ಚೀನಾ ಪ್ರವಾಸಿ ವೀಸಾ ರದ್ದುಗೊಳಿಸಿದ ಭಾರತ: ಕಾರಣ ಇಲ್ಲಿದೆ

ಚೀನಾದ ಪ್ರಜೆಗಳಿಗೆ ನೀಡಲಾದ ಪ್ರವಾಸಿ ವೀಸಾಗಳನ್ನು ಭಾರತ ಅಮಾನತುಗೊಳಿಸಿದೆ ಎಂದು ಜಾಗತಿಕ ವಿಮಾನಯಾನ ಸಂಸ್ಥೆಯಾದ ಇಂಟರ್‌ನ್ಯಾಶನಲ್ ಏರ್ ಟ್ರಾನ್ಸ್‌ಪೋರ್ಟ್ ಅಸೋಸಿಯೇಷನ್ ​​(ಐಎಟಿಎ) ಸ್ಪಷ್ಟಪಡಿಸಿದೆ.  

Written by - Bhavishya Shetty | Last Updated : Apr 25, 2022, 11:22 AM IST
  • ಚೀನಾ ನಾಗರಿಕರಿಗೆ ನೀಡಲಾದ ಪ್ರವಾಸಿ ವೀಸಾ ರದ್ದು
  • ಇಂಟರ್‌ನ್ಯಾಶನಲ್ ಏರ್ ಟ್ರಾನ್ಸ್‌ಪೋರ್ಟ್ ಅಸೋಸಿಯೇಷನ್ ಹೇಳಿಕೆ
  • ವಿದ್ಯಾಭ್ಯಾಸ ಕಲ್ಪಿಸಲು ಅವಕಾಶ ನೀಡದಕ್ಕೆ ಭಾರತದಿಂದ ತಕ್ಕ ಪ್ರತ್ಯುತ್ತರ
ಚೀನಾ ಪ್ರವಾಸಿ ವೀಸಾ ರದ್ದುಗೊಳಿಸಿದ ಭಾರತ: ಕಾರಣ ಇಲ್ಲಿದೆ  title=
China Tourist Visa

ನವದೆಹಲಿ: ಕೋವಿಡ್‌ ಸಂದರ್ಭದಲ್ಲಿ ಚೀನಾದಿಂದ ವಾಪಾಸ್ಸಾಗಿದ್ದ ಭಾರತೀಯ ವಿದ್ಯಾರ್ಥಿಗಳಿಗೆ ಮರಳಿ ವಿದ್ಯಾಭ್ಯಾಸ ಕಲ್ಪಿಸಲು ಅವಕಾಶ ಮಾಡಿಕೊಡದ ಚೀನಾದ ಧೋರಣೆ ವಿರುದ್ಧ ಭಾರತ ಕಿಡಿಕಾರಿದೆ. ಈ ಹಿನ್ನೆಲೆಯಲ್ಲಿ ಪ್ರತ್ಯುತ್ತರ ನೀಡಲು ಮುಂದಾದ ಭಾರತ, ಚೀನಾ ನಾಗರಿಕರಿಗೆ ನೀಡಲಾದ ಪ್ರವಾಸಿ ವೀಸಾಗಳನ್ನು ರದ್ದು ಮಾಡಿದೆ. 

ಇದನ್ನು ಓದಿ: ಬುಧ ರಾಶಿ ಪರಿವರ್ತನೆ: ಇಂದಿನಿಂದ 68 ದಿನಗಳವರೆಗೆ 4 ರಾಶಿಯವರಿಗೆ ಬುಧನ ಅನುಗ್ರಹ, ಧನಪ್ರಾಪ್ತಿ

ಚೀನಾದ ಪ್ರಜೆಗಳಿಗೆ ನೀಡಲಾದ ಪ್ರವಾಸಿ ವೀಸಾಗಳನ್ನು ಭಾರತ ಅಮಾನತುಗೊಳಿಸಿದೆ ಎಂದು ಜಾಗತಿಕ ವಿಮಾನಯಾನ ಸಂಸ್ಥೆಯಾದ ಇಂಟರ್‌ನ್ಯಾಶನಲ್ ಏರ್ ಟ್ರಾನ್ಸ್‌ಪೋರ್ಟ್ ಅಸೋಸಿಯೇಷನ್ ​​(ಐಎಟಿಎ) ಸ್ಪಷ್ಟಪಡಿಸಿದೆ.

