ಇತರರ ಯಶಸ್ಸನ್ನು ಸಹಿಸಲ್ಲ ಈ ಐದು ರಾಶಿಯ ಜನ

                               

ಜ್ಯೋತಿಷ್ಯದ ಪ್ರಕಾರ ರಾಶಿಚಕ್ರದ ಸ್ವಭಾವ: ಜ್ಯೋತಿಷ್ಯದಲ್ಲಿ, ರಾಶಿಚಕ್ರದ ಮೂಲಕ ಸ್ವಭಾವ ಮತ್ತು ಭವಿಷ್ಯವನ್ನು ತಿಳಿದುಕೊಳ್ಳುವ ವಿಧಾನವನ್ನು ಹೇಳಲಾಗಿದೆ. ಇದರ ಪ್ರಕಾರ, ಕೆಲವು ರಾಶಿಚಕ್ರದ ಜನರು ಇತರರ ಸಂತೋಷ ಮತ್ತು ಪ್ರಗತಿಯನ್ನು ಸಹಿಸುವುದಿಲ್ಲ. ಬದಲಿಗೆ ಅವರು ಇತರರ ಯಶಸ್ಸನ್ನು ಕಂಡು ಅಸೂಯೆ ಪಡುತ್ತಾರೆ. ಅಂತಹ ರಾಶಿಗಳು ಯಾವುವು ಎಂದು ತಿಳಿಯೋಣ....

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
 

1 /5

ಮೇಷ ರಾಶಿಯ ಜನರು ತುಂಬಾ ಮಹತ್ವಾಕಾಂಕ್ಷೆಯುಳ್ಳವರು ಮತ್ತು ತಾವು ಮಾಡುವ ಕೆಲಸದಲ್ಲಿ ಸದಾ ಮುಂದೆ ಇರಲು ಇಷ್ಟಪಡುತ್ತಾರೆ. ಅವರ ಈ ಅಭ್ಯಾಸವು ಅವರಿಗೆ ಯಶಸ್ಸನ್ನು ನೀಡುತ್ತದೆ. ಆದರೆ ಬೇರೆ ಯಾರಾದರೂ ಅವರಿಗಿಂತ ಮುನ್ದಿರುವುದನ್ನು ನೋಡುವುದು ಅವರಿಗೆ ಅಸಹನೀಯವಾಗುತ್ತದೆ. ಇತರರು ತಮ್ಮಿಂದ ಮುಂದೆ ಇರುವುದನ್ನು ಕಂಡು ಅದರ ಬಗ್ಗೆ ಅಸೂಯೆಪಡುತ್ತಾರೆ. 

2 /5

ವೃಷಭ ರಾಶಿಯ ಜನರು ಬುದ್ಧಿವಂತರು, ಶ್ರಮಜೀವಿಗಳು ಮತ್ತು ಪ್ರಾಮಾಣಿಕರು. ಅವರು ಯಶಸ್ಸನ್ನು ಪಡೆಯುತ್ತಾರೆ ಆದರೆ ಇದಕ್ಕಾಗಿ ಅವರು ಸಾಕಷ್ಟು ಕಷ್ಟಪಡಬೇಕಾಗುತ್ತದೆ. ಆದ್ದರಿಂದ, ಕಠಿಣ ಪರಿಶ್ರಮವು ಪೂರ್ಣ ಫಲಿತಾಂಶವನ್ನು ನೀಡದಿದ್ದಾಗ, ಇತರರು ವೇಗವಾಗಿ ಯಶಸ್ವಿಯಾಗುವುದನ್ನು ನೋಡಿ ಅವರು ಅಸೂಯೆ ಪಡುತ್ತಾರೆ. ವೃಷಭ ರಾಶಿಯವರು ನಿಷ್ಕಲ್ಮಶ ಹೃದಯದವರಾಗಿದ್ದು  ಅವರು ಯಾವ ವ್ಯಕ್ತಿಯನ್ನು ಕಂಡು ಅಸೂಯೆ ಪಟ್ಟರೋ ಅದೇ ವ್ಯಕ್ತಿ ಅವರಿಂದ ಯಾವುದೇ ಸಹಾಯವನ್ನು ಕೇಳಿದರೆ ಅವರು ನಿರಾಕರಿಸುವುದಿಲ್ಲ. 

3 /5

ಕನ್ಯಾ ರಾಶಿಯ ಜನರು ತಮ್ಮ ಮುಂದೆ ಬೇರೆಯವರು ಉನ್ನತಿ ಹೊಂದುವುದನ್ನು ಕಂಡು ಅಷ್ಟು ಸುಲಭವಾಗಿ ಅರಗಿಸಿಕೊಳ್ಳುವುದಿಲ್ಲ.  ಮುಂದೆ ಇರುವ ಜನರ ಬಗ್ಗೆ ಅಸೂಯೆಪಡುತ್ತಾರೆ. ಹೀಗಾಗಿಯೇ ಅವರು ಹಲವು ಬಾರಿ ತಮ್ಮ ಬಗ್ಗೆ ಕೆಟ್ಟದಾಗಿ ಯೋಚಿಸಲು ಹಿಂಜರಿಯುವುದಿಲ್ಲ. 

4 /5

ವೃಶ್ಚಿಕ ರಾಶಿಯ ಜನರು ಸಹ ಇತರರ ಸಂತೋಷವನ್ನು ಸಹಿಸುವುದಿಲ್ಲ. ಇತರರು ಸಂತೋಷವಾಗಿರುವುದನ್ನು ನೋಡಿ, ಅವರು ಅವರ ಬಗ್ಗೆ ಅಸೂಯೆಪಡುತ್ತಾರೆ. ಅಷ್ಟೇ ಅಲ್ಲ, ಅವರನ್ನು ಹಿಂದೆ ಹಾಕಲು ಹಲವು ತಂತ್ರಗಳನ್ನೂ ಪ್ರಯತ್ನಿಸುತ್ತಾರೆ. 

5 /5

ಕುಂಭ ರಾಶಿಯ ಜನರಲ್ಲಿ ಅಭದ್ರತೆಯ ಭಾವನೆ ಬೇಗನೆ ಮೂಡುತ್ತದೆ. ಆಗ ಯಾರೇ ಅವರಿಗಿಂತ ಚೆನ್ನಾಗಿದ್ದಾರೆ ಎಂಬುದನ್ನು ನೋಡಿದರೂ ಕುಂಭ ರಾಶಿಯ ಜನರಿಗೆ ಒಂದು ರೀತಿಯ ಅಭದ್ರತೆಯ ಭಾವನೆ ಅವರಲ್ಲಿ ಕಾಡುತ್ತದೆ.  ಈ ಕಾರಣದಿಂದಲೇ ಇವರು ಇತರರ ಯಶಸ್ಸನ್ನು ಸಹಿಸುವುದಿಲ್ಲ ಎನ್ನಲಾಗುತ್ತದೆ. ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.