗಳಿಗೆ ಸಂಬಂಧಿಸಿದೆ. ಗುರುವು ಸಂಪತ್ತು ಮತ್ತು ಅದೃಷ್ಟವನ್ನು ಹೆಚ್ಚಿಸುತ್ತದೆ. ಮತ್ತೊಂದೆಡೆ, ಸೂರ್ಯನು ಯಶಸ್ಸು-ಗೌರವ-ಆರೋಗ್ಯ ಮತ್ತು ಆತ್ಮ ವಿಶ್ವಾಸವನ್ನು ನೀಡುತ್ತಾನೆ. ಈ ಎರಡು ಗ್ರಹಗಳ ಅನುಗ್ರಹವು ವ್ಯಕ್ತಿಗೆ ಯಶಸ್ವಿ ಮತ್ತು ಸಂತೋಷದ ಜೀವನವನ್ನು ನೀಡುತ್ತದೆ. ಇಷ್ಟೇ ಅಲ್ಲ, ಧಾರ್ಮಿಕ ಗ್ರಂಥಗಳ ಪ್ರಕಾರ ಬೇಸಿಗೆಯಲ್ಲಿ ಕಡಲೆಯನ್ನು ದಾನ ಮಾಡುವುದರಿಂದ ಪರಲೋಕದಲ್ಲಿ ಅನ್ನದ ಕೊರತೆ ಉಂಟಾಗುವುದಿಲ್ಲ ಎನ್ನುವುದೂ ಉಂಟು.
ನೀರು ತುಂಬಿದ ಮಡಕೆಗಳು: ಬೇಸಿಗೆಯಲ್ಲಿ ನೀರು ಕೊಡುವುದನ್ನು ಅತ್ಯಂತ ದೊಡ್ಡ ಪುಣ್ಯ ಕಾರ್ಯವೆಂದು ಪರಿಗಣಿಸಲಾಗಿದೆ. ಅದಕ್ಕಾಗಿಯೇ ಜನರು ಈ ಋತುವಿನಲ್ಲಿ ಮಡಕೆಯನ್ನು ಸ್ಥಾಪಿಸುತ್ತಾರೆ. ಆಗಾಗ ಶರಬತ್ತು, ಪಾನಕಗಳನ್ನು ವಿತರಿಸುತ್ತಾರೆ. ಈ ಋತುವಿನಲ್ಲಿ ನೀರು ತುಂಬಿದ 2 ಹೂಜಿಯನ್ನು ದಾನ ಮಾಡಿದರೆ ತುಂಬಾ ಲಾಭವಿದೆ. ಒಂದು ಮಡಕೆಯನ್ನು ನಿಮ್ಮ ಪೂರ್ವಜರ ಹೆಸರಿನಲ್ಲಿ ಮತ್ತು ಇನ್ನೊಂದನ್ನು ಭಗವಾನ್ ವಿಷ್ಣುವಿನ ಹೆಸರಿನಲ್ಲಿ ದಾನ ಮಾಡಿ. ಹೂಜಿಗೆ ಸ್ವಲ್ಪ ಬೆಲ್ಲ ಅಥವಾ ಸಕ್ಕರೆ ಹಾಕಿದರೆ ಉತ್ತಮ.
ಇದನ್ನೂ ಓದಿ- Vastu Tips: ತಿಜೋರಿ ಈ ದಿಕ್ಕಿಗಿದ್ದರೆ ಸದಾ ಇರುತ್ತೆ ಕುಬೇರನ ಆಶೀರ್ವಾದ
ಮಾವು: ಋತುಮಾನದ ಹಣ್ಣುಗಳನ್ನು ದಾನ ಮಾಡಲು ಧಾರ್ಮಿಕ ಗ್ರಂಥಗಳಲ್ಲಿಯೂ ಹೇಳಲಾಗಿದೆ. ಬೇಸಿಗೆಯಲ್ಲಿ ಮಾವಿನ ಹಣ್ಣನ್ನು ದಾನ ಮಾಡುವುದು ತುಂಬಾ ಶ್ರೇಯಸ್ಕರ. ಇದು ಸೂರ್ಯನಿಗೆ ಸಂಬಂಧಿಸಿದೆ ಮತ್ತು ಮಾವಿನ ಹಣ್ಣನ್ನು ದಾನ ಮಾಡುವುದರಿಂದ ಸೂರ್ಯ ದೇವರ ಕೃಪೆಯಿಂದ ಪ್ರತಿಯೊಂದು ಕೆಲಸದಲ್ಲೂ ಯಶಸ್ಸು ಸಿಗುತ್ತದೆ ಎಂದು ಹೇಳಲಾಗುತ್ತದೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.