ಚೀನಾದ ವಿಶ್ವವಿದ್ಯಾಲಯಗಳಲ್ಲಿ ಸುಮಾರು 22 ಸಾವಿರಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದರು. ಜಗತ್ತಿನಲ್ಲಿ ಕೊರೊನಾ ಪ್ರಭಾವ ಹೆಚ್ಚಾದಾಗ ವಿದ್ಯಾರ್ಥಿಗಳು ಭಾರತಕ್ಕೆ ವಾಪಾಸ್ಸಾಗಿದ್ದರು. ಆದರೆ ಇದೀಗ ಚೀನಾಕ್ಕೆ ಮರಳಲು ಆ ದೇಶದಲ್ಲಿ ಅವಕಾಶ ಮಾಡಿಕೊಡುತ್ತಿಲ್ಲ. ಇದರಿಂದ ಆಕ್ರೋಶಗೊಂಡ ಭಾರತ ತಕ್ಕ ಪ್ರತುತ್ತರ ನೀಡಲು ಮುಂದಾಗಿದೆ.  

ಏಪ್ರಿಲ್ 20 ರಂದು ಭಾರತ ಸುತ್ತೋಲೆಯನ್ನು ಹೊರಡಿಸಿದ್ದು, "ಚೀನಾ ಪ್ರಜೆಗಳಿಗೆ ನೀಡಲಾದ 10 ವರ್ಷಗಳ ಮಾನ್ಯತೆ ಹೊಂದಿರುವ ಪ್ರವಾಸಿ ವೀಸಾಗಳು ಇನ್ನು ಮುಂದೆ ಮಾನ್ಯವಾಗುವುದಿಲ್ಲ. ಭೂತಾನ್, ಮಾಲ್ಡೀವ್ಸ್ ಮತ್ತು ನೇಪಾಳದ ಪ್ರಜೆಗಳು ಭಾರತ ನೀಡಿದ ನಿವಾಸ ಪರವಾನಿಗೆ ಹೊಂದಿರುವವರು ಮಾತ್ರ ಭಾರತಕ್ಕೆ ಬರಬಹುದಾಗಿದೆ" ಎಂದು ತಿಳಿಸಿದೆ.

​ಇದನ್ನು ಓದಿ: ಐಪಿಎಲ್‌ ಇತಿಹಾಸದ ಶತಕವೀರರು: ಸಾಧಕರ ಪಟ್ಟಿ ಸೇರಿದ ಕನ್ನಡಿಗ ರಾಹುಲ್‌

ಚೀನಾದ ಕಟ್ಟುನಿಟ್ಟಾದ ನಿರ್ಬಂಧಗಳಿಂದಾಗಿ ಭಾರತೀಯ ವಿದ್ಯಾರ್ಥಿಗಳ ಶೈಕ್ಷಣಿಕ ಜೀವನ ಅಪಾಯಕ್ಕೆ ಸಿಲುಕಿದೆ. ಈ ವಿಷಯದಲ್ಲಿ ಸೌಹಾರ್ದಯುತ ನಿಲುವು ತಳೆಯುವಂತೆ ಚೀನಾಗೆ ಭಾರತ ಮನವಿ ಮಾಡಿದೆ. ಆದರೆ, ಚೀನಾ ಈ ವಿಷಯದಲ್ಲಿ ರಾಜಿಯಾಗುತ್ತಿಲ್ಲ ಎಂದು ತಿಳಿದುಬಂದಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News